ENG vs PAK: ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್‌ಗೆ 15 ಸದಸ್ಯರ ಇಂಗ್ಲೆಂಡ್ ತಂಡ ಪ್ರಕಟ!
ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈಗಾಗಲೇ 2-0 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ತಂಡ, ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸೆಪ್ಟಂಬರ್ 9 ರಿಂದ 13ರವರೆಗೆ ಎಜ್‌ಬಾಸ್ಟನ್ ನಡೆಯಲಿದೆ.
ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ. -
ಬರ್ಮಿಂಗ್‌ಹ್ಯಾಮ್: ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ (ENG vs PAK) ಈಗಾಗಲೇ 2-0 ಅಜೇಯ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್, ಎಜ್‌ಬಾಸ್ಟನ್‌ನಲ್ಲಿ ಸೆಪ್ಟೆಂಬರ್ 9ರಿಂದ 13ರವರೆಗೆ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ 15 ಸದಸ್ಯರ ತಂಡವನ್ನು (England Squad) ಪ್ರಕಟಿಸಿದೆ. ಜೋ ರೂಟ್ ತಂಡವನ್ನು ಮುನ್ನಡೆಸಲಿದ್ದು, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡುವ ಗುರಿಯೊಂದಿಗೆ ಇಂಗ್ಲೆಂಡ್ ಕಣಕ್ಕಿಳಿಯಲಿದೆ.
ಆಗಸ್ಟ್ 27ರಿಂದ 30ರವರೆಗೆ ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 194 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇಂಗ್ಲೆಂಡ್‌ನ ವೇಗಿ ಓಲ್ಲಿ ರಾಬಿನ್ಸನ್ ಈ ಪಂದ್ಯದಲ್ಲಿ 4/11 ಮತ್ತು 4/24 ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದರು. ಅವರ ಅದ್ಭುತ ಪ್ರದರ್ಶನಕ್ಕೆ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಲಭಿಸಿತ್ತು. ಈ ಗೆಲುವಿನೊಂದಿಗೆ ಇಂಗ್ಲೆಂಡ್, ಇನ್ನೋ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು.
ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿಗೆ ಭಾರತಕ್ಕೆ ಮೊದಲ ಬಾರಿ ಆತಿಥ್ಯ: ಜಯ ಶಾ ಸ್ಪಷ್ಟನೆ!
ಮೂರನೇ ಟೆಸ್ಟ್ ತಂಡದಲ್ಲಿ ದೊಡ್ಡ ಬದಲಾವಣೆ ಇಲ್ಲ
ಮೂರನೇ ಟೆಸ್ಟ್ ಪಂದ್ಯಕ್ಕೆ ಪ್ರಕಟಿಸಿರುವ 15 ಸದಸ್ಯರ ತಂಡದಲ್ಲಿ ಸರಣಿಯುದ್ದಕ್ಕೂ ಆಡುತ್ತಿರುವ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಸೋನಿ ಬೇಕರ್ ಮತ್ತು ಎಮಿಲಿಯೊ ಗೇ ತಂಡದ ಪ್ರಮುಖ ಸೇರ್ಪಡೆಗಳಾಗಿದ್ದು, ಬೇಕರ್ ಹೆಚ್ಚುವರಿ ವೇಗದ ಬೌಲಿಂಗ್ ಆಯ್ಕೆಯನ್ನು ನೀಡಿದರೆ, ಗೇ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚುವರಿ ಬಲ ನೀಡಲಿದ್ದಾರೆ.
ಸ್ಯಾಮ್ ಕೂಕ್ ಮತ್ತು ಜಾಶ್ ಟಂಗ್ ಅವರು ರಾಬಿನ್ಸನ್ ಹಾಗೂ ಜೋಫ್ರಾ ಆರ್ಚರ್ ಜೊತೆಗೆ ಇಂಗ್ಲೆಂಡ್‌ನ ವೇಗದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಡೆಪ್ತ್ ತಂದುಕೊಡಲಿದ್ದಾರೆ. ಇದರ ಜೊತೆಗೆ ಗಸ್ ಅಟ್ಕಿನ್ಸನ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಡ್ಯಾನ್ ಲಾರೆನ್ಸ್, ಓಲ್ಲಿ ಪೋಪ್, ಜೇಮಿ ಸ್ಮಿತ್ ಹಾಗೂ ಜೋರ್ಡನ್ ಕಾಕ್ಸ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಎರಡನೇ ಟೆಸ್ಟ್‌ನಿಂದ ಮೂರನೇ ಟೆಸ್ಟ್‌ಗೆ ಏನು ಬದಲಾವಣೆ?
ಸೆಪ್ಟೆಂಬರ್ 2ರಂದು ಪ್ರಕಟಗೊಂಡ 15 ಸದಸ್ಯರ ತಂಡವನ್ನು ಗಮನಿಸಿದರೆ, ಇಂಗ್ಲೆಂಡ್‌ನ ಆಯ್ಕೆ ನೀತಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಪ್ರಮುಖ ಬ್ಯಾಟಿಂಗ್ ಹಾಗೂ ವಿಕೆಟ್‌ಕೀಪಿಂಗ್ ವಿಭಾಗದ ಆಟಗಾರರನ್ನು ಮುಂದುವರಿಸಲಾಗಿದೆ. ಬೇಕರ್ ಮತ್ತು ಗೇ ಸೇರ್ಪಡೆಗಳು ಮಾತ್ರ ಪ್ರಮುಖ ಬದಲಾವಣೆಗಳಾಗಿದ್ದು, ವೇಗದ ಬೌಲಿಂಗ್ ಮತ್ತು ಮೇಲಿನ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಹೆಚ್ಚುವರಿ ಆಯ್ಕೆಗಳನ್ನು ಒದಗಿಸಲಿವೆ.
We have named our squad for the final Test against Pakistan 🏏
— England Cricket (@englandcricket) September 2, 2026
Full story: https://t.co/GRBs2pMage pic.twitter.com/SE2crQfBd6
ಪಾಕಿಸ್ತಾನ ತಂಡಕ್ಕೆ ದೊಡ್ಡ ಹಿನ್ನಡೆ
ಮೂರನೇ ಟೆಸ್ಟ್‌ಗೆ ಮುನ್ನ ಪಾಕಿಸ್ತಾನ ತಂಡದ ಸಿದ್ಧತೆಗಳಲ್ಲಿ ಗೊಂದಲಮಯವಾಗಿವೆ. ಲಾರ್ಡ್ಸ್‌ನಲ್ಲಿ ಭಾರೀ ಸೋಲು ಅನುಭವಿಸಿದ ಬಳಿಕ ಆಗಸ್ಟ್ 31ರಂದು ಪಾಕಿಸ್ತಾನ ತನ್ನ ತಂಡದಿಂದ ಏಳು ಆಟಗಾರರನ್ನು ಕೈಬಿಟ್ಟಿತ್ತು.
ಮೊಹಮ್ಮದ್ ರಿಝ್ವಾನ್, ಸಲ್ಮಾನ್ ಅಲಿ ಆಘಾ, ಆಮಿರ್ ಜಮಾಲ್, ಖುರ್ರಂ ಶಹ್ಜಾದ್, ಅಲಿ ಉಸ್ಮಾನ್, ಮುಹಮ್ಮದ್ ಅವೈಸ್ ಜಫರ್ ಹಾಗೂ ಇಮಾಮ್-ಉಲ್-ಹಕ್ ತಂಡದಿಂದ ಹೊರಗುಳಿದಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ವೇಳೆ ಇಮಾಮ್-ಉಲ್-ಹಕ್ ಗಾಯಗೊಂಡಿದ್ದರು.
ಇದೇ ವೇಳೆ ಪಾಕಿಸ್ತಾನದ ಕೋಚಿಂಗ್ ಸಿಬ್ಬಂದಿಯಲ್ಲೂ ಬದಲಾವಣೆ ಮಾಡಲಾಗಿದ್ದು, ಸರ್ಫರಾಝ್ ಅಹ್ಮದ್ ಮತ್ತು ಉಮರ್ ಗುಲ್ ಅವರನ್ನು ಬದಲಾಯಿಸಲಾಗಿದೆ. ಸೆಪ್ಟೆಂಬರ್ ಒಂದರಂದು ಬಂದ ವರದಿಗಳ ಪ್ರಕಾರ ನಾಯಕ ಬಾಬರ್ ಆಝಮ್ ಲಂಡನ್‌ನ ಹೋಟೆಲ್ ಕೊಠಡಿಯಲ್ಲೇ ಹೆಚ್ಚಿನ ಜ್ವರದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.
ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಕನ್ನಡಿಗನನ್ನು ಆರಿಸಿದ ದೀಪ್ ದಾಸ್‌ಗುಪ್ತಾ!
ಸೆಪ್ಟೆಂಬರ್ 2ರವರೆಗೆ ಮೂರನೇ ಟೆಸ್ಟ್ ತಂಡದಿಂದ ಬಾಬರ್ ಹೊರಗುಳಿಯುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಸೆಪ್ಟೆಂಬರ್ 9ರಂದು ಎಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ಗೆ ಬಾಬರ್ ಆಝಮ್ ಲಭ್ಯರಾಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಜೋ ರೂಟ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸನ್ನಿ ಬಾಕರ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಸ್ಯಾಮ್ ಕುಕ್, ಜೋರ್ಡನ್ ಕಾಕ್ಸ್, ಬೆನ್ ಡಕೆಟ್, ಎಮಿಲಿಯೊ ಗೇ, ಡ್ಯಾನ್ ಲಾರೆನ್ಸ್, ಓಲ್ಲಿ ಪೋಪ್, ಓಲ್ಲಿ ರಾಬಿನ್ಸನ್, ಜೇಮಿ ಸ್ಮಿತ್, ಜಾಶ್ ಟಂಗ್