ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌GT vs RCB: ಆರ್‌ಸಿಬಿ ಚಾಲೆಂಜ್‌ ಗೆಲ್ಲುತ್ತಾ ಗುಜರಾತ್‌ ಟೈಟಾನ್ಸ್?

IPL 2026: ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಜೋಡಿಯ ಪವರ್‌ಪ್ಲೇ ಬೌಲಿಂಗ್‌ನ ಅದ್ಭುತ ಪ್ರದರ್ಶನದಿಂದ 75 ರನ್‌ಗಳಿಗೆ ಡೆಲ್ಲಿಯನ್ನು ಆಲೌಟ್ ಮಾಡಿತ್ತು. ಆರ್‌ಸಿಬಿ ಗುರುವಾರ ಪಂದ್ಯದಲ್ಲಿ ಗೆದ್ದರೆ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿಯುವ ಅವಕಾಶವನ್ನು ಹೊಂದಿದೆ.‌

ಆರ್‌ಸಿಬಿ ಚಾಲೆಂಜ್‌ ಗೆಲ್ಲುತ್ತಾ ಗುಜರಾತ್‌ ಟೈಟಾನ್ಸ್?

kohli and siraj -

Abhilash BC
Abhilash BC Apr 29, 2026 1:48 PM

ಅಹಮದಾಬಾದ್‌, ಎ.29: ಗುರುವಾರ ನಡೆಯುವ ಇಂಡಿಯನ್ ಪ್ರೀಮಿಯರ್(IPL 2026) ಲೀಗ್‌ನ 42ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ಮುಖಾಮುಖಿಯಾಗಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಪಂದ್ಯಕ್ಕೆ ಅಣಿಯಾಗಿದೆ. ಶುಭಮನ್‌ ಗಿಲ್‌ ಪಡೆಗೆ ಇದು ಸೇಡಿನ ಪಂದ್ಯ. ಮೊದಲ ಮುಖಾಮುಖಿಯಲ್ಲಿ 5 ವಿಕೆಟ್‌ ಅಂತರದ ಸೋಲು ಕಂಡಿತ್ತು.

ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎಂಟು ವಿಕೆಟ್‌ಗಳ ಪ್ರಬಲ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿರುವ ಗುಜರಾತ್ ಟೈಟಾನ್ಸ್ ತಂಡವು ಮತ್ತೊಂದು ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂಬತ್ತು ವಿಕೆಟ್‌ಗಳ ಪ್ರಬಲ ಜಯ ಸಾಧಿಸಿದ ಜೋಶ್‌ನಲ್ಲಿದೆ.

ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಜೋಡಿಯ ಪವರ್‌ಪ್ಲೇ ಬೌಲಿಂಗ್‌ನ ಅದ್ಭುತ ಪ್ರದರ್ಶನದಿಂದ 75 ರನ್‌ಗಳಿಗೆ ಡೆಲ್ಲಿಯನ್ನು ಆಲೌಟ್ ಮಾಡಿತ್ತು. ಆರ್‌ಸಿಬಿ ಗುರುವಾರ ಪಂದ್ಯದಲ್ಲಿ ಗೆದ್ದರೆ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿಯುವ ಅವಕಾಶವನ್ನು ಹೊಂದಿದೆ.‌

GT vs RCB: ಆರ್‌ಸಿಬಿ-ಗುಜರಾತ್‌ ಪಂದ್ಯದ ಪ್ಲೇಯಿಂಗ್‌ ಇಲೆವೆನ್‌ ಹೇಗಿದೆ?

ಆರ್‌ಸಿಬಿ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಬ್ಯಾಟಿಂಗ್‌ನಲ್ಲಿ ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್‌, ನಾಯಕ ರಜತ್‌ ಪಾಟೀದಾರ್‌, ಟಿಮ್‌ ಡೇವಿಡ್‌ ಅಬ್ಬರಿಸುತ್ತಿದ್ದಾರೆ. ಫಿಲ್‌ ಸಾಲ್ಟ್‌ ಗಾಯಗೊಂಡಿರುವ ಕಾರಣ ಜೇಕಬ್‌ ಬೆಥೆಲ್‌ಗೆ ಮತ್ತೊಂದು ಅವಕಾಶ ಸಿಗುವುದು ಬಹುತೇಕ ಖಚಿತ. ಬೌಲಿಂಗ್‌ನಲ್ಲಿ ಭುವನೇಶ್ವರ್‌, ಹ್ಯಾಜಲ್‌ವುಡ್‌, ಕೃನಾಲ್‌ ಪಾಂಡ್ಯ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಮುಖಾಮುಖಿ-7

ಆರ್‌ಸಿಬಿ ಗೆಲುವು-4

ಗುಜರಾತ್‌ ಗೆಲುವು-3

ಪಂದ್ಯ ಆರಂಭ: ಸಂಜೆ 7.30ಕ್ಕೆ.

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜೀಯೊ ಹಾಟ್‌ಸ್ಟಾರ್.