ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kane Richardson: ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಆರ್‌ಸಿಬಿ ಮಾಜಿ ವೇಗಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ಹಾಗೂ ಆಸ್ಟ್ರೇಲಿಯಾ ತಂಡದ ಬಲಗೈ ಬೌಲರ್ ಕೇನ್ ರಿಚರ್ಡ್ಸನ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ವಿದಾಯ ಹೇಳಿ ಮಾತನಾಡಿರುವ ಅವರು, ನಾನು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ತಂಡಕ್ಕೆ ಪ್ರಾಮಾಣಿಕವಾಗಿ ಆಡಿದ್ದೇನೆ. ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದೇನೆ ಎಂದಿದ್ದಾರೆ.

ಕ್ರಿಕೆಟ್‌ ವೃತ್ತಿ ಬದುಕಿಗೆ ಕೇನ್‌ ರಿಚರ್ಡ್ಸನ್‌ ಗುಡ್‌ಬೈ!

ಕ್ರಿಕೆಟ್‌ ವೃತ್ತಿ ಜೀವನಕ್ಕೆ ಕೇನ್‌ ರಿಚರ್ಡ್ಸನ್‌ ವಿದಾಯ ಹೇಳಿದ್ದಾರೆ. -

Profile
Ramesh Kote Jan 27, 2026 7:50 PM

ನವದೆಹಲಿ: ಆಸ್ಟ್ರೇಲಿಯಾ (Australia) ತಂಡದ ವೇಗಿ ಕೇನ್ ರಿಚರ್ಡ್ಸನ್ (Kane Richardson) ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ರಿಚರ್ಡ್ಸನ್ ಕಾಂಗರೂ ಪಡೆಯ ಪರ 2013 ರಿಂದ 2023 ರವರೆಗೆ ಒಟ್ಟು 25 ಏಕದಿನ ಮತ್ತು 36 ಟಿ20 ಪಂದ್ಯಗಳನ್ನಾಡಿದ್ದು, ಅವರು ಇದುವರೆಗೂ ಏಕದಿನ ಪಂದ್ಯಗಳಲ್ಲಿ 39 ಮತ್ತು ಟಿ20 ಪಂದ್ಯಗಳಲ್ಲಿ 45 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವ ಕೇನ್ ರಿಚರ್ಡ್ಸನ್, ನಾನು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ತಂಡಕ್ಕೆ ಪ್ರಾಮಾಣಿಕವಾಗಿ ಆಡಿದ್ದೇನೆ. ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ನಾನು ಕ್ರಿಕೆಟ್‌ನಿಂದ ದೂರ ಸರಿಯಲು ಇದು ಸರಿಯಾದ ಸಮಯ ಎಂದು ತಿಳಿಸಿದ್ದಾರೆ.

ಕ್ರಿಕೆಟ್ ನಿವೃತ್ತಿ ಘೋಷಿಸಿದ ಬಳಿಕ ಮಾತನಾಡಿದ ಆಸೀಸ್ ವೇಗಿ ಕೇನ್ ರಿಚರ್ಡ್ಸನ್ "2009 ರಲ್ಲಿ ನನ್ನ ಚೊಚ್ಚಲ ಪ್ರವೇಶದಿಂದ ಇಲ್ಲಿಯವರೆಗೆ ನಾನು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನವನ್ನು ಹಾಕಿದ್ದೇನೆ ಎಂದು ನನಗೆ ಅನಿಸುತ್ತದೆ. ನನ್ನ ಜೀವನದ ಅಂತಹ ಆನಂದದಾಯಕ ಭಾಗವನ್ನು ಮುಗಿಸಲು ಇದು ಸರಿಯಾದ ಸಮಯ. ಪ್ರಪಂಚದಾದ್ಯಂತ ಅನೇಕ ತಂಡಗಳೊಂದಿಗೆ ಮತ್ತು ಆಸ್ಟ್ರೇಲಿಯಾದಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವ ಅದೃಷ್ಟ ನನಗೆ ಸಿಕ್ಕಿದೆ. ನಾನು ಎಂದಿಗೂ ಅವಕಾಶವನ್ನು ಲಘುವಾಗಿ ತೆಗೆದುಕೊಂಡಿಲ್ಲ ಮತ್ತು ಡಾರ್ವಿನ್‌ನಲ್ಲಿ ನಾನು ಚಿಕ್ಕವನಿದ್ದಾಗಿನಿಂದ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದೆ ಎಂದು ನೋಡುತ್ತಿರುವ ಜನರಿಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ," ಎಂದು ಅವರು ಹೇಳಿದ್ದಾರೆ.

IND vs NZ: ಟಿ20ಐ ಸರಣಿಯ ಕೊನೆಯ 2 ಪಂದ್ಯಗಳ ನ್ಯೂಜಿಲೆಂಡ್‌ ತಂಡಕ್ಕೆ ಇಬ್ಬರು ಸ್ಟಾರ್‌ ಆಟಗಾರರ ಎಂಟ್ರಿ!

ಆಸೀಸ್ ವೇಗಿ ಕ್ರಿಕೆಟ್ ವೃತ್ತಿ ಬದುಕು

ರಿಚರ್ಡ್ಸನ್ 2011 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 2020 ರಲ್ಲಿ ರೆಡ್ ಬಾಲ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅವರು ಈ ಸ್ವರೂಪದಲ್ಲಿ ಒಟ್ಟು 34 ಪಂದ್ಯಗಳಲ್ಲಿ 102 ವಿಕೆಟ್‌ ಕಬಳಿಸಿದ್ದಾರೆ. 2021ರ ಟಿ20 ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದಲ್ಲಿ ಅವರು ಆಡಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2022ರ ಟಿ20 ವಿಶ್ವಕಪ್‌ನಲ್ಲಿಯೂ ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದರು. ಎರಡೂ ವಿಶ್ವಕಪ್ ಆವೃತ್ತಿಯಲ್ಲಿ ಅವರಿಗೆ ಒಂದು ಪಂದ್ಯದಲ್ಲಿ ಕೂಡ ಕಣಕ್ಕಿಳಿಯಲು ಅವಕಾಶ ಸಿಗಲಿಲ್ಲ. ರಿಚರ್ಡ್ಸನ್ ಆಸ್ಟ್ರೇಲಿಯಾ ಪರ ನಿಯಮಿತ ಅವಕಾಶಗಳನ್ನು ಪಡೆಯದಿದ್ದರೂ, ಅವರು ಐಪಿಎಲ್ ಸೇರಿದಂತೆ ಅನೇಕ ವಿದೇಶಿ ಲೀಗ್‌ ಗಳಲ್ಲಿ ಆಡಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಆಡಿದ್ದ ರಿಚರ್ಡ್ಸನ್

ಕೇನ್ ರಿಚರ್ಡ್ಸನ್ ಆರ್‌ಸಿಬಿ ಪರ 2016 ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದಿದ್ದರು. ಒಟ್ಟು ಅವರು ಬೆಂಗಳೂರಿನ ಪರ ಐದು ಪಂದ್ಯಗಳನ್ನಾಡಿದ್ದು, ಎಂಟು ವಿಕೆಟ್ ಕಬಳಿಸಿದ್ದಾರೆ. ರಿಚರ್ಡ್ಸನ್ 2025-26ರ ಬಿಗ್ ಬ್ಯಾಷ್ ಲೀಗ್ ಋತುವಿನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ ಸಿಡ್ನಿ ಸಿಕ್ಸರ್ಸ್ ಪರ ತಮ್ಮ ಕೊನೆಯ ವೃತ್ತಿಪರ ಪಂದ್ಯವನ್ನು ಆಡಿದ್ದರು. ಫೈನಲ್ ಪಂದ್ಯದಲ್ಲಿ ಸಿಕ್ಸರ್ಸ್, ಪರ್ತ್ ಸ್ಕಾರ್ಚರ್ಸ್ ವಿರುದ್ಧ ಆರು ವಿಕೆಟ್‌ಗಳ ಸೋಲನ್ನು ಅನುಭವಿಸಿತು.