ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS 2nd T20I: ಆಸ್ಟಿನ್ ಗೌರವಾರ್ಥ; ಪಂದ್ಯಕ್ಕೂ ಮುನ್ನ ಮೆಲ್ಬರ್ನ್‌ ಸ್ಟೇಡಿಯಂನಲ್ಲಿ ಒಂದು ನಿಮಿಷ ಮೌನಾಚರಣೆ

ಮೆಲ್ಬರ್ನ್‌ ಮೈದಾನದ ದೈತ್ಯ ಪರದೆಗಳಾದ್ಯಂತ ಬೆನ್‌ನ ಚಿತ್ರವನ್ನು ಪ್ರದರ್ಶಿಸಲಾಯಿತು, ಅದರಲ್ಲಿ ಕ್ಲಬ್ ಬಣ್ಣಗಳಲ್ಲಿ ನಗುತ್ತಿರುವ ಹದಿಹರೆಯದವರನ್ನು ತೋರಿಸಲಾಯಿತು. ಮೌನಚರಣೆ ಕೊನೆಗೊಂಡಂತೆ, ಬೆನ್‌ನ ನೆಚ್ಚಿನ ಹಾಡುಗಳಲ್ಲಿ ಒಂದನ್ನು ನುಡಿಸಿದರು. ಈ ವೇಳೆ ನೆರದಿದ್ದ ಪ್ರೇಕ್ಷಕರು ಮತ್ತು ಆಟಗಾರರು ಭಾವುಕರಾದದ್ದು ಕಂಡುಬಂದಿತು.

ಅಗಲಿದ ಯುವ ಕ್ರಿಕೆಟಿಗ ಆಸ್ಟಿನ್‌ಗೆ ಮೆಲ್ಬರ್ನ್‌ ಮೈದಾನದಲ್ಲಿ ಗೌರವ

-

Abhilash BC Abhilash BC Oct 31, 2025 4:05 PM

ಮೆಲ್ಬರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20(IND vs AUS 2nd T20I) ಪಂದ್ಯದ ವೇಳೆ, ತರಬೇತಿಯ ಸಮಯದಲ್ಲಿ ಕ್ರಿಕೆಟ್ ಚೆಂಡು ಬಡಿದು ದುರಂತವಾಗಿ ಸಾವನ್ನಪ್ಪಿದ 17 ವರ್ಷದ ವಿಕ್ಟೋರಿಯನ್ ಕ್ರಿಕೆಟಿಗ ಬೆನ್ ಆಸ್ಟಿನ್(Ben Austin) ಅವರಗೆ ಉಭಯ ತಂಡಗಳ ಆಟಗಾರರು ಶ್ರದ್ಧಾಂಜಲಿ ಸಲ್ಲಿಸಿದರು. ಪಂದ್ಯ ಆರಂಭಕ್ಕೆ ಮೊದಲು ಒಂದು ನಿಮಿಷ ಮೌನ ಆಚರಿಸಿದರು. ಎರಡೂ ತಂಡಗಳ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದರು.

ಮೆಲ್ಬರ್ನ್‌ ಮೈದಾನದ ದೈತ್ಯ ಪರದೆಗಳಾದ್ಯಂತ ಬೆನ್‌ನ ಚಿತ್ರವನ್ನು ಪ್ರದರ್ಶಿಸಲಾಯಿತು, ಅದರಲ್ಲಿ ಕ್ಲಬ್ ಬಣ್ಣಗಳಲ್ಲಿ ನಗುತ್ತಿರುವ ಹದಿಹರೆಯದವರನ್ನು ತೋರಿಸಲಾಯಿತು. ಮೌನಚರಣೆ ಕೊನೆಗೊಂಡಂತೆ, ಬೆನ್‌ನ ನೆಚ್ಚಿನ ಹಾಡುಗಳಲ್ಲಿ ಒಂದನ್ನು ನುಡಿಸಿದರು. ಈ ವೇಳೆ ನೆರದಿದ್ದ ಪ್ರೇಕ್ಷಕರು ಮತ್ತು ಆಟಗಾರರು ಭಾವುಕರಾದದ್ದು ಕಂಡುಬಂದಿತು.



ಕಳೆದ ಮಂಗಳವಾರ ಬೆನ್ ಆಸ್ಟಿನ್ ಫರ್ನ್‌ಟ್ರೀ ಗಲ್ಲಿಯಲ್ಲಿ ನೆಟ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಗ ಅವರ ಕುತ್ತಿಗೆಗೆ ಚೆಂಡು ತಗುಲಿತ್ತು. ಹೆಲ್ಮೆಟ್ ಧರಿಸಿದ್ದರೂ, ಅವರು ನೆಕ್ ಗಾರ್ಡ್ ಬಳಸುತ್ತಿರಲಿಲ್ಲ. ಹೀಗಾಗಿ ಅವರ ಕುತ್ತಿಗೆಗೆ ಚೆಂಡು ತಗುಲಿತ್ತು. 2014 ರಲ್ಲಿ ಫಿಲಿಪ್ ಹ್ಯೂಸ್ ಕೂಡ ಇದೇ ರೀತಿ ಚೆಂಡು ತಗುಲಿ ಸಾವನ್ನಪ್ಪಿದ್ದರು.

ಗುರುವಾರ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ವೇಳೆಯೂ ಆಟಗಾರ್ತಿಯರೂ ಹಾಗೂ ಪಂದ್ಯ ಅಂಪೈರ್‌ಗಳು ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದ್ದರು.

ಇದನ್ನೂ ಓದಿ Manuel Frederick: ಒಲಿಂಪಿಕ್ ಪದಕ ವಿಜೇತ, ಹಾಕಿ ಆಟಗಾರ ಫ್ರೆಡೆರಿಕ್ ನಿಧನ

ಅಲ್ಪ ಮೊತ್ತಕ್ಕೆ ಕುಸಿದ ಭಾರತ

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 18.4 ಓವರ್‌ಗಳಲ್ಲಿ 125 ರನ್‌ಗೆ ಆಲೌಟ್‌ ಆಯಿತು. ಭಾರತ ಪರ ಅಭಿಷೇಕ್‌ ಶರ್ಮ ಮತ್ತು ಹರ್ಷಿತ್‌ ರಾಣಾ ಹೊರತುಪಡಿಸಿ ಉಳಿದವರೆಲ್ಲ ಒಂದಂಕಿಗೆ ಔಟಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಆಸೀಸ್‌ ಪರ ಘಾತಕ ಬೌಲಿಂಗ್‌ ನಡೆಸಿದ ಜೋಶ್‌ ಹ್ಯಾಜಲ್‌ವುಡ್‌ 3 ವಿಕೆಟ್‌ ಕಿತ್ತರೆ, ಜೇವಿಯರ್ ಬಾರ್ಟ್ಲೆಟ್ ಮತ್ತು ನಥಾನ್‌ ಎಲ್ಲಿಸ್‌ ತಲಾ ಎರಡು ವಿಕೆಟ್‌ ಕಿತ್ತರು.

37 ಎಸೆತ ಎದುರಿಸಿದ ಅಭಿಷೇಕ್‌ ಶರ್ಮ 8 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 68 ರನ್‌ ಬಾರಿಸಿದರು. ಹರ್ಷಿತ್‌ ರಾಣ 3 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿ 35 ರನ್‌ ಗಳಿಸಿದರು. ಇವರಿಬ್ಬರ ಸಣ್ಣ ಬ್ಯಾಟಿಂಗ್‌ ಹೋರಾಟದ ಫಲವಾಗಿ ಭಾರತ 100ರ ಗಡಿ ದಾಟುವಂತಾಯಿತು.