ಏಷ್ಯನ್ ಗೇಮ್ಸ್; ವುಶು ಸ್ಫರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ರೋಶಿಬಿನಾ ದೇವಿ
Asian Games: 25 ವರ್ಷದ ರೋಶಿಬಿನಾ, ಈ ಕ್ರೀಡಾಕೂಟಕ್ಕಾಗಿ ಭಾರತದ ಮೂಲ ತಂಡದಲ್ಲಿ ಇರಲಿಲ್ಲ. ದಿವ್ಯಾಂಶಿ ಅವರಿಗೆ ಗಾಯವಾದ ಕಾರಣ ತಂಡದಲ್ಲಿ ತೆರವಾದ ಸ್ಥಾನಕ್ಕೆ ಇವರನ್ನು ಆಯ್ಕೆ ಮಾಡಲಾಗಿತ್ತು. ಹ್ಯಾಂಗ್‌ಝೌನಲ್ಲಿ ನಡೆದ ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ರೋಶಿಬಿನಾ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಫೈನಲ್‌ಗೆ ಪ್ರವೇಶಿಸಿರುವುದರಿಂದ, ಅವರಿಗೆ ಕನಿಷ್ಠ ಮತ್ತೊಂದು ಬೆಳ್ಳಿ ಪದಕ ಖಚಿತವಾಗಿದ್ದು, ಈಗ ಅವರು ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ.
Roshibina Devi -
ನಗೋಯಾ, ಸೆ. 23: ಏಶ್ಯನ್ ಗೇಮ್ಸ್‌ನ ವುಶು ಮಹಿಳೆಯರ 60 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ನವೋರೆಮ್ ರೋಶಿಬಿನಾ ದೇವಿ ಅವರು ಇಂಡೋನೇಷ್ಯಾದ ಥಾನಿಯಾ ಕುಸುಮಾನಿಂಗ್ತ್ಯಾಸ್ ಅವರನ್ನು 2-0 ಅಂತರದಿಂದ ಮಣಿಸಿ ಫೈನಲ್ ತಲುಪಿದ್ದಾರೆ. ಇದರೊಂದಿಗೆ ಅವರು ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.
ಸೆಮಿಫೈನಲ್ ಪ್ರವೇಶಿಸುವ ಮೂಲಕವೇ ಅವರು ಪದಕೊವೊಂದನ್ನು ಖಾತ್ರಿಪಡಿಸಿದ್ದರು. ಗುರುವಾರ ನಡೆಯಲಿರುವ ಫೈನಲ್‌ನಲ್ಲಿ ಚೀನಾದ ಕ್ಸಿಯಾವೊಯು ಝಾಂಗ್ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ.
ಈ 25 ವರ್ಷದ ರೋಶಿಬಿನಾ, ಈ ಕ್ರೀಡಾಕೂಟಕ್ಕಾಗಿ ಭಾರತದ ಮೂಲ ತಂಡದಲ್ಲಿ ಇರಲಿಲ್ಲ. ದಿವ್ಯಾಂಶಿ ಅವರಿಗೆ ಗಾಯವಾದ ಕಾರಣ ತಂಡದಲ್ಲಿ ತೆರವಾದ ಸ್ಥಾನಕ್ಕೆ ಇವರನ್ನು ಆಯ್ಕೆ ಮಾಡಲಾಗಿತ್ತು. ಹ್ಯಾಂಗ್‌ಝೌನಲ್ಲಿ ನಡೆದ ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ರೋಶಿಬಿನಾ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಫೈನಲ್‌ಗೆ ಪ್ರವೇಶಿಸಿರುವುದರಿಂದ, ಅವರಿಗೆ ಕನಿಷ್ಠ ಮತ್ತೊಂದು ಬೆಳ್ಳಿ ಪದಕ ಖಚಿತವಾಗಿದ್ದು, ಈಗ ಅವರು ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಚೊಚ್ಚಲ ಪದಕ ಗೆದ್ದ ಮೀರಾಬಾಯಿ; ಬೆಳ್ಳಿ ಮೆರಗು
ಹಿಂದಿನ ಎರಡು ಆವೃತ್ತಿಗಳಲ್ಲಿ ಕ್ರಮವಾಗಿ ಕಂಚು ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದಿದ್ದ ರೋಶಿಬಿನಾ, ಇದೀಗ ಏಷ್ಯನ್ ಕ್ರೀಡಾಕೂಟದ ಸತತ ಮೂರು ಆವೃತ್ತಿಗಳಲ್ಲಿ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
ಯಾರು ಈ ರೋಶಿಬಿನಾ?
ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಜನಿಸಿದ ರೋಶಿಬಿನಾ, ಹೊಡೆಯುವ ಮತ್ತು ಎಸೆಯುವ ತಂತ್ರಗಳನ್ನು ಒಳಗೊಂಡಿರುವ ಸಮರ ಕಲೆಯಾದ 'ವುಶು'ವಿನ 'ಸಾಂಡಾ' ವಿಭಾಗದಲ್ಲಿ ಸ್ಪರ್ಧಿಸುತ್ತಾರೆ. 2018ರ ಜಕಾರ್ತ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 60 ಕೆಜಿ ಸಾಂಡಾ ವಿಭಾಗದಲ್ಲಿ ಸ್ಪರ್ಧಿಸುವ ಮೂಲಕ ಮೊದಲ ಬಾರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನದ ಮುಬಾಶ್ರಾ ಅಖ್ತರ್ ಅವರನ್ನು ಸೋಲಿಸಿ ಪದಕವನ್ನು ಖಚಿತಪಡಿಸಿಕೊಂಡ ರೋಶಿಬಿನಾ, ನಂತರ ಸೆಮಿಫೈನಲ್‌ನಲ್ಲಿ ಚೀನಾದ ಕೈ ಯಿಂಗ್‌ಯಿಂಗ್ ವಿರುದ್ಧ ಸೋಲನುಭವಿಸಿದರು.
ಕ್ರಿಕೆಟಿಗನಾಗುವ ಕನಸು ಕಂಡಿದ್ದ ಜಯ್ ಮೀನಾ ಇಂದು ಸಾಫ್ಟ್ ಟೆನಿಸ್‌ನಲ್ಲಿ ಇತಿಹಾಸ ಸೃಷ್ಟಿ
ಇದಾಗಿ ಐದು ವರ್ಷಗಳ ನಂತರ, 2023ರ ಹಾಂಗ್‌ಝೌ ಏಷ್ಯನ್ ಕ್ರೀಡಕೂಟದಲ್ಲಿ ರೋಶಿಬಿನಾ ತಮ್ಮ ಹಿಂದಿನ ಸಾಧನೆಗಿಂತ ಉತ್ತಮ ಪ್ರದರ್ಶನ ನೀಡಿದರು. ಅವರು ಮಹಿಳೆಯರ 60 ಕೆಜಿ ವಿಭಾಗದ ಫೈನಲ್ ತಲುಪಿದರು ಮತ್ತು ಚೀನಾದ ವು ಕ್ಸಿಯಾವೊವೀ ವಿರುದ್ಧ ಸೋತು ಬೆಳ್ಳಿ ಪದಕವನ್ನು ಗೆದ್ದುಕೊಂಡರು.
ಹಾಂಗ್‌ಝೌನಲ್ಲಿನ ಅವರ ಪ್ರದರ್ಶನವು ಅವರನ್ನು ವುಶು ಕ್ರೀಡೆಯಲ್ಲಿ ಭಾರತದ ಪ್ರಮುಖ ಹೆಸರುಗಳಲ್ಲಿ ಒಂದನ್ನಾಗಿ ಮಾಡಿತು. 2023ರ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.
ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ, ರೋಶಿಬಿನಾ ಮತ್ತೊಮ್ಮೆ ಪದಕದ ಸುತ್ತನ್ನು (ಪೋಡಿಯಂ ಫಿನಿಶ್) ಖಚಿತಪಡಿಸಿಕೊಂಡಿದ್ದಾರೆ. ಅವರು ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾದೇಶದ ಶಿಕಾ ಖಾತುನ್ ಅವರನ್ನು ಸೋಲಿಸಿದರು. ನಂತರ ಕ್ವಾರ್ಟರ್ ಫೈನಲ್‌ನಲ್ಲಿ ಚು ಮನ್ ಸಿನ್ ವಿರುದ್ಧ 5-0 ಅಂತರದ ಜಯ ಸಾಧಿಸಿದರು ಮತ್ತು ಇದೀಗ ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಥಾನಿಯಾ ಕುಸುಮಾನಿಂಗತ್ಯಾಸ್ ಅವರನ್ನು 2-0 ಅಂತರದಿಂದ ಸೋಲಿಸಿದ್ದಾರೆ.