ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ಪಾಪ ನಾಶಿನಿ' ಗಂಗಾ ನದಿ ನೀರು ಕುಡಿಯಲು ಯೋಗ್ಯವೇ? ಬ್ರಿಟಿಷ್ ವಿಜ್ಞಾನಿಯ ಪರೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ವಿಚಾರ

Viral Video: ಪಾಪ ನಾಶಿನಿ ಎಂದೇ ಕರೆಯಲ್ಪಡುವ ಗಂಗಾ ನದಿಯ ನೀರಿನ ಪರಿಶುದ್ಧತೆ ಕುರಿತು ಈಗ ಚರ್ಚೆ ನಡೆಯುತ್ತಿದೆ. ಬ್ರಿಟಿಷ್ ಜೀವ ಶಾಸ್ತ್ರಜ್ಞ ಮತ್ತು ದೂರದರ್ಶನ ನಿರೂಪಕ ಜೆರೆಮಿ ವೇಡ್ ನದಿಯ ನೀರಿನ ಮೇಲೆ ನಡೆಸಿದ ವೈಜ್ಞಾನಿಕ ಪರೀಕ್ಷೆಯ ವಿಡಿಯೊ ಶೇರ್ ಮಾಡಿದ್ದಾರೆ. ವಿಡಿಯೊದಲ್ಲಿ ಮಾಲಿನ್ಯವನ್ನು ಸೂಚಿಸಲು ಬಣ್ಣ ಬದಲಾವಣೆಗಳನ್ನು ಬಳಸುವ ಮೂಲಭೂತ ರಾಸಾಯನಿಕ ಆಧಾರಿತ ಪರೀಕ್ಷೆಯನ್ನು ವೇಡ್ ನಡೆಸಿದ್ದಾರೆ.

ಗಂಗಾ ನದಿ ನೀರು ಕುಡಿಯಲು ಯೋಗ್ಯವೇ? ತಜ್ಞರು ಹೇಳೋದೇನು?

ಗಂಗಾ ನದಿ ನೀರಿನ ಬಗ್ಗೆ ಅಘಾತಕಾರಿ ವಿಚಾರ ಬಹಿರಂಗ -

Profile
Pushpa Kumari Jan 27, 2026 9:00 PM

ನವದೆಹಲಿ, ಜ. 27: ಭಾರತದಲ್ಲಿ ಅನೇಕರು ಗಂಗಾ ನದಿಯನ್ನು (Ganga) ಪವಿತ್ರವೆಂದು ಪರಿಗಣಿಸುತ್ತಾರೆ. ಯಾಕೆಂದರೆ ಅನೇಕರು ಅದನ್ನು ದೇವರ ರೂಪದಲ್ಲಿ ಪೂಜಿಸುತ್ತಾರೆ. ಈ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಮಾಡಿದ ಪಾಪಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆಯೂ ಇದೆ.‌ ಆದರೆ ಇತ್ತೀಚೆಗೆ ಈ ನೀರಿನ ಬಗ್ಗೆ ಅಘಾತಕಾರಿ ವಿಚಾರವೊಂದು ಬಹಿರಂಗವಾಗಿದೆ. ಬ್ರಿಟಿಷ್ ಜೀವಶಾಸ್ತ್ರಜ್ಞ ಮತ್ತು ದೂರದರ್ಶನ ನಿರೂಪಕ ಜೆರೆಮಿ ವೇಡ್ ನೀರಿನ ಮೇಲೆ ವೈಜ್ಞಾನಿಕ ಪರೀಕ್ಷೆ ನಡೆಸಿದ್ದಾರೆ.‌

ಪಾಪನಾಶಿನಿ ಎಂದೇ ಕರೆಯಲ್ಪಡುವ ಗಂಗಾ ನದಿಯ ನೀರಿನ ಶುದ್ಧತೆ ಕುರಿತು ಈಗ ಚರ್ಚೆ ನಡೆಯುತ್ತಿದೆ. ಬ್ರಿಟಿಷ್ ಜೀವ ಶಾಸ್ತ್ರಜ್ಞ ಮತ್ತು ದೂರದರ್ಶನ ನಿರೂಪಕ ಜೆರೆಮಿ ವೇಡ್ ನದಿಯ ನೀರಿನ ಮೇಲೆ ನಡೆಸಿದ ವೈಜ್ಞಾನಿಕ ಪರೀಕ್ಷೆಯ ವಿಡಿಯೊವನ್ನು ಶೇರ್ ಮಾಡಿದ್ದಾರೆ. ವಿಡಿಯೊದಲ್ಲಿ ಮಾಲಿನ್ಯವನ್ನು ಸೂಚಿಸಲು ಬಣ್ಣ ಬದಲಾವಣೆಗಳನ್ನು ಬಳಸುವ ಮೂಲಭೂತ ರಾಸಾಯನಿಕ ಆಧಾರಿತ ಪರೀಕ್ಷೆಯನ್ನು ವೇಡ್ ಮಾಡಿದ್ದಾರೆ. ಹೋಲಿಕೆಗಾಗಿ ಖನಿಜಯುಕ್ತ ನೀರನ್ನು ಪರೀಕ್ಷಿಸುವ ಮೂಲಕ ಅವರು ಪ್ರಯೋಗ ಪ್ರಾರಂಭಿಸಿದ್ದಾರೆ. ಗುಲಾಬಿ ಬಣ್ಣ ಬಂದರೆ ನದಿ ಶುದ್ಧವಾಗಿದೆ ಎಂದರ್ಥ. ನೀರು ಗಾಢವಾದ ‌ಕಂದು ಛಾಯೆ ಯನ್ನು ತಿರುಗಿಸಿದರೆ ಅಶುದ್ದ ಎಂದು ವಿವರಿಸಿದ್ದಾರೆ.

ವಿಡಿಯೊ ನೋಡಿ:

ವೇಡ್ ಮೊದಲು ಮಿನರಲ್ ವಾಟರ್ ಪರೀಕ್ಷಿಸಿದಾಗ ಅದು ಗುಲಾಬಿ ಬಣ್ಣಕ್ಕೆ ತಿರುಗಿತು. ಆದರೆ‌ ನೀರನ್ನು ಸರಿಯಾಗಿ ಪರೀಕ್ಷಿಸಿದಾಗ ಅದು ತಕ್ಷಣವೇ ಗಾಢ ಕಂದು ಬಣ್ಣಕ್ಕೆ ಬದಲಾಯಿತು. ಈ ಪರೀಕ್ಷೆಯ ನಂತರ ಮಾತನಾಡಿದ ವೇಡ್, "ಈ ಕಂದು ಬಣ್ಣವು ನೀರಿನಲ್ಲಿ ಫೀಕಲ್ ಕೋಲಿ ಫಾರ್ಮ್ ಬ್ಯಾಕ್ಟೀರಿಯಾ (Faecal Coliform Bacteria) ಇರುವುದನ್ನು ಖಚಿತಪಡಿಸುತ್ತದೆ. ಈ ನದಿಯ ನೀರು ಸಂಪೂರ್ಣವಾಗಿ ಮಾನವ ಮಲಮೂತ್ರ ಮತ್ತು ತ್ಯಾಜ್ಯದಿಂದ ತುಂಬಿದೆʼʼ ಎಂದು ಸ್ಪಷ್ಟನೆ ನೀಡಿದ್ದಾರೆ.

ಮದುವೆಗೆ ಕುಂಕುಮ ತರಲು ಮರೆತ ವರ; ಆಮೇಲಾಗಿದ್ದೇನು?

ಈ ಕಲುಷಿತ ನೀರಿನ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಧಾರ್ಮಿಕ ನಂಬಿಕೆಗಳು ಗಂಗೆಯನ್ನು ಕೊಲ್ಲುತ್ತಿವೆ ಎಂದಿದ್ದಾರೆ. ನಾವು ನದಿಯನ್ನು ದೇವರೆಂದು ಪೂಜಿಸುತ್ತೇವೆ. ಆದರೆ ನಾವೇ ಪ್ಲಾಸ್ಟಿಕ್ ಎಸೆದು ಕಲುಷಿತಗೊಳಿಸುತ್ತಿದ್ದೇವೆ ಎಂದಿದ್ದಾರೆ.