ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dhananjaya: 'ಅಣ್ಣ ಫ್ರಂ ಮೆಕ್ಸಿಕೋ' ರಿಲೀಸ್ ಡೇಟ್ ಅನೌನ್ಸ್‌! ಡಾಲಿ ಫ್ಯಾನ್ಸ್‌ ಖುಷ್‌

Dhananjaya:ಅಣ್ಣ ಫ್ರಮ್ ಮೆಕ್ಸಿಕೋ’ ( Anna From Mexico) ಸಿನಿಮಾ ಮುಂಬರುವ (Release) ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಶಂಕರ್‌ ಗುರು, ನಮ್ಮ ಬಡವ ರಾಸ್ಕಲ್‌ ಸಿನಿಮಾ ಕೂಡ ಡಿ.24ರಂದು ಬಿಡುಗಡೆಯಾಗಿತ್ತು. ಈಗ ಅಣ್ಣ ಫ್ರಂ ಮೆಕ್ಸಿಕೋ ಕೂಡ ಅದೇ ದಿನಾಂಕದಂದು ಬಿಡುಗಡೆಯಾಗುತ್ತಿದೆ ಎಂದರು. ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಪೂರ್ಣಚಂದ್ರ, ನಾಗಭೂಷಣ, ಸಾಧು ಕೋಕಿಲ, ರಂಗಾಯಣ ರಘು ನಟಿಸಿದ್ದಾರೆ.

'ಅಣ್ಣ ಫ್ರಂ ಮೆಕ್ಸಿಕೋ' ರಿಲೀಸ್ ಡೇಟ್ ಅನೌನ್ಸ್‌! ಡಾಲಿ ಫ್ಯಾನ್ಸ್‌ ಖುಷ್‌

ಡಾಲಿ ಧನಂಜಯ್‌ -

Yashaswi Devadiga
Yashaswi Devadiga Jul 30, 2026 5:56 PM

ಡಾಲಿ ಧನಂಜಯ್ ಹಾಗೂ ನಿರ್ದೇಶಕ ಶಂಕರ್ ಗುರು ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ ( Anna From Mexico) ಸಿನಿಮಾ ಮುಂಬರುವ (Release) ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಶಂಕರ್‌ ಗುರು, ನಮ್ಮ ಬಡವ ರಾಸ್ಕಲ್‌ ಸಿನಿಮಾ ಕೂಡ ಡಿ.24ರಂದು ಬಿಡುಗಡೆಯಾಗಿತ್ತು. ಈಗ ಅಣ್ಣ ಫ್ರಂ ಮೆಕ್ಸಿಕೋ ಕೂಡ ಅದೇ ದಿನಾಂಕದಂದು ಬಿಡುಗಡೆಯಾಗುತ್ತಿದೆ ಎಂದರು.

ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಪೂರ್ಣಚಂದ್ರ, ನಾಗಭೂಷಣ, ಸಾಧು ಕೋಕಿಲ, ರಂಗಾಯಣ ರಘು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕ್ರಿಸ್‌ಮಸ್ ರಜಾ ಅವಧಿ ಸಿನಿಮಾಗಳ ಬಿಡುಗಡೆಗೆ ಪ್ರಮುಖ ಸಮಯವಾಗಿ ಪರಿಣಮಿಸಿದೆ. ಅದೇ ಅವಕಾಶವನ್ನು ಬಳಸಿಕೊಳ್ಳಲು 'ಅಣ್ಣ ಫ್ರಮ್ ಮೆಕ್ಸಿಕೋ' ತಂಡ ಮುಂದಾಗಿದೆ.

ಇದನ್ನೂ ಓದಿ: Chikkanna Marriage: ಕಾಮಿಡಿ ಕಿಂಗ್ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್! ಇಲ್ಲಿದೆ ಡಿಟೇಲ್ಸ್‌

ಮೊದಲಿಗೆ ಈ ಸಿನಿಮಾ ಸಂಪೂರ್ಣ ಆಕ್ಷನ್ ಕಥಾಹಂದರದಲ್ಲಿ ರೂಪುಗೊಳ್ಳಬೇಕಿತ್ತು. ಆದರೆ ನಂತರ ಕಥೆಯಲ್ಲಿ ಬದಲಾವಣೆ ಮಾಡಿ, ಕುಟುಂಬ ಸಮೇತ ವೀಕ್ಷಿಸಬಹುದಾದ ಕಮರ್ಷಿಯಲ್ ಎಂಟರ್‌ಟೈನರ್ ಆಗಿ ರೂಪಿಸಲಾಗಿದೆ. ಈ ಚಿತ್ರದಲ್ಲಿ 'ಬಡವ ರಾಸ್ಕಲ್' ತಂಡದ ಹಲವರು ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ನಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡೋ ಮುಖೇನ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೋಸ್ ಜಂಟಿ ಬ್ಯಾನರ್‌ನಡಿ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೇಲೆ ಈಗಾಗಲೇ ಭಾರಿ ಹೈಪ್ ಸೃಷ್ಟಿಯಾಗಿದೆ. ಈ ಚಿತ್ರಕ್ಕೆ ಅಜಯ್ ಅವರ ಸಂಕಲನ ಹಾಗೂ ಗುಣ ಅವರ ಕಲಾ ನಿರ್ದೇಶನವಿದೆ.

'ಅಣ್ಣ ಫ್ರಮ್ ಮೆಕ್ಸಿಕೋ' ಡಿಸೆಂಬರ್ 24ರ ಬಿಡುಗಡೆ ದಿನಾಂಕವನ್ನು ಘೋಷಿಸಿದ ಬೆನ್ನಲ್ಲೇ, ಧನಂಜಯ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ '666 ಆಪರೇಷನ್ ಡ್ರೀಮ್ ಥಿಯೇಟರ್' ಕುರಿತು ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: Amruthdhaare Serial: ವಿಧಿಯ ಸವಾಲಿನೆದುರು ಕುಗ್ಗೋಳಲ್ಲ ಗಟ್ಟಿಗಿತ್ತಿ ಭೂಮಿ! ಭಾವುಕರಾದ ಫ್ಯಾನ್ಸ್

ಹೇಮಂತ್ ಎಂ. ರಾವ್ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.