ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: 5 ಪಂದ್ಯಗಳನ್ನು ಸೋತಿರುವ ಸಿಎಸ್‌ಕೆಗೆ ಪ್ಲೇಆಫ್ಸ್‌ಗೆ ಚಾನ್ಸ್‌ ಇದೆಯಾ? ಇಲ್ಲಿದೆ ಲೆಕ್ಕಾಚಾರ!

CSK's Playoffs Scenario: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನೀರಸ ಪ್ರದರ್ಶನ ತೋರುತ್ತಿದೆ. ಇಲ್ಲಿಯ ತನಕ ಆಡಿದ 7 ಪಂದ್ಯಗಳಲ್ಲಿ ಸಿಎಸ್‌ಕೆ ಕೇವಲ ಎರಡರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ 5ರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ ಹಾದಿ ಕಠಿಣವಾಗಿದೆ. ಅಂದ ಹಾಗೆ ಸಿಎಸ್‌ಕೆ ತಂಡದ ಪ್ಲೇಆಫ್ಸ್‌ ಲೆಕ್ಕಾಚಾರವನ್ನು ಇಲ್ಲಿ ವಿವರಿಸಲಾಗಿದೆ.

IPL 2025: 5 ಪಂದ್ಯಗಳನ್ನು ಸೋತಿರುವ ಸಿಎಸ್‌ಕೆಯ ಪ್ಲೇಆಫ್ಸ್‌ ಲೆಕ್ಕಾಚಾರ!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇಆಫ್ಸ್‌ ಲೆಕ್ಕಾಚಾರ.

Profile Ramesh Kote Apr 15, 2025 7:41 PM

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡದ ಪ್ರದರ್ಶನ ಉತ್ತಮವಾಗಿಲ್ಲ. ಮುಂಬೈ ಇಂಡಿಯನ್ಸ್‌ ವಿರುದ್ಧ ತನ್ನ ಮೊದಲನೇ ಪಂದ್ಯದಲ್ಲಿ ಗೆಲುವು ಪಡೆದ ಬಳಿಕ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ, ಸತತ 5 ಪಂದ್ಯಗಳನ್ನು ಸೋಲು ಅನುಭವಿಸಿತ್ತು. ಆದರೆ, ಋತುರಾಜ್‌ ಗಾಯಕ್ವಾಡ್‌ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದ ಬಳಿಕ ಚೆನ್ನೈ ನಾಯಕತ್ವಕ್ಕೆ ಮರಳಿರುವ ಎಂಎಸ್‌ ಧೋನಿ (MS Dhoni), ಏಪ್ರಿಲ್‌ 14 ರಂದು ಸಿಎಸ್‌ಕೆ ಎರಡೆನೇ ಗೆಲುವು ತಂದುಕೊಟ್ಟಿದ್ದಾರೆ. ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ಗೆಲುವು ಪಡೆಯುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಿದೆ.

ಸೋಮವಾರದ ಪಂದ್ಯದಲ್ಲಿ ಗೆಲುವು ಪಡೆದ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಪ್ರಗತಿ ಕಂಡಿಲ್ಲ. ಇನ್ನೂ ಕೊನೆಯ ಸ್ಥಾನದಲ್ಲಿಯೇ ಉಳಿದಿದೆ. ಅಂದ ಹಾಗೆ ಟೂರ್ನಿಯ ಮೊದಲನೇ ಅವಧಿಯನ್ನು ಮುಗಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇಆಫ್ಸ್‌ ಭವಿಷ್ಯ ಎರಡನೇ ಅವಧಿಯಲ್ಲಿನ ಪ್ರದರ್ಶನವನ್ನು ಅವಲಂಬಿಸಿದೆ. ಸಿಎಸ್‌ಕೆ ತಂಡದ ಪ್ಲೇಆಫ್ಸ್‌ ಲೆಕ್ಕಾಚಾರವನ್ನು ಇಲ್ಲಿ ವಿವರಿಸಲಾಗಿದೆ.

CSK vs LSG: ಲಖನೌ ಸೂಪರ್‌ ಜಯಂಟ್ಸ್‌ ಎದುರು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅಧಿಕಾರಯುತ ಜಯ!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇಆಫ್ಸ್‌ ಲೆಕ್ಕಾಚಾರ

ಚೆನ್ನೈ ಸೂಪರ್‌ ಕಿಂಗ್ಸ್‌ ಇಲ್ಲಿಯ ತನಕ ಆಡಿದ 7 ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಇನ್ನುಳಿದ 5 ರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ನಾಲ್ಕು ಅಂಕಗಳನ್ನು ಕಲೆ ಹಾಕಿದೆ. ಆದರೂ ಪಾಯಿಂಟ್ಸ್‌ ಟೇಬಲ್‌ನಲ್ಲಿ 10ನೇ ಸ್ಥಾನದಲ್ಲಿದೆ. ಸಿಎಸ್‌ಕೆಗೆ ಟೂರ್ನಿಯಲ್ಲಿ ಇನ್ನು 7 ಪಂದ್ಯಗಳು ಬಾಕಿ ಇವೆ. ಇನ್ನುಳಿದ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಪಡೆದರೆ, ಚೆನ್ನೈ ತಂಡ ಒಟ್ಟು 16 ಅಂಕಗಳೊಂದಿಗೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಬೇರೆ ಯಾವುದಾದರೂ ತಂಡ ಕೂಡ 16 ಅಂಕಗಳನ್ನು ಕಲೆ ಹಾಕಿದ್ದರೆ, ಆಗ ಇಲ್ಲಿ ರನ್‌ರೇಟ್‌ ನಿರ್ಣಾಯಕವಾಗುತ್ತದೆ. ಯಾವ ತಂಡ ಅತ್ಯುತ್ತಮ ರನ್‌ ರೇಟ್‌ ಹೊಂದಿರುತ್ತದೋ ಆ ತಂಡ ನಾಕ್‌ಔಟ್‌ ಹಂತಕ್ಕೆ ಲಗ್ಗೆ ಇಡಲಿದೆ.

ಇನ್ನು ಎಂಎಸ್‌ ಧೋನಿ ನಾಯಕತ್ವದ ಸಿಎಸ್‌ಕೆ ಇನ್ನುಳಿದ 7 ಪಂದ್ಯಗಳನ್ನು ಗೆದ್ದುಕೊಂಡರೆ, 2025ರ ಐಪಿಎಲ್‌ ಟೂರ್ನಿಯ ಪ್ಲೇಆಫ್ಸ್‌ಗೆ ಖಚಿತವಾಗಿ ಅರ್ಹತೆ ಪಡೆಯಲಿದೆ. ಅಲ್ಲದೆ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕೂಡ ಇರಲಿದೆ.

IPL 2025: ಎಂಎಸ್‌ ಧೋನಿ ಈಗಲೂ ವಿಶ್ವದ ಅತ್ಯುತ್ತಮ ವಿಕೆಟ್‌ ಕೀಪರ್‌ ಎಂದ ಮೈಕಲ್‌ ಕ್ಲಾರ್ಕ್‌!

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ

ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಚೇಸಿಂಗ್‌ನಲ್ಲಿ ಎಂಎಸ್‌ ಧೋನಿ ಕೇವಲ 11 ಎಸೆತಗಳಲ್ಲಿ 26 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಸಿಎಸ್‌ಕೆ ತಂಡದ 5 ವಿಕೆಟ್‌ ಗೆಲುವಿಗೆ ನೆರವು ನೀಡಿದ್ದರು. ಅಲ್ಲದೆ ವಿಕೆಟ್‌ ಕೀಪಿಂಗ್‌ನಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಆ ಮೂಲಕ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜರಾಗಿದ್ದರು. ಐಪಿಎಲ್‌ ಟೂರ್ನಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಎಎಸ್‌ ಧೋನಿಗೆ ಈಗ 43 ವರ್ಷ 280 ದಿನಗಳ ವಯಸ್ಸಾಗಿದೆ. ಆ ಮೂಲಕ 2014ರಲ್ಲಿ 42 ವರ್ಷ 208 ದಿನಗಳ ವಯಸ್ಸಿನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಪ್ರವೀಣ್‌ ತಾಂಬೆಯನ್ನು ಎಂಎಸ್‌ ಧೋನಿ ಹಿಂದಿಕ್ಕಿದ್ದಾರೆ.

2019ರಲ್ಲಿ ಎಂಎಸ್‌ ಧೋನಿ ಕೊನೆಯ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು. ಅವರು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ 44 ರನ್‌ ಹಾಗೂ ಸ್ಟಂಪ್‌ ಮೂಲಕ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದ್ದರು. ಅಂದ ಹಾಗೆ 2175 ದಿನಗಳ ಬಳಿಕ ಅವರು ಮೊದಲ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.