ಗೂಗಲ್ ಮ್ಯಾಪ್ ನಂಬಿ ಕೆಟ್ಟ ಚಾಲಕ: ಬಿರ್ಲಾ ಮಂದಿರದ ಮೆಟ್ಟಿಲಿಗೆ ಇಳಿದ ಕಾರ್
Viral Video: ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಕೆಲವೊಮ್ಮೆ ಎಡವಟ್ಟಿಗೆ ಕಾರಣವಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜಸ್ಥಾನದ ಜೈಪುರದಲ್ಲಿ ಗೂಗಲ್ ಮ್ಯಾಪ್ ನಂಬಿ ಪ್ರವಾಸಿಗನೊಬ್ಬ ತನ್ನ ಕಾರನ್ನು ಬಿರ್ಲಾ ಮಂದಿರದ ಮೆಟ್ಟಿಲುಗಳ ಮೇಲೆ ಚಲಾಯಿಸಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಕಾರು ಚಾಲಕನ ಎಡವಟ್ಟು -
ಜೈಪುರ, ಜ. 27: ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಹಾಗಾಗಿ ಕೈಯಲ್ಲಿರುವ ಮೊಬೈಲ್ ಮೂಲಕವೇ ಬೇಕಾದ ಸಲಹೆಯನ್ನು ತಕ್ಷಣಕ್ಕೆ ಪಡೆಯುತ್ತೇವೆ. ಆದರೆ ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಕೆಲವೊಮ್ಮೆ ಎಡವಟ್ಟಿಗೆ ಕಾರಣಬವಾಗುತ್ತದೆ. ಜತೆಗೆ ಪ್ರಾಣಕ್ಕೂ ಕುತ್ತು ತರಬಹುದು. ಇದಕ್ಕೆ ಸಾಕ್ಷಿ ಎಂಬಂತೆ ರಾಜಸ್ಥಾನದ ಜೈಪುರದಲ್ಲಿ ಗೂಗಲ್ ಮ್ಯಾಪ್ ನಂಬಿ ಪ್ರವಾಸಿಗನೊಬ್ಬ ತನ್ನ ಕಾರನ್ನು ಬಿರ್ಲಾ ಮಂದಿರದ ಮೆಟ್ಟಿಲುಗಳ ಮೇಲೆ ಚಲಾಯಿಸಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ.
ಗೂಗಲ್ ಮ್ಯಾಪ್ ನಂಬಿ ಅದು ಸೂಚಿಸಿದ ದಿಕ್ಕಿನಲ್ಲೇ ಕಾರು ಚಲಾಯಿಸಿದ ಚಾಲಕ ತನಗೆ ತಿಳಿಯದೆ ದೇವಸ್ಥಾನದ ಮೆಟ್ಟಿಲುಗಳ ಮೇಲೆಯೆ ಕಾರು ಹತ್ತಿಸಿದ್ದಾನೆ. ಗಣರಾಜ್ಯೋತ್ಸವ ದಿನವೇ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದ ಸಂದರ್ಭದಲ್ಲಿ, ಕಾರು ದೇವಾಲಯದ ಪ್ರವೇಶ ದ್ವಾರವನ್ನು ದಾಟಿ ಮೆಟ್ಟಿಲುಗಳ ಮೇಲೆ ಚಲಿಸಿ ಅವ್ಯವಸ್ಥೆ ಉಂಟು ಮಾಡಿದೆ.
ವಿಡಿಯೊ ನೋಡಿ:
Google Map देखने का नतीजा 😂😂
— गुरुजी ( कलियुग वाले ) (@kaliyug_wale) January 26, 2026
घटना बिरला मंदिर, जयपुर की 😁 pic.twitter.com/kRyQYf9CEX
ಗಣರಾಜ್ಯೋತ್ಸವದ ಪ್ರಯುಕ್ತ ಜೈಪುರದ ಪ್ರಸಿದ್ಧ ಬಿರ್ಲಾ ಮಂದಿರದಲ್ಲಿ ಭಕ್ತರ ದಂಡೇ ನೆರೆದಿತ್ತು. ಮ್ಯಾಪ್ ತೋರಿಸಿದ ದಿಕ್ಕಿನಲ್ಲೇ ಸಾಗಿದ ಚಾಲಕ, ವಾಹನ ಸಂಚರಿಸುವ ರಸ್ತೆ ಮತ್ತು ಭಕ್ತರು ಹೋಗುವ ಮೆಟ್ಟಿಲುಗಳನ್ನು ಗಮನಿಸಿದೆ ಕಾರನ್ನು ಮೆಟ್ಟಿಲುಗಳ ಮೇಲೆ ಚಲಾಯಿಸಿದ್ದಾನೆ. ಈ ತಪ್ಪನ್ನು ಅರಿತುಕೊಂಡ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಗಂಭೀರ ಅಪಘಾತವೊಂದು ತಪ್ಪಿಹೋಗಿದೆ.
ಹುಚ್ಚಾಟ ಮೆರೆದು ಸಿಂಹಿಣಿಯ ದಾಳಿಗೆ ಪ್ರಾಣ ಕಳೆದುಕೊಂಡ ಯುವಕ
ಸದ್ಯ ಭಕ್ತರು ರೆಕಾರ್ಡ್ ಮಾಡಿದ ವಿಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟು ಕಾರನ್ನು ಮೆಟ್ಟಿಲುಗಳಿಂದ ತೆರವುಗೊಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಚಾಲಕ ಪೊಲೀಸರಿಗೆ ಗೂಗಲ್ ನಕ್ಷೆಗಳು ಒದಗಿಸಿದ ನಿರ್ದೇಶನಗಳನ್ನು ಅನುಸರಿಸುತ್ತಿದ್ದೆ ಎಂದು ಹೇಳಿದ್ದಾನೆ.