ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ಆದಾಯ ಕೇಳಿ ಖ್ಯಾತ ಉದ್ಯಮಿಗೆ ಅಚ್ಚರಿ

Viral News: ಪ್ರತಿಷ್ಠಿತ ಕಂಪನಿಯಲ್ಲಿ ಶಿಕ್ಷಣವಂತರಿಗೆ ಉದ್ಯೋಗ ಸಿಕ್ಕರೂ ಒತ್ತಡ, ಬಿಡುವಿಲ್ಲದ ಅವಧಿಯಿಂದ ಬೇಸತ್ತು ಕೆಲಸ ತೊರೆದ ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಿಂಗಳಿಗೆ 25 ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ ಯುವಕನೊಬ್ಬ ಆಫೀಸ್ ಕೆಲಸ ಬಿಟ್ಟು ಕ್ಯಾಬ್ ಡ್ರೈವರ್ ಆಗಿ ಯಶಸ್ಸು ಗಳಿಸಿದ್ದಾನೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

25,000 ರುಪಾಯಿ ಜಾಬ್ ತೊರೆದು ಯಶಸ್ವಿ ಕ್ಯಾಬ್ ಚಾಲಕನಾದ ಯುವಕ

ಯಶಸ್ವಿ ಕ್ಯಾಬ್ ಚಾಲಕನಾದ ಯುವಕ -

Profile
Pushpa Kumari Jun 17, 2026 10:40 PM

ದೆಹಲಿ, ಜೂ. 17: ಇತ್ತೀಚೆಗೆ ಯುವ ಜನಾಂಗವು ಹೆಚ್ಚು ವೇತನ ಸಿಗುವ ಉದ್ಯೋಗಕ್ಕಿಂತಲೂ ಜೀವನದಲ್ಲಿ ನೆಮ್ಮದಿ ಕಾಣುವ ಸ್ವಂತ ಉದ್ಯಮಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಪ್ರತಿಷ್ಠಿತ ಕಂಪನಿಯಲ್ಲಿ ಶಿಕ್ಷಣವಂತರಿಗೆ ಉದ್ಯೋಗ ಸಿಕ್ಕರೂ ಒತ್ತಡ, ಬಿಡುವಿಲ್ಲದ ಅವಧಿಯಿಂದ ಬೇಸತ್ತು ರಾಜೀಮೆ ನೀಡಿದ ಅನೇಕರಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಿಂಗಳಿಗೆ 25 ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ ಯುವಕನೊಬ್ಬ ಆಫೀಸ್ ಕೆಲಸ ಬಿಟ್ಟು ಕ್ಯಾಬ್ ಡ್ರೈವರ್ ಆಗಿ ಯಶಸ್ಸು ಗಳಿಸಿದ್ದಾನೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಉದ್ಯಮಿ ಆಕಾಶ್ ಗುಪ್ತಾ ಈ ವಿಡಿಯೊ ಶೇರ್ ಮಾಡಿದ್ದಾರೆ. ಕ್ಯಾಬ್ ಚಾಲಕನನ್ನು ಭೇಟಿಯಾದ ಬಗ್ಗೆ ವಿವರಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇದೀಗ ಯುವಕ ಪೂರ್ಣ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದು ತಿಂಗಳಿಗೆ ಒಂದು ಲಕ್ಷ ರುಪಾಯಿ ಆದಾಯ ಗಳಿಸುತ್ತಿದ್ದಾನೆ ಎಂದಿದ್ದಾರೆ. ವಿಡಿಯೊದಲ್ಲಿ ಚಾಲಕನು ತಾನು ಸಾಮಾನ್ಯ ಕಚೇರಿ ಕೆಲಸದಿಂದ ದೂರ ಸರಿದು ಹೇಗೆ ಇದನ್ನು ನಿರ್ವಹಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ‌.

ವಿಡಿಯೊ ನೋಡಿ:

ಇವಿಒಎಮ್ (EVOM) ಕಂಪನಿಯ ಸಂಸ್ಥಾಪಕ ಹಾಗೂ ಉದ್ಯಮಿ ಆಕಾಶ್ ಗುಪ್ತಾ ಈ ಕ್ಯಾಬ್ ಚಾಲಕನೊಂದಿಗಿನ ತಮ್ಮ ಸಂಭಾಷಣೆಯ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಅನೇಕರು ಈಗ ಸಂಬಳಕ್ಕಿಂತ ಹೊಂದಿಕೊಳ್ಳುವ ಉದ್ಯೋಗಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಯುವಕ ತಿಳಿಸಿದ್ದು, ಹಿಂದೆ ತಾನು ಮಾಡುತ್ತಿದ್ದ ಆಫೀಸ್ ಕೆಲಸದಲ್ಲಿ ಸಂಬಳ ಕಡಿಮೆ ಇತ್ತು. ಇದು ತನ್ನ ವೆಚ್ಚಕ್ಕೂ ಸಾಲುತ್ತಿರಲಿಲ್ಲ ಎಂದಿದ್ದಾನೆ.

ಬೆಂಗಳೂರಿನ ಹೆವೀ ಟ್ರಾಫಿಕ್ ನಡುವೆಯೇ ಹೆಲ್ಮೆಟ್‌ನಿಂದ ಹೊಡೆದಾಡಿದ ಬೈಕ್ ಸವಾರರು

ಚಾಲಕ ತಾನು 25,000 ರುಪಾಯಿ ಮಾಸಿಕ ಸಂಬಳದೊಂದಿಗೆ ಕಚೇರಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದು, ಆದಾಯ ಕಡಿಮೆಯಾಗಿತ್ತು ಮತ್ತು ಅಗತ್ಯಗಳಿಗೆ ಹೊಂದಿಕೆಯಾಗಲಿಲ್ಲ ಎಂದು ಅವರು ವಿವರಿಸಿದ್ದಾನೆ. ಕ್ಯಾಬ್ ಡ್ರೈವಿಂಗ್‌ಗೆ ಹೋದ ನಂತರ, ಅವರ ಮಾಸಿಕ ಗಳಿಕೆ ಸುಮಾರು 1 ಲಕ್ಷ ರುಪಾಯಿಗೆ ಏರಿತು. ಎಲ್ಲಕ್ಕಿಂತ ಹೆಚ್ಚಾಗಿ, ಯಾವಾಗ ಕೆಲಸ ಮಾಡಬೇಕು, ಎಷ್ಟು ಗಂಟೆ ಮಾಡ ಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ ಎಂದು ಯುವಕ ಹೇಳಿಕೊಂಡಿದ್ದಾನೆ.

ಈ ಮಾತುಗಳನ್ನು ಕೇಳಿದ ಉದ್ಯಮಿ, ʼʼನೀವು ಕೇವಲ ಚಾಲಕರಲ್ಲ, ನಿಮ್ಮದೇ ವಾಹನ ಮತ್ತು ಆದಾಯವನ್ನು ನೀವೇ ನಿರ್ವಹಿಸುತ್ತಿರುವುದರಿಂದ ನೀವು ಒಬ್ಬ ಬ್ಯುಸಿನೆಸ್‌ ಮ್ಯಾನ್‌ʼʼ ಎಂದು ಶ್ಲಾಘಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗಿದ್ದು ಇದು ನಿಜಕ್ಕೂ ಪ್ರೇರಣೆ ನೀಡುವಂತಹ ಕಥೆ ಎಂದು ಅನೇಕರು ಚಾಲಕನ ಶ್ರಮವನ್ನು ಕೊಂಡಾಡಿದ್ದಾರೆ.