IND vs AUS: ಭಾರತ ತಂಡದಲ್ಲಿರುವ ಸವಾಲುದಾಯಕ ಆಟಗಾರನನ್ನು ಹೆಸರಿಸಿದ ಮಿಚೆಲ್ ಮಾರ್ಷ್!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20ಐ ಸರಣಿಯ ಆರಂಭಕ್ಕೆ ಒಂದು ದಿನ ಬಾಕಿ ಇದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ, ಆಸ್ಟ್ರೇಲಿಯಾ ತಂಡಕ್ಕೆ ಸವಾಲುದಾಯಕವಾಗಿದ್ದಾರೆಂದು ಆಸೀಸ್ ನಾಯಕ ಮಿಚೆಲ್ ಮಾರ್ಷ್ ಹೇಳಿದ್ದಾರೆ.
ಅಭಿಷೇಕ್ ಶರ್ಮಾರ ಸವಾಲಿಗೆ ಸಿದ್ದರಿದ್ದೇವೆಂದ ಮಿಚೆಲ್ ಮಾರ್ಷ್. -
ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಅವರನ್ನು ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ (Mitchell Marsh) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಐದು ಪಂದ್ಯಗಳ ಈ ಟಿ20ಐ ಸರಣಿಯಲ್ಲಿ (IND vs AUS) ಅಭಿಷೇಕ್ ಶರ್ಮಾ ಎದುರು ನಮ್ಮ ತಂಡಕ್ಕೆ ಪರೀಕ್ಷೆ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ. ಇಂಡೋ ಹಾಗೂ ಆಸೀಸ್ ನಡುವಣ ಮೊದಲನೇ ಟಿ20ಐ ಪಂದ್ಯ ಅಕ್ಟೋಬರ್ 29 ರಂದು ಕ್ಯಾನ್‌ಬೆರಾದಲ್ಲಿ ನಡೆಯಲಿದೆ. ಈ ಪಂದ್ಯದ ಮೂಲಕ ಟಿ20ಐ ಸರಣಿ ಆರಂಭವಾಗಲಿದೆ.
ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಅಭಿಷೇಕ್ ಶರ್ಮಾ, ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಅದೇ ಲಯವನ್ನು ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯಲ್ಲಿ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಅಂದ ಹಾಗೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಬಲ್ಲ ಅಭಿಷೇಕ್ ಶರ್ಮಾ ಅವರು ನಮ್ಮ ತಂಡದ ಬೌಲರ್‌ಗಳಿಗೆ ಪರೀಕ್ಷಯನ್ನು ತಂದೊಡ್ಡಲಿದ್ದಾರೆಂದು ತಿಳಿಸಿದ್ದಾರೆ.
AUS vs IND 1st T20I: ಆಸೀಸ್ ಎದುರಿನ ಮೊದಲ ಟಿ20ಗೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ
ಅಭಿಷೇಕ್ ಶರ್ಮಾ ಸವಾಲುದಾಯಕ ಆಟಗಾರ: ಮಿಚೆಲ್ ಮಾರ್ಷ್
"ಅಭಿಷೇಕ್ ಶರ್ಮಾ ಅವರು ಅಸಾಧಾರಣ ಪ್ರತಿಭೆಯಾಗಿದ್ದಾರೆ ಹಾಗೂ ಭಾರತ ತಂಡಕ್ಕೆ ಅದ್ಭುತ ಆರಂಭವನ್ನು ತಂದುಕೊಡಲಿದ್ದಾರೆ. ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿಯೂ ಅಸಾಧಾರಣ ಪ್ರದರ್ಶನವನ್ನು ತೋರಿದ್ದರು. ಅವರ ಎದುರು ನಮಗೆ ಖಂಡತವಾಗಿಯೂ ಸವಾಲು ಎದುರಾಗಲಿದೆ ಹಾಗೂ ನಮಗೆ ಬೇಕಾಗಿರುವುದು ಕೂಡ ಇದೇ. ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಎದುರು ನಿಮಗೆ ಯಾವಾಗಲೂ ಪರೀಕ್ಷೆ ಎದುರಾಗಲಿದೆ. ನಾವು ಇದನ್ನು ಎದುರು ನೋಡುತ್ತಿದ್ದೇವೆ," ಎಂದು ಸುದ್ದಿಗೋಷ್ಠಿಯಲ್ಲಿ ಮಿಚೆಲ್ ಮಾರ್ಷ್ ಹೇಳಿದ್ದಾರೆ.
ಟಿ20ಐ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅಭಿಷೇಕ್ ಶರ್ಮಾ ಭಯಾನಕ ಆರಂಭವನ್ನು ಪಡೆದುಕೊಂಡಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 23 ಇನಿಂಗ್ಸ್‌ಗಳಿಂದ 36.91ರ ಸರಾಸರಿಯಲ್ಲಿ ಎರಡು ಶತಕಗಳು ಹಾಗೂ ಐದು ಅರ್ಧಶತಕಗಳ ಮೂಲಕ 849 ರನ್‌ಗಳನ್ನು ಬಾರಿಸಿದ್ದಾರೆ. ಅವರು ಸದ್ಯ ಐಸಿಸಿ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮಾ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಸದ್ಯ 926 ಪಾಯಿಂಟ್ಸ್ ಹೊಂದಿದ್ದಾರೆ.
AUS vs IND 1st T20I: ಮೊದಲ ಟಿ20 ಪಂದ್ಯದ ಟೀಮ್ ಕಾಂಬಿನೇಷನ್ ತಿಳಿಸಿದ ಸೂರ್ಯಕುಮಾರ್
ಜಾಶ್ ಇಂಗ್ಲಿಸ್ ಲಭ್ಯತೆ ಬಗ್ಗೆ ಮಾರ್ಷ್ ಮಾಹಿತಿ
ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಾಶ್ ಇಂಗ್ಲಿಸ್ ಅವರು ಟಿ20ಐ ಸರಣಿಗೆ ಲಭ್ಯರಾಗಲಿದ್ದಾರೆಂದು ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಸ್ಪಷ್ಟಪಡಿಸಿದ್ದಾರೆ. ಗಾಯದ ಕಾರಣ ಈ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಿಂದ ಜಾಶ್ ಇಂಗ್ಲಿಸ್ ಹೊರ ನಡೆದಿದ್ದಾರೆ.
"ಜಾಶ್ ಇಂಗ್ಲಿಸ್ ಅವರು ಸದ್ಯ ಫಿಟ್ ಆಗಿದ್ದು, ಈ ಸರಣಿಗೆ ಲಭ್ಯರಾಗಿದ್ದಾರೆ. ಅವರನ್ನು ತಂಡದಲ್ಲಿ ಹೊಂದಿರುವುದು ನಮಗೆ ಸಂತೋಷವಾಗಿದೆ ಹಾಗೂ ಅವರು ನಮಗೆ ತುಂಬಾ ಮುಖ್ಯವಾದ ಆಟಗಾರರಾಗಿದ್ದಾರೆ. ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ಒಬ್ಬ ಆಟಗಾರನನ್ನು ನಾವು ಹಿಂಬಾಲಿಸುತ್ತಿದ್ದೆವು ಹಾಗೂ ಅವರು ಈ ಸರಣಿಯಲ್ಲಿ ಆಡಲು ಸಿದ್ದರಾಗಿದ್ದಾರೆ," ಎಂದು ಮಿಚೆಲ್ ಮಾರ್ಷ್ ತಿಳಿಸಿದ್ದಾರೆ.