ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ದಕ್ಷಿಣ ಆಫ್ರಿಕಾ; ಭಾರತ ಪರ ಎರಡು ಬದಲಾವಣೆ

IND vs SA Live score 2nd Test: ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತು. ಸಾಯಿ ಸುದರ್ಶನ್ ಮತ್ತು ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡಿತು. ಅಕ್ಷರ್‌ ಪಟೇಲ್‌ ಅವರನ್ನು ಕೈಬಿಡಲಾಯಿತು. ದಕ್ಷಿಣ ಆಫ್ರಿಕಾ ಒಂದು ಬಲಾವಣೆ ಮಾಡಿತು. ಸೆನುರನ್ ಮುತ್ತುಸ್ವಾಮಿಗೆ ಅವಕಾಶ ನೀಡಿ ಕಾರ್ಬಿನ್ ಬಾಷ್ ಕೈಬಿಡಲಾಯಿತು.

ಟಾಸ್‌ ಸೋತರೂ ವಿಶೇಷ ದಾಖಲೆ ಬರೆದ ರಿಷಭ್‌ ಪಂತ್‌

ಟೆಂಬ ಬವುಮಾ ಮತ್ತು ರಿಷಭ್‌ ಪಂತ್‌ -

Abhilash BC
Abhilash BC Nov 22, 2025 8:51 AM

ಗುವಾಹಟಿ: ಭಾರತ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ(IND vs SA) ತಂಡದ ನಾಯಕ ಟೆಂಬ ಬವುಮಾ ಮೊದಲು ಬ್ಯಾಟಿಂಗ್‌(IND vs SA Live score 2nd Test) ಮಾಡುವ ನಿರ್ಧಾರ ಕೈಗೊಂಡರು. ಹಂಗಾಮಿ ನಾಯಕ ರಿಷಭ್‌ ಪಂತ್‌ ಟಾಸ್‌ಗೆ ಆಗಮಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್ ಭಾರತವನ್ನು ಮುನ್ನಡೆಸಿದ 38ನೇ ನಾಯಕರೆನಿಸಿದರು.

ನಾಯಕ ಬದಲಾದರೂ ಟಾಸ್‌ ಅದೃಷ್ಟ ಮಾತ್ರ ಬದಲಾಗಲಿಲ್ಲ. ಈ ಪಂದ್ಯದಲ್ಲಿಯೂ ಭಾರತ ಟಾಸ್‌ ಸೋಲುವ ಮೂಲಕ ಕಳೆದ 9 ಪಂದ್ಯಗಳಲ್ಲಿ 8 ಸೋತಂತಾಯಿತು. 2008 ರಿಂದ 2014 ರ ನಡುವೆ 60 ಪಂದ್ಯಗಳಲ್ಲಿ ಎಂಎಸ್ ಧೋನಿ ಭಾರತ ತಂಡವನ್ನು ಮುನ್ನಡೆಸಿದ ನಂತರ ರಿಷಭ್ ಪಂತ್ ಭಾರತವನ್ನು ಟೆಸ್ಟ್‌ನಲ್ಲಿ ಮುನ್ನಡೆಸುತ್ತಿರುವ ಎರಡನೇ ವಿಕೆಟ್ ಕೀಪರ್ ಎನಿಸಿದರು.

ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತು. ಸಾಯಿ ಸುದರ್ಶನ್ ಮತ್ತು ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡಿತು. ಅಕ್ಷರ್‌ ಪಟೇಲ್‌ ಅವರನ್ನು ಕೈಬಿಡಲಾಯಿತು. ದಕ್ಷಿಣ ಆಫ್ರಿಕಾ ಒಂದು ಬಲಾವಣೆ ಮಾಡಿತು. ಸೆನುರನ್ ಮುತ್ತುಸ್ವಾಮಿಗೆ ಅವಕಾಶ ನೀಡಿ ಕಾರ್ಬಿನ್ ಬಾಷ್ ಕೈಬಿಡಲಾಯಿತು.

ಪಿಚ್‌ ರಿಪೋರ್ಟ್‌

ಗುವಾಹಟಿಯ ಪಿಚ್‌ ಕೆಂಪು ಜೇಡಿಮಣ್ಣಿನಿಂದ ತಯಾರಿಸಲಾಗಿದ್ದು, ವೇಗ ಮತ್ತು ಬೌನ್ಸ್‌ನಿಂದ ಕೂಡರಲಿದೆ ಎನ್ನಲಾಗಿದೆ. ಆದರೆ ಈಡನ್‌ ಗಾರ್ಡನ್ಸ್‌ನಲ್ಲಿ ಬ್ಯಾಟರ್‌ಗಳನ್ನು ಕಾಡಿದ ಅನಿರೀಕ್ಷಿತ ಬೌನ್ಸ್‌ ಸಾಧ್ಯತೆ ಇಲ್ಲ. ಸ್ಪಿನ್ನರ್‌ಗಳು ಹಿಡಿತ ಸಾಧಿಸಲು ಅಂತಿಮ ಎರಡು ದಿನಗಳ ವರೆಗೂ ಕಾಯಬೇಕಾಗಬಹುದು.

ಇದನ್ನೂ ಓದಿ AUS vs ENG: 7 ವಿಕೆಟ್‌ ಕಬಳಿಸಿ ಮೊಹಮ್ಮದ್‌ ಶಮಿ ದಾಖಲೆ ಮುರಿದ ಮಿಚೆಲ್‌ ಸ್ಟಾರ್ಕ್‌!

ಉಭಯ ಆಡುವ ಬಳಗ

ಭಾರತ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್(w/c), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ(ನಾಯಕ), ಟೋನಿ ಡಿ ಝೋರ್ಜಿ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರಿನ್ನೆ(ವಿ.ಕೀ.), ಮಾರ್ಕೊ ಜಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.