ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಯಲ್ಲಿ ನಗುವಿನ ಹೊಳೆ ಹರಿಸಲು ಬಂದ ಗಿಲ್ಲಿ ನಟ

ಕನ್ನಡ ಕಿರಿತೆರೆಯಲ್ಲಿ ಗಿಲ್ಲಿ ನಟ ಎಂದೇ ಫೇಮಸ್ ಆಗಿರುವ ನಟರಾಜ್ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯೊಳಗೆ ಕಾಲಿಟ್ಟಿದ್ದಾರೆ. ಇವರು ತಮ್ಮ ಶಾರ್ಟ್ ಫಿಲಿಂಗಳು ಮತ್ತು ಕಾಮಿಡಿ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದವರು. ಕಾಮಿಡಿ ಕಿಲಾಡಿಗಳು ಸೀಸನ್ 4 ನಲ್ಲಿ ರನ್ನರ್-ಅಪ್ ಆಗಿದ್ದರು.

ಬಿಗ್ ಬಾಸ್ ಮನೆಯಲ್ಲಿ ನಗುವಿನ ಹೊಳೆ ಹರಿಸಲು ಬಂದ ಗಿಲ್ಲಿ ನಟ

Bigg Boss Gilli Nata -

Profile Vinay Bhat Sep 28, 2025 7:17 PM

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ನಡೆಯುತ್ತಿದ್ದು, ಈಗಾಲೇ ದೊಡ್ಮನೆಯೊಳಗೆ ಕೆಲ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಕಾಕ್ರೋಚ್ ಸುಧಿ, ಕೊತ್ತಲವಾಡಿ ಸಿನಿಮಾದ ನಾಯಕಿ ಕಾವ್ಯಾ, ಡಾಗ್ ಸತೀಶ್ ಬಳಿಕ ಇದೀಗ ಗಿಲ್ಲಿ ನಟ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ತಮ್ಮ ಹಾಸ್ಯ, ಆನ್-ಸ್ಪಾಟ್ ಡೈಲಾಗ್ ಮೂಲಕವೇ ಕರ್ನಾಟಕ ಜನತೆಗೆ ಚಿರಪರಿಚಿತರಾಗಿರುವ ಇವರು, ದೊಡ್ಮನೆಯೊಳಗೆ ನಗುವಿನ ಹೊಳೆ ಹರಿಸಲು ಬಂದಿದ್ದಾರೆ.

ಕನ್ನಡ ಕಿರಿತೆರೆಯಲ್ಲಿ ಗಿಲ್ಲಿ ನಟ ಎಂದೇ ಫೇಮಸ್ ಆಗಿರುವ ಇವರ ನಿಜವಾದ ನಾಮ ನಟರಾಜ್. ಇವರು ತಮ್ಮ ಶಾರ್ಟ್ ಫಿಲಿಂಗಳು ಮತ್ತು ಕಾಮಿಡಿ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದವರು. ಕಾಮಿಡಿ ಕಿಲಾಡಿಗಳು ಸೀಸನ್ 4 ನಲ್ಲಿ ರನ್ನರ್-ಅಪ್ ಆಗಿದ್ದರು, ಹಾಗೂ ಭರ್ಜರಿ ಬ್ಯಾಚುಲರ್ಸ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಮಿಂಚಿದ್ದರು.

ಗಿಲ್ಲಿ ನಟ ಅವರು ಮಂಡ್ಯದ ಮಳವಳ್ಳಿಯ ಮಟದಪುರದವರು. ಹಳ್ಳಿಯಿಂದ ರೈತ ಕುಟುಂಬದಿಂದ ಬಂದವರು. ಇವರು ಎಸ್‌ಎಸ್‌ಎಲ್‌ಸಿ ಬಳಿಕ ಎರಡು ವರ್ಷಗಳ ಕಾಲ ಐಟಿಐ ಓದಿದ್ದಾರೆ. ಸಿನಿಮಾ ಬಗ್ಗೆ ಇದ್ದ ಕುತೂಹಲದ ಕಾರಣಕ್ಕೆ ಅವರು ಬೆಂಗಳೂರಿಗೆ ಬಂದರು. ಸಿನಿಮಾ ಶೂಟಿಂಗ್‌ನಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಇನ್ನು ಆರ್ಟ್ ಡಿಪಾರ್ಟ್‌ಮೆಂಟ್‌ನಲ್ಲಿಯೂ ಕೆಲಸ ಮಾಡಿದ್ದರು.