IND vs NZ 4th T20I: ಭಾರತಕ್ಕೆ ನಿರಾಶೆ, ಗ್ಲೆನ್ ಫಿಲಿಪ್ಸ್ ಶತಕದ ಅಬ್ಬರದಿಂದ ನ್ಯೂಜಿಲೆಂಡ್‌ಗೆ ಭರ್ಜರಿ ಜಯ!
IND vs NZ 4th T20I Match Highlights: ಗ್ಲೆನ್ ಫಿಲಿಪ್ಸ್ ಶತಕ ಹಾಗೂ ಜೇಕಬ್ ಡಫಿ ಮಾರಕ ಬೌಲಿಂಗ್ ದಾಳಿಯತ ಸಹಾಯದಿಂದ ನ್ಯೂಜಿಲೆಂಡ್ ತಂಡ, ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತದ ಎದುರು 87 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಸರಣಿಯಲ್ಲಿ ಭಾರತಕ್ಕೆ ಮೊದಲ ಸೋಲು ಇದಾಗಿದೆ.
ಭಾರತ ತಂಡಕ್ಕೆ ನಾಲ್ಕನೇ ಪಂದ್ಯದಲ್ಲಿ ಸೋಲು. -
ಆಕ್ಲೆಂಡ್: ಬೌಲಿಂಗ್ ಹಾಗೂ ಬ್ಯಾಟಿಂಗ್ ವೈಫಲ್ಯದಿಂದ ಭಾರತ ತಂಡ ನಾಲ್ಕನೇ ಟಿ20ಐ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋಲು ಅನುಭವಿಸಿದೆ. ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ನ್ಯೂಜಿಲೆಂಡ್, ಗ್ಲೆನ್ ಫಿಲಿಪ್ಸ್ ಶತಕ ಹಾಗೂ ಜೇಕಬ್ ಡಫಿ ಅವರ ಮಾರಕ ಬೌಲಿಂಗ್ ಸಹಾಯದಿಂದ ನಾಲ್ಕನೇ ಪಂದ್ಯದಲ್ಲಿ ಭಾರತದ ವಿರುದ್ಧ 87 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಸರಣಿಯಲ್ಲಿ ಆತಿಥೇಯರಿಗೆ ಮೊದಲ ಗೆಲುವಾದರೆ, ಪ್ರವಾಸಿ ಭಾರತಕ್ಕೆ ಮೊದಲು ಸೋಲು.
ಶುಕ್ರವಾರ ಇಲ್ಲಿನ ಈಡನ್ ಪಾರ್ಕ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ್ದ 260 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಎಡವಿತು. ಭಾರತದ ಪರ ಯಾವೊಬ್ಬ ಬ್ಯಾಟ್ಸ್‌ಮನ್ ದೀರ್ಘಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಇದರ ಪರಿಣಾಮ ಭಾರತ ತಂಡ ಸೋಲನ್ನು ಒಪ್ಪಿಕೊಂಡಿತು. ಟೀಮ್ ಇಂಡಿಯಾ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 172 ರನ್‌ಗಳಿಗೆ ಸೀಮಿತವಾಯಿತು.
IND vs NZ: ನಾಲ್ಕನೇ ಟಿ20ಐ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಏಕೆ ಆಡುತ್ತಿಲ್ಲ?
ಭಾರತಕ್ಕೆ ಆರಂಭಿಕ ಆಘಾತ
ಭಾರತದ ಪರ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಸಂಜು ಸ್ಯಾಮ್ಸನ್ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ಇಬ್ಬರೂ ಬ್ಯಾಟರ್‌ಗಳನ್ನು ಜೇಕಬ್ ಡಫಿ ಮೊದಲ ಓವರ್‌ನಲ್ಲಿ ಔಟ್ ಮಾಡಿದರು.
New Zealand win by 87 runs in Auckland. Our focus shifts to the 5th T20I in Hamilton on Sunday. Scorecard ▶️ https://t.co/fx264c9iLe #TeamIndia | #NZvIND https://t.co/mZccr7XMfl
— BCCI (@BCCI) October 30, 2026
ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಅಭಿಷೇಕ್ ಶರ್ಮಾ 46 ರನ್‌ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಭರವಸೆ ಮೂಡಿಸಿದ್ದರು. ಆದರೆ, 27 ರನ್ ಗಳಿಸಿದ್ದ ಅಭಿಷೇಕ್ ಶರ್ಮಾರನ್ನು ಮ್ಯಾಥ್ಯೂ ಫಿಷರ್ ಔಟ್ ಮಾಡಿದರು. ಇವರ ಬೆನ್ನಲ್ಲೆ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಆಡಮ್ ಮಿಲ್ನೆ ಔಟ್ ಮಾಡಿದರು. ಅಕ್ಷರ್ ಪಟೇಲ್ ಕೇವಲ 7 ರನ್‌ಗೆ ಔಟ್ ಆದರು. ಕೆಲ ಕಾಲ ಕ್ರೀಸ್‌ನಲ್ಲಿ ಹೋರಾಟ ನಡೆಸಿದ ನಿತೀಶ್ ರೆಡ್ಡಿ 21 ರನ್‌ಗಳನ್ನು ಕಲೆ ಹಾಕಿದರು.
ಕೊನಯ ಹಂತದಲ್ಲಿ ಜೊತೆಯಾಗಿದ್ದ ನಮನ್ ಧೀರ್ ಹಾಗೂ ತಿಲಕ್ ವರ್ಮಾ ಕಠಿಣ ಹೋರಾಟ ನಡೆಸಿದ್ದರು. ತಿಲಕ್ 35 ರನ್ ಗಳಿಸಿದ್ದರೆ, ನಮನ್ 28 ರನ್ ಗಳಿಸಿದರು. ಆದರೂ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಭಾರತ ತಂಡ ಸೋಲು ಅನುಭವಿಸಬೇಕಾಯಿತು. ನ್ಯೂಜಿಲೆಂಡ್ ತಂಡದ ಪರ ಅತ್ಯುತ್ತಮ ಬೌಲ್ ಮಾಡಿದ ಜೇಕಬ್ ಡಫಿ ನಾಲ್ಕು ಓವರ್‌ಗಳಲ್ಲಿ 23 ರನ್ ನೀಡಿ 4 ವಿಕೆಟ್ ಕಬಳಿಸಿದರು.ಮ್ಯಾಥ್ಯೂ ಫಿಷರ್ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಎರಡು ವಿಕೆಟ್ ಕಿತ್ತರು.
Glenn Phillips' equal fastest T20I century for New Zealand sets up New Zealand's record highest T20I total, in-front of a SOLD OUT Eden Park! 🙌 Watch and follow the second innings LIVE in NZ on Sky Sport NZ 📺 Sport Nation NZ and The ACC 📻 #NZvIND https://t.co/fkbdw5F9hX
— BLACKCAPS (@BLACKCAPS) October 30, 2026
259 ರನ್ ಕಲೆ ಹಾಕಿದ್ದ ನ್ಯೂಜಿಲೆಂಡ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ನ್ಯೂಜಿಲೆಂಡ್ ತಂಡ, ಗ್ಲೆನ್ ಫಿಲಿಪ್ಸ್ ಶತಕ ಹಾಗೂ ಮೈಕಲ್ ಬ್ರೇಸ್‌ವೆಲ್ ಸ್ಪೋಟಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 259 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತ ತಂಡಕ್ಕೆ 260 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.
ಗ್ಲೆನ್ ಫಿಲಿಪ್ಸ್ ಶತಕ
ನ್ಯೂಜಿಲೆಂಡ್ ತಂಡದಲ್ಲಿ ಎಲ್ಲರ ಗಮನ ಸೆಳೆದಿದ್ದು ಗ್ಲೆನ್ ಫಿಲಿಪ್ಸ್ ಸ್ಪೋಟಕ ಬ್ಯಾಟಿಂಗ್. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಫಿಲಿಪ್ಸ್ ಅವರು 49 ಎಸೆತಗಳಲ್ಲಿ 107 ರನ್‌ಗಳನ್ನು ಸಿಡಿಸಿದರು. ಅಲ್ಲದೆ ಮೈಕಲ್ ಬ್ರೇಸ್‌ವೆಲ್ ಜೊತೆಗೆ 115 ರನ್‌ಗಳ ಜೊತಯಾಟವನ್ನು ಆಡಿದರು. ಡೆತ್ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ಬ್ರೇಸ್ ವೆಲ್ 25 ಎಸೆತಗಳಲ್ಲಿ 65 ರನ್‌ಗಳನ್ನು ಸಿಡಿಸಿದರು.