30 ಎಸೆತಗಳಲ್ಲಿ ಶತಕ ಸಿಡಿಸಿ ರೋಹಿತ್ ಸೇರಿದಂತೆ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ ಅಭಿಷೇಕ್ ಶರ್ಮಾ!
Abhishek Sharma Fastest Hundred: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ, ಕೇವಲ 30 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ರೋಹಿತ್ ಶರ್ಮಾ ಸೇರಿದಂತೆ ಹಲವು ದಾಖಲೆಗಳನ್ನು ಮುರಿದಿದ್ದಾರೆ.
30 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ. -
ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಗುರವಾರ ನಡೆದಿದ್ದ ಮೂರನೇ ಪಂದ್ಯದಲ್ಲಿ (IND vs AFG) 30 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದಾರೆ. ಇದು ಅಭಿಷೇಕ್‌ಗೆ ಮೂರನೇ ಟಿ20ಐ ಶತಕವಾಗಿದೆ. ಈ ಶತಕದ ಮೂಲಕ ಅವರು ಭಾರತದ ಪರ ಅತ್ಯಂತ ವೇಗದ ಟಿ20ಐ ಶತಕವನ್ನು ಬಾರಿಸುವ ಜೊತೆಗೆ ಮಾಜಿ ನಾಯಕ ರೋಹಿತ್ ಶರ್ಮಾರ (Rohit Sharma) ದಾಖಲೆಯನ್ನು ಮುರಿದಿದ್ದಾರೆ. ಇದರ ಜೊತೆಗೆ ಹಲವು ದಾಖಲೆಗಳನ್ನು ಎಡಗೈ ಬ್ಯಾಟ್ಸ್‌ಮನ್ ಬರೆದಿದ್ದಾರೆ.
ಕಳೆದ ಪಂದ್ಯದಲ್ಲಿ ಅರ್ಧಶತಕವನ್ನು ವಂಚಿತರಾಗಿದ್ದ ಅಭಿಷೇಕ್ ಶರ್ಮಾ, ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡದ ಇನಿಂಗ್ಸ್ ಆರಂಭಿಸಿದರು ಹಾಗೂ ಅವರು ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಲು ಅತ್ಯುತ್ತಮ ವೇದಿಕೆ ಲಭಿಸಿತು. ಅದರಂತೆ ಸಿಕ್ಕ ಅವಕಾಶವನ್ನು ಎಡಗೈ ಬ್ಯಾಟರ್ ಸದುಪಯೋಗಪಡಿಸಿಕೊಂಡರು. ಅವರು ಆಡಿದ 30 ಎಸೆತಗಳಲ್ಲಿ ಶತಕ ಹಾಗೂ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ 34 ಎಸೆತಗಳಲ್ಲಿ 108 ರನ್‌ಗಳಿಗೆ ತಮ್ಮ ದಾಖಲೆಯ ಇನಿಂಗ್ಸ್ ಅನ್ನು ಮುಗಿಸಿದರು.
IND vs AFG 3rd T20I: ಟಾಸ್ ಸೋತ ಭಾರತ ಮೊದಲ ಬ್ಯಾಟಿಂಗ್, ಚೇಸಿಂಗ್ ಆರಿಸಿಕೊಂಡ ಆಫ್ಘನ್!
ಅವರು 108 ರನ್‌ಗಳನ್ನು 317.65 ಸ್ಟ್ರೈಕ್ ರೇಟ್‌ನಲ್ಲಿ ಸಿಡಿಸಿದ್ದು ವಿಶೇಷವಾಗಿತ್ತು ಹಾಗೂ ಅವರ ಸ್ಪೋಟಕ ಇನಿಂಗ್ಸ್‌ನಲ್ಲಿ ಬರೋಬ್ಬರಿ 11 ಸಿಕ್ಸರ್ ಹಾಗೂ 9 ಬೌಂಡರಿಗಳನ್ನು ಬಾರಿಸಿದ್ದಾರೆ. ಆ ಮೂಲಕ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಎದುರಾಳಿ ಬೌಲರ್‌ಗಳಿಗೆ ಅಭಿಷೇಕ್ ನಡುಕ ಉಂಟು ಮಾಡಿದ್ದರು. 30 ಎಸೆತಗಳಲಿ ವೇಗದ ಶತಕದ ಮೂಲಕ ಅಭಿಷೇಕ್ ಶರ್ಮಾ ಹಲವು ದಾಖಲೆಗಳನ್ನು ಮುರಿದಿದ್ದಾರೆ.
𝐇𝐔𝐍𝐃𝐑𝐄𝐃 💯💯
— BCCI (@BCCI) September 17, 2026
Abhishek Sharma delights New Delhi 🎆
His 3⃣rd century in T20Is 🫡
Updates ▶️ https://t.co/Zixki4RhPt#TeamIndia | #AFGvIND pic.twitter.com/SfaRm2MAvs
ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ
30 ಎಸೆತಗಳಲ್ಲಿ ಶತಕ ಸಿಡಿಸಿದ ಅಭಿಷೇಕ್ ಶರ್ಮಾ, ಭಾರತದ ಪರ ಅತ್ಯಂತ ವೇಗದ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು. ಆ ಮೂಲಕ ಅವರು ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು. ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ವೈಯಕ್ತಿಕ ಮೂರಂಕಿಯನ್ನು ತಲುಪಲು ಎಡಗೈ ಬ್ಯಾಟರ್, ರೋಹಿತ್‌ಗಿಂದ 5 ಎಸೆತಗಳನ್ನು ಕಡಿಮೆ ತೆಗೆದುಕೊಂಡಿದ್ದಾರೆ.
ಭಾರತದ ಪರ ಅತ್ಯಂತ ವೇಗದ ಟಿ20ಐ ಶತಕ ಸಿಡಿಸಿದ ಬ್ಯಾಟರ್ಸ್
ಅಭಿಷೇಕ್ ಶರ್ಮಾ: 30 ಎಸೆತಗಳು
ರೋಹಿತ್ ಶರ್ಮಾ: 35 ಎಸೆತಗಳು
ಅಭಿಷೇಕ್ ಶರ್ಮಾ: 37 ಎಸೆತಗಳು
1⃣0⃣8⃣ runs
— BCCI (@BCCI) September 17, 2026
3⃣4⃣ balls
3⃣1⃣7⃣.6⃣5⃣ strike rate
9⃣ fours & 1⃣1⃣ sixes
Abhishek Sharma walks back after a fabulous knock 💥💥
Updates ▶️ https://t.co/Zixki4RhPt#TeamIndia | #AFGvIND pic.twitter.com/tMPK8itRXT
ಸಿಕಂದರ್ ರಾಜಾ ದಾಖಲೆ ಮುರಿದ ಅಭಿಷೇಕ್
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪೂರ್ಣ ಸದಸ್ಯತ್ವ ಹೊಂದಿದ ರಾಷ್ಟಗಳ ಪೈಕಿ ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಂತ ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಅಭಿಷೇಕ್ ಶರ್ಮಾ ಬರೆದಿದ್ದಾರೆ. ಆ ಮೂಲಕ 2024ರಲ್ಲಿ 33 ಎಸೆತಗಳಲ್ಲಿ ಶತಕ ಸಿಡಿಸಿದ್ದ ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ಅವರ ದಾಖಲೆಯನ್ನು ಅಭಿಷೇಕ್ ಮುರಿದಿದ್ದಾರೆ.
ಟಿ20ಐ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ಐಸಿಸಿ ಪೂರ್ಣ ಸದಸ್ಯತ್ವದ ತಂಡಗಳ ಬ್ಯಾಟರ್ಸ್
30 ಎಸೆತಗಳು – ಅಭಿಷೇಕ್ ಶರ್ಮಾ (ಭಾರತ) vs ಅಫ್ಘಾನಿಸ್ತಾನ, ದೆಹಲಿ, 2026
33 ಎಸೆತಗಳು – ಸಿಕಂದರ್ ರಝಾ (ಜಿಂಬಾಬ್ವೆ) vs ಗ್ಯಾಂಬಿಯಾ, ನೈರೋಬಿ (ರುವಾರಕಾ), 2024
33 ಎಸೆತಗಳು – ಫಿನ್ ಅಲೆನ್ (ನ್ಯೂಜಿಲೆಂಡ್) vs ದಕ್ಷಿಣ ಆಫ್ರಿಕಾ, ಕೋಲ್ಕತಾ, 2026
35 ಎಸೆತಗಳು – ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) vs ಬಾಂಗ್ಲಾದೇಶ, ಪೊಟ್ಚೆಫ್ಸ್ಟ್ರೂಮ್, 2017
35 ಎಸೆತಗಳು – ರೋಹಿತ್ ಶರ್ಮಾ (ಭಾರತ) vs ಶ್ರೀಲಂಕಾ, ಇಂದೋರ್, 2017