ʻಸಮಸ್ಯೆ ಬಗೆಹರಿಸದೆ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದಾರೆʼ: ವಿರಾಟ್ ಕೊಹ್ಲಿ ಬಗ್ಗೆ ಸಂಜಯ್ ಮಾಂಜ್ರೇಕರ್ ಅಚ್ಚರಿ ಹೇಳಿಕೆ!
Sanjay Manjrekar on Virat Kohli's Test Retirement: ಭಾರತೀಯ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಗ್ಗೆ ಮಾಜಿ ಆಟಗಾರ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಬದಲು ಕೊಹ್ಲಿ ತಕ್ಷಣ ಟೆಸ್ಟ್‌ಗೆ ವಿದಾಯ ಹೇಳಿದ್ದಾರೆಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸಂಜಯ್ ಮಾಂಜ್ರೇಕರ್. -
ನವದೆಹಲಿ: ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್‌ಗೆ ತ್ವರಿತವಾಗಿ ನಿವೃತ್ತಿ ಘೋಷಿಸಿದ್ದರಿಂದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ (Sanjay Manjrekar) ಬೇಸರ ವ್ಯಕ್ತಪಡಿಸಿದ್ದಾರೆ. ಟೆಸ್ಟ್‌ಗೆ ವಿದಾಯ ಹೇಳುವುದಕ್ಕೂ ಮುನ್ನ ಅವರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿತ್ತು ಎಂದು ಮಾಂಜ್ರೇಕರ್ ಹೇಳಿದ್ದಾರೆ. ಪ್ಯಾಬ್-4 ಆಟಗಾರರ ಪಟ್ಟಿಯಲ್ಲಿರುವ ಇನ್ನುಳಿದ ಮೂವರಾದ ಜೋ ರೂಟ್, ಸ್ಟೀವನ್ ಸ್ಮಿತ್ ಹಾಗೂ ಕೇನ್ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮತ್ತೊಂದು ಕಡೆ ಆಸ್ಟ್ರೇಲಿಯಾ ದಿಗ್ಗಜ ಸ್ಟೀವನ್ ಸ್ಮಿತ್ ಕೂಡ ರನ್ ಹೊಳೆ ಹರಿಸುತ್ತಿದ್ದಾರೆ. ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಇಷ್ಟು ಬೇಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಬಗ್ಗೆ ಸಂಜಯ ಮಾಂಜ್ರೇಕರ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಏಕದಿನ ಸ್ವರೂಪದಲ್ಲಿ ಸಕ್ರಿಯರಾಗಿದ್ದಾರೆ.
AUS vs ENG: ಶತಕ ಬಾರಿಸಿ 96 ವರ್ಷಗಳ ಹಳೆಯ ದಾಖಲೆ ಮುರಿದ ಸ್ಟೀವನ್ ಸ್ಮಿತ್!
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಸದ್ಯ ನಡೆಯುತ್ತಿರುವ ಆಷಸ್ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಅದ್ಭುತ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಶತಕವನ್ನು ಬಾರಿಸಿದ್ದಾರೆ. ಮತ್ತೊಂದು ಕಡೆ ಸ್ಟೀವನ್ ಸ್ಮಿತ್ ಕೂಡ ಇದೇ ಪಂದ್ಯದ ಮೂರನೇ ದಿನ ಶತಕವನ್ನು ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದನ್ನು ಗಮನಿಸಿದ ಸಂಜಯ್ ಮಾಂಜ್ರೇಕರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊದಲ್ಲಿ ವಿರಾಟ್ ಕೊಹ್ಲಿ ಅವರನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.
"ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಎತ್ತರವನ್ನು ತಲುಪುತ್ತಿದ್ದಂತೆ, ನನ್ನ ಮನಸ್ಸು ವಿರಾಟ್ ಕೊಹ್ಲಿಯತ್ತ ಸಾಗುತ್ತಿದೆ. ಅವರು ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ ಮತ್ತು ನಿವೃತ್ತರಾಗುವುದಕ್ಕೂ ಮುನ್ನ ಹೋರಾಡಿದ ಐದು ವರ್ಷಗಳಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್‌ನ 31ರ ಸರಾಸರಿಯಲ್ಲಿ ಏಕೆ ಇದ್ದೇನೆ ಎಂಬ ಸಮಸ್ಯೆಗಳನ್ನು ಕಂಡುಹಿಡಿಯಲು ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಬಳಸಿಕೊಳ್ಳಲಿಲ್ಲ ಎಂಬುದು ದುರದೃಷ್ಟಕರ. ಆದರೆ ಜೋ ರೂಟ್, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್‌ರಂತಹ ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ನಿಜವಾಗಿಯೂ ಹೆಸರು ಮಾಡುತ್ತಿದ್ದಾರೆ ಎಂದು ನನಗೆ ಬೇಸರವಾಗಿದೆ," ಎಂದು ಮಾಂಜ್ರೇಕರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.
Vijaya Hazare Trophy: ಬಂಗಾಳ ವಿರುದ್ಧ ದ್ವಿಶತಕ ಬಾರಿಸಿದ ಅಮನ್ ರಾವ್ ಯಾರು?
ವಿರಾಟ್ ಕೊಹ್ಲಿ ತಾಂತ್ರಿಕ ಮತ್ತು ಮಾನಸಿಕ ಹೊಂದಾಣಿಕೆಗಳನ್ನು ಅನ್ವೇಷಿಸಬಹುದಿತ್ತು ಅಥವಾ ದೇಶಿ ಮತ್ತು ವಿದೇಶಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರಳಲು ತಾತ್ಕಾಲಿಕವಾಗಿ ಹೊರಗುಳಿದಿರುವುದನ್ನು ಒಪ್ಪಿಕೊಳ್ಳಬಹುದಿತ್ತು ಎಂದು ಅವರು ಸಲಹೆ ನೀಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಏಕದಿನ ಪಂದ್ಯಗಳನ್ನು ಮುಂದುವರಿಸುವ ಕೊಹ್ಲಿ ನಿರ್ಧಾರದಿಂದ ಹೆಚ್ಚು ನಿರಾಶೆಗೊಂಡಿದ್ದೇನೆ ಎಂದು ಮಾಂಜ್ರೇಕರ್ ಒಪ್ಪಿಕೊಂಡರು. ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್‌ಗೆ ಏಕದಿನ ಪಂದ್ಯಗಳು ಸುಲಭವಾದ ಸ್ವರೂಪವಾಗಿದೆ ಎಂದು ಅವರು ಬಣ್ಣಿಸಿದರು ಮತ್ತು ಟೆಸ್ಟ್ ಕ್ರಿಕೆಟ್ ಕೌಶಲ, ಮನೋಧರ್ಮ ಮತ್ತು ಪರಿಶ್ರಮದ ಅಂತಿಮ ಪರೀಕ್ಷೆಯಾಗಿ ಉಳಿದಿದೆ ಎಂದು ವಾದಿಸಿದರು.
KAR vs RAJ: ಮಯಾಂಕ್ ಅಗರ್ವಾಲ್ ಶತಕ, ಕರ್ನಾಟಕ ತಂಡಕ್ಕೆ ಸತತ ಆರನೇ ಜಯ!
"ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ದೂರ ಸರಿದು, ಎಲ್ಲಾ ಸ್ವರೂಪಗಳಿಂದ ನಿವೃತ್ತರಾಗಿದ್ದರೆ ಪರವಾಗಿಲ್ಲ. ಆದರೆ ನಾನು ಮೊದಲೇ ಹೇಳಿದಂತೆ, ಅವರು ಏಕದಿನ ಕ್ರಿಕೆಟ್ ಆಡಲು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ನನಗೆ ಹೆಚ್ಚು ನಿರಾಶೆಯನ್ನುಂಟುಮಾಡುತ್ತದೆ ಏಕೆಂದರೆ ಇದು ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್‌ಗೆ ಸುಲಭವಾದ ಸ್ವರೂಪವಾಗಿದೆ. ನಿಮ್ಮನ್ನು ನಿಜವಾಗಿಯೂ ಪರೀಕ್ಷಿಸುವ ಸ್ವರೂಪವೆಂದರೆ ಮೊದಲು, ಸ್ಪಷ್ಟವಾಗಿ, ಟೆಸ್ಟ್ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್ ಅದರ ವಿಭಿನ್ನ ಸವಾಲುಗಳನ್ನು ಹೊಂದಿದೆ," ಎಂದು ಅವರು ಹೇಳಿದರು.
"ಇನ್ನೊಂದು ವಿಷಯವೆಂದರೆ ಅವರು ತುಂಬಾ ಫಿಟ್ ಆಗಿರುವುದರಿಂದ, ಅವರು ಮತ್ತೆ ಫಾರ್ಮ್‌ಗೆ ಮರಳಲು ತಮ್ಮ ಹೋರಾಟವನ್ನು ಮುಂದುವರಿಸಬಹುದಿತ್ತು ಎಂದು ನೀವು ಇನ್ನೂ ಹೆಚ್ಚು ಭಾವಿಸುತ್ತೀರಿ. ಅವರನ್ನು ಸರಣಿಯಿಂದ ಹೊರಗಿಟ್ಟಿದ್ದರೂ ಸಹ, ಅವರು ಬಹುಶಃ ಪ್ರಥಮ ದರ್ಜೆ ಕ್ರಿಕೆಟ್‌ಗೆ ಇಳಿಯಬಹುದಿತ್ತು, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲಿ ಆಡಬಹುದಿತ್ತು, ಭಾರತದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಬಹುದಿತ್ತು ಮತ್ತು ಮತ್ತೊಂದು ಪುನರಾಗಮನಕ್ಕೆ ಪ್ರಯತ್ನಿಸಬಹುದಿತ್ತು," ಎಂದು ಕ್ರಿಕೆಟ್ ನಿರೂಪಕ ವಾದ ಮಾಡಿದ್ದಾರೆ.