ODI World Cup Schedule: 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯ ವಿವರ!
2027ರ ಕ್ರಿಕೆಟ್ ವಿಶ್ವಕಪ್ ಅಕ್ಟೋಬರ್ 2ರಂದು ಆರಂಭವಾಗಲಿದೆ. ವಿಶ್ವದ ಪ್ರಮುಖ ಕ್ರಿಕೆಟ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ನವೆಂಬರ್ 21ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ರೋಚಕ ಹೋರಾಟ ನಡೆಯುವ ನಿರೀಕ್ಷೆಯಿದೆ. ಅಕ್ಟೋಬರ್ 7 ರಂದು ಭಾರತಕ್ಕೆ ಆಸ್ಟ್ರೇಲಿಯಾ ಮೊದಲ ಎದುರಾಳಿ. ಏಕದಿನ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಇಲ್ಲಿ ವಿವರಿಸಲಾಗಿದೆ.
2027ರ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ. -
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಕ್ಟೋಬರ್ 1ರಂದು ಗುರುವಾರ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ODI World Cup 2027) ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆ ಜಂಟಿಯಾಗಿ ಆತಿಥ್ಯ ವಹಿಸಲಿರುವ 14ನೇ ಆವೃತ್ತಿಯ ಟೂರ್ನಿ 2027ರ ಅಕ್ಟೋಬರ್ 2ರಂದು ಆರಂಭವಾಗಲಿದೆ. ಮಹಾತ್ಮ ಗಾಂಧಿ ಜಯಂತಿಯಂದೇ ಟೂರ್ನಿಗೆ ಚಾಲನೆ ದೊರೆಯಲಿದ್ದು, ನಮೀಬಿಯಾದ ವಿಂಡ್‌ಹೋಕ್‌ನ ನಮೀಬಿಯಾ ಕ್ರಿಕೆಟ್ ಗ್ರೌಂಡ್‌ನಲ್ಲಿ ಆರಂಭಿಕ ಪಂದ್ಯಗಳು ನಡೆಯಲಿವೆ. ಆದರೆ, ಸಾಮಾನ್ಯ ಗುಂಪು ಹಂತಕ್ಕೂ ಮುನ್ನ ನಮೀಬಿಯಾದಲ್ಲಿ ಮೂರು ಪಂದ್ಯಗಳ ಸೂಪರ್ ಸರಣಿ ನಡೆಯಲಿದೆ.
2023ರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2027ರ ಟೂರ್ನಿಯ ಎರಡನೇ ಸುತ್ತಿನ ಆರಂಭಿಕ ಪಂದ್ಯದಲ್ಲೇ ಮತ್ತೊಮ್ಮೆ ಸೆಣಸಲಿವೆ. ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಈ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. 2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ, ಭಾರತವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ, ನಾಲ್ಕು ವರ್ಷಗಳ ಬಳಿಕ ಮತ್ತೆ ಮುಖಾಮುಖಿಯಾಗಲಿರುವ ಈ ಎರಡು ತಂಡಗಳ ನಡುವಿನ ಪಂದ್ಯಕ್ಕೆ ಈಗಾಗಲೇ ಭಾರೀ ಕುತೂಹಲ ಮೂಡಿದೆ.
IND vs WI: ಮೂರನೇ ಒಡಿಐಗೆ ಭಾರತದ ಪ್ಲೇಯಿಂಗ್ XIನಲ್ಲಿ 3 ಬದಲಾವಣೆ ಸಾಧ್ಯತೆ!
ದಕ್ಷಿಣ ಆಫ್ರಿಕಾದಲ್ಲೇ ಸೆಮಿಫೈನಲ್ಸ್ ಪಂದ್ಯಗಳು
2027ರ ವಿಶ್ವಕಪ್‌ನ ಎರಡೂ ಸೆಮಿಫೈನಲ್ ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲೇ ನಡೆಯಲಿವೆ. ಕೇಪ್ ಟೌನ್ ಜೊತೆಗೆ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಕೂಡ ಪ್ರಮುಖ ನಾಕೌಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಟೂರ್ನಿಯ ಫೈನಲ್ ಪಂದ್ಯವನ್ನು ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಆಯೋಜಿಸುವ ಮೂಲಕ 2003ರ ವಿಶ್ವಕಪ್‌ನ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಲು ಐಸಿಸಿ ಮುಂದಾಗಿದೆ. 24 ವರ್ಷಗಳ ಅಂತರದ ಬಳಿಕ ಅದೇ ಮೈದಾನದಲ್ಲಿ ಮತ್ತೊಂದು ವಿಶ್ವಕಪ್ ಫೈನಲ್ ನಡೆಯುವುದು ವಿಶೇಷ.
𝙈𝘼𝙍𝙆 𝙔𝙊𝙐𝙍 𝘾𝘼𝙇𝙀𝙉𝘿𝘼𝙍𝙎 🗓️
— ICC (@ICC) October 1, 2026
The ICC Men’s #CWC27 fixtures have been unveiled 🏆
Access the ticket ballot 🎫 https://t.co/MSLEQzcObb pic.twitter.com/dpTE4TEjO7
2027ರ ಏಕದಿನ ವಿಶ್ವಕಪ್ ಟೂರ್ನಿಗೆ ಗುಂಪುಗಳು
ಗುಂಪು ಎ
ಅಫ್ಘಾನಿಸ್ತಾನ
ಆಸ್ಟ್ರೇಲಿಯಾ
ಭಾರತ
ಪಾಕಿಸ್ತಾನ
ಜಿಂಬಾಬ್ವೆ
ಕ್ವಾಲಿಫೈಯರ್ ಎ
ಗುಂಪು ಬಿ
ಬಾಂಗ್ಲಾದೇಶ
ಇಂಗ್ಲೆಂಡ್
ದಕ್ಷಿಣ ಆಫ್ರಿಕಾ
ಶ್ರೀಲಂಕಾ
ನ್ಯೂಜಿಲೆಂಡ್
ಕ್ವಾಲಿಫೈಯರ್ ಬಿ
ಸೂಪರ್-7 ಸೀಡ್ಸ್
A1:ಭಾರತ
A2:ಆಸ್ಟ್ರೇಲಿಯಾ
A3:ಪಾಕಿಸ್ತಾನ
AB4:ಇಂಗ್ಲೆಂಡ್
B1ನ್ಯೂಜಿಲೆಂಡ್
B2: ದಕ್ಷಿಣ ಆಫ್ರಿಕಾ
B3:ಶ್ರೀಲಂಕಾ
The #CWC27 groups are locked ⚡🔐
— ICC (@ICC) October 1, 2026
A cricketing extravaganza awaits! How to watch the schedule launch ➡️ https://t.co/Eod5GoN7zW pic.twitter.com/oVg7zVHLNF
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ
ಸೂಪರ್ ಸೀರೀಸ್
ಶನಿವಾರ, 2 ಅಕ್ಟೋಬರ್ — QF1 ವಿರುದ್ಧ QF3 — ವಿಂಡ್‌ಹೋಕ್
ಸೋಮವಾರ, 4 ಅಕ್ಟೋಬರ್ — QF1 ವಿರುದ್ಧ QF2 — ವಿಂಡ್‌ಹೋಕ್
ಬುಧವಾರ, 6 ಅಕ್ಟೋಬರ್ — QF2 ವಿರುದ್ಧ QF3 — ವಿಂಡ್‌ಹೋಕ್
ಗುಂಪು ಹಂತ
ಗುರುವಾರ, 7 ಅಕ್ಟೋಬರ್ — ಭಾರತ ವಿರುದ್ಧ ಆಸ್ಟ್ರೇಲಿಯಾ — ಕೇಪ್ ಟೌನ್
ಶುಕ್ರವಾರ, 8 ಅಕ್ಟೋಬರ್ — ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ — ತ್ಶ್ವಾನೆ
ಶುಕ್ರವಾರ, 8 ಅಕ್ಟೋಬರ್ — ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ — ವಿಂಡ್‌ಹೋಕ್
ಶನಿವಾರ, 9 ಅಕ್ಟೋಬರ್ — ಜಿಂಬಾಬ್ವೆ ವಿರುದ್ಧ ಕ್ವಾಲಿಫೈಯರ್ A — ಬುಲವಾಯೊ
ಶನಿವಾರ, 9 ಅಕ್ಟೋಬರ್ — ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ — ಕೇಪ್ ಟೌನ್
ಭಾನುವಾರ, 10 ಅಕ್ಟೋಬರ್ — ಭಾರತ ವಿರುದ್ಧ ಪಾಕಿಸ್ತಾನ — ಜೋಹಾನ್ಸ್‌ಬರ್ಗ್
ಭಾನುವಾರ, 10 ಅಕ್ಟೋಬರ್ — ಶ್ರೀಲಂಕಾ ವಿರುದ್ಧ ಕ್ವಾಲಿಫೈಯರ್ B — ವಿಂಡ್‌ಹೋಕ್
ಸೋಮವಾರ, 11 ಅಕ್ಟೋಬರ್ — ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ತಾನ — ಬುಲವಾಯೊ
ಮಂಗಳವಾರ, 12 ಅಕ್ಟೋಬರ್ — ಆಸ್ಟ್ರೇಲಿಯಾ ವಿರುದ್ಧ ಕ್ವಾಲಿಫೈಯರ್ A — ಪಾರ್ಲ್
ಮಂಗಳವಾರ, 12 ಅಕ್ಟೋಬರ್ — ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ — ಕುಗೊಂಪೊ ಸಿಟಿ
ಬುಧವಾರ, 13 ಅಕ್ಟೋಬರ್ — ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ — ವಿಂಡ್‌ಹೋಕ್
ಬುಧವಾರ, 13 ಅಕ್ಟೋಬರ್ — ದಕ್ಷಿಣ ಆಫ್ರಿಕಾ ವಿರುದ್ಧ ಕ್ವಾಲಿಫೈಯರ್ B — ಪಾರ್ಲ್
ಗುರುವಾರ, 14 ಅಕ್ಟೋಬರ್ — ಭಾರತ ವಿರುದ್ಧ ಅಫ್ಘಾನಿಸ್ತಾನ — ತ್ಶ್ವಾನೆ
ಶುಕ್ರವಾರ, 15 ಅಕ್ಟೋಬರ್ — ಪಾಕಿಸ್ತಾನ ವಿರುದ್ಧ ಕ್ವಾಲಿಫೈಯರ್ A — ಬ್ಲೋಮ್‌ಫಾಂಟೈನ್
ಶುಕ್ರವಾರ, 15 ಅಕ್ಟೋಬರ್ — ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾ — ಹರಾರೆ
ಶನಿವಾರ, 16 ಅಕ್ಟೋಬರ್ — ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ — ಡರ್ಬನ್
ಶನಿವಾರ, 16 ಅಕ್ಟೋಬರ್ — ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ — ಗೆಬೆರ್ಹಾ
ಭಾನುವಾರ, 17 ಅಕ್ಟೋಬರ್ — ಭಾರತ ವಿರುದ್ಧ ಕ್ವಾಲಿಫೈಯರ್ A — ಬ್ಲೋಮ್‌ಫಾಂಟೈನ್
ಭಾನುವಾರ, 17 ಅಕ್ಟೋಬರ್ — ನ್ಯೂಜಿಲೆಂಡ್ ವಿರುದ್ಧ ಕ್ವಾಲಿಫೈಯರ್ B — ಹರಾರೆ
ಸೋಮವಾರ, 18 ಅಕ್ಟೋಬರ್ — ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ — ಕುಗೊಂಪೊ ಸಿಟಿ
ಮಂಗಳವಾರ, 19 ಅಕ್ಟೋಬರ್ — ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ — ಹರಾರೆ
ಮಂಗಳವಾರ, 19 ಅಕ್ಟೋಬರ್ — ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ — ಡರ್ಬನ್
ಬುಧವಾರ, 20 ಅಕ್ಟೋಬರ್ — ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ — ಜೋಹಾನ್ಸ್‌ಬರ್ಗ್
ಬುಧವಾರ, 20 ಅಕ್ಟೋಬರ್ — ಇಂಗ್ಲೆಂಡ್ ವಿರುದ್ಧ ಕ್ವಾಲಿಫೈಯರ್ B — ಹರಾರೆ
ಗುರುವಾರ, 21 ಅಕ್ಟೋಬರ್ — ಅಫ್ಘಾನಿಸ್ತಾನ ವಿರುದ್ಧ ಕ್ವಾಲಿಫೈಯರ್ A — ಕುಗೊಂಪೊ ನಗರ
ಶುಕ್ರವಾರ, 22 ಅಕ್ಟೋಬರ್ — ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ — ಪಾರ್ಲ್
ಶುಕ್ರವಾರ, 22 ಅಕ್ಟೋಬರ್ — ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ — ಜೋಹಾನ್ಸ್‌ಬರ್ಗ್
ಶನಿವಾರ, 23 ಅಕ್ಟೋಬರ್ — ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ — ಗೆಬೆರ್ಹಾ
ಶನಿವಾರ, 23 ಅಕ್ಟೋಬರ್ — ಬಾಂಗ್ಲಾದೇಶ ವಿರುದ್ಧ ಕ್ವಾಲಿಫೈಯರ್ ಬಿ — ತ್ಶ್ವಾನೆ
ಭಾನುವಾರ, 24 ಅಕ್ಟೋಬರ್ — ಜಿಂಬಾಬ್ವೆ ವಿರುದ್ಧ ಭಾರತ — ವಿಕ್ಟೋರಿಯಾ ಫಾಲ್ಸ್
IND vs WI: ದ್ವಿಶತಕ ಸಿಡಿಸಿದ ಶುಭಮನ್ ಗಿಲ್ ಇನಿಂಗ್ಸ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ರೋಹಿತ್ ಶರ್ಮಾ!
ಸೂಪರ್ 7ರ ಹಂತ
ಸೋಮವಾರ, 25 ಅಕ್ಟೋಬರ್ — ಆಸ್ಟ್ರೇಲಿಯಾ (A2) ವಿರುದ್ಧ ಶ್ರೀಲಂಕಾ (B3) — ಜೋಹಾನ್ಸ್‌ಬರ್ಗ್
ಮಂಗಳವಾರ, 26 ಅಕ್ಟೋಬರ್ — ನ್ಯೂಜಿಲೆಂಡ್ (B1) ವಿರುದ್ಧ ಪಾಕಿಸ್ತಾನ (A3) — ಗೆಬೆರ್ಹಾ
ಬುಧವಾರ, 27 ಅಕ್ಟೋಬರ್ — ದಕ್ಷಿಣ ಆಫ್ರಿಕಾ (B2) ವಿರುದ್ಧ ಇಂಗ್ಲೆಂಡ್ (AB4) — ತ್ಶ್ವಾನೆ
ಗುರುವಾರ, 28 ಅಕ್ಟೋಬರ್ — ಭಾರತ (A1) ವಿರುದ್ಧ ಆಸ್ಟ್ರೇಲಿಯಾ (A2) — ವಿಕ್ಟೋರಿಯಾ ಫಾಲ್ಸ್
ಶುಕ್ರವಾರ, 29 ಅಕ್ಟೋಬರ್ — ನ್ಯೂಜಿಲೆಂಡ್ (B1) ವಿರುದ್ಧ ಶ್ರೀಲಂಕಾ (B3) — ಕುಗೊಂಪೊ ಸಿಟಿ
ಶನಿವಾರ, 30 ಅಕ್ಟೋಬರ್ — ಪಾಕಿಸ್ತಾನ (A3) ವಿರುದ್ಧ ಇಂಗ್ಲೆಂಡ್ (AB4) — ವಿಕ್ಟೋರಿಯಾ ಫಾಲ್ಸ್
ಭಾನುವಾರ, 31 ಅಕ್ಟೋಬರ್ — ದಕ್ಷಿಣ ಆಫ್ರಿಕಾ (B2) ವಿರುದ್ಧ ಭಾರತ (A1) — ಜೋಹಾನ್ಸ್‌ಬರ್ಗ್
ಸೋಮವಾರ, 1 ನವೆಂಬರ್ — ಆಸ್ಟ್ರೇಲಿಯಾ (A2) ವಿರುದ್ಧ ನ್ಯೂಜಿಲೆಂಡ್ (B1) — ವಿಕ್ಟೋರಿಯಾ ಫಾಲ್ಸ್
ಮಂಗಳವಾರ, 2 ನವೆಂಬರ್ — ಶ್ರೀಲಂಕಾ (B3) ವಿರುದ್ಧ ಇಂಗ್ಲೆಂಡ್ (AB4) — ಕೇಪ್ ಟೌನ್
ಬುಧವಾರ, 3 ನವೆಂಬರ್ — ದಕ್ಷಿಣ ಆಫ್ರಿಕಾ (B2) ವಿರುದ್ಧ ಪಾಕಿಸ್ತಾನ (A3) — ಡರ್ಬನ್
ಗುರುವಾರ, 4 ನವೆಂಬರ್ — ಭಾರತ (A1) ವಿರುದ್ಧ ನ್ಯೂಜಿಲೆಂಡ್ (B1) — ಪಾರ್ಲ್
ಶುಕ್ರವಾರ, 5 ನವೆಂಬರ್ — ಆಸ್ಟ್ರೇಲಿಯಾ (A2) ವಿರುದ್ಧ ಇಂಗ್ಲೆಂಡ್ (AB4) — ಡರ್ಬನ್
ಶನಿವಾರ, 6 ನವೆಂಬರ್ — ದಕ್ಷಿಣ ಆಫ್ರಿಕಾ (B2) ವಿರುದ್ಧ ಶ್ರೀಲಂಕಾ (B3) — ಬ್ಲೋಮ್‌ಫಾಂಟೈನ್
ಭಾನುವಾರ, 7 ನವೆಂಬರ್ — ಭಾರತ (A1) ವಿರುದ್ಧ ಪಾಕಿಸ್ತಾನ (A3) — ಕೇಪ್ ಟೌನ್
ಸೋಮವಾರ, 8 ನವೆಂಬರ್ — ನ್ಯೂಜಿಲೆಂಡ್ (B1) ವಿರುದ್ಧ ಇಂಗ್ಲೆಂಡ್ (AB4) — ಡರ್ಬನ್
ಮಂಗಳವಾರ, 9 ನವೆಂಬರ್ — ದಕ್ಷಿಣ ಆಫ್ರಿಕಾ (B2) ವಿರುದ್ಧ ಆಸ್ಟ್ರೇಲಿಯಾ (A2) — ಕ್ವೆಬೆರ್ಹಾ
ಬುಧವಾರ, 10 ನವೆಂಬರ್ — ಪಾಕಿಸ್ತಾನ (A3) ವಿರುದ್ಧ ಶ್ರೀಲಂಕಾ (B3) — ಬ್ಲೋಮ್‌ಫಾಂಟೈನ್
ಗುರುವಾರ, 11 ನವೆಂಬರ್ — ಭಾರತ (A1) ವಿರುದ್ಧ ಇಂಗ್ಲೆಂಡ್ (AB4) — ಕ್ವೆಬೆರ್ಹಾ
ಶುಕ್ರವಾರ, 12 ನವೆಂಬರ್ — ದಕ್ಷಿಣ ಆಫ್ರಿಕಾ (B2) ವಿರುದ್ಧ ನ್ಯೂಜಿಲೆಂಡ್ (B1) — ಕೇಪ್ ಟೌನ್
ಶನಿವಾರ, 13 ನವೆಂಬರ್ — ಆಸ್ಟ್ರೇಲಿಯಾ (A2) ವಿರುದ್ಧ ಪಾಕಿಸ್ತಾನ (A3) — ಬ್ಲೋಮ್‌ಫಾಂಟೈನ್
ಭಾನುವಾರ, 14 ನವೆಂಬರ್ — ಭಾರತ (A1) ವಿರುದ್ಧ ಶ್ರೀಲಂಕಾ (B3) — ಡರ್ಬನ್
ನಾಕ್‌ಔಟ್ ಹಂತ
ಬುಧವಾರ, 17 ನವೆಂಬರ್ — ಸೆಮಿ ಫೈನಲ್ 1 (1 ವಿರುದ್ಧ 4) — ಕೇಪ್ ಟೌನ್
ಗುರುವಾರ, 18 ನವೆಂಬರ್ — ಸೆಮಿ ಫೈನಲ್ 2 (3 ವಿರುದ್ಧ 4) — ತ್ಶ್ವಾನೆ
ಭಾನುವಾರ, 21 ನವೆಂಬರ್ — ಫೈನಲ್ — ಜೋಹಾನ್ಸ್‌ಬರ್ಗ್