ಕೆ.ಎಲ್ ರಾಹುಲ್ ಬಳಿಕ ಎಲ್‌ಎಸ್‌ಜಿ ಪರ ಸಾವಿರ ಐಪಿಎಲ್ ರನ್ ಗಳಿಸಿ ದಾಖಲೆ ಬರೆದ ಆಯುಷ್ ಬದೋನಿ
Ayush Badoni: ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಇನ್ನೂ ಪದಾರ್ಪಣೆ ಮಾಡದ ಬದೋನಿ, ಎಲ್‌ಎಸ್‌ಜಿ ಪರ ಐಪಿಎಲ್‌ನಲ್ಲಿ 1000 ರನ್ ಗಳಿಸಿದ ಮೊದಲ ಅನ್‌ಕ್ಯಾಪ್ಡ್ ಆಟಗಾರ. ಐಪಿಎಲ್‌ನಲ್ಲಿ ಅವರು ಇದುವರೆಗೆ 7 ಅರ್ಧಶತಕಗಳನ್ನು ಗಳಿಸಿದ್ದಾರೆ.
Ayush Badoni -
ಕೋಲ್ಕತಾ, ಎ.10: 26 ವರ್ಷದ ಆಯುಷ್ ಬದೋನಿ(Ayush Badoni) ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿ ಲಖನೌ ತಂಡದ ಪರ ಸಾವಿರ ರನ್ ಪೂರೈಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದರು. ಬಲಗೈ ಬ್ಯಾಟ್ಸ್‌ಮನ್‌ಗೆ ಕೋಲ್ಕತ್ತಾದಲ್ಲಿ ನಡೆದ ಕೆಕೆಆರ್ ವಿರುದ್ಧ ಪಂದ್ಯದಲ್ಲಿ 25 ರನ್ ಗಳಿಸುತ್ತಿದ್ದಂತೆ ಈ ಸಾಧನೆಗೈದರು.
ಎಲ್‌ಎಸ್‌ಜಿ ಪರ ಐಪಿಎಲ್‌ನಲ್ಲಿ 1000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್. ಐಪಿಎಲ್ 2022 ರ ಮೆಗಾ ಹರಾಜಿಗೆ ಮುಂಚಿತವಾಗಿ ಎಲ್‌ಎಸ್‌ಜಿ ಸೇರಿದ್ದ ರಾಹುಲ್, 2022 ರಿಂದ 2024 ರವರೆಗೆ ಲಕ್ನೋ ಮೂಲದ ಫ್ರಾಂಚೈಸಿಗಾಗಿ 38 ಐಪಿಎಲ್ ಪಂದ್ಯಗಳನ್ನು ಆಡಿ ಒಟ್ಟು 1410 ರನ್‌ಗಳನ್ನು ಗಳಿಸಿದ್ದರು. ಒಟ್ಟಾರೆಯಾಗಿ ಲಖನೌ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಿಕೋಲಸ್ ಪೂರನ್ 1403* ಎರಡನೇ ಸ್ಥಾನದಲ್ಲಿದ್ದಾರೆ. ಪೂರನ್ ಇನ್ನು 8 ರನ್ ಗಳಿಸಿದರೆ ಅಗ್ರಸ್ಥಾನಿ ರಾಹುಲ್ ಅವರ ದಾಖಲೆ ಮುರಿಯಲಿದ್ದಾರೆ.
ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಇನ್ನೂ ಪದಾರ್ಪಣೆ ಮಾಡದ ಬದೋನಿ, ಎಲ್‌ಎಸ್‌ಜಿ ಪರ ಐಪಿಎಲ್‌ನಲ್ಲಿ 1000 ರನ್ ಗಳಿಸಿದ ಮೊದಲ ಅನ್‌ಕ್ಯಾಪ್ಡ್ ಆಟಗಾರ. ಐಪಿಎಲ್‌ನಲ್ಲಿ ಅವರು ಇದುವರೆಗೆ 7 ಅರ್ಧಶತಕಗಳನ್ನು ಗಳಿಸಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ 2 ಸಿಕ್ಸರ್ ಮತ್ತು 7 ಬೌಂಡರಿ ನೆರವಿನಿಂದ 54 ರನ್ ಬಾರಿಸಿದರು. 2025 ರಲ್ಲಿ, ಅವರು 14 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ ಒಟ್ಟು 329 ರನ್‌ಗಳನ್ನು ಗಳಿಸಿದ್ದರು.
It’s just the beginning, Ayush 🚀 pic.twitter.com/t8EPcz4tNT
— Lucknow Super Giants (@LucknowIPL) April 9, 2026
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅನ್‌ಕ್ಯಾಪ್ಡ್ ಆಟಗಾರನ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಪ್ರಭ್‌ಸಿಮ್ರನ್ ಸಿಂಗ್ ಹೆಸರಿನಲ್ಲಿದೆ. 25 ವರ್ಷದ ಪ್ರಭ್‌ಸಿಮ್ರನ್ ಸಿಂಗ್ ಇದುವರೆಗೆ 54 ಐಪಿಎಲ್ ಪಂದ್ಯಗಳನ್ನು ಆಡಿ 1385 ರನ್ ಬಾರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ 17 ಪಂದ್ಯಗಳನ್ನು ಆಡಿ 549 ರನ್‌ಗಳನ್ನು ಬಾರಿಸಿದ್ದರು.
Sunil Narine: ಭಾರತದಲ್ಲಿ 200 ಟಿ20 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದ ಸುನಿಲ್ ನರೈನ್
ಐಪಿಎಲ್‌ನಲ್ಲಿ ಲಖನೌ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳು
ಕೆಎಲ್ ರಾಹುಲ್ - 1410
ನಿಕೋಲಸ್ ಪೂರನ್ – 1403*
ಆಯುಷ್ ಬದೋನಿ - 1002*
ಮಾರ್ಕಸ್ ಸ್ಟೊಯಿನಿಸ್ - 952
ಕ್ವಿಂಟನ್ ಡಿ ಕಾಕ್ - 901
ಮಿಚೆಲ್ ಮಾರ್ಷ್ - 691
ದೀಪಕ್ ಹೂಡಾ - 680
ಐಡೆನ್ ಮಾರ್ಕ್ರಾಮ್ - 523*
ಕೃನಾಲ್ ಪಾಂಡ್ಯ – 504
ಕೈಲ್ ಮೇಯರ್ಸ್ - 379
ರಿಷಭ್ ಪಂತ್ – 354*