ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟೆಕ್‌ಬಾಲ್ ಸೆಮಿಫೈನಲ್‌ನಲ್ಲಿ ಕ್ವಿಮ್ಸಿ ಡಿಸೋಜಾಗೆ ಸೋಲು; ಕಂಚಿನ ಪದಕಕ್ಕಾಗಿ ಸ್ಪರ್ಧೆ

Asian Games: ಸೋಲಿನಿಂದಾಗಿ ಡಿಸೋಜಾ ಅವರಿಗೆ ಚಿನ್ನದ ಪದಕಕ್ಕಾಗಿ ಸ್ಪರ್ಧಿಸುವ ಅವಕಾಶ ಸಿಗುವುದಿಲ್ಲವಾದರೂ, ಕಂಚಿನ ಪದಕದ ಪಂದ್ಯದಲ್ಲಿ ಸ್ಥಾನ ಪಡೆಯಲು ಅವರು ಮತ್ತೊಂದು ಪಂದ್ಯವನ್ನು ಆಡುವ ಅಗತ್ಯವಿಲ್ಲ. ಸೆಮಿಫೈನಲ್‌ನಲ್ಲಿ ಸೋತ ಆಟಗಾರ್ತಿ ನೇರವಾಗಿ ಕಂಚಿನ ಪದಕದ ಪಂದ್ಯಕ್ಕೆ ಪ್ರವೇಶ ಪಡೆಯಲಿದ್ದು, ಇದರಲ್ಲಿ ಡಿಸೋಜಾ ಅವರು ಕಾಂಬೋಡಿಯಾದ ಕೋಮ್ಯನ್ ಡೈ ಅವರನ್ನು ಎದುರಿಸಲಿದ್ದಾರೆ.

ಸೆಮಿಫೈನಲ್‌ನಲ್ಲಿ ಕ್ವಿಮ್ಸಿಗೆ ಸೋಲು; ಕಂಚಿನ ಪದಕಕ್ಕಾಗಿ ಸ್ಪರ್ಧೆ

Quimcy Dsouza -

Abhilash BC
Abhilash BC Sep 19, 2026 12:19 PM

ನಗೋಯಾ, ಸೆ.19: ಏಷ್ಯನ್ ಗೇಮ್ಸ್ ಮಹಿಳೆಯರ ಸಿಂಗಲ್ಸ್ ಟೆಕ್‌ಬಾಲ್ ಫೈನಲ್ ತಲುಪುವ ಕ್ವಿಮ್ಸಿ ಜೋಕಿಮ್ ಡಿಸೋಜಾ ಅವರ ಪ್ರಯತ್ನಕ್ಕೆ ತೆರೆಬಿದ್ದಿತಾದರೂ, ಐತಿಹಾಸಿಕ ಪದಕ ಗೆಲ್ಲುವ ಅವಕಾಶ ಇನ್ನೂ ಜೀವಂತವಾಗಿದೆ. ಶನಿವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಸುಮಯಾ ವಿರುದ್ಧ ಸೋಲನುಭವಿಸಿದ ಭಾರತೀಯ ಆಟಗಾರ್ತಿ, ಈಗ ಭಾನುವಾರ ನಡೆಯಲಿರುವ ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಆಡಲಿದ್ದಾರೆ.

ಕ್ವಿಮ್ಸಿ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದು ಮೊದಲ ಸೆಟ್ ಅನ್ನು 12-7 ಅಂತರದಲ್ಲಿ ಗೆದ್ದುಕೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಸುಮಾಯಾ ತಿರುಗೇಟು ನೀಡಿ 12-9 ಅಂತರದಲ್ಲಿ ಜಯ ಸಾಧಿಸಿದರು. ಅಂತಿಮ ಹಾಗೂ ನಿರ್ಣಾಯಕ ಸೆಟ್‌ನಲ್ಲಿಯೂ ಮೇಲುಗೈ ಸಾಧಿಸಿದ ಜಪಾನ್‌ ಆಟಗಾರ್ತಿ 12-7 ಅಂತರದ ಗೆಲುವಿನೊಂದಿಗೆ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಈ ಸೋಲಿನಿಂದಾಗಿ ಡಿಸೋಜಾ ಅವರಿಗೆ ಚಿನ್ನದ ಪದಕಕ್ಕಾಗಿ ಸ್ಪರ್ಧಿಸುವ ಅವಕಾಶ ಸಿಗುವುದಿಲ್ಲವಾದರೂ, ಕಂಚಿನ ಪದಕದ ಪಂದ್ಯದಲ್ಲಿ ಸ್ಥಾನ ಪಡೆಯಲು ಅವರು ಮತ್ತೊಂದು ಪಂದ್ಯವನ್ನು ಆಡುವ ಅಗತ್ಯವಿಲ್ಲ. ಸೆಮಿಫೈನಲ್‌ನಲ್ಲಿ ಸೋತ ಆಟಗಾರ್ತಿ ನೇರವಾಗಿ ಕಂಚಿನ ಪದಕದ ಪಂದ್ಯಕ್ಕೆ ಪ್ರವೇಶ ಪಡೆಯಲಿದ್ದು, ಇದರಲ್ಲಿ ಡಿಸೋಜಾ ಅವರು ಕಾಂಬೋಡಿಯಾದ ಕೋಮ್ಯನ್ ಡೈ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಟೆಕ್‌ಬಾಲ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ. ಏಷ್ಯನ್ ಗೇಮ್ಸ್‌ಗೆ ಇದೇ ಮೊದಲ ಬಾರಿಗೆ ಟೆಕ್‌ಬಾಲ್ ಸೇರ್ಪಡೆ ಮಾಡಲಾಗಿದೆ.

ಚಿತ್ರೀಕರಣದ ವೇಳೆ ಭುಜಕ್ಕೆ ಗಾಯ; ಭಾರತ ವಿರುದ್ಧದ ಟಿ20 ಸರಣಿಗೆ ರಚಿನ್ ರವೀಂದ್ರ ಅನುಮಾನ

ಭಾನುವಾರ ಈ ಭಾರತೀಯ ಕ್ರೀಡಾಪಟುವಿಗೆ ಇನ್ನೂ ಹೆಚ್ಚಿನ ಅವಕಾಶಗಳಿವೆ. ಮೊಹಮ್ಮದ್ ಅನಸ್ ಇಮ್ರಾನ್ ಬೇಗ್ ಅವರೊಂದಿಗೆ ಮಿಶ್ರ ಡಬಲ್ಸ್ ವಿಭಾಗದ ಕಂಚಿನ ಪದಕದ ಪಂದ್ಯದಲ್ಲೂ ಡಿಸೋಜಾ ಕಣಕ್ಕಿಳಿಯಲಿದ್ದಾರೆ; ಹೀಗಾಗಿ, ತಮ್ಮ ಚೊಚ್ಚಲ ಏಷ್ಯನ್ ಕ್ರೀಡಾಕೂಟವನ್ನು ಪದಕದೊಂದಿಗೆ ಮುಕ್ತಾಯಗೊಳಿಸಲು ಅವರಿಗೆ ಎರಡು ಅವಕಾಶಗಳು ಸಿಗಲಿವೆ.

ಅಧಿಕೃತ ಜೆರ್ಸಿ ಪಡೆಯುವಲ್ಲಿ ವಿಳಂಬ; ಭಾರತದ ಧ್ವಜಧಾರಿ ಬದಲಾವಣೆ

ಅಧಿಕೃತ ಕ್ರೀಡಾ ಸಮವಸ್ತ್ರ (ಕಿಟ್) ಪಡೆಯುವಲ್ಲಿ ಆದ ವಿಳಂಬದಿಂದಾಗಿ ನಾಗೊಯಾಗೆ ಪ್ರಯಾಣಿಸಲು ಸಾಧ್ಯವಾಗದ ಕಾರಣ, 2026ರ ಏಷ್ಯನ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಲ್ಲಿ ಒಬ್ಬರಾಗಿದ್ದ ಶಾಟ್-ಪುಟ್ ಕ್ರೀಡಾಪಟು ತಜಿಂದರ್‌ಪಾಲ್ ಸಿಂಗ್ ತೂರ್ ಅವರನ್ನು ಬದಲಾಯಿಸಲಾಗಿದೆ. ಅವರ ಬದಲಿಗೆ ಕಬಡ್ಡಿ ತಾರೆ ಪವನ್ ಸೆಹ್ರಾವತ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇವರು ಈಗ ಮನು ಭಾಕರ್ ಅವರೊಂದಿಗೆ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.