IND vs PAK: ʻಪಾಕಿಸ್ತಾನ ಅಪಾಯಕಾರಿ ತಂಡʼ-ಭಾರತಕ್ಕೆ ಎಚ್ಚರಿಕೆ ನೀಡಿದ ಮಾಂಟಿ ಪನೇಸರ್!
2025ರ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ನಡೆಯಲಿದೆ. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮಾಂಟಿ ಪನೇಸರ್ ಭಾರತ ತಂಡವು ಟೂರ್ನಿಯನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಪಾಕಿಸ್ತಾನ ಫೈನಲ್‌ನಲ್ಲಿ ಅಪಾಯಕಾರಿ ತಂಡವಾಗಿದೆ ಎಂದು ಹೇಳಿದ್ದಾರೆ.

ಏಷ್ಯಾ ಕಪ್ ಫೈನಲ್ ಗೆಲ್ಲುವ ತಂಡವನ್ನು ಆರಿಸಿದ ಮಾಂಟಿ ಪನೇಸರ್. -

ನವದೆಹಲಿ: ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಫೈನಲ್ ಪಂದ್ಯ ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡಕ್ಕೆ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ (Monty Panesar) ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ತಂಡ ಈಗಾಗಲೇ ಎರಡು ಬಾರಿ ಭಾರತದ ಎದುರು ಸೋಲು ಅನುಭವಿಸಿದೆ. ಹಾಗಾಗಿ ಈ ತಂಡ ಫೈನಲ್‌ನಲ್ಲಿ ಭಾರತಕ್ಕೆ ಕಠಿಣ ಪೈಪೋಟಿ ನೀಡಬಹುದು. ಹಾಗಾಗಿ ಟೀಮ್ ಇಂಡಿಯಾ ಫೈನಲ್‌ನಲ್ಲಿ ಎಚ್ಚರಿಕೆಯಿಂದ ಆಡಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಪಾಕಿಸ್ತಾನ ತಂಡ ಫೈನಲ್‌ನಲ್ಲಿ ಸೋಲುವುದು ಕಡಿಮೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡವನ್ನು ಪಾಕಿಸ್ತಾನ ತಂಡ ಮಣಿಸಿತ್ತು. ಇದರ ಆಧಾರದಲ್ಲಿ ಮಾಂಟಿ ಪನೇಸರ್ ಭಾರತ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. "ಪಾಕಿಸ್ತಾನ ಅಪಾಯಕಾರಿ ತಂಡ, ಫೈನಲ್‌ನಲ್ಲಿ ಅವರು ಸೋಲುವುದಿಲ್ಲ. ಪಾಕಿಸ್ತಾನ ತಂಡ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಬಹುದು. ಆದರೆ, ಭಾರತ ಈ ಟೂರ್ನಿಯಲ್ಲಿ ಅತ್ಯುತ್ತಮ ತಂಡವಾಗಿದೆ. ಆದರೆ, ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸಬಾರದು," ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಸಲಹೆ ನೀಡಿದ್ದಾರೆ.
Asia Cup 2025 Prize Money: ಏಷ್ಯಾಕಪ್ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
"ಪಾಕಿಸ್ತಾನ ತಂಡ ಈ ಹಿಂದೆ ಇದ್ದ ರೀತಿ ಬಲಿಷ್ಠವಾಗಿಲ್ಲ, ಆದರೆ ಇನ್ನೂ ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತ ತಂಡ ತನ್ನ ಕಾರ್ಯಕ್ಷಮತೆಯ ಬಗ್ಗೆ ಸಂತೃಪ್ತರಾಗಲು ಸಾಧ್ಯವಿಲ್ಲ," ಎಂದು ಮಾಂಟಿ ಪನೇಸರ್ ಹೇಳಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಈ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ದ ಭಾರತ ತಂಡ ಗೆದ್ದಿತ್ತು.
ಭಾರತ ಏಷ್ಯಾ ಕಪ್ ಗೆಲ್ಲಲಿದೆ: ಮಾಂಟಿ ಪನೇಸರ್
ಭಾರತ ತಂಡ ಏಷ್ಯಾ ಕಪ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆಲ್ಲುತ್ತದೆ ಎಂದು ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಐಎಎನ್‌ಎಸ್‌ಗೆ ಭವಿಷ್ಯ ನುಡಿದಿದ್ದಾರೆ. "ಈ ಪಂದ್ಯದಲ್ಲಿ ಭಾರತ ಬಲಿಷ್ಠವಾಗಿ ಕಾಣುತ್ತದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಬೌಲಿಂಗ್ ವಿಭಾಗವು ಅದ್ಭುತ ಪ್ರದರ್ಶನ ನೀಡಿದೆ. ಭಾರತದ ಬ್ಯಾಟಿಂಗ್ ಕೂಡ ಉತ್ತಮವಾಗಿದೆ, ಆದರೆ ಒಂದೇ ಒಂದು ನ್ಯೂನತೆಯಿದೆ. ಅಭಿಷೇಕ್ ಶರ್ಮಾ ಬೇಗನೆ ಔಟಾದರೆ, ಮಧ್ಯಮ ಕ್ರಮಾಂಕ ಒತ್ತಡಕ್ಕೆ ಒಳಗಾಗಲಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Asia Cup 2025 final: ಪಾಕ್ ಸಚಿವ ನಖ್ವಿಯಿಂದ ಟ್ರೋಫಿ ಸ್ವೀಕರಿಸುತ್ತಾ ಭಾರತ?
"ಪಾಕಿಸ್ತಾನ ಫೈನಲ್‌ನಲ್ಲಿ ಬಹಳ ಉತ್ಸಾಹದಿಂದ ಆಡಲಿದೆ. ಪಾಕಿಸ್ತಾನ ಅದ್ಭುತ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದೆ. ಅವರು ಪವರ್‌ಪ್ಲೇನಲ್ಲಿ ಬೇಗನೆ ವಿಕೆಟ್‌ಗಳನ್ನು ಪಡೆಯಬೇಕಾಗಿದೆ. ಆದಾಗ್ಯೂ, ಭಾರತ ತುಂಬಾ ಬಲಿಷ್ಠ ತಂಡವಾಗಿದೆ. ಭಾರತ ಈ ಪಂದ್ಯವನ್ನು ಗೆಲ್ಲುತ್ತದೆ ಎಂದು ನಾನು ನಂಬುತ್ತೇನೆ. ತಂಡವು ಪವರ್‌ಪ್ಲೇನಲ್ಲಿ ತನ್ನ ಅಗ್ರ ಕ್ರಮಾಂಕದ ವಿಕೆಟ್‌ಗಳನ್ನು ರಕ್ಷಿಸಬೇಕಾಗಿದೆ," ಎಂದು ಅವರು ತಿಳಿಸಿದ್ದಾರೆ.
ಟಿ20ಐ ಅಂಕಿಅಂಶಗಳು ಭಾರತ ಮತ್ತು ಪಾಕಿಸ್ತಾನ ನಡುವೆ ಇಲ್ಲಿಯವರೆಗೆ 15 ಪಂದ್ಯಗಳು ನಡೆದಿವೆ, ಇದರಲ್ಲಿ ಟೀಮ್ ಇಂಡಿಯಾ 11 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳನ್ನು ಗೆದ್ದಿದೆ. ಇದಲ್ಲದೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿತು, ಇದರಲ್ಲಿ ಭಾರತ ಬೌಲ್-ಔಟ್‌ನಲ್ಲಿ ಗೆದ್ದಿತು.