ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಎಂಎಸ್‌ ಧೋನಿ ಈಗಲೂ ವಿಶ್ವದ ಅತ್ಯುತ್ತಮ ವಿಕೆಟ್‌ ಕೀಪರ್‌ ಎಂದ ಮೈಕಲ್‌ ಕ್ಲಾರ್ಕ್‌!

Michael Clarke Praised MS Dhoni: ಪ್ರಸ್ತುತ ನಡೆಯುತ್ತಿರುವ 2025 ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯುತ್ತಮ ವಿಕೆಟ್‌ ಕೀಪಿಂಗ್‌ ಪ್ರದರ್ಶನ ತೋರುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂಎಸ್‌ ಧೋನಿಯನ್ನು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಶ್ಲಾಘಿಸಿದ್ದಾರೆ. ಈಗಲೂ ಎಂಎಸ್‌ ಧೋನಿ ವಿಶ್ವದ ಅತ್ಯುತ್ತಮ ವಿಕೆಟ್‌ ಕೀಪರ್‌ ಎಂದು ಬಣ್ಣಿಸಿದ್ದಾರೆ.

ಎಂಎಸ್‌ ಧೋನಿ ಈಗಲೂ ವಿಶ್ವದ ಅತ್ಯುತ್ತಮ  ವಿಕೆಟ್‌ ಕೀಪರ್‌: ಕ್ಲಾರ್ಕ್‌!

ಎಂಎಸ್‌ ಧೋನಿಯನ್ನು ಶ್ಲಾಘಿಸಿದ ಮೈಕಲ್‌ ಕ್ಲಾರ್ಕ್‌.

Profile Ramesh Kote Apr 15, 2025 6:45 PM

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂಎಸ್‌ ಧೋನಿ (MS DHoni) ಈಗಲೂ ವಿಶ್ವದ ಅತ್ಯುತ್ತಮ ವಿಕೆಟ್‌ ಕೀಪರ್‌ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌(Michael Clarke) ಗುಣಗಾಣ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಎಂಎಸ್‌ ಧೋನಿ ಅತ್ಯುತ್ತಮ ವಿಕೆಟ್‌ ಕೀಪೀಂಗ್‌ ಮಾಡುತ್ತಿದ್ದಾರೆ. ಸೋಮವಾರ ಲಖನೌ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದದ ಪಂದ್ಯದಲ್ಲಿ ಎಂಎಸ್‌ ಧೋನಿ ಸ್ಟಂಪ್ಸ್‌ ಹಿಂದೆ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದ್ದರು ಹಾಗೂ 11 ಎಸೆತಗಳಲ್ಲಿ 26 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ 5 ವಿಕೆಟ್‌ ಗೆಲುವಿಗೆ ನೆರವು ನೀಡಿದ್ದರು.

ಋತುರಾಜ್‌ ಗಾಯಕ್ವಾಡ್‌ ಅವರು ಮೊಣಕೈ ಗಾಯಕ್ಕೆ ತುತ್ತಾಗಿ 2025ರ ಐಪಿಎಲ್‌ ಟೂರ್ನಿಯಿಂದ ಹೊರ ನಡೆದಿದ್ದರು. ಈ ಹಿನ್ನೆಲೆಯಲ್ಲಿ ಎಂಎಸ್‌ ಧೋನಿ 683 ದಿನಗಳ ಬಳಿಕ ಸಿಎಸ್‌ಕೆ ತಂಡದ ನಾಯಕತ್ವಕ್ಕೆ ಮರಳಿದ್ದರು. ತಮ್ಮ ನಾಯಕತ್ವದಲ್ಲಿ ಮೊದಲನೇ ಪಂದ್ಯವನ್ನು ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಆಡಿದ್ದರು. ಆದರೆ, ಈ ಪಂದ್ಯದಲ್ಲಿ ಸಿಎಸ್‌ಕೆ ಸೋಲು ಅನುಭವಿಸಿತ್ತು. ಆದರೆ, ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ತಮ್ಮ ನಾಯಕತ್ವದಲ್ಲಿ ಚೆನ್ನೈಗೆ ಸಂಘಟಿತ ಗೆಲುವು ತಂದುಕೊಟ್ಟಿದ್ದರು. ಅದರಲ್ಲಿಯೂ ವಿಶೇಷವಾಗಿ ವಿಕೆಟ್‌ ಕೀಪರ್‌ ಆಗಿ ಮೂವರು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ ಹಾದಿ ತೋರಿಸಿದ್ದರು.

CSK vs LSG: ಲಖನೌ ಸೂಪರ್‌ ಜಯಂಟ್ಸ್‌ ಎದುರು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅಧಿಕಾರಯುತ ಜಯ!

ಮೊದಲನೇಯದಾಗಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಆಯುಷ್‌ ಬದೋನಿ ಅವರನ್ನು ರನ್‌ಔಟ್‌ ಮಾಡಿದ್ದ ಎಂಎಸ್‌ ಧೋನಿ, ನಂತರ ಮತೀಶ ಪತಿರಣ ಅವರ ಎಸೆತದಲ್ಲಿ ರಿಷಭ್‌ ಪಂತ್‌ ಅವರ ಕ್ಯಾಚ್‌ ಅನ್ನು ಪಡೆದಿದ್ದರು. ನಂತರ ಅಬ್ದುಲ್‌ ಸಮದ್‌ ಅವರನ್ನು ರನ್‌ಔಟ್‌ ಮಾಡಿದ್ದರು. ಇದರೊಂದಿಗೆ ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ವಿಕೆಟ್‌ ಕೀಪರ್‌ ಆಗಿ 200 ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದ ದಾಖಲೆಯನ್ನು ಎಂಎಸ್‌ ಧೋನಿ ಬರೆದಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಮೈಕಲ್‌ ಕ್ಲಾರ್ಕ್‌, "ಎಂಎಸ್‌ ಧೋನಿ ನಗರದಲ್ಲಿದ್ದಾಗ ಯಾವಾಗಲೂ ಗದ್ದಲ ಇದ್ದೇ ಇರುತ್ತದೆ. ಅವರ ವಿಕೆಟ್‌ ಕೀಪಿಂಗ್‌ ನನಗೆ ಯಾವುದೇ ಅಚ್ಚರಿಯನ್ನು ಮೂಡಿಸುವುದಿಲ್ಲ. ಈ ಹಿಂದೆ ಕೂಡ ನಾನು ಹೇಳಿದ್ದೇನೆ ಹಾಗೂ ಈಗಲೂ ಹೇಳುತ್ತೇನೆ, ಈಗಲೂ ಎಂಎಸ್‌ ಧೋನಿ ವಿಶ್ವದ ಅತ್ಯುತ್ತಮ ವಿಕೆಟ್‌ ಕೀಪರ್‌ ಆಗಿದ್ದಾರೆ. ಅವರು ದೀರ್ಘಾವಧಿಯಿಂದ ಸ್ಥಿರ ಪ್ರದರ್ಶನವನ್ನು ತೋರುತ್ತಿರುವುದು ನಿಜಕ್ಕೂ ಅದ್ಬುತ. ಅವರು ಇಂದು ರಾತ್ರಿ (ಸೋಮವಾರ) ಸ್ಪಿನ್ನರ್‌ಗಳನ್ನು ಬಳಸಿಕೊಂಡ ರೀತಿ ಅದ್ಭುತವಾಗಿದೆ," ಎಂದು ಗುಣಗಾನ ಮಾಡಿದ್ದಾರೆ.

LSG vs CSK: ಚೆನ್ನೈ-ಲಕ್ನೋ ಪಂದ್ಯ; ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

ಧೋನಿಯ ನಾಯಕತ್ವದ ಗುಣವನ್ನು ಶ್ಲಾಘಿಸಿದ ಕ್ಲಾರ್ಕ್‌

"ಇಂದಿನ ರಾತ್ರಿ (ಸೋಮವಾರ) ಅತ್ಯುತ್ತಮ ಸಂಗತಿ ಯಾವುದೆಂದರೆ ಅದು ಎಂಎಸ್‌ ಧೋನಿಯ ನಾಯಕತ್ವ. ಇದು ನಿಜಕ್ಕೂ ಅದ್ಭುತವಾಗಿತ್ತು. ಅವರು ಸನ್ನಿವೇಶವನ್ನು ತಿಳಿದುಕೊಂಡರು, ಕಂಡೀಷನ್ಸ್‌ಗೆ ಹೊಂದಿಕೊಂಡರು, ಅವರು ಸ್ಪಿನ್ನರ್‌ಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಒಟ್ಟಾರೆ ತಮ್ಮ ವೃತ್ತಿ ಜೀವನದುದ್ದಕ್ಕೂ ಅವರು ಇದೇ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಅವರು ಬೌಲರ್‌ಗಳನ್ನು ಚೆನ್ನಾಗಿ ಬಳಿಸಿಕೊಂಡರು. ಸಿಎಸ್‌ಕೆ ಬೌಲರ್‌ಗಳು ಚೆನ್ನಾಗಿ ಬೌಲ್‌ ಮಾಡಿದರೆ, ಪಂದ್ಯದ ವೇಗವನ್ನು ಅವರು ಬದಲಿಸಿದರು, ಸನ್ನಿವೇಶಕ್ಕೆ ತಕ್ಕಂತೆ ವಿಕೆಟ್‌ಗಳನ್ನು ಕಿತ್ತಿದ್ದಾರೆ. ಎಂಎಸ್‌ ಧೋನಿಯ ಅನುಭವನ್ನು ನಾನು ಇಲ್ಲಿ ನೋಡಿದ್ದೇನೆ," ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಶ್ಲಾಘಿಸಿದ್ದಾರೆ.

ಐಪಿಎಲ್‌ ಟೂರ್ನಿಯ ಆರಂಭದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ಕಾರಣ ಎಂಎಸ್‌ ಧೋನಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದರೆ, ಸೋಮವಾರ ಲಖನೌ ಸೂಒರ್‌ ಜಯಂಟ್ಸ್‌ ವಿರುದ್ಧ 11 ಎಸೆತಗಳಲ್ಲಿ 26 ರನ್‌ ಸಿಡಿಸಿದ್ದರ ಜೊತೆಗೆ ಶಿವಂ ದುಬೆ ಜೊತೆಗೆ ಕೇವಲ 28 ಎಸೆತಗಳಲ್ಲಿ 57 ರನ್‌ಗಳ ಜೊತೆಯಾಟವನ್ನು ಆಡಿದ್ದರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ 5 ವಿಕೆಟ್‌ ಗೆಲುವಿಗೆ ನೆರವು ನೀಡಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.