ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಪಾಕಿಸ್ತಾನ ತಂಡ ತನ್ನ ನಿರ್ಧಾರವನ್ನು ಬದಲಿಸಲಿದೆ ಎಂದ ಸುನೀಲ್‌ ಗವಾಸ್ಕರ್‌!

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ ನಿರ್ಧಾರವನ್ನು ಪಾಕಿಸ್ತಾನ ತಂಡ ಹಿಂಪಡೆಯಲಿದೆ ಎಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಭವಿಷ್ಯ ನುಡಿದಿದ್ದಾರೆ. ಫೆಬ್ರವರಿ 15 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಎ ಗುಂಪಿನ ಪಂದ್ಯವನ್ನು ನಿಗದಿಪಡಿಸಲಾಗಿದೆ. ಆದರೆ, ಈ ಪಂದ್ಯದಲ್ಲಿ ಆಡುವುದಿಲ್ಲ ಎಂದು ಪಾಕ್‌ ಈಗಾಗಲೇ ಸ್ಪಷ್ಟಪಡಿಸಿದೆ.

ಪಾಕಿಸ್ತಾನ ತನ್ನ ನಿರ್ಧಾರವನ್ನು ಬದಲಿಸಲಿದೆ ಎಂದ ಗವಾಸ್ಕರ್!

ಪಾಕಿಸ್ತಾನ ತನ್ನ ನಿಲುವು ಬದಲಿಸಲಿದೆ ಎಂದ ಗವಾಸ್ಕರ್‌. -

Profile
Ramesh Kote Feb 2, 2026 11:08 PM

ಮುಂಬೈ: ಪಾಕಿಸ್ತಾನ ತಂಡ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಕೊನೆಗೂ ಆಡುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್‌ನ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಭಾನುವಾರ ನೀಡಿದ ಮೊದಲು ಹೇಳಿಕೆಯಲ್ಲಿ ತಮ್ಮ ತಂಡ, ಭಾರತ ವಿರುದ್ಧ ಆಡುವುದಿಲ್ಲ ಎಂದು ಘೋಷಿಸಿದ್ದರೂ ಗವಾಸ್ಕರ್, ಪಿಸಿಬಿ ತನ್ನ ನಿಲುವನ್ನು ಬದಲಾಯಿಸಬಹುದು ಅಂದಾಜಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ಇತಿಹಾಸದಲ್ಲಿ ಈ ರೀತಿಯ ಘಟನೆಗಳು ನಡೆದಿವೆ, ಹಾಗಾಗಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಆಡಲು ನಿರ್ಧರಿಸಬಹುದು ಎಂದು ಅವರು ಹೇಳಿದ್ದಾರೆ.

ಹಲವು ಪಾಕಿಸ್ತಾನ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ, ಕೆಲವೇ ದಿನಗಳಲ್ಲಿ ಅದನ್ನು ಹಿಂಪಡೆದಿದ್ದ ಉದಾಹರಣೆಯನ್ನು ಗವಾಸ್ಕರ್‌ ವಿವರಿಸಿದ್ದಾರೆ. ಕಾಮೆಂಟೇಟರ್ ಆಗಿರುವ ಗವಾಸ್ಕರ್, ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಾಟ್ ಮಾಡುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂಲ ನಿರ್ಧಾರವನ್ನು ಸಹ ಇದೇ ರೀತಿಯ ಕ್ರಮವನ್ನು ಅನುಸರಿಸಿ ಹಿಂಪಡೆಯಬಹುದು ಎಂದು ಭವಿಷ್ಯವಾಣಿ ನುಡಿದಿದ್ದಾರೆ. ಅವರ ಅಭಿಪ್ರಾಯದಲ್ಲಿ, ಪಾಕಿಸ್ತಾನ ತಂಡಕ್ಕೆ ಗಂಭೀರ ಪರಿಣಾಮಗಳ ಎದುರಿಸಬೇಕಾಗಬಹುದೆಂಬ ಕಾರಣದಿಂದ ಈ ನಿರ್ಧಾರವನ್ನು ಕೈ ಬಿಡಬಹುದು ಎಂದಿದ್ದಾರೆ.

2026ರ ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ವಿಕೆಟ್‌ ಕೀಪರ್‌ ಆರಿಸಿದ ಸುನೀಲ್‌ ಗವಾಸ್ಕರ್‌!

ಭಾರತ ವಿರುದ್ಧ ಬಾಯ್ಕಟ್‌ ನಿರ್ಧಾರವನ್ನು ಪಾಕ್‌ ಹಿಂಪಡೆಯಬಹುದು: ಗವಾಸ್ಕರ್‌

“ಮುಂದಿನ ಎರಡರಿಂದ ನಾಲ್ಕು ದಿನಗಳಲ್ಲಿ ವಿಶ್ವದ ವಿವಿಧ ಭಾಗಗಳಿಂದ ಪ್ರತಿಕ್ರಿಯೆಗಳು ಬಂದಾಗ, ತಮ್ಮದೇ ಕ್ರಿಕೆಟಿಗರು ಮತ್ತು ಮಾಜಿ ಕ್ರಿಕೆಟಿಗರ ಪ್ರತಿಕ್ರಿಯೆಗಳು ಬಂದಾಗ, ಪಾಕಿಸ್ತಾನ ತಂಡ, ಭಾರತದ ವಿರುದ್ಧ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವನ್ನು ಬಹಿಷ್ಕರಿಸಿರುವ ನಿರ್ಧಾರವನ್ನು ಕೈ ಬಿಡಬಹುದು,” ಎಂದು ಸುನೀಲ್ ಗವಾಸ್ಕರ್ ಆಜ್‌ ತಕ್‌ ಜತೆ ಮಾತನಾಡುವಾಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕ್‌ ಕ್ರಿಕೆಟಿಗರು ಈ ಹಿಂದೆ ಇದೇ ರೀತಿ ನಡೆದುಕೊಂಡಿದ್ದರು

“ನಾವು ಮೊದಲು ನೋಡಿದ್ದೇವೆ, ಪಾಕಿಸ್ತಾನ ಕ್ರಿಕೆಟಿಗರು ನಿವೃತ್ತಿ ಘೋಷಿಸುತ್ತಾರೆ, ಆದರೆ ಕೆಲವೇ ದಿನಗಳಲ್ಲಿ ಅದನ್ನು ವಾಪಸ್‌ ಪಡೆದಿದ್ದಾರೆ. ನಂತರ ಅವರು, ʻಓಹ್‌, ನಮ್ಮ ಅನೇಕ ಅಭಿಮಾನಿಗಳು ನೀವು ಆಟವನ್ನು ಮುಂದುವರಿಸಬೇಕು ಎಂದು ಕೇಳಿದ್ದಾರೆ,’ ಎಂದು ಹೇಳಿದ್ದರು. ಹೀಗಾಗಿ ಭಾರತದ ವಿರುದ್ಧದ ಪಂದ್ಯಕ್ಕೂ ಇದೇ ಸಂಭವಿಸಬಹುದು. ತಮ್ಮ ದೇಶದ ಜನರು ಭಾರತದ ಪಂದ್ಯವನ್ನು ಬಾಯ್ಕಾಟ್ ಮಾಡುವ ನಿರ್ಧಾರವನ್ನು ಪ್ರಶ್ನಿಸಬಹುದು, ನಂತರ ಅವರು ಮೂಲ ನಿರ್ಧಾರವನ್ನು ಬದಲಿಸಬಹುದು. ಅವರ ಕ್ರಿಕೆಟಿಗರು ಉದಾಹರಣೆ ಸೃಷ್ಠಿಸಿದ್ದಾರೆ ಮತ್ತು ಇದೇ ಘಟನೆ ಇಲ್ಲಿ ಕೂಡ ಸಂಭವಿಸಬಹುದು,” ಬ್ಯಾಟಿಂಗ್‌ ದಿಗ್ಗಜ ಹೇಳಿದ್ದಾರೆ.

ಇಶಾನ್‌ ಮಾಲಿಂಗಾಗೆ ಭುಜದ ಗಾಯ; ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ!

ಪಾಕ್‌ ತಂಡವನ್ನು ನಿಷೇಧಿಸಬಹುದು: ವರದಿ

ಇದರ ನಡುವೆ, ಪಾಕ್‌ ಈ ನಿರ್ಧಾರವನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು, ಪಾಕಿಸ್ತಾನ ತಂಡವನ್ನು ಯಾವುದೇ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಲು ಯೋಚಿಸುತ್ತಿದೆ. ಮಾಧ್ಯಮಗಳಲ್ಲಿ ಹರಡುತ್ತಿರುವ ಹಲವು ವರದಿಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಸಾಮಾನ್ಯ ನಿಲುವಿನ ಹಿನ್ನೆಲೆಯಲ್ಲಿ ಇತರ ಸದಸ್ಯ ಮಂಡಳಿಗಳೂ ಅಸಮಾಧಾನ ವ್ಯಕ್ತಪಡಿಸಿವೆ. ಪಿಸಿಬಿ ಸೃಷ್ಟಿಸಿದ ಗಲಾಟೆ, ಸಂಪೂರ್ಣವಾಗಿ ಅನಗತ್ಯವಾದದ್ದು, ತಂಡವು ಭವಿಷ್ಯದಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದರಿಂದ ನಿಷೇಧಿತವಾಗುವ ಸಂಭವವನ್ನು ಹುಟ್ಟಿಸಬಹುದು.