IND vs ENG: 8000 ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಒಳಗೊಂಡ ಎಲೈಟ್ ಲಿಸ್ಟ್ ಸೇರಿದ ಜೋ ರೂಟ್!
Joe Root Scored 8000 Runs: ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಅವರು ನಾಲ್ಕನೇ ಕ್ರಮಾಂಕದಲ್ಲಿ 8000 ಟೆಸ್ಟ್ ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ 8000 ರನ್‌ಗಳನ್ನು ಗಳಿಸಿದ ಜೋ ರೂಟ್.

ಲಂಡನ್: ಭಾರತ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ (IND vs ENG) ದ್ವಿತೀಯ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ (Joe Root) 96 ಎಸೆತಗಳಲ್ಲಿ 40 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ನಾಲ್ಕನೇ ಕ್ರಮಾಂಕದಲ್ಲಿ 8000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಮಾಸ್ಟರ್-ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಜೋ ರೂಟ್ ಈ ಸಾಧನೆಗೆ ಭಾಜನರಾಗಿದ್ದಾರೆ. ಸಚಿನ್ ಜೊತೆಗೆ ಮಹೇಲಾ ಜಯವರ್ಧನೆ ಹಾಗೂ ಜಾಕ್ ಕಾಲಿಸ್ ಅವರು ಕೂಡ ನಾಲ್ಕನೇ ಕ್ರಮಾಂಕದಲ್ಲಿ 8000ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ.
ಪಂದ್ಯದ ನಾಲ್ಕನೇ ದಿನ ಭೋಜನ ವಿರಾಮದ ವೇಳೆಗೆ ಜೋ ರೂಟ್ ಅವರು ಈ ಸಾಧನೆ ಮಾಡಿದರು. ಅವರು 99 ಟೆಸ್ಟ್ ಪಂದ್ಯಗಳ 170 ಇನಿಂಗ್ಸ್‌ಗಳಿಂದ 8009 ರನ್‌ಗಳನ್ನು ಕಲೆ ಹಾಕಿದರು. ಇದರಲ್ಲಿ ಅವರು 51.67ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಜೋ ರೂಟ್ ನಾಲ್ಕನೇ ಕ್ರಮಾಂಕದಲ್ಲಿ 25 ಶತಕಗಳು ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ನಾಲ್ಕನೇ ಕ್ರಮಾಂಕದಲ್ಲಿ ಸಚಿನ್ ತೆಂಡೂಲ್ಕರ್ 10000 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಈ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಸಚಿನ್ ಅಗ್ರ ಸ್ಥಾನದಲ್ಲಿದ್ದಾರೆ.
IND vs ENG: ಔಟ್ ಮಾಡಿ ಬೆನ್ ಡಕೆಟ್ ಭುಜಕ್ಕೆ ಡಿಕ್ಕಿ ಹೊಡೆದ ಮೊಹಮ್ಮದ್ ಸಿರಾಜ್!
ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ 179 ಟೆಸ್ಟ್ ಪಂದ್ಯಗಳಿಂದ 13492 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 44 ಶತಕಗಳು ಹಾಗೂ 58 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನ ನಾಲ್ಕನೇ ಕ್ರಮಾಂಕದಲ್ಲಿ 8000ಕ್ಕೂ ಅಧಿಕ ರನ್ ಗಳಿಸಿದ ಬ್ಯಾಟರ್ಸ್
ಸಚಿನ್ ತೆಂಡೂಲ್ಕರ್ (ಭಾರತ)- ಪಂದ್ಯಗಳು: 179- 13492 ರನ್‌ಗಳು
ಮಹೇಲ ಜಯವರ್ಧನೆ (ಶ್ರೀಲಂಕಾ) – ಪಂದ್ಯಗಳು: 124, ರನ್‌ಗಳು: 9,509
ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) – ಪಂದ್ಯಗಳು: 111, ರನ್‌ಗಳು: 9,033
ಜೋ ರೂಟ್ (ಇಂಗ್ಲೆಂಡ್) – ಪಂದ್ಯಗಳು: 99, ರನ್‌ಗಳು: 8,009*
ವಿರಾಟ್ ಕೊಹ್ಲಿ (ಭಾರತ) – ಪಂದ್ಯಗಳು: 99, ರನ್‌ಗಳು: 7,564
ಬ್ರಿಯಾನ್ ಲಾರಾ (ವೆಸ್ಟ್ ಇಂಡಿಯಾ/ಐಸಿಸಿ XI) – ಪಂದ್ಯಗಳು: 91, ರನ್‌ಗಳು: 7,535
IND vs ENG: ರಿಷಭ್ ಪಂತ್ ರನ್‌ಔಟ್ ಆದ ಬಗ್ಗೆ ಕೆಎಲ್ ರಾಹುಲ್ ಪ್ರತಿಕ್ರಿಯೆ!
ರಾಹುಲ್ ದ್ರಾವಿಡ್ ದಾಖಲೆ ಮುರಿದ ಜೋ ರೂಟ್
ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಜೋ ರೂಟ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದ 37ನೇ ಶತಕವನ್ನು ಬಾರಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಭಾರತೀಯ ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ. ದ್ರಾವಿಡ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 36 ಶತಕಗಳನ್ನು ಬಾರಿಸಿದ್ದಾರೆ.