ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನನ್ನ ಆರ್‌ಸಿಬಿ ಗೆಳೆಯ ಮೊಹಮ್ಮದ್‌ ಸಿರಾಜ್‌ಗೆ ಅದೃಷ್ಟವಿಲ್ಲʼ-ಎಬಿಡಿ ಈ ರೀತಿ ಹೇಳಿದ್ದೇಕೆ?

ABD on Mohammed Siraj T20 WC Snub: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ಗೆ ಸ್ಥಾನ ನೀಡದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿರಾಜ್‌ಗೆ ಅದೃಷ್ಟವಿಲ್ಲ ಎಂದು ಎಬಿಡಿ ಹೇಳಿದ್ದಾರೆ.

ನನ್ನ ಆರ್‌ಸಿಬಿ ಗೆಳೆಯ ಮೊಹಮ್ಮದ್‌ ಸಿರಾಜ್‌ಗೆ ಅದೃಷ್ಟವಿಲ್ಲ: ಎಬಿಡಿ!

ಮೊಹಮ್ಮದ್‌ ಸಿರಾಜ್‌ ಬಗ್ಗೆ ಎಬಿಡಿ ಹೇಳಿಕೆ. -

Profile
Ramesh Kote Jan 5, 2026 5:12 PM

ನವದೆಹಲಿ: ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಭಾರತ ತಂಡದಲ್ಲಿ (India's T20 WC Squad) ಸ್ಥಾನ ಕಳೆದುಕೊಂಡ ಆಟಗಾರರ ಪೈಕಿ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ಗೂ ಕೂಡ ಅದೃಷ್ಟವಿಲ್ಲ ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ (AB De Villiers) ಹೇಳಿದ್ದಾರೆ. ಕೌಶಲ ಹಾಗೂ ಫಾರ್ಮ್‌ ಬದಲಿಗೆ ತಂಡದ ಸಂಯೋಜನೆ ಸೇರಿದಂತೆ ತಂಡದ ತಾಂತ್ರಿಕ ದೃಷ್ಟಿಯಲ್ಲಿ ಸಿರಾಜ್‌ ಅವರನ್ನು ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ ಎಂಬುದು ಆರ್‌ಸಿಬಿ ಮಾಜಿ ಆಟಗಾರನ ಅಭಿಪ್ರಾಯವಾಗಿದೆ.

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಎಬಿಡಿ, "ಭಾರತ ಏಕದಿನ ತಂಡದಲ್ಲಿ ನಾವು ಮೊಹಮ್ಮದ್‌ ಸಿರಾಜ್‌ ಅವರನ್ನು ನೋಡಬಹುದು ಆದರೆ, ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದ ಅವರಿಗೆ ಅದೃಷ್ಟವಿಲ್ಲ. ಏಕೆಂದರೆ ತಂಡದ ಆಯ್ಕೆಯು ಸಂಯೋಜನೆಯನ್ನು ಅವಲಂಬಿಸಿದೆ. ನಿಮ್ಮ ತಂಡದಲ್ಲಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಅರ್ಷದೀಪ್‌ ಸಿಂಗ್‌ ಇದ್ದಾರೆ. ಹರ್ಷಿತ್‌ ರಾಣಾ ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವು ನೀಡಲಿದ್ದಾರೆ. ಇವರು ನಿಮ್ಮ ತಂಡಕ್ಕೆ ಪ್ರಮುಖ ಸೀಮ್‌ ಬೌಲರ್‌ಗಳಾಗಿದ್ದಾರೆ," ಎಂದು ಹೇಳಿದ್ದಾರೆ.

"ಟೀಮ್‌ ಮ್ಯಾನೇಜ್‌ಮೆಂಟ್‌ ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ ಅನ್ನು ಎದುರು ನೋಡುತ್ತಿದೆ, ಈ ಕಾರಣದಿಂದಲೇ ಸಿರಾಜ್‌ ಬದಲು ಹರ್ಷಿತ್‌ ರಾಣಾಗೆ ಅವಕಾಶವನ್ನು ನೀಡಿದೆ. ಟಿ20 ವಿಶ್ವಕಪ್‌ ಭಾರತದಲ್ಲಿ ನಡೆಯುತ್ತಿರುವ ಕಾರಣ, ಸೀಮ್‌ ಬೌಲಿಂಗ್‌ ಬದಲು ಸ್ಪಿನ್ನರ್‌ಗಳಿಗೆ ಹೆಚ್ಚುನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಒಂದು ವೇಳೆ ಸೀಮ್‌ ಬೌಲರ್‌ಗಳು ವಿಕೆಟ್‌ ಪಡೆಯುವಂತಾದರೆ, ಇದು ತಂಡಕ್ಕೆ ಬೋನಸ್‌ ಆಗಲಿದೆ," ಎಂದು ಆರ್‌ಸಿಬಿ ದಿಗ್ಗಜ ತಿಳಿಸಿದ್ದಾರೆ.

2024ರ ಜುಲೈನಿಂದ ಮೊಹಮ್ಮದ್‌ ಸಿರಾಜ್‌ ಅವರು ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ. ತಂಡದ ಸಂಯೋಜನೆಗೆ ಹೆಚ್ಚಿನ ಒತ್ತು ನೀಡಿದ್ದರಿಂದ ಸಿರಾಜ್ ಅವರನ್ನು ಕಡೆಗಣಿಸಲಾಯಿತು. ಜಸ್‌ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಜೊತೆಗೆ, ಹರ್ಷಿತ್ ರಾಣಾ ಅವರ ಬ್ಯಾಟಿಂಗ್ ಕೊಡುಗೆಯು ವೇಗದ ಬೌಲಿಂಗ್‌ ಘಟಕವನ್ನು ಬಲಪಡಿಸಿಸಡ ಮತ್ತು ಟೀಮ್‌ ಮ್ಯಾನೇಜ್‌ಮೆಂಟ್‌ ಹುಡುಕುತ್ತಿರುವಂತೆ ತೋರುವ ಸಮತೋಲನವನ್ನು ಇದು ಒದಗಿಸಿದೆ.

ಐಸಿಸಿ ಟಿ20ಐ ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ಪಡೆಯದ ಹೊರತಾಗಿಯೂ ಮೊಹಮ್ಮದ್‌ ಸಿರಾಜ್‌ ಅವರು ಇನ್ನೂ ಟೀಮ್‌ ಇಂಡಿಯಾಗೆ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಕೀ ಆಟಗಾರನಾಗಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೂಲಕ ಸಿರಾಜ್‌ ಅವರು ರಾಷ್ಟ್ರೀಯ ವೈಟ್‌ಬಾಲ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಯ ದೃಷ್ಟಿಯಿಂದ ಸಿರಾಜ್‌ ಭಾರತ ತಂಡಕ್ಕೆ ಪ್ರಮುಖ ಆಟಗಾರ.

ಆರ್‌ಸಿಬಿಯಲ್ಲಿ ಆಡಿದ್ದ ಸಿರಾಜ್‌-ಎಬಿಡಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹಲವು ಸೀಸನ್‌ಗಳಲ್ಲಿ ಮೊಹಮ್ಮದ್‌ ಸಿರಾಜ್‌ ಹಾಗೂ ಎಬಿ ಡಿ ವಿಲಿಯರ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಡ್ರೆಸಿಂಗ್‌ ರೂಂ ಅನ್ನು ಹಂಚಿಕೊಂಡಿದ್ದರು. 2021ರ ಐಪಿಎಲ್‌ ಟೂರ್ನಿಯ ಬಳಿಕ ಎಬಿಡಿ ಅದೇ ವರ್ಷ ಡಿಸೆಂಬರ್‌ನಲ್ಲಿ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಅಂದ ಹಾಗೆ 2024ರ ಐಪಿಎಲ್‌ ಬಳಿಕ ಮೊಹಮ್ಮದ್‌ ಸಿರಾಜ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಮೆಗಾ ಹರಾಜಿಗೆ ಬಿಡುಗಡೆಗೊಳಿಸಿತ್ತು. ಸಿರಾಜ್‌ ಇದೀಗ ಗುಜರಾತ್‌ ಟೈಟನ್ಸ್‌ ತಂಡದಲ್ಲಿದ್ದಾರೆ.