ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇದು ಅತಿಥಿ ಸತ್ಕಾರ ಅಲ್ಲ ದೌರ್ಜನ್ಯ: ವಿದೇಶಿ ಮಹಿಳೆಗೆ ಕಿರುಕುಳ ನೀಡಿದ ದುಷ್ಕರ್ಮಿಗಳ ವಿರು‍ದ್ಧ ಆಕ್ರೋಶ

Viral Video: ವಿದೇಶಿ ಮಹಿಳೆಗೆ ಪುರುಷರ ಗುಂಪೊಂದು ಕಿರುಕುಳ ನೀಡಿರುವ ಘಟನೆ ನಡೆದಿದೆ. ಇದು ಪ್ರವಾಸಿಗರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತೆ ಮಅಡಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಪುರುಷರ ಗುಂಪೊಂದು ವಿದೇಶಿ ಮಹಿಳೆಯ ಸುತ್ತ ಸುತ್ತುವರಿದಿರುವುದು ಕಾಣಬಹುದು.

ಜೈಪುರದಲ್ಲಿ ವಿದೇಶಿ ಮಹಿಳೆಗೆ ಕಿರುಕುಳ ನೀಡಿದ ಕಿಡಿಗೇಡಿಗಳು

ವಿದೇಶಿ ಮಹಿಳೆಗೆ ಕಿರುಕುಳ -

Profile
Pushpa Kumari Mar 26, 2026 7:29 PM

ಜೈಪುರ, ಮಾ. 26: ಇತ್ತೀಚೆಗೆ ಪ್ರವಾಸಿ ಸ್ಥಳದಲ್ಲಿ ಕಿರುಕುಳದಂತಹ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ವಿದೇಶಿ ಮಹಿಳೆಗೆ ಪುರುಷರ ಗುಂಪೊಂದು ಕಿರುಕುಳ ನೀಡಿರುವ ಘಟನೆ ನಡೆದಿದೆ. ಇದು ಪ್ರವಾಸಿಗರ ಸುರಕ್ಷತೆ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ. ವೈರಲ್ (Viral News) ಆಗಿರುವ ವಿಡಿಯೊದಲ್ಲಿ ಪುರುಷರ ಗುಂಪೊಂದು ವಿದೇಶಿ ಮಹಿಳೆಯ ಸುತ್ತ ಸುತ್ತುವರಿದಿರುವುದು ಕಾಣಬಹುದು.

ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು ವಿದೇಶಿಗರಿಗೆ ಹೆಚ್ಚು ಗೌರವ ನೀಡುವ, ಅತಿಥಿ ದೇವೋ ಭವ ಎಂದು ನಂಬುವ ಭಾರತೀಯ ಸಂಸ್ಕೃತಿಗೆ ಇದರಿಂದ ಅಪಚಾರವಾಗಿದೆ. ರಾಜಸ್ಥಾನದ ಜಲ್ ಮಹಲ್ ಬಳಿ ವಿದೇಶಿ ಮಹಿಳೆಗೆ ಕಿರುಕುಳ ನೀಡಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ವಿದೇಶಿ ಪ್ರವಾಸಿ ಜತೆ ಸೆಲ್ಫಿ ತೆಗೆದುಕೊಳ್ಳಲು ಆಕೆಯ ಹತ್ತಿರ ಬರುವುದು, ಅನುಮತಿ ಇಲ್ಲದೆ ಆಕೆಯ ಹೆಗಲ ಮೇಲೆ ಕೈ ಹಾಕುವುದು ಕಂಡು ಬಂದಿದೆ. ಸೆಲ್ಫಿ ಕ್ಲಿಕ್ಕಿಸುವ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸುತ್ತಿರುವುದನ್ನು ಕಾಣಬಹುದು.

ವಿಡಿಯೊ ನೋಡಿ:



ಈ ಸಂದರ್ಭದಲ್ಲಿ ಮಹಿಳೆ ಮುಜುಗರದಿಂದ ಅನುಭವಿಸಿದರೂ ಅದು ತೋರಗೊಡದೆ ನಗುತ್ತ ಪೋಸ್‌ ಕೊಟ್ಟಿದ್ದಾರೆ. ಅದಾಗ್ಯೂ ಆಕೆಯ ಮುಖದಲ್ಲಿ ಭಯ ಸ್ಪಷ್ಟವಾಗಿ ಕಂಡು ಬಂದಿದೆ. ದಿವ್ಯಾ ಗಂಡೋತ್ರ ಟಂಡನ್ ಈ ವಿಡಿಯೊ ಹಂಚಿಕೊಂಡಿದ್ದು, ʼʼವಿದೇಶಿ ಪ್ರವಾಸಿಗೆ ಕಿರುಕುಳ ನೀಡಲಾಗಿದೆ. ಇದು ಆತಿಥ್ಯ ಅಲ್ಲ...ಇದು ಬೆದರಿಕೆ...ಜನರು ಕುತೂಹಲ ಮತ್ತು ಗೌರವದಿಂದ ಭಾರತಕ್ಕೆ ಬರುತ್ತಾರೆ ಮತ್ತು ಭಯ ಮತ್ತು ಆಘಾತದಿಂದ ಹೋಗುತ್ತಾರೆ‌ ಎಂದು ಬರೆದಿದ್ದಾರೆ

ಹಿಂದೂ ದೇವಾಲಯದಲ್ಲಿ ಮುಸ್ಲಿಂ ಯುವಕನ ರೀಲ್ಸ್; ಕಲ್ಯಾಣಿಗೆ ನೀರು ಉಗಿದ ಯೂಟ್ಯೂಬರ್‌!

ಈ ವೂರಲ್‌ ವಿಡಿಯೊ ವೀಕ್ಷಿಸಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು ಇಂತಹ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಸರಿಯಾದ ಶಿಕ್ಷೆ ನೀಡಬೇಕೆಂದು ಆಕ್ರೋಶ ಹೊರಹಾಕಿದ್ದಾರೆ. ಮತ್ತೊಬ್ಬರು ಇಂತಹ ಜನರಿಂದಲೇ ಭಾರತ ಮರ್ಯಾದೆ ಕಳೆದುಕೊಳ್ಳುವಂತೆ ಆಗುತ್ತದೆ ಎಂದಿದ್ದಾರೆ.