IND vs ENG: ಶತಕ ಬಾರಿಸಿ ಜೋ ರೂಟ್‌ರ ದಾಖಲೆ ಮುರಿದ ಬೆನ್ ಡಕೆಟ್!
ಭಾರತ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಬೆನ್ ಡಕೆಟ್ ಅದ್ಭುತ ಶತಕ ಬಾರಿಸಿದರು. ಅವರು 121 ಎಸೆತಗಳಲ್ಲಿ ಶತಕ ಪೂರೈಸಿದರು. 2010 ರಿಂದ ನಾಲ್ಕನೇ ಇನಿಂಗ್ಸ್‌ನಲ್ಲಿ ಆಲ್‌ಸ್ಟೈರ್ ಕುಕ್ ನಂತರ ಶತಕ ಬಾರಿಸಿದ ಎರಡನೇ ಇಂಗ್ಲಿಷ್ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶತಕ ಸಿಡಿಸಿ ಜೋ ರೂಟ್ ದಾಖಲೆ ಮುರಿದ ಬೆನ್ ಡಕೆಟ್.

ಲೀಡ್ಸ್: ಭಾರತ ವಿರುದ್ಧದ ಹೆಡಿಂಗ್ಲೆ ಟೆಸ್ಟ್ ಪಂದ್ಯದ (IND vs ENG) ನಾಲ್ಕನೇ ಇನಿಂಗ್ಸ್‌ನಲ್ಲಿ ಶತಕ ಗಳಿಸುವ ಮೂಲಕ ಇಂಗ್ಲೆಂಡ್ (England) ಓಪನರ್ ಬೆನ್ ಡಕೆಟ್ (Ben Duckett) ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಐದನೇ ಹಾಗೂ ಅಂತಿಮ ದಿನವಾದ ಮಂಗಳವಾರ ಬೆನ್ ಡಕೆಟ್ 121 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದಕ್ಕೂ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಮುನ್ನ ಯಶಸ್ವಿ ಜೈಸ್ವಾಲ್ ಕ್ಯಾಚ್ ಕೈ ಚೆಲ್ಲಿಸಿದ್ದಾಗ ಅವರು 97 ರನ್ ಗಳಿಸಿದ್ದರು. ಈ ವೇಳೆ ಸಿಕ್ಕ ಜೀವದಾನದ ಲಾಭವನ್ನು ಸದುಪಯೋಗಪಡಿಸಿಕೊಂಡರು. ಇದರ ಲಾಭ ಪಡೆದು ಶತಕ ಗಳಿಸಿದ ಬೆನ್ ಡಕೆಟ್ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. 2010 ರಿಂದ ನಾಲ್ಕನೇ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ ಎರಡನೇ ಇಂಗ್ಲೆಂಡ್ ಓಪನರ್ ಎಂಬ ಹೆಗ್ಗಳಿಕೆಗೆ ಬೆನ್ ಡಕೆಟ್ ಭಾಜನರಾಗಿದ್ದಾರೆ.
ಬೆನ್ ಡಕೆಟ್‌ಗಿಂತ ಮುನ್ನ ಈ ದಾಖಲೆ ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಓಪನರ್ ಆಲ್‌ಸ್ಟೈರ್ ಕುಕ್ ಹೆಸರಿನಲ್ಲಿತ್ತು. ಇದೀಗ ಬೆನ್ ಡಕೆಟ್ ಈ ಸಾಧನೆ ಮಾಡಿದ ಎರಡನೇ ಇಂಗ್ಲಿಷ್ ಓಪನರ್ ಆಗಿದ್ದಾರೆ. ಭಾರತ ವಿರುದ್ಧದ ಹೆಡಿಂಗ್ಲೆ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಡಕೆಟ್ 62 ರನ್ ಗಳಿಸಿದ್ದರು. ಇದೀಗ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದಾರೆ. ದ್ವಿತೀಯ ಇನಿಂಗ್ಸ್‌ನಲ್ಲಿ ಬೆನ್ ಡಕೆಟ್ ಅವರ ಮೊದಲ ಟೆಸ್ಟ್ ಶತಕ ಇದಾಗಿದೆ.
IND vs ENG: 72 ವರ್ಷಗಳ ಹಳೆಯ ದಾಖಲೆ ಮುರಿದ ಝ್ಯಾಕ್ ಕ್ರಾವ್ಲಿ-ಬೆನ್ ಡಕೆಟ್ ಜೋಡಿ!
ಜೋ ರೂಟ್ ದಾಖಲೆ ಮುರಿದ ಬೆನ್ ಡಕೆಟ್
ಬೆನ್ ಡಕೆಟ್‌ಗಿಂತ ಮೊದಲು ಆಲ್‌ಸ್ಟೈರ್ ಕುಕ್ ಬಾಂಗ್ಲಾದೇಶ ವಿರುದ್ಧ ಮೀರ್‌ಪುರದಲ್ಲಿ ಇಂಗ್ಲೆಂಡ್ ಪರ ಎರಡನೇ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದರು. ಮಿರ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ಕುಕ್ ಅಜೇಯ 109 ರನ್ ಗಳಿಸಿದ್ದರು. ಇದೀಗ ಈ ದಾಖಲೆಯನ್ನು ಬೆನ್ ಡಕೆಟ್ ಸರಿಗಟ್ಟಿದ್ದಾರೆ. ಒಟ್ಟು 171 ಎಸೆತಗಳನ್ನು ಎದುರಿಸಿದ ಬೆನ್ ಡಕೆಟ್ ಒಂದು ಸಿಕ್ಸರ್ ಹಾಗೂ 21 ಬೌಂಡರಿಗಳೊಂದಿಗೆ 149 ರನ್‌ಗಳಿಗೆ ಶಾರ್ದುಲ್ ಠಾಕೂರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 2022ರಲ್ಲಿ ಎಜ್‌ಬಾಸ್ಟನ್‌ನಲ್ಲಿ ಅವರು ಈ ಮೊತ್ತವನ್ನು ಕಲೆ ಹಾಕಿದ್ದರು. ಇದೀಗ ಬೆನ್ ಡಕೆಟ್ 149 ರನ್‌ಗಳನ್ನು ಗಳಿಸಿ ಜೋ ರೂಟ್ ಅವರ ದಾಖಲೆಯನ್ನು ಮುರಿದಿದ್ದಾರೆ.
A MASSIVE hundred in the context of this run chase 🤩
— England Cricket (@englandcricket) June 24, 2025
Ben Duckett is on another level 📈 pic.twitter.com/aRhOlTe2Oj
ಭಾರತದ ವಿರುದ್ಧ ಟೆಸ್ಟ್‌ನ ನಾಲ್ಕನೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
ಬೆನ್ ಡಕೆಟ್ (ಇಂಗ್ಲೆಂಡ್): 149 ರನ್ (ಹೆಡಿಂಗ್ಲೆ, 2025)
ಜೋ ರೂಟ್ (ಇಂಗ್ಲೆಂಡ್): 142* ರನ್ (ಎಜ್‌ಬಾಸ್ಟನ್, 2022)
ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ): 134 ರನ್ (ಜೋಹನ್ಸ್‌ಬರ್ಗ್, 2013)
ದುನೀಪ್ ಮೆಂಡಿಸ್ (ಶ್ರೀಲಂಕಾ): 124 ರನ್ (ಕ್ಯಾಂಡಿ, 1985)
ಡ್ಯಾರಿಲ್ ಕಲಿನನ್ (ದಕ್ಷಿಣ ಆಫ್ರಿಕಾ): 122* ರನ್ (ಜೋಹನ್ಸ್‌ಬರ್ಗ್ 1997)
IND vs ENG: ಬೆನ್ ಡಕೆಟ್ ಜತೆ ಮಾತಿನ ಚಕಮಕಿ ನಡೆಸಿದ ಮೊಹಮ್ಮದ್ ಸಿರಾಜ್!
ಇತಿಹಾಸ ಸೃಷ್ಟಿಸಿದ ಕ್ರಾವ್ಲಿ-ಡಕೆಟ್
ಭಾರತದ ವಿರುದ್ದ ಟೆಸ್ಟ್ ಪಂದ್ಯವೊಂದರ ನಾಲ್ಕನೇ ಇನಿಂಗ್ಸ್‌ನಲ್ಲಿ ಆರಂಭಿಕ ವಿಕೆಟ್‌ಗೆ 150 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳನ್ನು ಕಲೆ ಹಾಕಿದ ವಿಶ್ವದ ಮೊದಲ ಜೋಡಿ ಎಂಬ ದಾಖಲೆಯನ್ನು ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾವ್ಲಿ ಜೋಡಿ ಭಾಜನವಾಗಿದೆ. ಆ ಮೂಲಕ ವೆಸ್ಟ್ ಇಂಡೀಸ್‌ನ ಅಲನ್ ರೇ ಮತ್ತು ಜೆಫ್ರಿ ಸ್ಟಾಲಿಮೋರ್ ಅವರ 72 ವರ್ಷಗಳ ಹಳೆಯ ದಾಖಲೆಯನ್ನು ಇಂಗ್ಲೆಂಡ್ ಜೋಡಿ ಮುರಿದಿದೆ. 1953ರಲ್ಲಿ ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭಾರತದ ವಿರುದ್ದ ಈ ಜೋಡಿ ನಾಲ್ಕನೇ ಇನಿಂಗ್ಸ್‌ನಲ್ಲಿ 142 ರನ್‌ಗಳನ್ನು ಕಲೆ ಹಾಕಿತ್ತು.