ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026 Auction: ಐಪಿಎಲ್‌ ಮಿನಿ ಹರಾಜಿನ ಟಾಪ್‌ 5 ದುಬಾರಿ ಆಟಗಾರರು!

IPL 2026 Mini Auction: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜು ಮುಕ್ತಾಯಗೊಂಡಿದೆ. ಈ ಬಾರಿ, ತಂಡಗಳ ನಡುವಿನ ಬಿಡ್ಡಿಂಗ್ ಪೈಪೋಟಿಯಲ್ಲಿ ಹಲವು ಅಚ್ಚರಿಯ ಬಿಡ್‌ಗಳು ಹೊರಹೊಮ್ಮಿವೆ, ಇದರಲ್ಲಿ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರ ಬಿಡ್‌ಗಳು ಸೇರಿವೆ. ಈ ಇಬ್ಬರೂ ಆಟಗಾರರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿಸಿರುವುದು ವಿಶೇಷ.

2026ರ ಐಪಿಎಲ್‌ ಮಿನಿ ಹರಾಜಿನ ಟಾಪ್‌ 5 ದುಬಾರಿ ಆಟಗಾರರು!

2026ರ ಐಪಿಎಲ್‌ ಮಿನಿ ಹರಾಜಿನ ಟಾಪ್‌ 5 ದುಬಾರಿ ಆಟಗಾರರು. -

Profile
Ramesh Kote Dec 17, 2025 12:55 AM

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 19ನೇ ಆವೃತ್ತಿಯ ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆದಿತ್ತು. ಆಸ್ಟ್ರೇಲಿಯಾ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ (Cameron Green) ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಇದರ ಜೊತೆಗೆ ಹಲವು ಅಚ್ಚರಿ ಬಿಡ್‌ಗಳು ಕೂಡ ಮೂಡಿ ಬಂದಿವೆ. 19 ಮತ್ತು 20 ವರ್ಷ ವಯಸ್ಸಿನ ಇಬ್ಬರು ಯುವ ಆಟಗಾರರಾದ ಪ್ರಶಾಂತ್ ವೀರ್‌ Prasant Veer) ಮತ್ತು ಕಾರ್ತಿಕ್ ಶರ್ಮಾ (Karthik Sharma) ಅವರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಇಬ್ಬರೂ ಈ ಸಣ್ಣ ವಯಸ್ಸಿನಲ್ಲಿ ಕೋಟಿ-ಕೋಟಿ ರು. ಗಳನ್ನು ಜೇಬಿಗಿಸಿಕೊಂಡಿದ್ದಾರೆ.

ಮಿನಿ ಹರಾಜಿನಲ್ಲಿ ಭಾಗವಹಿಸಿದ್ದ 359 ಆಟಗಾರರ ಪೈಕಿ 215ಕ್ಕೂ ಹೆಚ್ಚಿನ ಕೋಟಿ ರು. ಗಳನ್ನು ಫ್ರಾಂಚೈಸಿಗಳು ಖರ್ಚು ಮಾಡಿ 76 ಆಟಗಾರರನ್ನು ಖರೀದಿಸಿವೆ. ಇದರಲ್ಲಿ ಅತ್ಯಂತ ದುಬಾರಿ ಹಣ ಪಡೆದ ಅಗ್ರ ಐವರು ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

IPL Auction 2026: ಎಲ್ಲಾ 10 ತಂಡಗಳ ಸೋಲ್ಡ್‌, ಅನ್‌ಸೋಲ್ಡ್‌ ಆಟಗಾರರ ಸಂಪೂರ್ಣ ಪಟ್ಟಿ!

2026ರ ಐಪಿಎಲ್‌ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಪಡೆದ ಐದು ಕ್ರಿಕೆಟಿಗರು

1.ಕ್ಯಾಮೆರಾನ್ ಗ್ರೀನ್

ಈ ಋತುವಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರಾನ್‌ ಗ್ರೀನ್ ಅತ್ಯಂತ ದುಬಾರಿ ಆಟಗಾರರಾಗುತ್ತಾರೆಂದು ನಿರೀಕ್ಷೆ ಮಾಡಲಾಗಿತ್ತು ಮತ್ತು ಇದು ನಿಜವಾಗಿದೆ. ತಂಡಗಳು ಗ್ರೀನ್‌ಗಾಗಿ ಬಿಡ್ ಮಾಡಲು ತೀವ್ರವಾಗಿ ಸ್ಪರ್ಧಿಸಿದವು. ಹೆಚ್ಚಿನ ಬಿಡ್ ಮಾಡಲು ಇಷ್ಟವಿಲ್ಲದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಸಹ ಅವರನ್ನು ಪಡೆಯಲು ತಮ್ಮ ಸಂಪೂರ್ಣ ಹಣವನ್ನು ಖರ್ಚು ಮಾಡಲು ಸಿದ್ಧರಿದ್ದಂತೆ ಕಂಡುಬಂದಿತು. ಅಂತಿಮವಾಗಿ, ಕೋಲ್ಕತ್ತಾ ನೈಟ್ ರೈಡರ್ಸ್ ಕ್ಯಾಮೆರಾನ್‌ ಗ್ರೀನ್ ಅವರನ್ನು 25.20 ಕೋಟಿ ರು. ಗಳಿಗೆ ಖರೀದಿಸುವಲ್ಲಿ ಯಶಸ್ವಿಯಾಯಿತು. ಗ್ರೀನ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ, ಆ ಮೂಲಕ ಮಿಚೆಲ್ ಸ್ಟಾರ್ಕ್ (24.75 ಕೋಟಿ) ಅವರನ್ನು ಹಿಂದಿಕ್ಕಿದ್ದಾರೆ.

2.ಮತೀಶ ಪತಿರಣ

ಶ್ರೀಲಂಕಾದ ವೇಗದ ಬೌಲರ್ ಮತೀಶ ಪತಿರಣ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಬಿಡುಗಡೆ ಮಾಡಲಾಯಿತು. ಈ ಆಟಗಾರನಿಗಾಗಿ ಬಿಡ್ಡಿಂಗ್ ಪೈಪೋಟಿ ನಡೆದಾಗ ಅವರ ಮೌಲ್ಯ ಏನೆಂದು ಸಿಎಸ್‌ಕೆಗೆ ಮನವರಿಕೆಯಾಯಿತು. ತಂಡಗಳ ನಡುವಣ ಬಿಡ್‌ ವಾರ್‌ ಬಳಿಕ ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ 18 ಕೋಟಿ ರು. ಗಳಿಗೆ ಖರೀದಿಸಿತು. ಆ ಮೂಲಕ ಪತಿರಣ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಶ್ರೀಲಂಕಾದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.



3.ಕಾರ್ತಿಕ್‌ ಶರ್ಮಾ

19ನೇ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಾ ಉತ್ತರ ಪ್ರದೇಶದ ಆಗ್ರಾದವರು. ಅವರಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಅಮೇಥಿಯಲ್ಲಿ 20 ವರ್ಷದ ಡ್ಯಾಶಿಂಗ್ ಬೌಲರ್ ಪ್ರಶಾಂತ್ ವೀರ್ ವಾಸಿಸುತ್ತಿದ್ದಾರೆ. ದೇಶದ ಇನ್ನೊಂದು ಬದಿಯಲ್ಲಿರುವ ಚೆನ್ನೈ ಫ್ರಾಂಚೈಸಿ ಉತ್ತರ ಪ್ರದೇಶದ ಈ ಇಬ್ಬರು ಯುವಕರಿಗೆ ಹಣ ಹೂಡಿತು. ಚೆನ್ನೈ ಸೂಪರ್ ಕಿಂಗ್ಸ್ ಈ ಇಬ್ಬರು ಯುವ ಆಟಗಾರರಿಗೆ ಬಿಡ್ ಮಾಡಿತು. ಚೆನ್ನೈ ತಂಡವು ತಲಾ 14.20 ಕೋಟಿ ರೂ. ಪಾವತಿಸಿ ಇಬ್ಬರನ್ನೂ ಸೇರಿಸಿಕೊಂಡಿದೆ. ಇದರೊಂದಿಗೆ, ಈ ಇಬ್ಬರೂ ಯುವಕರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

4.ಲಿಯಾಮ್‌ ಲಿವಿಂಗ್‌ಸ್ಟೋನ್‌

ಕಳೆದ ಋತುವಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಕಳಪೆ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್‌ ಅವರನ್ನು ಖರೀದಿಸಲು ಫ್ರಾಂಚೈಸಿಗಳಿಗೆ ಇಷ್ಟವಿರಲಿಲ್ಲ. ಅದರಂತೆ ಮೊದಲ ಸುತ್ತಿನಲ್ಲಿ ಇವರು ಅನ್‌ಸೋಲ್ಡ್‌ ಆಗಿದ್ದರು. ಆದರೆ ಎರಡನೇ ಸುತ್ತಿನ ಹರಾಜಿನಲ್ಲಿ ಲಿವಿಂಗ್‌ಸ್ಟೋನ್ ಹೆಸರು ಮತ್ತೆ ಬಂದಾಗ, ಸನ್‌ರೈಸರ್ಸ್‌ ಹೈದರಾಬಾದ್‌ ಓನರ್‌ ಕಾವ್ಯ ಮಾರನ್ ತನ್ನ ಸಂಪೂರ್ಣ ಹಣವನ್ನು ಅವರಿಗೆ ನೀಡಿದರು. ತೀವ್ರ ಬಿಡ್ಡಿಂಗ್ ಪೈಪೋಟಿಯಲ್ಲಿ ಎಸ್‌ಆರ್‌ಎಚ್‌ ಲಿವಿಂಗ್‌ಸ್ಟೋನ್ ಅನ್ನು ಖರೀದಿಸಲು ದೃಢನಿಶ್ಚಯ ಮಾಡಿತು. ಅಂತಿಮವಾಗಿ, ಲಿವಿಂಗ್‌ಸ್ಟೋನ್ ತನ್ನ ವೃತ್ತಿಜೀವನದ ಅತಿದೊಡ್ಡ ಮೊತ್ತಕ್ಕೆ ಅಂದರೆ 13 ಕೋಟಿ ರೂ.ಗೆ ಹೈದರಾಬಾದ್‌ ತಂಡದ ಮಡಿಲಿಗೆ ಬಿದ್ದರು.

14.20 ಕೋಟಿ ರು ಪಡೆಯುವ ಮೂಲಕ ವಿಶೇಷ ದಾಖಲೆ ಬರೆದ ಪ್ರಶಾಂತ್‌ ವೀರ್‌, ಕಾರ್ತಿಕ್‌ ಶರ್ಮಾ!

5.ಮುಸ್ತಾಫಿಝುರ್‌ ರೆಹಮಾನ್‌

ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಮ್ಯಾಚ್‌ ವಿನ್ನರ್‌. ಎದುರಾಳಿ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಿತ್ತು ರನ್ ಗಳನ್ನು ನಿರ್ಬಂಧಿಸುವಲ್ಲಿ ಅವರನ್ನು ನಿಪುಣ ಎಂದು ಪರಿಗಣಿಸಲಾಗಿದೆ. ಯಾವುದೇ ತಂಡವಾದರೂ ಅವರನ್ನು ಖರೀದಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದಾಗ್ಯೂ, ತಂಡಗಳ ನಡುವಿನ ಬಿಡ್ಡಿಂಗ್ ಪೈಪೋಟಿಯಿಂದಾಗಿದೆ. ಅವರು ಗಳಿಸಿದ ಬೃಹತ್ ಮೊತ್ತ ಊಹಿಸಲೂ ಅಸಾಧ್ಯವಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಮುಸ್ತಾಫಿಝುರ್ ರೆಹಮಾನ್ ಅವರನ್ನು 9.20 ಕೋಟಿ ರು. ಗಳಿಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತು.