PSL 2026: ಶತಕ ಸಿಡಿಸಿ ವಿರಾಟ್ ಕೊಹ್ಲಿ, ಅಭಿಷೇಕ್ ಶರ್ಮಾರ ದಾಖಲೆ ಸರಿಗಟ್ಟಿದ ಬಾಬರ್ ಆಝಮ್!
Babar Azam scored Century: ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಬಾಬರ್ ಆಝಮ್ ಶತಕ ಬಾರಿಸಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇವರು ಪೇಶಾವರ್ ಝಲ್ಮಿ ತಂಡದ ಪರ ಆಡುತ್ತಿದ್ದಾರೆ.ʼ
ಪಿಎಸ್‌ಎಲ್ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಬಾಬರ್ ಆಝಮ್. -
ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಮ್ (Babar Azam) ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ (PSL 2026) ಶತಕವನ್ನು ಬಾರಿಸಿದ್ದಾರೆ. ಪೇಶಾವರ್ ಝಲ್ಮಿ ತಂಡದ ಪರ ಅವರು, ಇಸ್ಲಾಮಾಬಾದ್ ಯುನೈಟೆಡ್ ಎದುರು ಈ ಶತಕ ಸಿಡಿಸಿದ್ದಾರೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಅವರು 59 ಎಸೆತಗಳಲ್ಲಿ 103 ರನ್‌ಗಳನ್ನು ಬಾರಿಸಿದರು ಹಾಗೂ ಪೇಶಾವರ್ ಝಲ್ಮಿ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 221 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಇಸ್ಲಾಮಾಬಾದ್ ಯುನೈಟೆಡ್ ತಂಡ 151 ರನ್‌ಗಳಿಗೆ ಆಲ್‌ಔಟ್ ಆಯಿತು ಹಾಗೂ ಪೇಶಾವರ್ ಝಲ್ಮಿ ತಂಡ 70 ರನ್‌ಗಳ ಭರ್ಜರಿ ಗೆಲುವು ಪಡೆದು 2026ರ ಪಿಎಸ್‌ಎಲ್ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತು. ಮೇ 3 ರಂದು ಫೈನಲ್ ಪಂದ್ಯ ನಡೆಯಲಿದೆ.
ನಾಯಕನಾಗಿ ಬಾಬರ್ ಆಝಮ್ ಅವರ ಪಾಲಿಗೆ ಇದು 9ನೇ ಶತಕವಾಗಿದೆ. ಆ ಮೂಲಕ ನಾಯಕನಾಗಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ದಾಖಲೆಯನ್ನು ಮುರಿದಿದ್ದಾರೆ. ಇವರು ನಾಯಕನಾಗಿ ಟಿ20 ಕ್ರಿಕೆಟ್‌ನಲ್ಲಿ8 ಶತಕಗಳನ್ನು ಬಾರಿಸಿದ್ದಾರೆ. ಇನ್ನು ಭಾರತ ತಂಡದ ವಿರಾಟ್ ಕೊಹ್ಲಿ ಕೂಡ ನಾಯಕನಾಗಿ ಐದು ಶತಕಗಳನ್ನು ಬಾರಿಸಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ.
PBKS vs RR: ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್‌ಗೆ ಶಾಕ್ ನೀಡಿದ ರಾಜಸ್ಥಾನ್ ರಾಯಲ್ಸ್!
ಏಕೈಕ ದೇಶದಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ ಹಾಗೂ ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ಬಾಬರ್ ಆಝಮ್ ಸರಿಗಟ್ಟಿದ್ದಾರೆ. ಭಾರತದಲ್ಲಿ ವಿರಾಟ್ ಕೊಹ್ಲಿ ಹಾಗೂ ಅಭಿಷೇಕ್ ಶರ್ಮಾ 8 ಟಿ20 ಶತಕಗಳನ್ನು ಬಾರಿಸಿದ್ದಾರೆ. ಇದೀಗ ಬಾಬರ್ ಆಝಮ್ ಕೂಡ ಪಾಕಿಸ್ತಾನದಲ್ಲಿ ಟಿ20 ಕ್ರಿಕೆಟ್‌ನಲ್ಲಿ 8 ಶತಕಗಳನ್ನು ಸಿಡಿಸಿದ್ದಾರೆ.
ಪಿಎಸ್‌ಎಲ್ ಇತಿಹಾಸದಲ್ಲಿ ಇದು ಬಾಬರ್ ಆಝಮ್ ಅವರ ನಾಲ್ಕನೇ ಶತಕವಾಗಿದ್ದು, ಉಸ್ಮಾನ್ ಖಾನ್ ಅವರೊಂದಿಗೆ ಟೂರ್ನಿಯಲ್ಲಿ ಜಂಟಿಯಾಗಿ ಗರಿಷ್ಠ ಶತಕಗಳ ದಾಖಲೆ ಹೊಂದಿದ್ದಾರೆ. ಇದರೊಂದಿಗೆ, ಪಿಎಸ್‌ಎಲ್ 2026ರಲ್ಲಿ ಬಾಬರ್ ಒಟ್ಟು 588 ರನ್‌ಗಳನ್ನು ಗಳಿಸಿ, 2022ರಲ್ಲಿ ಫಖರ್ ಝಮಾನ್ ಸ್ಥಾಪಿಸಿದ್ದ ಒಂದು ಸೀಸನ್‌ನಲ್ಲಿ ಗರಿಷ್ಠ ರನ್‌ಗಳ ದಾಖಲೆಯನ್ನು ಸರಿದೂಗಿಸಿದ್ದಾರೆ.
Babar Azam brings up his fourth PSL hundred with a six 🙌
— ESPNcricinfo (@ESPNcricinfo) April 28, 2026
(via @thePSLt20) #PSL2026 pic.twitter.com/wFTBwdFiEI
ಬಾಬರ್ ಆಝಮ್ ಹೇಳಿಕೆ
“ನಾನು ಮತ್ತೆ ನನ್ನ ಅತ್ಯುತ್ತಮ ಪ್ರದರ್ಶನದತ್ತ ಮರಳುತ್ತಿರುವಂತೆ ಭಾಸವಾಗುತ್ತಿದೆ. ವಿಷಯಗಳನ್ನು ಸರಳವಾಗಿ ಇಟ್ಟುಕೊಂಡು, ನನ್ನ ಕೌಶಲಗಳ ಮೇಲೆ ನಂಬಿಕೆ ಇಟ್ಟು, ಪರಿಸ್ಥಿತಿಗೆ ಅನುಗುಣವಾಗಿ ಆಟ ಆಡಲು ಪ್ರಯತ್ನಿಸುತ್ತಿದ್ದೇನೆ. ಪಿಚ್‌ನ ಬೇಡಿಕೆ ಏನು, ವಿಭಿನ್ನ ಬೌಲರ್‌ಗಳನ್ನು ಹೇಗೆ ಎದುರಿಸಬೇಕು ಮತ್ತು ಯಾವಾಗ ಆಕ್ರಮಣ ಮಾಡಬೇಕು ಎಂಬುದನ್ನು ಗಮನಿಸುತ್ತಿದ್ದೇನೆ. ಪಿಎಸ್‌ಎಲ್‌ಗೂ ಮೊದಲು ನಾನು ಮಾಡಿದ ಕಠಿಣ ಪರಿಶ್ರಮ ಈಗ ಫಲ ನೀಡುತ್ತಿದೆ. ಮೊದಲು ಎಲ್ಲವೂ ಸರಿಯಾಗಿರಲಿಲ್ಲ, ಆದರೆ ಈಗ ನಿಧಾನವಾಗಿ ಎಲ್ಲವೂ ಸರಿಯಾಗುತ್ತಿದೆ, ಮತ್ತು ಈ ಸ್ಥಿರತೆಯನ್ನು ಮುಂದುವರಿಸಲು ನಾನು ಬಯಸುತ್ತೇನೆ,” ಎಂದು ಬಾಬರ್ ಆಝಮ್ ಪಂದ್ಯದ ಬಳಿಕ ಹೇಳಿದ್ದಾರೆ.
GT vs RCB: ಆರ್‌ಸಿಬಿ ಚಾಲೆಂಜ್ ಗೆಲ್ಲುತ್ತಾ ಗುಜರಾತ್ ಟೈಟಾನ್ಸ್?
“ಮೊದಲ ಆರು ಓವರ್‌ಗಳಲ್ಲಿ ಉತ್ತಮ ಆರಂಭ ಸಿಕ್ಕರೆ, ನಿಮ್ಮ ಸಹಜ ಆಟವನ್ನು ಆಡಲು ಹಾಗೂ ರನ್‌ರೇಟ್ ಅನ್ನು ಕಾಪಾಡಿಕೊಳ್ಳಲು ಅದು ನಿಮಗೆ ಒಂದು ಭದ್ರತೆ ನೀಡುತ್ತದೆ. ಹ್ಯಾರಿಸ್ ರೌಫ್ ಆಡುತ್ತಿರುವ ರೀತಿ ಮತ್ತು ಎದುರಾಳಿ ಆಟಗಾರರ ಮೇಲೆ ಒತ್ತಡ ಹೇರುವ ವಿಧಾನ ಬಹಳ ಸಹಾಯಕವಾಗುತ್ತದೆ. ನಂತರ ನಾನು ನನ್ನ ಪಾತ್ರವನ್ನು ನಿರ್ವಹಿಸಿ, ಆ ಲಯವನ್ನು ಮುಂದುವರಿಸಲು ಪ್ರಯತ್ನಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.