ತನ್ನ ತಂದೆಯ ತಪ್ಪಿನಿಂದ ಎಂಎಸ್ ಧೋನಿ, ಕಪಿಲ್ ದೇವ್ ಬಳಿ ಕ್ಷಮೆ ಕೇಳಿದ ಯುವರಾಜ್ ಸಿಂಗ್!
ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್, ತಮ್ಮ ತಂದೆ ಯೋಗರಾಜ್ ಸಿಂಗ್ ಅವರ ಗಂಭೀರ ಆರೋಪಗಳಿಂದಾಗಿ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ಕಪಿಲ್ ದೇವ್ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ. ಪಾಡ್‌ಕಾಸ್ಟ್‌ವೊಂದರ ಟೀಸರ್‌ನಲ್ಲಿ ಮಾತನಾಡಿದ ಅವರು, ಇಂತಹ ಹೇಳಿಕೆಗಳನ್ನು ತಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಂಎಸ್ ಧೋನಿ ಬಳಿ ಕ್ಷಮೆ ಕೇಳಿದ ಯುವರಾಜ್ ಸಿಂಗ್. -
ನವದೆಹಲಿ: ತಮ್ಮ ತಂದೆ ಯೋಗರಾಜ್ ಸಿಂಗ್ (yograj Singh) ಅವರ ಸತತ ಹೇಳಿಕೆಗಳಿಂದಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ (Yuvraj Singh), ದಿಗ್ಗಜ ನಾಯಕರಾದ ಕಪಿಲ್ ದೇವ್ ಹಾಗೂ ಎಂಎಸ್ ಧೋನಿ (MS Dhoni) ಅವರ ಬಳಿ ಕ್ಷಮೆಯಾಚಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಯೋರಾಜ್ ಸಿಂಗ್, ತಮ್ಮ ಪುತ್ರ ಯುವರಾಜ್ ಸಿಂಗ್ ಅವರಿಗೆ ಎಂಎಸ್ ಧೋನಿ ಅನ್ಯಾಯ ಮಾಡಿದ್ದಾರೆ ಹಾಗೂ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಕಪಿಲ್ ದೇವ್ ಹಾಳು ಮಾಡಿದ್ದಾರೆಂದು ಆರೋಪಿಸುತ್ತಾ ಬಂದಿದ್ದಾರೆ. ಸ್ಪೋರ್ಟ್ಸ್ ತಕ್ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಯುವರಾಜ್ ಸಿಂಗ್, ತಮ್ಮ ತಂದೆಯ ಹೇಳಿಕೆಗಳಿಂದಾಗಿ ಈ ಇಬ್ಬರು ಮಾಜಿ ನಾಯಕರ ಬಳಿ ಕ್ಷಮೆ ಕೇಳಿದ್ದಾರೆ.
ಭಾರತ ತಂಡದಿಂದ ತಮ್ಮ ಪುತ್ರ ಯುವರಾಜ್ ಸಿಂಗ್ ಅವರನ್ನು ಕೈ ಬಿಟ್ಟದಕ್ಕೆ ಹಲವು ವರ್ಷಗಳಿಂದ ಯೋಗರಾಜ್ ಸಿಂಗ್, ಏಕದಿನ ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿಯನ್ನು ಟಾರ್ಗೆಟ್ ಮಾಡುತ್ತಾ ಬಂದಿದ್ದಾರೆ. ಅವರ ಹೇಳಿಕೆಗಳು ಒಂದೇ ರೀತಿಯ ಮಾದರಿಯನ್ನು ಅನುಸರಿಸುತ್ತಿದ್ದು, ಹಲವು ಸಂದರ್ಭಗಳಲ್ಲಿ ವಿಭಿನ್ನ ರೂಪಗಳಲ್ಲಿ ಮತ್ತೆ ಮತ್ತೆ ಹೊರಹೊಮ್ಮುತ್ತಿವೆ. ಆದರೆ ಯುವರಾಜ್ ಇಂತಹ ವಿವಾದಗಳಿಂದ ಬಹುಪಾಲು ದೂರ ಉಳಿದುಕೊಂಡಿದ್ದು, ತಮ್ಮ ತಂದೆಯ ಹೇಳಿಕೆಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವುದನ್ನು ತಪ್ಪಿಸಿಕೊಂಡಿದ್ದಾರೆ.
ಇದೇ ಟೀಸರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎರಡು ವಿಶ್ವಕಪ್ ವಿನ್ನರ್ ಯುವರಾಜ್ ಸಿಂಗ್, "ಇಂಥಾ ಹೇಳಿಕೆಗಳನ್ನು ನೀಡಬೇಡಿ, ಇದು ಸರಿಯಿಲ್ಲ ಎಂದು ಸಾಕಷ್ಟು ಬಾರಿ ತಮ್ಮ ತಂದೆಗೆ ಹೇಳಿದ್ದೇನೆ," ಎಂದು ಹೇಳಿದ್ದಾರೆ.
IPL 2026: ವರುಣ್ ಚಕ್ರವರ್ತಿ ಬೌಲಿಂಗ್ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಅಭಿಷೇಕ್ ನಾಯರ್!
ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಎಪಿಸೋಡ್, ಯುವರಾಜ್ ಸಿಂಗ್ ಅವರ ಬಹುಕಾಲದ ನಂತರದ ಪ್ರಮುಖ ಪಾಡ್‌ಕಾಸ್ಟ್‌ಗಳಲ್ಲಿ ಒಂದಾಗಲಿದೆ. ಎರಡು ನಿಮಿಷಗಳ ಟೀಸರ್‌ನಲ್ಲಿ ಅವರು ವಿವಿಧ ಕ್ರಿಕೆಟ್ ವಿಷಯಗಳ ಕುರಿತು ಮಾತನಾಡುತ್ತಿರುವುದು ಕಾಣಿಸುತ್ತದೆ. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ರಿಷಭ್ ಪಂತ್ ಮತ್ತು ವೈಭವ್ ಸೂರ್ಯವಂಶಿ ಕುರಿತೂ ಚರ್ಚಿಸಿದ್ದಾರೆ.
ಯೋಗರಾಜ್ ಸಿಂಗ್ ಅವರು ಧೋನಿ ವಿರುದ್ಧ ಸಾಕಷ್ಟು ಬಾರಿ ಸರಣಿಗಳ ರೂಪದಲ್ಲಿ ಟೀಕೆಗಳನ್ನು ಮಾಡಿದ್ದಾರೆ. ಆದರೆ, ಕಳೆದ ವರ್ಷ ಕಪಿಲ್ ದೇವ್ ವಿರುದ್ಧವೂ ಅವರು ಸ್ಫೋಟಕ ಆರೋಪಗಳನ್ನು ಮಾಡಿದ್ದು ಗಮನ ಸೆಳೆದಿತ್ತು. ಯೋಗರಾಜ್, ಕಪಿಲ್ ಅವರು ತಮಗೆ ಬೆದರಿಕೆ ಹಾಕಿದ್ದರು ಎಂದು ಹೇಳುವುದರ ಜೊತೆಗೆ, 1980ರ ದಶಕದ ಆರಂಭದಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದರು.
IPL 2026: ಲಖನೌ ಸೂಪರ್ ಜಯಂಟ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಧಿಕಾರಯುತ ಜಯ!
ಇದೇ ವೇಳೆ, ಕಪಿಲ್ ದೇವ್ ಅವರನ್ನು ಎದುರಿಸಲು ತಾನು ಒಮ್ಮೆ ಪಿಸ್ತೂಲ್ ಹಿಡಿದು ಅವರ ಮನೆಗೆ ಹೋಗಿದ್ದೆ ಎಂದು ಕೂಡ ಯೋಗರಾಜ್ ಹೇಳಿಕೊಂಡಿದ್ದರು. ಈ ಆರೋಪಗಳಿಗೆ ಕಪಿಲ್ ದೇವ್ ನೇರವಾಗಿ ಪ್ರತಿಕ್ರಿಯಿಸಲು ಮುಂದಾಗದೆ, ಆ ಸಮಯದಲ್ಲಿ ಕೇವಲ ಚಿಕ್ಕ ಪ್ರತಿಕ್ರಿಯೆಯನ್ನೇ ನೀಡಿದ್ದರು. ಆದರೆ ಈ ಹೇಳಿಕೆಗಳು ವ್ಯಾಪಕ ಚರ್ಚೆಗೆ ಕಾರಣವಾದವು.
ಆದರೆ ಧೋನಿ ಕುರಿತಾಗಿ ಯೋಗರಾಜ್ ಅವರ ನಿಲುವು ಇತ್ತೀಚಿನ ತಿಂಗಳಲ್ಲಿ ಬದಲಾಗಿರುವುದು ಗಮನಾರ್ಹವಾಗಿದೆ. ಇತ್ತೀಚೆಗೆ ಯೋಗರಾಜ್, ಧೋನಿಯನ್ನು ತಾವು ಮೆಚ್ಚುತ್ತೇವೆ ಮತ್ತು ಅವರು ಸಾಧ್ಯವಾದಷ್ಟು ಕಾಲ ಕ್ರಿಕೆಟ್ ಆಡುತ್ತಲೇ ಇರಬೇಕು ಎಂದು ಹೇಳಿದ್ದಾರೆ. ಈ ಬದಲಾವಣೆ, ಮಾಜಿ ಮುಖ್ಯ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ನೀಡಿದ ಸ್ಪಷ್ಟೀಕರಣದ ನಂತರ ಕಂಡುಬಂದಿತು. ಯುವರಾಜ್ ಸಿಂಗ್ ಅವರನ್ನು ಭಾರತ ತಂಡದಿಂದ ಹೊರಗಿಡುವುದು ಧೋನಿ ಒತ್ತಾಯದಿಂದ ಆಗಿಲ್ಲ; ಬದಲಾಗಿ, ಅವರು ಹಿಂದೆ ಇದ್ದಂತಹ ಪ್ರಭಾವವನ್ನು ಇನ್ನು ನೀಡುತ್ತಿಲ್ಲ ಎಂಬ ಅಭಿಪ್ರಾಯದಿಂದ ಆಯ್ಕೆದಾರರು ತೆಗೆದುಕೊಂಡ ನಿರ್ಧಾರವಾಗಿತ್ತು ಎಂದು ಪಾಟೀಲ್ ತಿಳಿಸಿದ್ದಾರೆ.
IPL 2026: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೋಲಿಗೆ ರಿಷಭ್ ಪಂತ್ ಪ್ರತಿಕ್ರಿಯೆ
ನಿಜಕ್ಕೂ ಯುವರಾಜ್ ಸಿಂಗ್ ಮೊದಲು ಬಹಿರಂಗಪಡಿಸಿದ್ದಂತೆ, 2017 ರಲ್ಲಿ ತನ್ನ ಕಮ್‌ಬ್ಯಾಕ್ ಸಮಯದಲ್ಲಿ ತಮ್ಮ ಪಾತ್ರದ ಬಗ್ಗೆ ಸ್ಪಷ್ಟತೆ ನೀಡಿದ್ದವರು ಧೋನಿ ಎಂಬುದಾಗಿ ಅವರು ಹೇಳಿಕೊಂಡಿದ್ದರು. ಭಾರತದ ಮಾಜಿ ನಾಯಕ ಧೋನಿ, ಟೀಮ್ ಮ್ಯಾನೇಜ್‌ಮೆಂಟ್ ತಮ್ಮ ಭವಿಷ್ಯದ ಯೋಜನೆಗಳಲ್ಲಿ ಅವರನ್ನು ಪರಿಗಣಿಸುತ್ತಿಲ್ಲ ಎಂದು ಯುವರಾಜ್‌ಗೆ ತಿಳಿಸಿದ್ದರು. ಈ ಸಂಭಾಷಣೆ ಯುವರಾಜ್ ಸಿಂಗ್ ತಮ್ಮ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಸಹಾಯ ಮಾಡಿತು ಮತ್ತು 2019 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ರಿಂದ ನಿವೃತ್ತಿ ತೆಗೆದುಕೊಳ್ಳಲು ಅವರಿಗೆ ಪ್ರೇರಣೆಯಾಯಿತು.