Ayush Mhatre: ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೊಂದು ಆಘಾತ, ಐಪಿಎಲ್ ಟೂರ್ನಿಯಿಂದ ಯುವ ಬ್ಯಾಟ್ಸ್‌ಮನ್ ಔಟ್!
Ayush Mhatre out of IPL 2026: ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇದಕ್ಕೂ ಮುನ್ನ ವೇಗಿ ಖಲೀಲ್ ಅಹ್ಮದ್ ಟೂರ್ನಿಯಿಂದ ಹೊರ ನಡೆದಿದ್ದಾರೆ.
2026ರ ಐಪಿಎಲ್ ಟೂರ್ನಿಯಿಂದ ಆಯುಷ್ ಮ್ಹಾತ್ರೆ ಔಟ್. -
ನವದೆಹಲಿ: ಪ್ರಮುಖ ವೇಗಿ ಖಲೀಲ್ ಅಹ್ಮದ್ ಅವರ ಬೆನ್ನಲ್ಲೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ (csk) ತಂಡದ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ (Ayush Mhatre) ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಿಂದ ಹೊರ ನಡೆದಿದ್ದಾರೆ. ಆ ಮೂಲಕ ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ಮತ್ತೊಂದು ಆಘಾತ ಉಂಟಾಗಿದೆ. ಎಡಗಾಲಿನ ಸ್ಮಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದಾರೆ ಹಾಗೂ ಗಾಯದ ಸ್ವರೂಪ ಗಂಭೀರವಾಗಿರುವ ಕಾರಣ ಅವರು ಚೆನ್ನೈ ತಂಡದಿಂದ ಹೊರ ನಡೆದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಪ್ರಸ್ತುತ ಫಾರ್ಮ್‌ನಲ್ಲಿದ್ದ ಆಟಗಾರರ ಪೈಕಿ ಆಯುಷ್ ಮ್ಹಾತ್ರೆ ಕೂಡ ಒಬ್ಬರು. ಅಗ್ರ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳು ವಿಫಲರಾಗುತ್ತಿದ್ದ ಸಂದರ್ಭದಲ್ಲಿ ಆಯುಷ್ ಮ್ಹಾತ್ರೆ ಪವರ್‌ಪ್ಲೇನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ, ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಪಂದ್ಯದಲ್ಲಿ ರನ್ ಓಡುವ ಸಂದರ್ಭದಲ್ಲಿ ಆಯುಷ್ ಮ್ಹಾತ್ರೆ ಸ್ಮಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು.
IPL 2026: ಚೆನ್ನೈ ಸೂಪರ್ ಕಿಂಗ್ಸ್ ಎದುರು ಕೊನೆಯ ಓವರ್ ಥ್ರಿಲ್ಲರ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್!
ಸಿಎಸ್‌ಕೆ ಹೇಳಿಕೆಯಲ್ಲಿ ಏನಿದೆ?
"ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ 2026ರ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಏಪ್ರಿಲ್ 18ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಬ್ಯಾಟ್ ಮಾಡುವಾಗ ಅವರ ಎಡಗಾಲಿನಲ್ಲಿ ಹ್ಯಾಮ್‌ಸ್ಟ್ರಿಂಗ್ ಗಾಯವಾಗಿದ್ದು, ಇದರ ಪರಿಣಾಮವಾಗಿ ಅವರು ವಿಶ್ರಾಂತಿ ಪಡೆಯಬೇಕಾಗಿದೆ. ಆಯುಷ್ ಮ್ಹಾತ್ರೆ ಗಾಯದಿಂದ ಗುಣಮುಖರಾಗಲು 6ರಿಂದ 12 ವಾರಗಳ ಅವಧಿಯ ಅಗತ್ಯವಿದೆ," ಎಂದು ಸಿಎಸ್‌ಕೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
Official Announcement
— Chennai Super Kings (@ChennaiIPL) April 21, 2026
Ayush Mhatre has been ruled out of the remainder of IPL 2026 due to a left hamstring injury sustained while batting during the match against Sunrisers Hyderabad on April 18.
Ayush's injury will require a rehabilitation period of 6-12 weeks.
We wish Ayush… pic.twitter.com/7bGrFvqjY9
ಈ ಗಾಯದ ಪರಿಣಾಮ ತಂಡದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಸೀಸನ್‌ನಲ್ಲಿ ಆಯುಷ್ ಮ್ಹಾತ್ರೆ 177.87 ಸ್ಟ್ರೈಕ್ ರೇಟ್‌ನೊಂದಿಗೆ 201 ರನ್ ಗಳಿಸಿ, ತಂಡದ ಅತ್ಯಂತ ಪರಿಣಾಮಕಾರಿ ಬ್ಯಾಟ್ಸ್‌ಮನ್ ಆಗಿದ್ದರು. ಕೇವಲ ರನ್‌ಗಳಷ್ಟೇ ಅಲ್ಲ, ಅವರು ನೀಡಿದ ವೇಗ ಮತ್ತು ಆಕ್ರಮಣಕಾರಿ ಆರಂಭದಿಂದ ಸಿಎಸ್‌ಕೆ ತಂಡ ತನ್ನ ಬ್ಯಾಟಿಂಗ್ ತಂತ್ರ ರೂಪಿಸಲು ಪ್ರಮುಖ ಪಾತ್ರ ವಹಿಸಿತ್ತು.
ಸಿಎಸ್‌ಕೆ ತಂಡದ ಟೂರ್ನಿಯ ಅಂಕಪಟ್ಟಿಯಲ್ಲಿನ ಸ್ಥಿತಿಯೂ ಈ ಸವಾಲನ್ನು ಮತ್ತಷ್ಟು ಗಂಭೀರಗೊಳಿಸಿದೆ. ಆರು ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಎಂಟನೇ ಸ್ಥಾನದಲ್ಲಿದೆ. ಮುಂದೆ ಗುಜರಾಜ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಕಠಿಣ ಪಂದ್ಯಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಆಯುಷ್ ಮ್ಹಾತ್ರೆ ಅವರ ಅನುಪಸ್ಥಿತಿ ತಂಡದ ಅಗ್ರ ಕ್ರಮಾಂಕದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ದಂಡದ ಶಿಕ್ಷೆ ತಪ್ಪಿಸಲು ಕ್ಯಾಮೆರಾಮೆನ್ ಶೂಗಳನ್ನು ಎರವಲು ಪಡೆದ ಶ್ರೇಯಸ್ ಅಯ್ಯರ್
ಆಯುಷ್ ಮ್ಹಾತ್ರೆಗೆ ಗಾಯ ಹೇಗೆ ಸಂಭವಿಸಿತು?
ಚೆನ್ನೈ ಸೂಪರ್ ಕಿಂಗ್ಸ್ ತಂಡ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೇಸ್ ಮಾಡುವ ಸಂದರ್ಭದಲ್ಲಿ ಅಯುಷ್ ಮ್ಹಾತ್ರೆಗೆ ಈ ಗಾಯ ಸಂಭವಿಸಿತ್ತು. ಆರಂಭದಲ್ಲೇ ಕ್ರೀಸ್‌ಗೆ ಬಂದ ಅವರು ಅತ್ಯುತ್ತಮವಾಗಿ ಬ್ಯಾಟ್ ಮಾಡುತ್ತಿದ್ದರು, ಕೇವಲ 12 ಎಸೆತಗಳಲ್ಲಿ 30 ರನ್‌ಗಳನ್ನು ವೇಗವಾಗಿ ಗಳಿಸಿ ಬೌಲರ್‌ಗಳ ಮೇಲೆ ಒತ್ತಡವನ್ನು ಹಾಕಿದ್ದರು.
ಆದರೆ, ಎರಡನೇ ರನ್ ಪೂರ್ಣಗೊಳಿಸುವಾಗ ಅವರು ಅನಿರೀಕ್ಷಿತವಾಗಿ ಹ್ಯಾಮ್‌ಸ್ಟ್ರಿಂಗ್ ಹಿಡಿದುಕೊಂಡು ನೋವಿನಿಂದ ಬಳಲುತ್ತಿರುವುದು ಸ್ಪಷ್ಟವಾಗಿತ್ತು. ತಕ್ಷಣವೇ ಫಿಸಿಯೊ ಮೈದಾನಕ್ಕೆ ಧಾವಿಸಿ ಆಯುಷ್ ಮ್ಹಾತ್ರೆ ಮೈದಾನದಲ್ಲೇ ಚಿಕಿತ್ಸೆ ನೀಡಬೇಕಾಯಿತು.