ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಷ್ಯನ್‌ ಗೇಮ್ಸ್‌; 0.01 ಸೆಕೆಂಡ್‌ ಅಂತರದಲ್ಲಿ ಕಂಚು ಗೆದ್ದ ಹರಿತಾ ಭದ್ರ

Asian Games: ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸಿದ ಒಂಬತ್ತನೇ ಅಥ್ಲೆಟಿಕ್ಸ್ ಪದಕ ಇದಾಗಿದ್ದು, ಇದರೊಂದಿಗೆ ದೇಶದ ಟ್ರ್ಯಾಕ್ ಮತ್ತು ಫೀಲ್ಡ್ ಪದಕಗಳ ಒಟ್ಟು ಸಂಖ್ಯೆ ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕಗಳಿಗೆ ಏರಿದೆ. ಐಚಿ-ನಗೋಯಾದಲ್ಲಿ ಭಾರತವು ತನ್ನ ಮೊದಲ ಅಥ್ಲೆಟಿಕ್ಸ್ ಚಿನ್ನದ ಪದಕಕ್ಕಾಗಿ ಇನ್ನೂ ಕಾಯುತ್ತಿದೆ.

ಏಷ್ಯನ್‌ ಗೇಮ್ಸ್‌; 0.01 ಸೆಕೆಂಡ್‌ ಅಂತರದಲ್ಲಿ ಕಂಚು ಗೆದ್ದ ಹರಿತಾ ಭದ್ರ

Harita Bhadra wins bronze -

Abhilash BC
Abhilash BC Sep 27, 2026 5:05 PM

ನಗೋಯಾ, ಸೆ.27: ಏಷ್ಯನ್ ಗೇಮ್ಸ್ 2026ರ ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ, ಭಾರತದ ಹರಿತಾ ಭದ್ರಾ ಅವರು ಕಂಚಿನ ಪದಕ ಗೆದ್ದರು. ಫೈನಲ್‌ನಲ್ಲಿ ಅವರು ಜಪಾನ್‌ನ ಅಬಿಗೈರುಫುಕಾ ಇಡೊ ಅವರಿಗಿಂತ ಕೇವಲ 0.01 ಸೆಕೆಂಡುಗಳ ಅಂತರದಲ್ಲಿ ಮೂರನೇ ಸ್ಥಾನಿಯಾದರು.

ಹರಿತಾ 23.20 ಸೆಕೆಂಡುಗಳಲ್ಲಿ ಓಟ ಪೂರೈಸಿ ಮೂರನೇ ಸ್ಥಾನ ಪಡೆದರೆ, ಅಬಿಗೈರುಫುಕಾ ಇಡೊ 23.21 ಸೆಕೆಂಡುಗಳ ಸಮಯ ದಾಖಲಿಸಿ ನಾಲ್ಕನೇ ಸ್ಥಾನಿಯಾದರು. ಇಂಡೋನೇಷ್ಯಾದ ಶಾಂತಿ ಪೆರೇರಾ 22.78 ಸೆಕೆಂಡುಗಳಲ್ಲಿ ಚಿನ್ನದ ಪದಕ ಗೆದ್ದರೆ, ಚೀನಾದ 100 ಮೀಟರ್ ಚಾಂಪಿಯನ್ ಯುಜಿ ಚೆನ್ 22.93 ಸೆಕೆಂಡುಗಳ ಸಮಯದೊಂದಿಗೆ ಬೆಳ್ಳಿ ಪದಕ ಪಡೆದರು.

ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸಿದ ಒಂಬತ್ತನೇ ಅಥ್ಲೆಟಿಕ್ಸ್ ಪದಕ ಇದಾಗಿದ್ದು, ಇದರೊಂದಿಗೆ ದೇಶದ ಟ್ರ್ಯಾಕ್ ಮತ್ತು ಫೀಲ್ಡ್ ಪದಕಗಳ ಒಟ್ಟು ಸಂಖ್ಯೆ ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕಗಳಿಗೆ ಏರಿದೆ. ಐಚಿ-ನಗೋಯಾದಲ್ಲಿ ಭಾರತವು ತನ್ನ ಮೊದಲ ಅಥ್ಲೆಟಿಕ್ಸ್ ಚಿನ್ನದ ಪದಕಕ್ಕಾಗಿ ಇನ್ನೂ ಕಾಯುತ್ತಿದೆ.



ತೀವ್ರ ಪೈಪೋಟಿಯಿಂದ ಕೂಡಿದ್ದ ಓಟದ ಸ್ಪರ್ಧೆಯಲ್ಲಿ, ಹರಿತಾ ಅತ್ಯುತ್ತಮ ಪ್ರದರ್ಶನದೊಂದಿಗೆ ಅಂತಿಮವಾಗಿ ಪದಕದ ಸ್ಥಾನವನ್ನು (ಪೋಡಿಯಂ) ತಮ್ಮದಾಗಿಸಿಕೊಂಡರು. ಅಂತಿಮ ಗೆರೆಯವರೆಗೂ ಜಪಾನ್‌ನ ಐಡೊ ಅವರಿಂದ ತೀವ್ರ ಪೈಪೋಟಿ ಎದುರಾದ್ದರಿಂದ, ಹರಿತಾ ಅವರಿಗೆ ಸಣ್ಣ ತಪ್ಪಿಗೂ ಅವಕಾಶವಿರಲಿಲ್ಲ.

ಸ್ಕ್ವಾಷ್‌ನಲ್ಲಿ ಭಾರತಕ್ಕೆ ಕೈತಪ್ಪಿದ ಅವಳಿ ಚಿನ್ನ; ಬೆಳ್ಳಿಗೆ ತೃಪ್ತಿಪಟ್ಟ ಅನಾಹತ್​, ಅಭಯ್​ ಸಿಂಗ್​

ಇದಕ್ಕೂ ಮುನ್ನ ನಡೆದಿದ್ದ ಏಷ್ಯಾಡ್​ ಸ್ಕ್ವಾಷ್​ ಸ್ಪರ್ಧೆಯಲ್ಲಿ ಅನಾಹತ್​ ಸಿಂಗ್​ ಮತ್ತು ಅನುಭವಿ ಆಟಗಾರ ಅಭಯ್​ ಸಿಂಗ್​ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ 28 ವರ್ಷದ ಅಭಯ್ ಸಿಂಗ್‌ ಅವರು ಮಲೇಷ್ಯಾದ ಎನ್​ಜಿ ಈನ್​ ಯೌ ವಿರುದ್ಧ 3-0 ಅಂತರದ ಸೋಲು ಕಂಡರೆ, ಆ ಬಳಿಕ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಅನಹತ್ ವಿಶ್ವ ನಂ. 5 ಮಲೇಷ್ಯಾದ ಸಿವಸಂಗರಿ ಸುಬ್ರಹ್ಮಣ್ಯಂ ವಿರುದ್ಧ 3-0 ನೇರ ಗೇಮ್‌ ಅಂತರದಿಂದ ಸೋಲನ್ನಪಿದರು.

ಉಭಯ ಕ್ರೀಡಾಪಟುಗಳು ಚಿನ್ನ ಗೆದ್ದಿದ್ದರೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡರು. ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್ ಕ್ರೀಡೆಯನ್ನು ಮೊದಲ ಬಾರಿಗೆ ಸೇರ್ಪಡೆಗೊಳಿಸಲಾಗಿದೆ.