IPL 2025: ಆಸ್ಟ್ರೇಲಿಯಾ ಆಟಗಾರರು ಐಪಿಎಲ್ ಆಡುವುದು ಅನುಮಾನ
ಇನ್ನೊಂದೆಡೆ ಇಂಗ್ಲೆಂಡ್ ತಂಡದ ಆಟಗಾರರು ಕೂಡ ಐಪಿಎಲ್ ರದ್ದುಗೊಂಡ ಮರು ದಿನವೇ ತವರಿಗೆ ಮರಳಿದ್ದರು. ಇವರು ಕೂಡ ಮತ್ತೆ ಐಪಿಎಲ್ ಆಡುವುದು ಅನುಮಾನ ಎನ್ನಲಾಗಿದೆ. ಆದರೆ ಬಿಸಿಸಿಐ ವಿದೇಶಿ ಆಟಗಾರರು ಇಲ್ಲದಿದ್ದರೂ ದೇಶೀಯ ಆಟಗಾರರ ಮೂಲಕ ಐಪಿಎಲ್ ಪೂರ್ಣಗೊಳಿಸುವುದಾಗಿ ತಿಳಿಸಿದೆ.


ಸಿಡ್ನಿ: ಭಾರತ-ಪಾಕಿಸ್ತಾನದ(india pakistan tension) ಸಂಘರ್ಷದ ಕಾರಣಕ್ಕೆ ನಿಂತು ಹೋಗಿದ್ದ ಐಪಿಎಲ್(IPL 2025) (ಇಂಡಿಯನ್ ಪ್ರೀಮಿಯರ್ ಲೀಗ್) , ಮತ್ತೆ ಆರಂಭವಾಗಲಿದೆ. ಮೇ 17ರಿಂದ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಹೊಸ ವೇಳಾಪಟ್ಟಿಯ ಬಿಸಿಸಿಐ(BCCI) (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಸೋಮವಾರ ರಾತ್ರಿ ಪ್ರಕಟಿಸಿತ್ತು. ಟೂರ್ನಿ ಆರಂಭಗೊಂಡರೂ ಆಸ್ಟ್ರೇಲಿಯಾದ ಕ್ರಿಕೆಟಿಗರು ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ. ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಆಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಐಪಿಎಲ್‌ಗೆ ಮರಳುವ ಬಗ್ಗೆ ಆಟಗಾರರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕೃತವಾಗಿ ಬೆಂಬಲವನ್ನು ದೃಢಪಡಿಸಿದೆ. 'ಸುರಕ್ಷತೆಯ ಬಗ್ಗೆ ಕಳವಳ ಮತ್ತು ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ಬದ್ಧತೆಗಳೊಂದಿಗೆ ಹಲವಾರು ಆಟಗಾರರು ಮತ್ತು ಸಿಬ್ಬಂದಿ ಸದಸ್ಯರು ಮನೆಗೆ ಮರಳಿದ್ದಾರೆ. ಐಪಿಎಲ್ ಆಡಲು ಮತ್ತು ಆಡದಿರುವ ಅವರ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆʼ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಹೀಗಾಗಿ ಆಸೀಸ್ ಆಟಗಾರರು ಮತ್ತೆ ಐಪಿಎಲ್ ಆಡುವುದು ಅನುಮಾನ ಎನ್ನಲಾಗಿದೆ.
ಇನ್ನೊಂದೆಡೆ ಇಂಗ್ಲೆಂಡ್ ತಂಡದ ಆಟಗಾರರು ಕೂಡ ಐಪಿಎಲ್ ರದ್ದುಗೊಂಡ ಮರು ದಿನವೇ ತವರಿಗೆ ಮರಳಿದ್ದರು. ಇವರು ಕೂಡ ಮತ್ತೆ ಐಪಿಎಲ್ ಆಡುವುದು ಅನುಮಾನ ಎನ್ನಲಾಗಿದೆ. ಆದರೆ ಬಿಸಿಸಿಐ ವಿದೇಶಿ ಆಟಗಾರರು ಇಲ್ಲದಿದ್ದರೂ ದೇಶೀಯ ಆಟಗಾರರ ಮೂಲಕ ಐಪಿಎಲ್ ಪೂರ್ಣಗೊಳಿಸುವುದಾಗಿ ತಿಳಿಸಿದೆ.
ಮೇ 17ರಂದು ಪಂದ್ಯಗಳು ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಕೋಲ್ಕತಾ ಸೆಣಸಾಟ ನಡೆಸುವ ಮೂಲಕ ಪಂದ್ಯಾವಳಿ ಆರಂಭಗೊಳ್ಳಲಿದೆ. ಒಟ್ಟಾರೆ ಬಾಕಿ 17 ಪಂದ್ಯಗಳನ್ನುವೇಳಾಪಟ್ಟಿ ಪ್ರಕಾರ ಉಳಿದ ಪಂದ್ಯಗಳನ್ನು ಬೆಂಗಳೂರು, ದೆಹಲಿ, ಲಕ್ನೋ, ಮುಂಬೈ, ಅಹಮದಾಬಾದ್ ಮತ್ತು ಜೈಪುರದಲ್ಲಿ ನಡೆಸಲಾಗುತ್ತದೆ. 2 ಡಬಲ್ ಹೆಡರ್ ಪಂದ್ಯಗಳು ಸೇರಿವೆ.
ಇದನ್ನೂ ಓದಿ IPL 2025 New Schedule: ಮೇ 17ರಿಂದ ಐಪಿಎಲ್ ಪಂದ್ಯ ಪುನಾರಂಭ; ಜೂನ್ 3ಕ್ಕೆ ಫೈನಲ್
ಪ್ಲೇ ಆಫ್ ಪಂದ್ಯಗಳು ಮೇ 29 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಆದರೆ ಲೀಗ್ ಪಂದ್ಯಗಳಿಗೆ ಸ್ಥಳಗಳನ್ನು ಪ್ರಕಟಿಸಿರುವ ಬಿಸಿಸಿಐ ಪ್ಲೇ ಆಫ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಿಲ್ಲ.