ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಲಾನ್‌ ಬಾರ್ಡರ್‌ ಪದಕ ಗೆದ್ದ ಟ್ರಾವಿಸ್‌ ಹೆಡ್‌, ಕ್ರಿಕೆಟ್‌ ಆಸ್ಟ್ರೇಲಿಯಾದ ಪ್ರಶಸ್ತಿ ವಿಜೇತರ ವಿವರ!

ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಕ್ರಿಕೆಟ್‌ ಆಸ್ಟ್ರೇಲಿಯಾದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಏಕೈಕ ಮತದಿಂದ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌, ಅಲೆಕ್ಸ್‌ ಕೇರಿ ಅವರನ್ನು ಹಿಂದಿಕ್ಕಿ ಪ್ರತಿಷ್ಠಿತ ಅಲಾನ್‌ ಬಾರ್ಡರ್‌ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿಯನ್ನು ಮಿಚೆಲ್‌ ಸ್ಟಾರ್ಕ್‌ ಗೆದ್ದಿದ್ದಾರೆ. ವರ್ಷದ ಒಡಿಐ ಆಟಗಾರ ಪ್ರಶಸ್ತಿಗೆ ಮಿಚೆಲ್‌ ಮಾರ್ಷ್‌ ಹಾಗೂ ವರ್ಷದ ಟಿ20ಐ ಆಟಗಾರ ಪ್ರಶಸ್ತಿಯನ್ನು ಟಿಮ್‌ ಡೇವಿಡ್‌ ಪಡೆದಿದ್ದಾರೆ.

ಸತತ ಎರಡನೇ ಬಾರಿ ಅಲಾನ್‌ ಬಾರ್ಡರ್‌ ಪದಕ ಗೆದ್ದ ಟ್ರಾವಿಸ್‌ ಹೆಡ್‌!

ಅಲಾನ್‌ ಬಾರ್ಡರ್‌ ಪದಕ ಗೆದ್ದ ಟ್ರಾವಿಸ್‌ ಹೆಡ್‌. -

Profile
Ramesh Kote Aug 7, 2026 7:42 PM

ಬ್ರಿಸ್ಬೇನ್‌: ಆಸ್ಟ್ರೇಲಿಯಾ ತಂಡದ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ ಟ್ರಾವಿಡ್‌ ಹೆಡ್‌ (Travis Head) ಅವರು ಸತತ ಎರಡನೇ ಬಾರಿ ಅಲಾನ್‌ ಬಾರ್ಡರ್‌ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಕ್ರಿಕೆಟ್‌ ಆಸ್ಟ್ರೇಲಿಯಾ ವಾರ್ಷಿಕ ಪ್ರಶಸ್ತಿ (Cricket Australia's annual awards) ಪ್ರದಾನ ಸಮಾರಂಭದಲ್ಲಿ 153 ಮತಗಳಿಂದ ಅವರು, ಆಸ್ಟ್ರೇಲಿಯಾದ ಗರಿಷ್ಠ ವೈಯಕ್ತಿಕ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಂದ ಹಾಗೆ ಕೇವಲ ಒಂದು ಮತದ ಅಂತರದಲ್ಲಿ ಅಲೆಕ್ಸ್‌ ಕೇರಿ ಅವರನ್ನು ಹೆಡ್‌ ಹಿಂದಿಕ್ಕಿದ್ದಾರೆ. 150 ಮತಗಳ ಮೂಲಕ ಮಿಚೆಲ್‌ ಸ್ಟಾರ್ಕ್‌ ಅವರು ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಸತತವಾಗಿ ಅಲಾನ್‌ ಬಾರ್ಡರ್‌ ಪದಕಗಳನ್ನು ಗೆದ್ದ ಆಸ್ಟ್ರೇಲಿಯಾದ ಐದನೇ ಆಟಗಾರ ಎಂಬ ಕೀರ್ತಿಗೆ ಟ್ರಾವಿಸ್‌ ಹೆಡ್‌ ಭಾಜನರಾಗಿದ್ದಾರೆ.

ಟ್ರಾವಿಸ್ ಹೆಡ್ ಅವರ ಪ್ರಶಸ್ತಿ ಗೆಲುವಿನ ಜೊತೆಗೆ, ಮಿಚೆಲ್ ಸ್ಟಾರ್ಕ್ ಅವರಿಗೆ ಶೇನ್ ವಾರ್ನ್ ಪುರುಷರ ವಿಭಾಗದಲ್ಲಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ ಲಭಿಸಿದೆ. ಮಿಚೆಲ್ ಮಾರ್ಷ್ ಒಡಿಐ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದರೆ, ಟಿಮ್ ಡೇವಿಡ್ ಅವರನ್ನು ಟಿ20ಐ ಪ್ಲೇಯರ್ ಆಫ್ ದಿ ಇಯರ್ ಎಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ತರಬೇತಿ ಅವಧಿಗೂ ಮುನ್ನ ಅನ್ನಾಬೆಲ್ ಸುದರ್‌ಲ್ಯಾಂಡ್ ಅವರಿಗೆ ಬೆಲಿಂಡಾ ಕ್ಲಾರ್ಕ್ ಮೆಡಲ್ ನೀಡಲಾಗಿತ್ತು. 2025-26ರ ಋತುವಿನಲ್ಲಿ ಅಧಿಕೃತ ಆಸ್ಟ್ರೇಲಿಯನ್ ಕ್ರಿಕೆಟ್ ಪ್ರಧಾನ ಕಾರ್ಯಕ್ರಮ ನಡೆದಿರಲಿಲ್ಲ.

ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಅತ್ಯಂತ ಕಠಿಣ ಅವಧಿಯನ್ನು ಬಹಿರಂಗಪಡಿಸಿದ ಅಜಿಂಕ್ಯ ರಹಾನೆ!

ಅಲಾನ್ ಬಾರ್ಡರ್ ಪದಕ ಪ್ರಶಸ್ತಿಯ ಸ್ಪರ್ಧೆ ಮತದಾನದ ಅಂತಿಮ ಹಂತದವರೆಗೂ ಕುತೂಹಲ ಮೂಡಿಸಿತ್ತು. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಹೆಡ್ ಅವರ ಅಜೇಯ ಅಭಿಯಾನ ಮತ್ತಷ್ಟು ಬಲ ಪಡೆಯಿತು. ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಅವರು ಭರ್ಜರಿ 163 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಕೂಡ ಶತಕ ಸಿಡಿಸಿದ್ದರು. ಬ್ಯೂ ವೆಬ್‌ಸ್ಟರ್, ಮಿಚೆಲ್ ಸ್ಟಾರ್ಕ್ ಮತ್ತು ಮೈಕೆಲ್ ನೆಸರ್ ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಆದರೆ ವೈಯಕ್ತಿಕ ಮತದಾನದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.



ಈ ಗೆಲುವಿನೊಂದಿಗೆ ಟ್ರಾವಿಸ್ ಹೆಡ್, ಸತತ ವರ್ಷಗಳಲ್ಲಿ ಅಲಾನ್ ಬಾರ್ಡರ್ ಪದಕ ಗೆದ್ದಿರುವ ವಿಶೇಷ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ರಿಕಿ ಪಾಂಟಿಂಗ್, ಶೇನ್ ವಾಟ್ಸನ್, ಮೈಕಲ್ ಕ್ಲಾರ್ಕ್ ಮತ್ತು ಡೇವಿಡ್ ವಾರ್ನರ್ ಬಳಿಕ ಈ ಸಾಧನೆ ಮಾಡಿದ ಆಟಗಾರರ ಸಾಲಿನಲ್ಲಿ ಹೆಡ್ ಕೂಡ ಸ್ಥಾನ ಪಡೆದಿದ್ದಾರೆ.ಇದರ ಜೊತೆಗೆ, ಒಂದಕ್ಕಿಂತ ಹೆಚ್ಚು ಬಾರಿ ಅಲಾನ್ ಬಾರ್ಡರ್ ಪದಕ ಗೆದ್ದಿರುವ ತಮ್ಮ ಸಹ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ನೇಥನ್ ಲಯನ್ ಅವರ ಪಟ್ಟಿಗೂ ಹೆಡ್ ಸೇರ್ಪಡೆಯಾಗಿದ್ದಾರೆ.

ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿ ಗೆದ್ದ ಮಿಚೆಲ್‌ ಸ್ಟಾರ್ಕ್‌

2025-26ರ ಸಾಲಿನಲ್ಲಿ ಆಡಿದ 11 ಟೆಸ್ಟ್‌ ಪಂದ್ಯಗಳಿಂದ 18.12ರ ಸರಾಸರಿಯಿಂದ 57 ವಿಕೆಟ್‌ಗಳನ್ನು ಪಡೆದಿದ್ದ ಮಿಚೆಲ್‌ ಸ್ಟಾರ್ಕ್‌ ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಸ್ಟಾರ್ಕ್‌ 25 ಮತಗಳ ಮೂಲಕ ಎರಡನೇ ಬಾರಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ಅಭಿಮನ್ಯು ಈಶ್ವರನ್‌ಗೆ ಅನ್ಯಾಯವಾಗುತ್ತಿದೆ ಎಂದ ಆಕಾಶ್‌ ಚೋಪ್ರಾ!

ವರ್ಷದ ಒಡಿಐ ಆಟಗಾರ ಪ್ರಶಸ್ತಿ ಮಿಚೆಲ್‌ ಮಾರ್ಷ್‌

ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅರ್ಹತೆ ಹೊಂದಿದ್ದ ಆಸ್ಟ್ರೇಲಿಯಾದ 10 ಒಡಿಐ ಪಂದ್ಯಗಳ ಪೈಕಿ ಕೇವಲ ಆರು ಪಂದ್ಯಗಳಲ್ಲಿ ಆಡಿದ್ದರೂ ಒಡಿಐ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಬೆನ್ನುನೋವಿನಿಂದ ಚೇತರಿಸಿಕೊಂಡ ಬಳಿಕ ತಂಡಕ್ಕೆ ಮರಳಿದ ಮಾರ್ಷ್, ದಕ್ಷಿಣ ಆಫ್ರಿಕಾ ಮತ್ತು ಭಾರತ ವಿರುದ್ಧ ತವರಿನಲ್ಲಿ ನಡೆದಿದ್ದ ದ್ವಿಪಕ್ಷೀಯ ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು. ಈ ಅವಧಿಯಲ್ಲಿ ಬ್ಯಾಟಿಂಗ್‌ನಲ್ಲಿ ಅವರು 60ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್‌ ಗಳಿಸಿದ್ದರು.

ಟೀಮ್‌ ಡೇವಿಡ್‌ಗೆ ಟಿ20ಐ ವರ್ಷದ ಆಟಗಾರ ಪ್ರಶಸ್ತಿ

ಅದ್ಭುತ ಟಿ20ಐ ಋತುವಿನ ಬಳಿಕ ಟಿಮ್ ಡೇವಿಡ್ ವರ್ಷದ ಟಿ20ಐ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಅವರು 49.37ರ ಸರಾಸರಿ ಹಾಗೂ 197.50ರ ಸ್ಟ್ರೈಕ್‌ರೇಟ್‌ನಲ್ಲಿ ದಾಖಲಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಸೇಂಟ್ ಕಿಟ್ಸ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಡೇವಿಡ್ ತಮ್ಮ ವೃತ್ತಿಜೀವನದ ಮೊದಲ ಅಂತಾರಾಷ್ಟ್ರೀಯ ಶತಕವನ್ನೂ ದಾಖಲಿಸಿದರು.

ಕ್ರಿಕೆಟ್‌ ಆಸ್ಟ್ರೇಲಿಯಾದ ವಾರ್ಷಕ ಪ್ರಶಸ್ತಿ ವಿಜೇತರು

ಅಲಾನ್‌ ಬಾರ್ಡರ್‌ ಪದಕ: ಟ್ರಾವಿಸ್‌ ಹೆಡ್‌

ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿ: ಮಿಚೆಲ್‌ ಸ್ಟಾರ್ಕ್‌

ವರ್ಷದ ಒಡಿಐ ಆಟಗಾರ ಪ್ರಶಸ್ತಿ: ಮಿಚೆಲ್‌ ಮಾರ್ಷ್‌

ವರ್ಷದ ಟಿ20ಐ ಆಟಗಾರ ಪ್ರಶಸ್ತಿ: ಟಿಮ್‌ ಡೇವಿಡ್‌