BCCI Adopt Olympic Sports: ಒಲಿಂಪಿಕ್ ಕ್ರೀಡೆ ದತ್ತು ಪಡೆಯಲು ಮುಂದಾದ ಬಿಸಿಸಿಐ
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಇರಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ದೃಢಪಡಿಸಿದೆ. ಟಿ20 ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ 6 ತಂಡಗಳಿಗಷ್ಟೇ ಸ್ಪರ್ಧಿಸುವ ಅವಕಾಶವಿದೆ.


ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. 2-3 ಒಲಿಂಪಿಕ್ ಕ್ರೀಡೆಗಳನ್ನು ದತ್ತು ಪಡೆಯಲು ನಿರ್ಧರಿಸಿದೆ. ಬಿಸಿಸಿಐಯ ಈ ನಿರ್ಧಾರಕ್ಕೆ ಅನೇಕ ಕ್ರೀಡಾಪಟುಗಳು ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ದೇಶದ ಕ್ರೀಡಾಪಟುಗಳಿಗೆ ಕಾರ್ಪೋರೇಟ್ ಸಂಸ್ಥೆಗಳು ನೆರವಾಗಬೇಕು ಎಂದು ಕೇಂದ್ರ ಕ್ರೀಡಾ ಸಚಿವಾಲಯ ಮನವಿ ಮಾಡಿತ್ತು.
ಕೇಂದ್ರ ಕ್ರೀಡಾ ಸಚಿವ ಮನಸುಖ್ ಮಾಂಡವೀಯ ಉಪಸ್ಥಿಯಲ್ಲಿ ನಡೆದಿದ್ದ ಸಭೆಯಲ್ಲಿ ಬಿಸಿಸಿಐ ಒಳಗೊಂಡಂತೆ ಒಟ್ಟು 58 ಕಾರ್ಪೋರೇಟ್ ಸಂಸ್ಥೆಗಳು ಪಾಲ್ಗೊಂಡಿದ್ದವು. ಬಿಸಿಸಿಐ ಪರವಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕ್ರಿಕೆಟ್ ಮಂಡಳಿಯು 2-3 ಒಲಿಂಪಿಕ್ ಕ್ರೀಡೆಗಳನ್ನು ದತ್ತು ಪಡೆದು, ಆ ಕ್ರೀಡೆಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳ ತರಬೇತಿ, ಫಿಟೈಸ್, ಅಂತಾರಾಪ್ರೀಯ ಕೂಟಗಳಲ್ಲಿ ಸ್ಪರ್ಧೆಗೆ ಬೇಕಿರುವ ಎಲ್ಲಾ ವ್ಯವಸ್ಥೆ ಮಾಡಲಿದೆ. ಯಾವ ಕ್ರೀಡೆಗಳನ್ನು ನಾವು ದತ್ತು ಪಡೆಯಬೇಕು ಎನ್ನುವ ನಿರ್ಧಾರವನ್ನು ಸಚಿವಾಲಯಕ್ಕೆ ಬಿಡಲಿದ್ದೇವೆ ಎಂದು ತಿಳಿಸಿದರು.
ಪ್ರತಿ ಒಲಿಂಪಿಕ್ ಕ್ರೀಡೆಗೆ ಪ್ರತ್ಯೇಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, 100ರಿಂದ 200 ಪ್ರತಿಭಾನ್ವಿತ, ಪದಕ ಗೆಲ್ಲುವ ಸಾಮರ್ಥ್ಯವಿರುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅವರನ್ನು ಸಿದ್ಧಗೊಳಿಸುವ ಯೋಜನೆ ಹೊಂದಿದೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಇರಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ದೃಢಪಡಿಸಿದೆ. ಟಿ20 ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ 6 ತಂಡಗಳಿಗಷ್ಟೇ ಸ್ಪರ್ಧಿಸುವ ಅವಕಾಶವಿದೆ. ಆದರೆ ಅರ್ಹತೆ ಪಡೆಯುವುದು ಹೇಗೆ ಎಂಬುದನ್ನು ಇನ್ನಷ್ಟೇ ನಿರ್ಧರಿಸಲಾಗುವುದು. ಅಮೆರಿಕ ಆತಿಥೇಯ ರಾಷ್ಟ್ರವಾದ ಕಾರಣ ನೇರ ಪ್ರವೇಶ ಪಡೆಯಬಹುದು. ಆದ್ದರಿಂದ ಅರ್ಹತೆ ಪಡೆಯಲು 5 ರಾಷ್ಟ್ರಗಳಷ್ಟೇ ಉಳಿದಂತಾಗುತ್ತದೆ.
ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ಕ್ರಿಕೆಟ್ ಆಡಿದ್ದು 1900ರಲ್ಲಿ. ಅಂದಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 4 ತಂಡಗಳು ಆಡಬೇಕಿತ್ತು. ಗ್ರೇಟ್ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್. ಆದರೆ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಹಿಂದೆ ಸರಿದ ಕಾರಣ ಕೊನೆಗೆ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಟೆಸ್ಟ್ ಮಾದರಿಯಲ್ಲಿ 2 ದಿನಗಳ ಒಂದು ಪಂದ್ಯವನ್ನು ಆಡಲಾಯಿತು. ಇದನ್ನು ಗ್ರೇಟ್ ಬ್ರಿಟನ್ 158 ರನ್ನುಗಳಿಂದ ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತ್ತು.
ಇದನ್ನೂ ಓದಿ IPL 2025: ಐಪಿಎಲ್ ಉಳಿದ ಪಂದ್ಯ ಆಡದಂತೆ ವಿದೇಶಿ ಆಟಗಾರರಿಗೆ ಮನವಿ ಮಾಡಿದ ಆಸೀಸ್ ವೇಗಿ