ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ENG: ಪುಟ್ಟ ಅಭಿಮಾನಿಯ ಜೊತೆ ಪಾಪ್‌ಕಾರ್ನ್‌ ಸವಿದು ನೆಟ್ಟಿಗರ ಹೃದಯ ಗೆದ್ದ ಎಂಎಸ್‌ ಧೋನಿ!

ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯವನ್ನು ಆನಂದಿಸುತ್ತಿರುವುದು ಗಮನ ಸೆಳೆಯಿತು. ಇದೇ ವೇಳೆ, ಧೋನಿ ತಮ್ಮ ಪುಟ್ಟ ಅಭಿಮಾನಿಯೊಂದಿಗೆ ಪಾಪ್‌ಕಾರ್ನ್ ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುಟ್ಟ ಅಭಿಮಾನಿಯ ಜೊತೆ ಪಾಪ್‌ಕಾರ್ನ್‌ ಸವಿದ ಎಂಎಸ್‌ ಧೋನಿ!

ಪುಟ್ಟ ಅಭಿಮಾನಿಯ ಜೊತೆ ಪಾಪ್‌ಕಾರ್ನ್‌ ಸವಿದ ಎಂಎಸ್‌ ಧೋನಿ. -

Profile
Ramesh Kote Jul 14, 2026 9:03 PM

ಬರ್ಮಿಂಗ್‌ಹ್ಯಾಮ್‌: ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾಜಿ ನಾಯಕ ಎಂಎಸ್‌ ಧೋನಿ (MS Dhoni) ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಭಾರತ ತಂಡದ ಟಿ20ಐ ಸರಣಿಯ ಪಂದ್ಯವೊಂದರಲ್ಲಿಯೂ ಕಾಣಿಸಿಕೊಂಡಿದ್ದ ಎಂಎಸ್‌ಡಿ, ಇದೀ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿಯೂ ತಮ್ಮ ತಂಡವನ್ನು ಬೆಂಬಲಿಸಲು ಬಂದಿದ್ದಾರೆ. ಗ್ಯಾಲರಿಯಲ್ಲಿ ಕುಳಿತು ಪಂದ್ಯವನ್ನು ಆನಂದಿಸುತ್ತಿದ್ದ ಧೋನಿ, ತಮ್ಮ ಪಕ್ಕ ಕುಳಿತಿದ್ದ ಪುಟ್ಟ ಅಭಿಮಾನಿಯ ಜೊತೆಗೆ ಪಾಪ್‌ಕಾರ್ನ್‌ ಸವಿಯುವ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.

ಎಂಎಸ್‌ ಧೋನಿ ಪುಟ್ಟ ಅಭಿಮಾನಿಯ ಜತೆಗೆ ಪಾಪ್‌ಕಾರ್ನ್‌ ಸವಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊದಲ್ಲಿ ಧೋನಿ ಲೈವ್ ರೇಡಿಯೊ ಕಾಮೆಂಟ್ರಿಯನ್ನು ಆಲಿಸಲು ಕಿವಿಯಲ್ಲಿ ರೇಡಿಯೊ ಇಯರ್‌ವಿಗ್ಸ್ ಧರಿಸಿರುವುದು ಕಾಣಿಸುತ್ತದೆ.

ವೈರಲ್ ಆಗಿರುವ ಈ ವಿಡಿಯೊದಲ್ಲಿನ ಅತ್ಯಂತ ಮನಮೋಹಕ ಕ್ಷಣವೆಂದರೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಧೋನಿ ಅವರ ಪಕ್ಕದಲ್ಲಿ ಕುಳಿತಿದ್ದ ಪುಟ್ಟ ಅಭಿಮಾನಿ, ಮಾಜಿ ನಾಯಕನಿಗೆ ಪಾಪ್‌ಕಾರ್ನ್ ನೀಡಿದ ದೃಶ್ಯ. ಭಾರತೀಯ ತಂಡದ ಕ್ಯಾಪ್ ಹಾಗೂ ಸ್ಪೇನ್ ರಾಷ್ಟ್ರೀಯ ಫುಟ್‌ಬಾಲ್ ತಂಡದ ಜೆರ್ಸಿ ಧರಿಸಿದ್ದ ಆ ಮಗು ಮುಗ್ಧವಾಗಿ ಧೋನಿ ಅವರೊಂದಿಗೆ ಮಾತನಾಡುತ್ತಾ, ತನ್ನ ಕೈಯಲ್ಲಿದ್ದ ಪಾಪ್‌ಕಾರ್ನ್ ಅನ್ನು ಅವರಿಗೆ ನೀಡಿತು.

IND vs ENG: 150 ಒಡಿಐ ವಿಕೆಟ್‌ಗಳಿಂದ ನೂತನ ಮೈಲುಗಲ್ಲು ತಲುಪಿದ ಜಸ್‌ಪ್ರೀತ್‌ ಬುಮ್ರಾ!

ಆ ಪುಟ್ಟ ಅಭಿಮಾನಿಯ ಪ್ರೀತಿಯ ಕಾಣಿಕೆಯನ್ನು ಧೋನಿ ಕೂಡ ನಗುತ್ತಲೇ ಸ್ವೀಕರಿಸಿದರು. ಮಗುವಿನ ಮನಸ್ಸಿಗೆ ಸಂತೋಷವಾಗಲೆಂದು ಅವರು ಪಾಪ್‌ಕಾರ್ನ್ ತಿಂದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವೈರಲ್ ವಿಡಿಯೊದಲ್ಲಿ ಹೆಚ್ಚು ಗಮನ ಸೆಳೆದಿರುವುದು ಆ ಪುಟ್ಟ ಅಭಿಮಾನಿಯ ಮುಗ್ಧ ಮತ್ತು ನಿರಾಳ ವರ್ತನೆ. ಧೋನಿ ಅವರ ಪಕ್ಕದಲ್ಲೇ ಕುಳಿತಿದ್ದರೂ, ತನ್ನ ಪಕ್ಕದಲ್ಲಿ ವಿಶ್ವ ಕ್ರಿಕೆಟ್‌ನ ದಿಗ್ಗಜ ಸೂಪರ್‌ಸ್ಟಾರ್ ಕುಳಿತಿದ್ದಾರೆ ಎಂಬ ಅರಿವೇ ಇಲ್ಲದಂತೆ ಮಗು ಸಹಜವಾಗಿ ವರ್ತಿಸುತ್ತಿರುವುದು ಎಲ್ಲರ ಮನಗೆದ್ದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮಗುವಿನ ಮುಗ್ಧತೆಯ ಜೊತೆಗೆ ಎಂಎಸ್ ಧೋನಿ ಅವರ ಸರಳ, ಸೌಮ್ಯ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣವನ್ನು ನೆಟ್ಟಿಗರು ಮನಸಾರೆ ಪ್ರಶಂಸಿಸುತ್ತಿದ್ದಾರೆ.



2020ರಲ್ಲಿಯೂ ಎಂಎಸ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ಎಂಎಸ್‌ ಧೋನಿ 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು. ಇದಾದ ಬಳಿಕ ಅವರು 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ, ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಈಗಲೂ ಸಕ್ರಿಯರಾಗಿದ್ದಾರೆ. ಅವರು 2026ರ ಐಪಿಎಲ್‌ ಟೂರ್ನಿಯಲ್ಲಿ ಆಡಬೇಕಾಗಿತ್ತು. ಆದರೆ, ಗಾಯದ ಕಾರಣ ಅವರು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಿರಲಿಲ್ಲ. ಎಂಎಸ್‌ ಧೋನಿ ನಾಯಕತ್ವದಲ್ಲಿ ಭಾರತ ತಂಡ, 2007ರ ಐಸಿಸಿ ಟಿ20 ವಿಶ್ವಕಪ್‌, 2011ರ ಐಸಿಸಿ ಏಕದಿನ ವಿಶ್ವಕಪ್‌ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಜಯಿಸಿದೆ.