ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2027ರ ಒಡಿಐ ವಿಶ್ವಕಪ್‌ ಆಡ್ತಿರಾ? ಎಂಬ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ ವಿರಾಟ್‌ ಕೊಹ್ಲಿ!

ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಸದ್ಯ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಅವರು 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸುತ್ತಿದ್ದಾರೆ. ಈ ಬಗ್ಗೆ ಆರ್‌ಸಿಬಿ ದಿಗ್ಗಜ ಪ್ರತಿಕ್ರಿಯೆ ನೀಡಿದ್ದಾರೆ.

2027ರ ಒಡಿಐ ವಿಶ್ವಕಪ್‌ ಆಡುವ ಬಗ್ಗೆ ವಿರಾಟ್‌ ಕೊಹ್ಲಿ ಪ್ರತಿಕ್ರಿಯೆ!

2027ರ ಒಡಿಐ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ವಿರಾಟ್‌ ಕೊಹ್ಲಿ ಪ್ರತಿಕ್ರಿಯೆ. -

Profile
Ramesh Kote May 15, 2026 8:52 PM

ನವದೆಹಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿರುವ ಭಾರತ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli),ಇದೀಗ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಅವರು 2027ರ ಐಸಿಸಿ ಏಕದಿನ ವಿಶ್ವಕಪ್‌ (ICC ODI World Cup 2027) ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಕೊಹ್ಲಿ ಮಾತ್ರವಲ್ಲ, ರೋಹಿತ್‌ ಶರ್ಮಾ ಕೂಡ ಇದೇ ಯೋಜನೆಯಲ್ಲಿದ್ದಾರೆ. ಇದೀಗ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಅತ್ಯುತ್ತಮ ಲಯದಲ್ಲಿರುವ ಕೊಹ್ಲಿ, ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ತಮ್ಮ ಫಿಟ್ನೆಸ್‌ ಹಾಗೂ ಬ್ಯಾಟಿಂಗ್‌ ಲಯವನ್ನು ಗಮನಿಸಿದರೆ ವಿರಾಟ್‌ ಕೊಹ್ಲಿ ಮುಂದಿನ ಏಕದಿನ ವಿಶ್ವಕಪ್‌ ಆಡುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಬಗ್ಗೆ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್‌ ಕೊಹ್ಲಿ ತಮ್ಮ ದೀರ್ಘಾವಧಿ ವೃತ್ತಿ ಜೀವನದಲ್ಲಿ ಎರಡು ಐಸಿಸಿ ಚಾಂಪಿಯನ್ಸ್‌ ಟ್ರೋಫಿ, ಒಂದು ಐಸಿಸಿ ಏಕದಿನ ವಿಶ್ವಕಪ್‌, ಒಂದು ಟಿ20 ವಿಶ್ವಕಪ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಒಂದು ಐಪಿಎಲ್‌ ಟ್ರೋಫಿಯನ್ನು ಗೆದ್ದಿದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಇನ್ನು ಕೇವಲ ಒಂದೂವರೆ ವರ್ಷ ಅವಧಿ ಸಮಯವಿದೆ. ಈ ಟೂರ್ನಿಯಲ್ಲಿಯೂ ವಿರಾಟ್‌ ಕೊಹ್ಲಿ ಆಡುವುದು ಬಹುತೇಕ ಖಚಿತ ಎಂದು ಕ್ರಿಕೆಟ್‌ ಪಂಡಿತರು ಹಾಗೂ ಅಭಿಮಾನಿಗಳು ನೆರವಾಗಿ ಹೇಳುತ್ತಾರೆ. ಆದರೆ, ಇತ್ತೀಚೆಗೆ ವಿರಾಟ್‌ ಕೊಹ್ಲಿ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು ಹಾಗೂ ಇಲ್ಲಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಕೊಹ್ಲಿ ಜಾಣತನದ ಉತ್ತರವನ್ನು ನೀಡಿದ್ದಾರೆ.

IPL 2026: ಪ್ರಿನ್ಸ್‌ ಯಾದವ್‌ಗೆ ಕ್ಲೀನ್‌ ಬೌಲ್ಡ್‌ ಆದ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ಕಿಂಗ್‌ ವಿರಾಟ್‌ ಕೊಹ್ಲಿ!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಎರಡು ಸ್ವರೂಪಗಳಿಂದ ಬೇರ್ಪಟ್ಟಿರುವ ವಿರಾಟ್‌ ಕೊಹ್ಲಿ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಾಗೂ 50 ಓವರ್‌ಗಳ ಸ್ವರೂಪದಲ್ಲಿ ಅವರ ಬ್ಯಾಟಿಂಗ್‌ ಪ್ರದರ್ಶನವನ್ನು ನೋಡಿದರೆ, ಅವರು ಇನ್ನೂ ತಮ್ಮ ವೃತ್ತಿ ಜೀವನದಲ್ಲಿ ಅಗ್ರ ದರ್ಜೆಯಲ್ಲಿ ಇರುವುದು ಕಂಡುಬರುತ್ತದೆ. ಇತ್ತೀಚೆಗೆ ಅವರು ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದರು.



ಏಕದಿನ ವಿಶ್ವಕಪ್‌ ತಂಡದ ಭಾಗವಾಗಲು ಇಷ್ಟಪಡುತ್ತೇನೆ: ಕೊಹ್ಲಿ

“2027ರ ವಿಶ್ವಕಪ್ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಈಗ ನಾವು ಇನ್ನೂ 2026ರ ಮಧ್ಯದಲ್ಲಿದ್ದೇವೆ. ‘ನೀವು 2027ರವರೆಗೆ ಆಡಲು ಬಯಸುತ್ತೀರಾ?’ ಎಂದು ಹಲವರು ನನ್ನನ್ನು ಕೇಳಿದ್ದಾರೆ. ನಾನು ನನ್ನ ಮನೆ ಬಿಟ್ಟು, ನನ್ನ ಎಲ್ಲಾ ವಸ್ತುಗಳನ್ನು ಇಲ್ಲಿಗೆ ತರಿಸಿಕೊಂಡು, ಆಡಲು ಬಯಸದೇ ಇರಲು ಸಾಧ್ಯವೇ? ಖಂಡಿತವಾಗಿಯೂ, ನಾನು ಆಡುತ್ತಿದ್ದರೆ ಭಾರತದ ಪರ ಆಡಲು ಬಯಸುತ್ತೇನೆ. ವಿಶ್ವಕಪ್ ತಂಡದ ಭಾಗವಾಗಲು ಇಷ್ಟಪಡುತ್ತೇನೆ. ಆದರೆ ಅದರಲ್ಲಿ ನನ್ನ ಮೌಲ್ಯ ಸ್ಪಷ್ಟವಾಗಿರಬೇಕು. ನನ್ನ ದೃಷ್ಟಿಕೋಣ ಏನೆಂದರೆ, ನಾನು ಇರುವ ತಂಡದ ವಾತಾವರಣಕ್ಕೆ ಮೌಲ್ಯವನ್ನು ಸೇರಿಸಬಲ್ಲೆ ಮತ್ತು ಆ ವಾತಾವರಣಕ್ಕೂ ನಾನು ಉಪಯುಕ್ತನೆಂದು ಅನಿಸಿದರೆ, ನಾನು ಮುಂದುವರಿಯುತ್ತೇನೆ,” ಎಂದು ವಿರಾಟ್‌ ಕೊಹ್ಲಿ ಇತ್ತೀಚಿನ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

IPL 2026: ನುವಾನ್‌ ತುಷಾರ ಸ್ಥಾನಕ್ಕೆ ಆರ್‌ಸಿಬಿಗೆ ಸೇರ್ಪಡೆಯಾದ ರಿಚರ್ಡ್‌ ಗ್ಲೀಸನ್‌ ಯಾರು?

ನನ್ನ ಆಟದ ಬಗ್ಗೆ ನಾನು ಸದಾ ಪ್ರಾಮಾಣಿಕವಾಗಿದ್ದೇನೆ

“ಆದರೆ ನಾನು ನನ್ನ ಮೌಲ್ಯ ಮತ್ತು ಸಾಮರ್ಥ್ಯವನ್ನು ನಿರಂತರವಾಗಿ ಸಾಬೀತುಪಡಿಸಬೇಕಾದ ಪರಿಸ್ಥಿತಿ ಬಂದರೆ, ನಾನು ಆ ಮನಸ್ಥಿತಿಯಲ್ಲಿ ಇರುವುದಿಲ್ಲ. ಏಕೆಂದರೆ ನನ್ನ ಸಿದ್ಧತೆ ಮತ್ತು ಆಟದ ಮೇಲಿನ ನನ್ನ ವಿಧಾನದ ಬಗ್ಗೆ ನಾನು ಸದಾ ಪ್ರಾಮಾಣಿಕನಾಗಿದ್ದೇನೆ. ನಾನು ಶಾಂತವಾಗಿ ನನ್ನ ಕೆಲಸ ಮಾಡುತ್ತೇನೆ, ಕಠಿಣ ಪರಿಶ್ರಮ ಪಡುತ್ತೇನೆ. ನನ್ನ ಕ್ರಿಕೆಟ್ ಜೀವನದಲ್ಲಿ ನನಗೆ ದೊರೆತ ಪ್ರತಿಯೊಂದು ಅವಕಾಶಕ್ಕೂ ದೇವರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ನನಗೆ ಸಿಕ್ಕ ಅವಕಾಶಗಳು ನನ್ನನ್ನು ಆಶೀರ್ವದಿಸಿದಂತಿವೆ ಎಂಬ ಭಾವನೆ ನನ್ನಲ್ಲಿದೆ,” ಎಂದು ಆರ್‌ಸಿಬಿ ದಿಗ್ಗಜ ತಿಳಿಸಿದ್ದಾರೆ.