ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs LSG: ಲಖನೌ ಸೂಪರ್‌ ಜಯಂಟ್ಸ್‌ ಎದುರು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅಧಿಕಾರಯುತ ಜಯ!

CSK vs LSG Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 30ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ 5 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಸತತ 5 ಸೋಲುಗಳ ಮೂಲಕ ಸಿಎಸ್‌ಕೆ ಗೆಲುವಿನ ಲಯಕ್ಕೆ ಮರಳಿದೆ.

CSK vs LSG: ಎಂಎಸ್‌ ಧೋನಿ ನಾಯಕತ್ವದಲ್ಲಿ ಕೊನೆಗೂ ಗೆದ್ದ ಸಿಎಸ್‌ಕೆ!

ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 5 ವಿಕೆಟ್‌ ಜಯ.

Profile Ramesh Kote Apr 14, 2025 11:46 PM

ಲಖನೌ: ‌ಸತತ 5 ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡ ಗೆಲುವಿನ ಲಯಕ್ಕೆ ಮರಳಿದೆ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಸಿಎಸ್‌ಕೆ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 30ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ (Lucknow Super Giants) ತಂಡವನ್ನು ಅವರದೇ ನೆಲದಲ್ಲಿ 5 ವಿಕೆಟ್‌ಗಳಿಂದ ಮಣಿಸಿತು. ಇನ್ನು ಹ್ಯಾಟ್ರಿಕ್‌ ಗೆಲುವು ಪಡೆದು ವಿಶ್ವಾಸದಲ್ಲಿ ಕಣಕ್ಕೆ ಇಳಿಸಿದ್ದ ರಿಷಭ್‌ ಪಂತ್‌ ನಾಯಕ್ವದ ಎಲ್‌ಎಸ್‌ಜಿ, ಬ್ಯಾಟಿಂಗ್‌ ವೈಫಲ್ಯದಿಂದ ಈ ಟೂರ್ನಿಯಲ್ಲಿ ಮೂರನೇ ಸೋಲು ಅನುಭವಿಸಬೇಕಾಯಿತು.

ಸೋಮವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ನೀಡಿದ್ದ 167 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ರಚಿನ್‌ ರವೀಂದ್ರ (37), ಶಿವಂ ದುಬೆ (43*) ಹಾಗೂ ಎಂಎಸ್‌ ಧೋನಿ (26*) ಅವರ ಬ್ಯಾಟಿಂಗ್‌ ಬಲದಿಂದ 19.3 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 168 ರನ್‌ಗಳನ್ನು ಗಳಿಸಿ 5 ವಿಕೆಟ್‌ಗಳ ಗೆಲುವು ಪಡೆಯಿತು.

IPL 2025: ಲಖನೌ ಸೂಪರ್‌ ಜಯಂಟ್ಸ್‌ಗೆ ಸೇರಲು ಸಜ್ಜಾಗುತ್ತಿರುವ ಅಪಾಯಕಾರಿ ವೇಗಿ!

ಸಿಎಸ್‌ಕೆಗೆ ಉತ್ತಮ ಆರಂಭ

ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಶೇಖ್‌ ರಶೀದ್‌ ಹಾಗೂ ರಚಿನ್‌ ರವೀಂದ್ರ ಪವರ್‌ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿ 5 ಓವರ್‌ಗಳಿಗೆ 52 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದರು. ಡೆಬ್ಯೂಟಂಟ್‌ ಶೇಖ್‌ ರಶೀದ್‌ 19 ಎಸೆತಗಳಲ್ಲಿ 27 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಕೆಲ ಕಾಲ ಉತ್ತಮ ಪ್ರದರ್ಶನ ತೋರಿದ ರಚಿನ್‌, 22 ಎಸೆತಗಳಲ್ಲಿ 37 ರನ್‌ ಗಳಿಸಿ ಸಿಎಸ್‌ಕೆಗೆ 8 ಓವರ್‌ಗಳಿಗೆ 74 ರನ್‌ ತಂದುಕೊಟ್ಟು ವಿಕೆಟ್‌ ಒಪ್ಪಿಸಿದ್ದರು.



ರಶೀದ್‌ ಹಾಗೂ ರಚಿನ್‌ ವಿಕೆಟ್‌ ಒಪ್ಪಿಸಿದ ಬಳಿಕ ರಾಹುಲ್‌ ತ್ರಿಪಾಠಿ ಹಾಗೂ ರವೀಂದ್ರ ಜಡೇಜಾ ಸ್ಪಿನ್ನರ್‌ ರವಿ ಬಿಷ್ಣೋಯ್‌ಗೆ ವಿಕೆಟ್‌ ಒಪ್ಪಿಸಿದರು. ಇವರಿಗೂ ಮುನ್ನ ವಿಜಯ್‌ ಶಂಕರ್‌ ಕೂಡ ಔಟ್‌ ಆಗಿದ್ದರು. ಆದರೆ, ಶಿವಂ ದುಬೆ ಹಾಗೂ ಎಂಎಸ್‌ ಧೋನಿ ಕೊನೆಯವರೆಗ ಬ್ಯಾಟ್‌ ಮಾಡಿ 57 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡುವ ಮೂಲಕ ಸಿಎಸ್‌ಕೆಯನ್ನು ಗೆಲುವಿನ ದಡ ಸೇರಿಸಿದರು. ಅದ್ಭುತವಾಗಿ ಬ್ಯಾಟ್‌ ಮಾಡಿದ ಶಿವಂ ದುಬೆ, 37 ಎಸೆತಗಳಲ್ಲಿ ಅಜೇಯ 42 ರನ್‌ ಹಾಗೂ ಎಂಎಸ್‌ ಧೋನಿ 11 ಎಸೆತಗಳಲ್ಲಿ ಅಜೇಯ 26 ರನ್‌ ಗಳಿಸಿ, ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಮುಗಿಸಿದರು.



166 ರನ್‌ ಕಲೆ ಹಾಕಿದ್ದ ಲಖನೌ ಸೂಪರ್‌ ಜಯಂಟ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ರಿಷಭ್‌ ಪಂತ್‌ ಅವರ ನಿರ್ಣಾಯಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 166 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 167 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.



ಲಖನೌಗೆ ಆರಂಭಿಕ ಆಘಾತ

ಮೊದಲು ಬ್ಯಾಟ್‌ ಮಾಡಿದ್ದ ಲಖನೌ ಸೂಪರ್‌ ಜಯಂಟ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಏಡೆನ್‌ ಮಾರ್ಕ್ರಮ್‌ (6) ಹಾಗೂ ನಿಕೋಲಸ್‌ ಪೂರನ್‌ (8) ಅವರು ಕ್ರಮವಾಗಿ ಖಲೀಲ್‌ ಅಹ್ಮದ್‌ ಮತ್ತು ಅನ್ಷುಲ್‌ ಕಾಂಬೋಜ್‌ಗೆ ವಿಕೆಟ್‌ ಒಪ್ಪಿಸಿದ್ದರು. ಆ ಮೂಲಕ ಲಖನೌ ತಂಡ ಕೇವಲ 23 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.

ಪಂತ್‌-ಮಾರ್ಷ್‌ 50 ರನ್‌ ಜೊತೆಯಾಟ

ಬಹುಬೇಗ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಮಿಚೆಲ್‌ ಮಾರ್ಷ್‌ ಹಾಗೂ ರಿಷಭ್‌ ಪಂತ್‌ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 50 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎಲ್‌ಎಸ್‌ಜಿಯನ್ನು ಆರಂಭಿಕ ಆಘಾತದಿಂದ ಪಾರು ಮಾಡಿತ್ತು. 25 ಎಸೆತಗಳಲ್ಲಿ 30 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಮಾರ್ಷ್‌ ಅವರನ್ನು ರವೀಂದ್ರ ಜಡೇಜಾ ಕ್ಲೀನ್‌ ಬೌಲ್ಡ್‌ ಮಾಡಿದರು.



ರಿಷಭ್‌ ಪಂತ್‌ ನಿರ್ಣಾಯಕ ಅರ್ಧಶತಕ

ಲಖನೌ ಸೂಪರ್‌ ಜಯಂಟ್ಸ್‌ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ನಾಯಕ ರಿಷಭ್‌ ಪಂತ್‌. ಕಳೆದ ಪಂದ್ಯಗಳಲ್ಲಿ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಪಂತ್‌, ಸಿಎಸ್‌ಕೆ ವಿರುದ್ದದ ಪಂದ್ಯದಲ್ಲಿ ಗಮನ ಸೆಳೆದರು. ದೀರ್ಘಾವಧಿ ಬ್ಯಾಟ್‌ ಮಾಡಿದ ಅವರು, 49 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 63 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಕೊನೆಯಲ್ಲಿ ಆಯುಷ್‌ ಬದೋನಿ (22) ಹಾಗೂ ಅಬ್ದುಲ್‌ (20) ಲಖನೌ ತಂಡಕ್ಕೆ ಉಪಯುಕ್ತ ಕಾಣಿಕೆಯನ್ನು ನೀಡಿದ್ದರು.

ರವೀಂದ್ರ ಜಡೇಜಾ ಹಾಗೂ ಮತೀಶ ಪತಿರಣ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.



ಸ್ಕೋರ್‌ ವಿವರ

ಲಖನೌ ಸೂಪರ್‌ ಜಯಂಟ್ಸ್‌: 20 ಓವರ್‌ಗಳಿಗೆ 166-7 (ರಿಷಭ್‌ ಪಂತ್‌ 63, ಮಿಚೆಲ್‌ ಮಾರ್ಷ್‌ 30, ಆಯುಷ್‌ ಬದೋನಿ 22; ರವೀಂದ್ರ ಜಡೇಜಾ 24ಕ್ಕೆ 2, ಮತೀಶ ಪತಿರಣ 45ಕ್ಕೆ 2)

ಚೆನ್ನೈ ಸೂಪರ್‌ ಕಿಂಗ್ಸ್‌: 19.3 ಓವರ್‌ಗಳಿಗೆ 168-5 (ಶಿವಂ ದುಬೆ 47*, ರಚಿನ್‌ ರವೀಂದ್ರ 37, ಶೇಖ್‌ ರಶೀದ್‌ 27, ಎಂಎಸ್‌ ಧೋನಿ 26*; ರವಿ ಬಿಷ್ಣೋಯ್‌ 18ಕ್ಕೆ 2, ದಿಗ್ವೇಷ್‌ ಸಿಂಗ್‌ ರಾಠಿ 23 ಕ್ಕೆ 1, ಏಡೆನ್‌ ಮಾರ್ಕ್ರಮ್‌ 25ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಎಂಎಸ್‌ ಧೋನಿ