IND vs ENG: ʻನಾವೆಂದಿಗೂ ಶರಣಾಗುವುದಿಲ್ಲʼ-ಎದುರಾಳಿ ತಂಡಗಳಿಗೆ ಗೌತಮ್ ಗಂಭೀರ್ ವಾರ್ನಿಂಗ್!
ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-2 ಸಮಬಲ ಸಾಧಿಸಿತು. ಪಂದ್ಯದ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್, ಎದುರಾಳಿ ತಂಡಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಭಾರತ ತಂಡವನ್ನು ಶ್ಲಾಘಿಸಿದ ಗೌತಮ್ ಗಂಭೀರ್.

ಲಂಡನ್: ಅತ್ಯಂತ ತೀವ್ರ ರೋಚಕತೆಯಿಂದ ಕೂಡಿದ್ದ ಇಂಗ್ಲೆಂಡ್ ವಿರುದ್ಧದ ಐದನೇ(IND vs ENG) ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ ಕೇವಲ 6 ರನ್ ಗೆಲುವು ಸಾಧಿಸಿತು. ಆ ಮೂಲಕ ಸರಣಿ ಸೋಲಿನಿಂದ ತಪ್ಪಿಸಿಕೊಂಡಿತು. 2-2 ಅಂತರದಲ್ಲಿ ಸರಣಿಯನ್ನು ಸಮಬಲ ಮಾಡಿಕೊಂಡಿತು. ಓವಲ್ ಟೆಸ್ಟ್ ಮುಗಿದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಅವರು, ಇಂಗ್ಲೆಂಡ್ ಸೇರಿದಂತೆ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಇದರ ಜೊತೆಗೆ ಶುಭಮನ್ ಗಿಲ್ Shubman Gill) ನಾಯಕತ್ವದ ಭಾರತ ತಂಡವನ್ನು ಗುಣಗಾನ ಮಾಡಿದ್ದಾರೆ.
ಇಲ್ಲಿನ ಕೆನಿಂಗ್ಟನ್ ಓವಲ್‌ನಲ್ಲಿ ಸೋಮವಾರ ಅಂತ್ಯವಾದ ಪಂದ್ಯದಲ್ಲಿ ಭಾರತ ತಂಡ ಸೋಲುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಏಕೆಂದರೆ ಭಾರತ ನೀಡಿದ್ದ 374 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಇಂಗ್ಲೆಂಡ್ ತಂಡ, ನಾಲ್ಕನೇ ದಿನದಾಟದ ಅಂತ್ಯಕ್ಕೆ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಅವರ ಶತಕಗಳ ಬಲದಿಂದ 6 ವಿಕೆಟ್ ನಷ್ಟಕ್ಕೆ 339 ರನ್‌ಗಳನ್ನು ಕಲೆ ಹಾಕಿತ್ತು ಹಾಗೂ ಐದನೇ ದಿನ ಪಂದ್ಯವನ್ನು ಗೆಲ್ಲಲು ಆಂಗ್ಲರಿಗೆ 35 ರನ್ ಅಗತ್ಯವಿತ್ತು. ಕ್ರೀಸ್‌ನಲ್ಲಿ ಇನ್‌ಫಾರ್ಮ್ ಬ್ಯಾಟರ್ ಜೇಮಿ ಸ್ಮಿತ್ ಇದ್ದರು.
IND vs ENG: 'ಸರಣಿ 2-2, ಪ್ರದರ್ಶನ 10/10'- ಭಾರತ ತಂಡಕ್ಕೆ ಸಚಿನ್ ವಿಶೇಷ ಸಂದೇಶ!
ಆದರೆ, ಐದನೇ ದಿನ ನಡೆದಿದ್ದೆ ಬೇರೆ. ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಿದರು. ಅವರು ಜೇಮಿ ಸ್ಮಿತ್ ಸೇರಿದಂತೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಕನ್ನಡಿಗ ಪ್ರಸಿಧ್ ಕೃಷ್ಣ ಕೂಡ ಒಂದು ವಿಕೆಟ್ ಕಿತ್ತು ಸಿರಾಜ್‌ಗೆ ಸಾಥ್ ನೀಡಿದ್ದರು. ಅಂತಿಮವಾಗಿ ಭಾರತ ತಂಡ 6 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಭಾರತ ತಂಡ ಟೆಸ್ಟ್ ಸರಣಿಯನ್ನು 2-2 ಸಮಬಲ ಸಾಧಿಸಿತು. ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಶುಭಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IND vs ENG: 5 ವಿಕೆಟ್ ಕಿತ್ತ ತಮ್ಮ ಬೌಲಿಂಗ್ ಪ್ಲ್ಯಾನ್ ರಿವೀಲ್ ಮಾಡಿದ ಮೊಹಮ್ಮದ್ ಸಿರಾಜ್!
ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ ಗೌತಮ್ ಗಂಭೀರ್
ತಮ್ಮ ಎಕ್ಸ್ ಖಾತೆಯಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಭಾರತ ತಂಡದ ಆಟಗಾರರನ್ನು ಹೊಗಳಿಸದರು ಹಾಗೂ ನಾವು ಎಂದಿಗೂ ಶರಣಾಗುವುದಿಲ್ಲ ಎಂದು ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ. "ನಾವು ಕೆಲವು ಪಂದ್ಯಗಳನ್ನು ಗೆಲ್ಲುತ್ತೇವೆ, ಕೆಲವು ಪಂದ್ಯಗಳಲ್ಲಿ ಸೋಲುತ್ತೇವೆ. ಆದರೆ, ನಾವು ಎಂದಿಗೂ ಶರಣಾಗುವುದಿಲ್ಲ. ಚೆನ್ನಾಗಿ ಆಡಿದ್ದೀರಿ ಬಾಯ್ಸ್!," ಎಂದು ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ.
We’ll win some, we’ll lose some…. but we’ll NEVER surrender! 🇮🇳 Well done boys! pic.twitter.com/lZ5pk4C4A5
— Gautam Gambhir (@GautamGambhir) August 4, 2025
IND vs ENG: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿ ಕಾಡುತ್ತಿದೆ ಎಂದ ಕೆಎಲ್ ರಾಹುಲ್!
ಶುಭಮನ್ ಗಿಲ್ ಹೇಳಿದ್ದೇನು?
"ನಮ್ಮದು ಯುವ ತಂಡ, ಆದರೆ ನಮ್ಮನ್ನು ಯುವ ತಂಡವಾಗಿ ನಾವು ನೋಡಬಾರದು. ಆದರೆ, ಗನ್ ಟೀಮ್ ರೀತಿ ನೀವು ನೋಡಬೇಕು ಎಂದು ಈ ಸರಣಿಗೂ ಮುನ್ನ ಗೌತಿ ಭಾಯ್ ಹೇಳಿದ್ದರು. ನಮ್ಮದು ಗನ್ ತಂಡವೆಂದು ಸಾಮರ್ಥ್ಯವೆಂಬುದನ್ನು ನಾವು ಇಂದು ತೋರಿಸಿದ್ದೇವೆ," ಎಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ತಿಳಿಸಿದ್ದಾರೆ.