ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

County Championship: ಬೆನ್‌ ಸ್ಟೋಕ್ಸ್‌ಗೆ ಚಳ್ಳೆ ಹಣ್ಣು ತಿನ್ನಿಸಿದ ಯುಜ್ವೇಂದ್ರ ಚಹಲ್‌! ವಿಡಿಯೊ ನೋಡಿ

ಇಂಗ್ಲೆಂಡ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮಾಜಿ ಆಟಗಾರರು ಮಿಂಚುತ್ತಿದ್ದಾರೆ. ಅದರಂತೆ ನಾರ್ಥ್‌ಹ್ಯಾಮ್ಟನ್‌ಶೈರ್‌ ಹಾಗೂ ದುರ್ಹ್ಯಾಮ್‌ ನಡುವಣ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ ಅವರನ್ನು ಯುಜ್ವೇಂದ್ರ ಚಹಲ್‌ ಔಟ್‌ ಮಾಡಿದ ರೀತಿ ಅದ್ಭುತವಾಗಿತ್ತು. ಇದರ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬೆನ್‌ ಸ್ಟೋಕ್ಸ್‌ಗೆ ಚಳ್ಳೆ ಹಣ್ಣು ತಿನ್ನಿಸಿದ ಯುಜ್ವೇಂದ್ರ ಚಹಲ್!‌

ಬೆನ್‌ ಸ್ಟೋಕ್ಸ್‌ ವಿಕೆಟ್‌ ಕಿತ್ತ ಯುಜ್ವೇಂದ್ರ ಚಹಲ್‌. -

Profile
Ramesh Kote Sep 3, 2026 9:12 PM

ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 2026ರ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ (County Championship 2026) ವಿವಿಧ ತಂಡಗಳ ಪರ ಹಲವು ಅಂತಾರಾಷ್ಟ್ರೀಯ ಸ್ಟಾರ್‌ಗಳು ಆಡುತ್ತಿದ್ದಾರೆ. ನಾರ್ಥ್‌ಹ್ಯಾಮ್ಟನ್‌ಶೈರ್‌ ಹಾಗೂ ದುರ್ಹ್ಯಾಮ್‌ ನಡುವಣ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ (Ben Stokes) ಹಾಗೂ ಯುಜ್ವೇಂದ್ರ ಚಹಲ್‌ (Yuzvendra Chahal) ಅವರು ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ ಅವರನ್ನು ಯುಜ್ವೇಂದ್ರ ಚಹಲ್‌ ಕ್ಲೀನ್‌ ಬೌಲ್ಡ್‌ ಮಾಡಿದ್ದಾರೆ.

ಈ ಪಂದ್ಯದ 47ನೇ ಓವರ್‌ನಲ್ಲಿ ಯುಜ್ವೇಂದ್ರ ಚಹಲ್‌ ಅವರು ಬೆನ್‌ ಸ್ಟೋಕ್ಸ್‌ಗೆ ಆಫ್‌ ಸ್ಟಂಪ್‌ ಮೇಲೆ ಬೌಲ್‌ ಮಾಡಿದರು. ಈ ವೇಳೆ ಆಕ್ರಮಣಕಾರಿ ಬ್ಯಾಟ್‌ ಮಾಡುವ ಬದಲು ಡಿಫೆನ್ಸ್‌ ಮಾಡಲು ಮುಂದಾದರು. ಆದರೆ, ಅವರು ಬ್ಯಾಟ್‌ ಮತ್ತು ಪ್ಯಾಡ್‌ ನಡುವೆ ದೊಡ್ಡ ಅಂತರವನ್ನು ಬಿಟ್ಟಿದ್ದರು. ಹಾಗಾಗಿ ಚಹಲ್‌ ಎಸೆದ ಚೆಂಡು ಪ್ಯಾಡ್‌ ಹಾಗೂ ಬ್ಯಾಟ್‌ ನಡುವೆ ಚೆಂಡು ಸ್ಪಿನ್‌ ಆಗಿ ಆಫ್‌ ಸ್ಟಂಪ್‌ಗೆ ತಗುಲಿತು. ಈ ವೇಳೆ ಇಂಗ್ಲೆಂಡ್‌ ಮಾಜಿ ನಾಯಕ ಬೌಲ್ಡ್‌ ಆದ ಬಳಿಕ ಅಚ್ಚರಿ ವ್ಯಕ್ತಪಡಿಸಿದರು.

2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ರೋಹಿತ್‌ ಶರ್ಮಾರ ಮಹತ್ವವನ್ನು ತಿಳಿಸಿದ ಜಾಂಟಿ ರೋಡ್ಸ್‌!

ಬೆನ್‌ ಸ್ಟೋಕ್ಸ್‌ ಅವರು 14 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ ಬಳಿಕ ದುರ್ಹ್ಯಾಮ್‌ ತಂಡ 187 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು.ಇದಾದ ಬಳಿಕ ಈ ತಂಡ 205 ರನ್‌ಗಳಿಗೆ ಆಲ್‌ಔಟ್‌ ಆಯಿತು. ದುರ್ಹ್ಯಾಮ್‌ ತಂಡದ ಪರ ಕರ್ನಾಟಕ ಮಯಾಂಕ್‌ ಅಗರ್ವಾಲ್‌ ಅವರು ಎರಡನೇ ವೈಯಕ್ತಿಕ ಸ್ಕೋರರ್‌ ಆಗಿದ್ದಾರೆ. ಅವರು 57 ಎಸೆತಗಳಲ್ಲಿ 36 ರನ್‌ಗಳನ್ನು ಗಳಿಸಿದರು.



ಈ ಪಂದ್ಯದಲ್ಲಿ ನಾರ್ಥ್‌ಹ್ಯಾಮ್ಟನ್‌ಶೈರ್‌ ತಂಡದ ಪರ ಯುಜ್ವೇಂದ್ರ ಚಹಲ್‌ ಅವರು 15.2 ಓವರ್‌ಗಳಿಗೆ 36 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ಇದಕ್ಕೂ ಮುನ್ನ ಗ್ಲೌಸೆಸ್ಟರ್‌ಶೈರ್‌ ಹಾಗೂ ದುರ್ಹ್ಯಾಮ್‌ ನಡುವಣ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ ಉತ್ತಮವಾಗಿ ಆಡಿದ್ದರು. ಅವರು ಈ ಪಂದ್ಯದಲ್ಲಿ 43 ಎಸೆತಗಳಲ್ಲಿ 45 ರನ್‌ಗಳನ್ನು ಗಳಿಸಿದ್ದರು. ಅವರು 7 ಬೌಂಡರಿಗಳು ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದರು. ನಂತರ ಅವರು ಸಾಯಿ ಸುದರ್ಶನ್‌ ಅವರಿಗೆ ವಿಕೆಟ್‌ ಒಪ್ಪಿಸಿದ್ದರು.

IND vs AFG: ಭಾರತ ಟಿ20 ತಂಡಕ್ಕೆ ಹೊಸ ಆರಂಭಿಕ ಜೋಡಿಯನ್ನು ಆರಿಸಿದ ದೀಪ್‌ ದಾಸ್‌ಗುಪ್ತಾ!

ಯುಜ್ವೇಂದ್ರ ಚಹಲ್‌ ಅವರಿಗೆ ಬೆನ್‌ ಸ್ಟೋಕ್ಸ್ ನಂಬಲಾಗದ ರೀತಿಯಲ್ಲಿ ಆಕಾಶದತ್ತ ನೋಡಿದರು. ಬಳಿಕ ತಮ್ಮ ಬ್ಯಾಟ್‌ನ್ನು ಗಾಳಿಗೆ ಎಸೆದು, ಪೆವಿಲಿಯನ್‌ನತ್ತ ಮರಳಿದರು.

ಕೌಂಟಿ ಕ್ರಿಕೆಟ್‌ನಲ್ಲಿ ಕುಲ್‌ದೀಪ್ ವಿಕೆಟ್ ಪಡೆದ ನಬಿ

ಆಕಿಬ್ ನಬಿ ಕೌಂಟಿ ಕ್ರಿಕೆಟ್‌ನಲ್ಲಿ ಭರ್ಜರಿ ಆರಂಭ ಪಡೆದಿದ್ದು, ಯಾರ್ಕ್‌ಶೈರ್ ವಿರುದ್ಧದ ಪಂದ್ಯದಲ್ಲಿ ಸರ್ರೆ ಪರ ತಮ್ಮ ಮೊದಲ ವಿಕೆಟ್ ಪಡೆದಿದ್ದಾರೆ. ನಬಿ ಎಸೆದ ಚೆಂಡನ್ನು ಕುಲ್ದೀಪ್ ಯಾದವ್ ಆಫ್‌ಸ್ಟಂಪ್‌ನ ಹೊರಭಾಗದಲ್ಲಿ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಸ್ಲಿಪ್‌ನಲ್ಲಿದ್ದ ಫೀಲ್ಡರ್ ಕೈ ಸೇರಿತು. ಸ್ಲಿಪ್ ಫೀಲ್ಡರ್ ಯಾವುದೇ ತಪ್ಪು ಮಾಡದೆ ಕ್ಯಾಚ್ ಪಡೆದುಕೊಂಡರು.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನಬಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಅವರು 15 ಓವರ್‌ಗಳಲ್ಲಿ ಕೇವಲ 33 ರನ್ ನೀಡಿ, ಕುಲ್‌ದೀಪ್ ಯಾದವ್ ಅವರ ವಿಕೆಟ್ ಪಡೆದರು.