ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈಭವ್‌ ಸೂರ್ಯವಂಶಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಕ್ಸಸ್‌ ಆಗುವುದು ಅನುಮಾನ ಎಂದ ಎಬಿ ಡಿ ವಿಲಿಯರ್ಸ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಮೂಲಕ 776 ರನ್‌ಗಳನ್ನು ಸಿಡಿಸಿ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ ಅವರ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ 15ನೇ ವಯಸ್ಸಿನ ಆಟಗಾರ ಟೆಸ್ಟ್‌ ಭವಿಷ್ಯದ ಬಗ್ಗೆ ಎಬಿಡಿ ಮಾತನಾಡಿದ್ದಾರೆ.

ವೈಭವ್‌ ಸೂರ್ಯವಂಶಿ ಟೆಸ್ಟ್‌ನಲ್ಲಿ ಸಕ್ಸಸ್‌ ಆಗುವುದು ಅನುಮಾನ: ಎಬಿಡಿ!

ವೈಭವ್‌ ಟೆಸ್ಟ್‌ ಸಾಮರ್ಥ್ಯದ ಬಗ್ಗೆ ಎಬಿಡಿ ಅಭಿಪ್ರಾಯ. -

Profile
Ramesh Kote Jun 8, 2026 11:46 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ 776 ರನ್‌ಗಳನ್ನು ಸಿಡಿಸಿ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ (vaibhav Sooryavanshi) ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ (AB De Villiers) ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಯುವ ಬ್ಯಾಟ್ಸ್‌ಮನ್‌ನ ಟೆಸ್ಟ್‌ ಸಾಮರ್ಥ್ಯದ ಬಗ್ಗೆ ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವೈಭವ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಕ್ಸಸ್‌ ಆಗುವುದು ಅನುಮಾನ ಎಂದು ಹೇಳಿದ್ದಾರೆ.

ವೈಭವ್‌ ಸೂರ್ಯವಂಶಿ ಅವರು 2026ರ ಐಪಿಎಲ್‌ ಟೂರ್ನಿಯಲ್ಲಿ 776 ರನ್‌ಗಳೊಂದಿಗೆ ಮುಗಿಸಿದ್ದು, 237ರ ಅಸಾಧಾರಣ ಸ್ಟ್ರೈಕ್‌ರೇಟ್ ದಾಖಲಿಸಿದ್ದರು. ಇದರೊಂದಿಗೆ, ಒಂದೇ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗೆ ನೀಡಲಾಗುವ ಪ್ರತಿಷ್ಠಿತ ಆರೆಂಜ್‌ ಕ್ಯಾಪ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ತಮ್ಮ ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಈ ಯುವ ಆರಂಭಿಕ ಬ್ಯಾಟರ್, ಜಸ್‌ಪ್ರೀತ್‌ ಬುಮ್ರಾ, ಪ್ಯಾಟ್‌ ಕಮಿನ್ಸ್‌ ಹಾಗೂ ಜಾಶ್‌ ಹೇಝಲ್‌ವುಡ್‌ ಅವರಂತಹ ವಿಶ್ವದ ಶ್ರೇಷ್ಠ ಬೌಲರ್‌ಗಳ ವಿರುದ್ಧವೂ ನಿರ್ಭೀತಿಯಿಂದ ರನ್‌ಗಳ ಮಳೆ ಹರಿಸಿದರು.

IPL 2027: ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಎಂಎಸ್‌ ಧೋನಿ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!

ಆದರೆ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿನ ಯಶಸ್ಸನ್ನು ಅವರು ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಪುನರಾವರ್ತಿಸಬಹುದೇ ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಎ ಬಿ ಡಿವಿಲಿಯರ್ಸ್‌, ಸೂರ್ಯವಂಶಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅದೇ ರೀತಿಯ ಯಶಸ್ಸು ಸಾಧಿಸುತ್ತಾರೆಯೇ ಎಂಬುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಸೂರ್ಯವಂಶಿ ಅವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಆಸಕ್ತಿ ಇದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

"ಅವರು ಅದ್ಭುತ ಪ್ರತಿಭೆಯುಳ್ಳ ಆಟಗಾರ. ಕೆಂಪು ಚೆಂಡಿನ (ಟೆಸ್ಟ್) ಕ್ರಿಕೆಟ್ ಕುರಿತು ನಾನು ಖಚಿತ ಉತ್ತರ ನೀಡಲು ಸಾಧ್ಯವಿಲ್ಲ. ನನ್ನ ಅಭಿಪ್ರಾಯದಲ್ಲಿ ಅವರು ಬಯಸಿದರೆ ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಬಹುದು. ಆದರೆ ಇಲ್ಲಿಯೇ ದೊಡ್ಡ ಪ್ರಶ್ನೆಯೂ ಇದೆ—ಅವರಿಗೆ ನಿಜವಾಗಿಯೂ ಟೆಸ್ಟ್‌ ಕ್ರಿಕೆಟ್‌ ಬೇಕೇ? ಅದಕ್ಕೆ ಕಾಲವೇ ಉತ್ತರ ನೀಡಲಿದೆ."

"ಅವರಲ್ಲಿ ಅದನ್ನು ಸಾಧಿಸುವಷ್ಟು ಪ್ರತಿಭೆ ಮತ್ತು ಸಾಮರ್ಥ್ಯವಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅದು ಯಾವಾಗಲೂ ಸುಲಭವಾಗಿರುವುದಿಲ್ಲ. ಈ ವಿಷಯವನ್ನು ನಾನು ಹಿಂದೆ ಹಲವು ಬಾರಿ ಉಲ್ಲೇಖಿಸಿದ್ದೇನೆ," ಎಂದು ಭಾನುವಾರ ಮುಂಬೈನಲ್ಲಿ ನಡೆದಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಎಬಿಡಿ ಹೇಳಿದ್ದಾರೆ.

ʻಟೆಸ್ಟ್‌ ಕ್ರಿಕೆಟ್‌ಗೆ ಅಪಾರ ಗೌರವ, ಕಠಿಣ ಪರಿಶ್ರಮದ ಅಗತ್ಯವಿದೆʼ: ಮಾನವ್‌ ಸುತಾರ್‌!

"ಅವರು ಕೆಂಪು ಚೆಂಡಿನ (ಟೆಸ್ಟ್) ಕ್ರಿಕೆಟ್ ಆಡಲು ನಿರ್ಧರಿಸಿದರೆ, ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಆ ಸವಾಲುಗಳನ್ನು ಜಯಿಸಲು ಬೇಕಾದ ಕೌಶಲ ಮತ್ತು ಸಾಮರ್ಥ್ಯ ಅವರಲ್ಲಿದೆ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಅವರು ಟೆಸ್ಟ್ ಕ್ರಿಕೆಟ್ ಆಡಲು ಪ್ರಯತ್ನಿಸಬೇಕು ಎಂದು ನಾನು ಆಶಿಸುತ್ತೇನೆ. ಆದರೆ ಅದು ನಡೆಯುವ ಸಾಧ್ಯತೆ ಬಗ್ಗೆ ನನಗೆ ಅನುಮಾನವಿದೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ," ಎಂದು ಅವರು ಹೇಳಿದ್ದಾರೆ.

ಎಬಿ ಡಿ ವಿಲಿಯರ್ಸ್ ಅವರು ದಕ್ಷಿಣ ಆಫ್ರಿಕಾ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ತಮ್ಮ ಕ್ರಿಕೆಟ್‌ ದಿನಗಳಲ್ಲಿ ಅವರು ಹಲವು ಹೊಸ ಹಾಗೂ ವಿನೂತನ ಶಾಟ್‌ಗಳನ್ನು ಪರಿಚಯಿಸಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದರು.

ಇದೀಗ ಕೃತಕ ಬುದ್ಧಿಮತ್ತೆ (AI) ಕ್ರಿಕೆಟ್ ಆಟದ ಶೈಲಿ ಮತ್ತು ಅಂಕಿ-ಅಂಶಗಳ ವಿಶ್ಲೇಷಣೆಯ ಮೇಲೆ ಮಹತ್ವದ ಪ್ರಭಾವ ಬೀರುತ್ತಿರುವ ಸಂದರ್ಭದಲ್ಲಿ, ತಮ್ಮ ಆಟದ ವೃತ್ತಿಜೀವನದ ಅವಧಿಯಲ್ಲಿ ಇಂತಹ ತಂತ್ರಜ್ಞಾನ ಮತ್ತು ವಿಶ್ಲೇಷಣಾ ಸಾಧನಗಳ ಲಭ್ಯತೆ ಇದ್ದಿದ್ದರೆ ಅದು ತಮ್ಮ ಆಟಕ್ಕೆ ಸಾಕಷ್ಟು ನೆರವಾಗುತ್ತಿತ್ತು ಎಂದು ಡಿ ವಿಲಿಯರ್ಸ್ ಒಪ್ಪಿಕೊಂಡಿದ್ದಾರೆ.

ಕ್ರಿಕೆಟ್‌ನಲ್ಲಿ ಡೇಟಾ ಸಂಗ್ರಹಣೆ ಮತ್ತು ಆಟಗಾರರ ಪ್ರದರ್ಶನ ವಿಶ್ಲೇಷಣೆಯಲ್ಲಿ ಎಐನ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ತಂತ್ರಜ್ಞಾನ ಆಟಗಾರರು ಮತ್ತು ತರಬೇತುದಾರರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.