IND vs ENG: ಭಾರತ ತಂಡಕ್ಕೆ ಮತ್ತೊಂದು ಗಾಯದ ಭೀತಿ? ಮೈದಾನದಿಂದ ಹೊರ ನಡೆದ ಗುರ್ನೂರ್ ಬ್ರಾರ್!
ಇಂಗ್ಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿಯೇ ಭಾರತ ತಂಡ ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದ್ದ ಮೊದಲನೇ ಪಂದ್ಯದಲ್ಲಿ ಬೌಲ್ ಮಾಡುವ ವೇಲೆ ಗುರ್ನೂರ್ ಬ್ರಾರ್ ಗಾಯಕ್ಕೆ ತುತ್ತಾಗಿ ಓವರ್ ಮುಗಿಸದೆ ಡ್ರೆಸ್ಸಿಂಗ್ ರೂಂಗೆ ಮರಳಿದರು. ಅವರ ಗಾಯದ ಸ್ವರೂಪ ಹೇಗಿದೆ ಎಂದು ಇನ್ನು ಮಾಹಿತಿ ಇಲ್ಲ.
ಬೌಲಿಂಗ್ ವೇಳೆ ಗಾಯಕ್ಕೆ ತುತ್ತಾದ ಗುರ್ನೂರ್ ಬ್ರಾರ್. -
ಬರ್ಮಿಂಗ್‌ಹ್ಯಾಮ್: ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಮೊದಲನೇ ಏಕದಿನ ಪಂದ್ಯ (IND vs ENG) ನಡೆಯುತ್ತಿರುವ ಸಂದರ್ಭದಲ್ಲಿಯೇ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಯುವ ವೇಗದ ಬೌಲರ್ ಗುರ್ನೂರ್ ಬ್ರಾರ್ (Gurnoor Brar) ಅವರು ಬೌಲಿಂಗ್ ವೇಳೆ ಗಾಯಕ್ಕೆ ತುತ್ತಾಗಿ ತಮ್ಮ ಓವರ್ ಅನ್ನು ಮುಗಿಸಲು ಸಾಧ್ಯವಾಗದೆ ಮೈದಾನವನ್ನು ತೊರೆದಿದ್ದಾರೆ. ತದ ನಂತರ ಇವರು ಮೈದಾನಕ್ಕೆ ಮರಳಲಿಲ್ಲ. ಅವರ ಗಾಯದ ಸ್ವರೂಪ ಹೇಗೆಂದು ಇನ್ನೂ ಬಹಿರಂಗವಾಗಿಲ್ಲ. ಒಂದು ವೇಳೆ ಅವರ ಗಾಯ ಗಂಭೀರವಾಗಿದ್ದರೆ, ಅವರು ಏಕದಿನ ಸರಣಿಯಿಂದ ಹೊರಬೀಳುವ ಸಾಧ್ಯತೆ ಇದೆ.
ಇಂಗ್ಲೆಂಡ್ ನೆಲದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಗುರ್ನೂರ್, ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಆದರೆ ಇನಿಂಗ್ಸ್‌ನ ಅಂತಿಮ ಹಂತದಲ್ಲಿ ಅವರಿಗೆ ಗಾಯದ ಆತಂಕ ಎದುರಾಯಿತು. ತಮ್ಮ ಕೊನೆಯ ಓವರ್ ಎಸೆಯಲು ಸಜ್ಜಾಗಿದ್ದ ವೇಳೆ, 48ನೇ ಓವರ್‌ನಲ್ಲಿ ರನ್‌ಅಪ್‌ನ ಕೊನೆಯಲ್ಲಿ ಗುರ್ನೂರ್ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿತು. ಕೂಡಲೇ ಅವರು ಡ್ರೆಸ್ಸಿಂಗ್ ರೂಮ್ ಕಡೆಗೆ ಸನ್ನೆ ಮಾಡಿ, ತಮಗೆ ದೈಹಿಕ ತೊಂದರೆಯಾಗಿರುವುದನ್ನು ತಂಡದ ಸಿಬ್ಬಂದಿಗೆ ತಿಳಿಸಿದರು.
IND vs ENG: 150 ಒಡಿಐ ವಿಕೆಟ್‌ಗಳಿಂದ ನೂತನ ಮೈಲುಗಲ್ಲು ತಲುಪಿದ ಜಸ್‌ಪ್ರೀತ್ ಬುಮ್ರಾ!
ಗುರ್ನೂರ್ ಗಾಯಗೊಂಡ ತಕ್ಷಣ ಭಾರತೀಯ ತಂಡದ ಫಿಸಿಯೊ ಮೈದಾನಕ್ಕೆ ಧಾವಿಸಿ, ಅವರ ಕಾಲನ್ನು ಹಾಗೂ ಹ್ಯಾಮ್‌ಸ್ಟ್ರಿಂಗ್ ಭಾಗವನ್ನು ಹಲವು ನಿಮಿಷಗಳ ಕಾಲ ಪರಿಶೀಲಿಸಿ ಸ್ಟ್ರೆಚ್ ಮಾಡಿದರು. ಆದರೂ ಗುರ್ನೂರ್ ಆಟವನ್ನು ಮುಂದುವರಿಸಲು ಸಾಧ್ಯವಾಗದೆ, ಅವರು ಮೈದಾನ ತೊರೆಯಬೇಕಾಯಿತು. ಅವರ ಓವರ್‌ನ ಇನ್ನುಳಿದ ಎಸೆತಗಳನ್ನು ಆಲ್‌ರೌಂಡರ್ ಅಕ್ಷರ್ ಪಟೇಲ್ ಪೂರ್ಣಗೊಳಿಸಿದರು. ಗುರ್ನೂರ್ ಅವರ ಗಾಯದ ಬಗ್ಗೆ ಭಾರತ ತಂಡದಿಂದ ತಕ್ಷಣ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಮತ್ತೊಬ್ಬ ವೇಗದ ಬೌಲರ್ ಗಾಯಗೊಂಡು ಮೈದಾನ ತೊರೆದಿರುವುದು ಭಾರತ ತಂಡದ ಆಡಳಿತ ಮಂಡಳಿಯ ಆತಂಕವನ್ನು ಹೆಚ್ಚಿಸಿದೆ. ಕಳೆದ ಕೆಲವು ವಾರಗಳಲ್ಲಿ ತಂಡವು ಹಲವು ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಗುರ್ನೂರ್ ಅವರ ಸ್ಥಿತಿಯೂ ಚಿಂತೆಗೆ ಕಾರಣವಾಗಿದೆ. ವೇಗದ ಬೌಲರ್ ಹರ್ಷಿತ್ ರಾಣಾ ಅವರು ಟಿ20 ಸರಣಿಯ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ಒಳಗಾದ ಪರಿಣಾಮ ಇಂಗ್ಲೆಂಡ್ ಪ್ರವಾಸದ ಇನ್ನುಳಿದ ಪಂದ್ಯಗಳಿಂದ ಈಗಾಗಲೇ ಹೊರಬಿದ್ದಿದ್ದಾರೆ. ಇನ್ನು ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ ರೆಡ್ಡಿ ಕೂಡ ಗಾಯದ ಕಾರಣದಿಂದ ತಂಡಕ್ಕೆ ಲಭ್ಯರಿಲ್ಲ.
IND vs ENG: ಭಾರತ ತಂಡದ ಸಹಾಯಕ ಕೋಚ್ ಹುದ್ದೆ ತೊರೆಯಲಿರುವ ರಯಾನ್ ಟೆನ್ ಡಶ್ಕಾಟೆ?
ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತ ತಂಡದ ಹಲವು ಆಟಗಾರರು ಗಾಯಗಳಿಂದ ದೀರ್ಘಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಿಸಿದ್ದರು. ಇದೇ ಕಾರಣದಿಂದ ಗುರ್ನೂರ್ ಅವರ ಫಿಟ್ನೆಸ್ ಮೇಲೂ ತಂಡದ ಆಡಳಿತ ಮಂಡಳಿ ವಿಶೇಷ ನಿಗಾ ವಹಿಸಿದೆ. ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಎರಡು ಏಕದಿನ ಪಂದ್ಯಗಳಿಗೆ ಮುನ್ನ ಗುರ್ನೂರ್ ಅವರ ಗಾಯದ ಸ್ಥಿತಿ ಮತ್ತು ಚೇತರಿಕೆಯ ಬಗ್ಗೆ ಭಾರತೀಯ ತಂಡ ನಿಕಟವಾಗಿ ಗಮನಹರಿಸುವ ಸಾಧ್ಯತೆಯಿದೆ.
ಈ ಪಂದ್ಯದಲ್ಲಿ ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸಿದ ಗುರ್ನೂರ್ ಬ್ರಾರ್ ಅವರು 9 ಓವರ್‌ಗಳಿಗೆ 61 ರನ್ ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿ ಎಲ್ಲರ ಗಮನ ಸೆಳೆದರು. ಆ ಮೂಲಕ ಇಂಗ್ಲೆಂಡ್ ತಂಡ 258 ರನ್‌ಗಳಿಗೆ ಆಲ್‌ಔಟ್ ಮಾಡಲು ಭಾರತಕ್ಕೆ ನೆರವು ನೀಡಿದರು.