ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತ ಟೆಸ್ಟ್‌ ತಂಡದಲ್ಲಿ ಶಮಿಗೆ ಸ್ಥಾನ ನೀಡದೇ ಇರಲು ಕಾರಣ ತಿಳಿಸಿದ ಅಜಿತ್‌ ಅಗರ್ಕರ್‌!

ಜೂನ್‌ 20 ರಂದು ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಗೆ 18 ಸದಸ್ಯರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮೇ 24 ರಂದು ಪ್ರಕಟಿಸಿದೆ. ಭಾರತ ಟೆಸ್ಟ್‌ ತಂಡದಲ್ಲಿ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರನ್ನು ಕೈ ಬಿಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಶಮಿಯನ್ನು ಕೈ ಬಿಟ್ಟಿರುವ ಬಗ್ಗೆ ಸ್ಪಷ್ಡನೆ ನೀಡಿದ್ದಾರೆ.

ಭಾರತ ಟೆಸ್ಟ್‌ ತಂಡದಿಂದ ಶಮಿಗೆ ಸ್ಥಾನ ನೀಡದ ಬಗ್ಗೆ ಅಗರ್ಕರ್ ಸ್ಪಷ್ಟನೆ!

ಭಾರತ ಟೆಸ್ಟ್‌ ತಂಡದಿಂದ ಶಮಿಯನ್ನು ಕೈ ಬಿಡಲು ಕಾರಣ ತಿಳಿಸಿದ ಅಗರ್ಕರ್‌.

Profile Ramesh Kote May 24, 2025 9:14 PM

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ (IND vs ENG) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ (ಮೇ 24) 18 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಯುವ ಬ್ಯಾಟ್ಸ್‌ಮನ್‌ ಶುಭಮನ್ ಗಿಲ್ ಅವರನ್ನು ಭಾರತ ತಂಡದ ಹೊಸ ಟೆಸ್ಟ್ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಭಾರತ ತಂಡದಲ್ಲಿ ಕೆಲ ಸ್ಟಾರ್‌ ಆಟಗಾರರನ್ನು ಕೈ ಬಿಡಲಾಗಿದೆ. ಟೆಸ್ಟ್‌ ತಂಡದ ಕೀ ವೇಗದ ಬೌಲರ್‌ ಮೊಹಮ್ಮದ್‌ ಶಮಿ (Mohammed Shami) ಅವರನ್ನು ಇಂಗ್ಲೆಂಡ್‌ ಪ್ರವಾಸದಿಂದ ಕೈ ಬಿಡಲಾಗಿದೆ. ಹಿರಿಯ ವೇಗಿಯನ್ನು ಏಕೆ ಕೈ ಬಿಡಲಾಗಿದೆ ಎಂದು ಚೀಫ್‌ ಸೆಲೆಕ್ಟರ್‌ ಬಹಿರಂಗಪಡಿಸಿದ್ದಾರೆ.

ಮೊಹಮ್ಮದ್ ಶಮಿ ಅವರನ್ನು ತಂಡಕ್ಕೆ ಏಕೆ ಆಯ್ಕೆ ಮಾಡಲಿಲ್ಲ ಎಂಬುದರ ಬಗ್ಗೆಯೂ ಅಗರ್ಕರ್ ಮಾಹಿತಿ ನೀಡಿದರು. ಶಮಿ ಅವರಿಗೆ ಏನೋ ಸಮಸ್ಯೆ ಇದೆ ಮತ್ತು ಟೆಸ್ಟ್ ಸರಣಿಗೆ ಅಗತ್ಯವಾದ ಕಾರ್ಯ ಭಾರವನ್ನು ಕಾಯ್ದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. "ಕಳೆದ ವಾರ ಅವರಿಗೆ ಸ್ವಲ್ಪ ತೊಂದರೆಯಾಯಿತು. ಅವರಿಗೆ ಕೆಲವು ಎಂಆರ್‌ಐ ಸ್ಕ್ಯಾನ್‌ಗಳು ಮಾಡಿಸಲಾಗಿದೆ. ಅವರು ಐದು ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ. ಅವರ ಕೆಲಸದ ಭಾರ ಇರಬೇಕಾದ ಮಟ್ಟದಲ್ಲಿದೆ ಎಂದು ನಾನು ಭಾವಿಸುವುದಿಲ್ಲ," ಎಂದು ತಿಳಿಸಿದ್ದಾರೆ.

India's Test Squad: ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ, ಶುಭಮನ್‌ ಗಿಲ್‌ ನೂತನ ನಾಯಕ!

"ವೈದ್ಯಕೀಯ ತಂಡ ಅವರು (ಶಮಿ) ಹೊರಗೆ ಇರುತ್ತಾರೆ ಎಂದು ಹೇಳಿದೆ. ಅವರು ತಂಡಕ್ಕೆ ಲಭ್ಯರಾಗಬಹುದೆಂದು ನಾನು ಭಾವಿಸಿದ್ದೆವು. ಆದರೆ, ಅವರು ಫಿಟ್ ಆಗಿಲ್ಲದಿದ್ದರೆ, ಕಾಯುವ ಬದಲು ಫಿಟ್ ಮತ್ತು ಲಭ್ಯವಿರುವ ಆಟಗಾರರನ್ನು ಆಯ್ಕೆ ಮಾಡಲು ನಾವು ಬಯಸುತ್ತೇವೆ," ಎಂದು ಹೇಳಿದ್ದಾರೆ.

ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿರುವುದು ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಶಮಿ ಒಬ್ಬ ಅನುಭವಿ ಬೌಲರ್ ಮತ್ತು ಕಳೆದ ಕೆಲವು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತ ತಂಡ ಖಂಡಿತವಾಗಿಯೂ ಅವರನ್ನು ಮಿಸ್ ಮಾಡಿಕೊಳ್ಳುತ್ತದೆ. ತಂಡದಲ್ಲಿ ಕೆಲವು ಹೊಸ ಮುಖಗಳನ್ನು ಕೂಡ ಸೇರಿಸಲಾಗಿದೆ. ಸಾಯಿ ಸುದರ್ಶನ್ ಮತ್ತು ನಿತೀಶ್ ರೆಡ್ಡಿ ಅವರಂತಹ ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ. ಇದು ಅವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಳ್ಳೆಯ ಅವಕಾಶ. ರಿಷಭ್ ಪಂತ್ ಮರಳಿರುವುದು ತಂಡಕ್ಕೆ ಒಳ್ಳೆಯ ಸುದ್ದಿ. ಪಂತ್ ಒಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಮತ್ತು ಪಂದ್ಯದ ಗತಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.

IND vs ENG: ಟೆಸ್ಟ್ ತಂಡದಿಂದ ಸರ್ಫರಾಝ್‌ ಖಾನ್‌ರನ್ನು ಕೈ ಬಿಡಲು ಕಾರಣ ತಿಳಿಸಿದ ಅಜಿತ್‌ ಅಗರ್ಕರ್‌!

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ

ಶುಭಮನ್ ಗಿಲ್ (ನಾಯಕ), ರಿಷಬ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದುಲ್‌ ಠಾಕೂರ್, ಪ್ರಸಿಧ್‌ ಕೃಷ್ಣ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಅರ್ಷದೀಪ್ ಸಿಂಗ್, ಆಕಾಶ್‌ ದೀಪ್‌, ಕುಲ್‌ದೀಪ್ ಯಾದವ್.