Vijay Shankar Retirement: ಐಪಿಎಲ್ ಸೇರಿದಂತೆ ದೇಶಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ವಿಜಯ್ ಶಂಕರ್!
Vijay Shankar Retirement: ಭಾರತ ಕ್ರಿಕೆಟ್ ತಂಡದ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಲ್‌ರೌಂಡರ್ ವಿಜಯ್ ಶಂಕರ್ ಅವರು ತನ್ನ ಐಪಿಎಲ್ ಹಾಗೂ ದೇಶಿ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅವರು ಮೇ 22 ರಂದು ಶುಕ್ರವಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕುವ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ.
ಐಪಿಎಲ್, ದೇಶಿ ಕ್ರಿಕೆಟ್‌ಗೆ ವಿಜಯ್ ಶಂಕರ್ ವಿದಾಯ. -
ನವದೆಹಲಿ: ವಿದೇಶಿ ಲೀಗ್ ಟೂರ್ನಿಗಳಲ್ಲಿ ಆಡುವ ಸಲುವಾಗಿ ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಲ್‌ರೌಂಡರ್ ವಿಜಯ್ ಶಂಕರ್ (Vijay Shankar Retirement) ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಾಗೂ ದೇಶಿ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅವರು ಮೇ 22 ರಂದು ಶುಕ್ರವಾರ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಭಾವನಾತ್ಮಕ ಪೋಸ್ಟ್ ಹಾಕುವ ಮೂಲಕ ವಿಷಯವನ್ನು ತಿಳಿಸಿದ್ದಾರೆ. ಅಂದ ಹಾಗೆ ತಮಿಳುನಾಡು ಮೂಲದ ಆಲ್‌ರೌಂಡರ್ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ನಾಲ್ಕು ತಂಡಗಳ ಪರ 10 ಆವೃತ್ತಿಗಳಲ್ಲಿ 78 ಪಂದ್ಯಗಳನ್ನು ಆಡಿದ್ದಾರೆ.
ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 1233 ರನ್‌ಗಳು ಹಾಗೂ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರ ಜೊತೆಗ ವಿಜಯ್ ಶಂಕರ್ 77 ಪ್ರಥಮ ದರ್ಜೆ ಪಂದ್ಯಗಳಿಂದ 4253 ರನ್‌ಗಳು ಹಾಗೂ 43 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಆಡಿದ್ದಾರೆ.
IPL 2026: 600ಕ್ಕೂ ಅಧಿಕ ರನ್ ಸಿಡಿಸಿರುವ ಶುಭಮನ್ ಗಿಲ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆರ್ ಅಶ್ವಿನ್!
“ಕ್ರಿಕೆಟ್ ನನ್ನ ಜೀವನ. ನಾನು 10ನೇ ವಯಸ್ಸಿನಲ್ಲಿ ಕ್ರಿಕೆಟ್ ಆರಂಭಿಸಿದೆ. 25 ವರ್ಷಗಳ ಬಳಿಕ, ಎಲ್ಲಾ ಹಂತಗಳಲ್ಲಿ ಮತ್ತು ಅತ್ಯುನ್ನತ ಮಟ್ಟದಲ್ಲಿಯೂ ಆಡಲು ಅವಕಾಶ ದೊರೆತಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ ಮತ್ತು ಧನ್ಯನಾಗಿದ್ದೇನೆ. ನಮ್ಮ ದೇಶವನ್ನು ಪ್ರತಿನಿಧಿಸುವುದು ಸದಾ ನನ್ನ ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ಕ್ಷಣಗಳಲ್ಲೊಂದು ಆಗಿರುತ್ತದೆ.
"ದೇಶಿ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ನಿವೃತ್ತಿ ಪಡೆದು, ಹೊಸ ಅವಕಾಶಗಳನ್ನು ಅನ್ವೇಷಿಸಲು ಹಾಗೂ ಇನ್ನಷ್ಟು ಕ್ರಿಕೆಟ್ ಆಡಲು ನಾನು ನಿರ್ಧರಿಸಿದ್ದೇನೆ. ನಾನು ಪ್ರೀತಿಸುವ ಕೆಲಸವನ್ನು ಮಾಡಲು ಅವಕಾಶ ನೀಡಿದ ಎಲ್ಲರಿಗೂ ‘ಧನ್ಯವಾದ’ ಎನ್ನುವುದು ಸಾಕಾಗುವುದಿಲ್ಲ. ನಾನು ಸದಾ ಋಣಿಯಾಗಿರುತ್ತೇನೆ," ಎಂದರು.
"ಬಿಸಿಸಿಐ ಹಾಗೂ ಭಾರತೀಯ ಕ್ರಿಕೆಟ್ ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಅನೇಕ ಪಾಠಗಳು, ಅನೇಕ ನೆನಪುಗಳು ಮತ್ತು ಹಲವಾರು ಪ್ರೇರಣೆಗಳನ್ನು ಇಲ್ಲಿ ಪಡೆದಿದ್ದೇನೆ. ದೇಶವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯುನ್ನತ ಗೌರವವಾಗಿರುತ್ತದೆ. ನಾಗ್ಪುರದಲ್ಲಿ ಭಾರತದ 500ನೇ ಏಕದಿನ ಪಂದ್ಯದಲ್ಲಿ ಕೊನೆಯ ಓವರ್ ಬೌಲ್ ಮಾಡಿದ ಕ್ಷಣ ಹಾಗೂ 2019ರ ವಿಶ್ವಕಪ್ ಟೂರ್ನಿಯಲ್ಲಿ ನನ್ನ ಮೊದಲ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ," ಎಂದು ವಿಜಯ್ ಶಂಕರ್ ಭಾವುಕರಾಗಿದ್ದಾರೆ.
“ನನ್ನ ಐಪಿಎಲ್ ತಂಡಗಳು ಗುಜರಾತ್ ಟೈಟನ್ಸ್, ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ವಿಶೇಷ ಧನ್ಯವಾದಗಳು! ಎಲ್ಲ ಕಡೆಗಳಿಂದ ಪಡೆದ ಅನುಭವಗಳು ಮತ್ತು ಪಾಠಗಳೇ ಇಂದು ನಾನು ಏನಾಗಿದ್ದೇನೋ ಅದಕ್ಕೆ ಕಾರಣ,” ಎಂದು ಶಂಕರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
IPL 2026: ʻಎಂಎಸ್ ಧೋನಿ ಹೆಸರಿನಲ್ಲಿ ಫ್ಯಾನ್ಸ್‌ಗೆ ಮೋಸʼ-ಸಿಎಸ್‌ಕೆ ಎದುರು ಕೆ ಶ್ರೀಕಾಂತ್ ಆಕ್ರೋಶ!
ವಿಜಯ್ ಶಂಕರ್ ಅವರು ತಮ್ಮ ಕೋಚ್‌ಗಳು ಮತ್ತು ಕುಟುಂಬಕ್ಕೂ ಕೃತಜ್ಞತೆ ಸಲ್ಲಿಸಿ, ಅಭಿಮಾನಿಗಳಿಗೆ ಸಂದೇಶ ನೀಡುತ್ತಾ ತಮ್ಮ ಮೇಲೆ ಬಂದ ದ್ವೇಷ ಮತ್ತು ನಕಾರಾತ್ಮಕತೆಯನ್ನು ಹೇಗೆ ಎದುರಿಸಿದರು ಎಂಬುದನ್ನೂ ಹಂಚಿಕೊಂಡಿದ್ದಾರೆ.
“ನಾನು ಅಪಾರವಾದ ದ್ವೇಷ ಮತ್ತು ನಕಾರಾತ್ಮಕತೆಯನ್ನು ಎದುರಿಸಿದ್ದೇನೆ. ಆದರೆ ನಾನು ಅದನ್ನು ನಿರ್ಲಕ್ಷಿಸಿ ಮುಂದೆ ಸಾಗಲು ನಿರ್ಧರಿಸಿದ್ದೇನೆ. ನಾನು ಅದನ್ನು ಮಾಡಬಲ್ಲೆ ಎಂದಾದರೆ—ಯಾರಾದರೂ ಮಾಡಬಹುದು! ಧನಾತ್ಮಕವಾಗಿ ಯೋಚಿಸಿ, ಕಠಿಣವಾಗಿ ಶ್ರಮಿಸಿದ್ದೇನೆ. ಕ್ರಿಕೆಟ್ ನನಗೆ ಜೀವನದ ಪಾಠಗಳನ್ನು ಕಲಿಸಿದೆ. ಕ್ರಿಕೆಟ್ ನನ್ನ ಜೀವನ,” ಎಂದು ಅವರು ಹೇಳಿದರು.