IND vs ENG: ಇಂಗ್ಲೆಂಡ್‌ಗೆ ಭಾರಿ ಹಿನ್ನಡೆ, ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಮಾರ್ಕ್ ವುಡ್ ಔಟ್!
Mark wood Likely to miss India Test Series: ಮೊಣಕಾಲು ಗಾಯದಿಂದ ಬಳಲುತ್ತಿರುವ ಇಂಗ್ಲೆಂಡ್ ತಂಡದ ವೇಗದ ಬೌಲರ್ ಮಾರ್ಕ್ ವುಡ್, ಜೂನ್ ತಿಂಗಳಲ್ಲಿ ಆರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರ ನಡೆಯುವ ಸಾಧ್ಯತೆ ಇದೆ. ಗಾಯದಿಂದ ಬಳಲುತ್ತಿರುವ ಮಾರ್ಕ್ ವುಡ್ ಮುಂದಿನ ನಾಲ್ಕು ತಿಂಗಳುಗಳ ಕಾಲ ಸ್ಪರ್ಧಾತ್ಮ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಮಾರ್ಕ್‌ವುಡ್ ಔಟ್.

ನವದೆಹಲಿ: ಮುಂದಿನ ಜೂನ್ ತಿಂಗಳಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ (IND vs ENG) ಇಂಗ್ಲೆಂಡ್ ತಂಡದ ವೇಗದ ಬೌಲರ್ ಮಾರ್ಕ್‌ವುಡ್ (Mark wood) ಹೊರಬೀಳುವ ಸಾಧ್ಯತೆ ಇದೆ. ಮೊಣಕಾಲು ಗಾಯದಿಂದ ಬಳಲುತ್ತಿರುವ ಮಾರ್ಕ್‌ವುಡ್ ಅವರು ಮುಂದಿನ ನಾಲ್ಕು ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಮಾರ್ಚ್ 13 ರಂದು ತಿಳಿಸಿದೆ. ಮಾರ್ಕ್‌ವುಡ್ ಅವರು ಇತ್ತೀಚೆಗೆ ಅಂತ್ಯವಾಗಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂಗ್ಲೆಂಡ್ ವೇಗದ ಬೌಲಿಂಗ್ ವಿಭಾಗದಲ್ಲಿ ಆಡಿಸಿದ್ದರು.
ಮಾರ್ಕ್‌ವುಡ್ ಅವರು ದೀರ್ಘಾವಧಿಯಿಂದ ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ವಾರದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಫೆಬ್ರವರಿ 26 ರಂದು ಅಫಘಾನಿಸ್ತಾನ ವಿರುದ್ಧ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಮಾರ್ಕ್‌ವುಡ್ ಅವರು ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೇವಲ 8 ಓವರ್‌ಗಳನ್ನು ಮಾತ್ರ ಬೌಲ್ ಮಾಡಲು ಶಕ್ತರಾಗಿದ್ದರು. ಅಂದ ಹಾಗೆ ಮಾರ್ಚ್ 1 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ.
IPL 2025: ಐಪಿಎಲ್ ಟೂರ್ನಿಯಿಂದ ಹ್ಯಾರಿ ಬ್ರೂಕ್ ಎರಡು ವರ್ಷ ನಿಷೇಧ! ಕಾರಣವೇನು?
ಜೂನ್ 20 ರಿಂದ ಆಗಸ್ಟ್ 4ರ ವರೆಗೆ ಇಂಗ್ಲೆಂಡ್ ವಿರುದ್ಧ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ಮೂಲಕ ಉಭಯ ತಂಡಗಳು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಯಣವನ್ನು ಆರಂಭಿಸಲಿವೆ. ಇಂಗ್ಲೆಂಡ್‌ನ ಬೇಸಿಗೆಯ ಆರಂಭಿಕ ಸರಣಿಯನ್ನು ಮಾರ್ಕ್‌ವುಡ್ ಕಳೆದುಕೊಳ್ಳಲಿದ್ದಾರೆಂದು ಹೇಳಿದ ಇಸಿಬಿ, ಜುಲೈ ಅಂತ್ಯದಲ್ಲಿ ಅವರು ಲಭ್ಯರಾಗಲಿದ್ದಾರೆಂದು ತಿಳಿಸಿದೆ. ಗಾಯದ ಕಾರಣ ಅವರು ಪ್ರಮುಖ ಸರಣಿಯನ್ನು ಕಳೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಮೊಣಕೈ ಗಾಯದಿಂದ ಅವರು ಕೆಲ ಸರಣಿಗಳನ್ನು ಕಳೆದುಕೊಂಡಿದ್ದರು.
🚨 We can provide an update on Mark Wood’s fitness following surgery.
— England Cricket (@englandcricket) March 13, 2025
Read more 👇
ಮಾರ್ಕ್‌ವುಡ್ ಹೇಳಿದ್ದೇನು?
"ಕಳೆದ ವರ್ಷದ ಆರಂಭದಿಂದ ಎಲ್ಲಾ ಸ್ವರೂಪಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ ನಂತರ ನಾನು ಇಷ್ಟು ದಿನ ಹೊರಗುಳಿದಿರುವುದಕ್ಕೆ ಬೇಸರ ತಂದಿದೆ. ಆದರೆ ಈಗ ನನ್ನ ಮೊಣಕಾಲು ಗಾಯವನ್ನು ಸರಿಪಡಿಸಿಕೊಂಡ ಬಳಿಕ ನಾನು ಮತ್ತೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಮರಳುತ್ತೇನೆಂಬ ವಿಶ್ವಾಸ ನನಗಿದೆ," ಎಂದು ಮಾರ್ಕ್ ವುಡ್ ಇಸಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನನಗೆ ಬೆಂಬಲ ನೀಡಿದ ಶಸ್ತ್ರಚಿಕಿತ್ಸಕ, ವೈದ್ಯರು, ಸಿಬ್ಬಂದಿ, ನನ್ನ ಇಂಗ್ಲೆಂಡ್ ತಂಡದ ಸದಸ್ಯರು ಮತ್ತು ತರಬೇತುದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅನುಮಾನವಿಲ್ಲದೆ ಅಭಿಮಾನಿಗಳಿಗೂ ಕೂಡ ಧನ್ಯವಾದ ಹೇಳುತ್ತೇನೆ. 2025ರಲ್ಲಿನ ನಮ್ಮ ಪಾಲಿನ ದೊಡ್ಡ ಸರಣಿಗಳಲ್ಲಿ ತಂಡಕ್ಕೆ ಕೊಡುಗೆ ನೀಡಲು ನಾನು ಮತ್ತೆ ಬರಲು ಎದುರು ನೋಡುತ್ತಿದ್ದೇನೆ," ಎಂದು ಮಾರ್ಕ್ ವುಡ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ 150ರ ಸಂಭ್ರಮ; ಆಸ್ಟ್ರೇಲಿಯಾ-ಇಂಗ್ಲೆಂಡ್ ಪಿಂಕ್ ಬಾಲ್ ಟೆಸ್ಟ್ ಆಯೋಜನೆ
ಇಂಗ್ಲೆಂಡ್‌ಗೆ ಭಾರಿ ಹಿನ್ನಡೆ
ಮಾರ್ಕ್‌ವುಡ್ ಅವರು 2021-22ರ ಸಾಲಿನಲ್ಲಿ ಆಡಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡದ ವಿರುದ್ದ ಐದು ವಿಕೆಟ್ ಕಿತ್ತಿದ್ದರು. 2024ರಲ್ಲಿನ ಭಾರತದ ಪ್ರವಾಸದ ಟೆಸ್ಟ್ ಸರಣಿಯ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಈಗಾಗಲೇ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಭಾರತದ ಟೆಸ್ಟ್ ಸರಣಿಯಿಂದ ಮಾರ್ಕ್‌ವುಡ್ ಅಲಭ್ಯರಾದರೆ, ಇಂಗ್ಲೆಂಡ್‌ಗೆ ಭಾರಿ ಹಿನ್ನಡೆಯಾಗಲಿದೆ.