ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಎರಡು ವಿಕೆಟ್‌ ಕಿತ್ತು ಅನಿಲ್‌ ಕುಂಬ್ಳೆ ದಾಖಲೆ ಮುರಿದ ಜಸ್‌ಪ್ರೀತ್‌ ಬುಮ್ರಾ!

ಇಂಗ್ಲೆಂಡ್‌ ವಿರುದ್ದ ಲಾರ್ಡ್ಸ್‌ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಕಬಳಿಸುವ ಮೂಲಕ ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಿಕೆಟ್‌ ಕಿತ್ತ ಭಾರತದ ಮೊದಲ ಬೌಲರ್‌ ಎನಿಸಿಕೊಂಡಿದ್ದಾರೆ. ಆ ಮೂಲಕ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.

IND vs ENG: ಅನಿಲ್‌ ಕುಂಬ್ಳೆ ದಾಖಲೆ ಮುರಿದ ಜಸ್‌ಪ್ರೀತ್‌ ಬುಮ್ರಾ!

ಅನಿಲ್‌ ಕುಂಬ್ಳೆ ದಾಖಲೆ ಮುರಿದ ಜಸ್‌ಪ್ರೀತ್‌ ಬುಮ್ರಾ.

Profile Ramesh Kote Jul 13, 2025 11:24 PM

ಲಂಡನ್: ಭಾರತದ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಟೆಸ್ಟ್ ಕ್ರಿಕೆಟ್‌ ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ (IND vs ENG) ದ್ವಿತೀಯ ಇನಿಂಗ್ಸ್‌ನಲ್ಲಿ ಸ್ಪಿನ್‌ ದಿಗ್ಗಜ ಅನಿಲ್ ಕುಂಬ್ಳೆ (Anil Kumble) ಅವರ ದಾಖಲೆಯನ್ನು ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಿಕೆಟ್‌ ಕಿತ್ತ ಭಾರತದ ಮೊದಲ ಬೌಲರ್‌ ಎನಿಸಿಕೊಂಡಿದ್ದಾರೆ. ಆ ಮೂಲಕ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಬುಮ್ರಾ, ದ್ವಿತೀಯ ಇನಿಂಗ್ಸ್‌ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಪಂದ್ಯದ ದ್ವಿತೀಯ ಇನಿಂಗ್ಸ್‌ ಆರಂಭವಾಗುವ ಮುನ್ನ ಬುಮ್ರಾ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 221 ವಿಕೆಟ್‌ಗಳನ್ನು ಪಡೆದಿದ್ದರು. ಅವರು ಕುಂಬ್ಳೆಗಿಂತ ಕೇವಲ ಒಂದು ವಿಕೆಟ್ ಹಿಂದಿದ್ದರು. ಆದರೆ, ಕ್ರಿಸ್ ವೋಕ್ಸ್ ನಂತರ ಬ್ರೈಡನ್ ಕಾರ್ಸ್‌ ಅವರನ್ನು ಔಟ್ ಮಾಡುವ ಮೂಲಕ ಅವರು ಈ ಮೈಲುಗಲ್ಲು ತಲುಪಿದರು. ಇದೀಗ ಜಸ್‌ಪ್ರೀತ್‌ ಬುಮ್ರಾ ಸೇನಾ ದೇಶಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 223 ವಿಕೆಟ್‌ಗಳನ್ನು ಹೊಂದಿದ್ದಾರೆ. ಕುಂಬ್ಳೆ 222 ವಿಕೆಟ್‌ಗಳನ್ನು ಪಡೆದಿದ್ದಾರೆ.

IND vs ENG 3rd Test: ಸಾಧರಣ ಮೊತ್ತಕ್ಕೆ ಇಂಗ್ಲೆಂಡ್‌ ಆಲ್‌ಔಟ್‌, ಭಾರತಕ್ಕೆ 193 ರನ್‌ ಗುರಿ!

ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ ಕಿತ್ತ ಭಾರತೀಯ ಬೌಲರ್‌ಗಳು

ಜಸ್‌ಪ್ರೀತ್‌ ಬುಮ್ರಾ: 223 ವಿಕೆಟ್‌ಗಳು

ಅನಿಲ್ ಕುಂಬ್ಳೆ: 222 ವಿಕೆಟ್‌ಗಳು

ಮೊಹಮ್ಮದ್ ಶಮಿ: 218 ವಿಕೆಟ್‌ಗಳು

ಜಾವಗಲ್ ಶ್ರೀನಾಥ್: 212 ವಿಕೆಟ್‌ಗಳು

ಕಪಿಲ್ ದೇವ್: 211 ವಿಕೆಟ್‌ಗಳು

ಕಪಿಲ್‌ ದೇವ್‌ ದಾಖಲೆ ಮುರಿದ ಬುಮ್ರಾ

ಜಸ್‌ಪ್ರೀತ್ ಬುಮ್ರಾ ಪ್ರಥಮ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಆ ಮೂಲಕ ಇಂಗ್ಲೆಂಡ್ ತಂಡವನ್ನು 387 ರನ್‌ಗಳಿಗೆ ಆಲೌಟ್ ಮಾಡಲು ಭಾರತಕ್ಕೆ ನೆರವು ನೀಡಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ಬುಮ್ರಾ, ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಇಂಗ್ಲೆಂಡ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

IND vs ENG: 8000 ರನ್‌ ಗಳಿಸಿ ಸಚಿನ್‌ ತೆಂಡೂಲ್ಕರ್‌ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಜೋ ರೂಟ್‌!

ಇಂಗ್ಲೆಂಡ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು

ಇಶಾಂತ್ ಶರ್ಮಾ: 15 ಪಂದ್ಯಗಳಲ್ಲಿ 51 ವಿಕೆಟ್‌ಗಳು

ಜಸ್‌ಪ್ರೀತ್ ಬುಮ್ರಾ: 11 ಪಂದ್ಯಗಳಲ್ಲಿ 49 ವಿಕೆಟ್‌ಗಳು

ಕಪಿಲ್ ದೇವ್: 13 ಪಂದ್ಯಗಳಲ್ಲಿ 43 ವಿಕೆಟ್‌ಗಳು

ಮೊಹಮ್ಮದ್ ಶಮಿ: 14 ಪಂದ್ಯಗಳಲ್ಲಿ 42 ವಿಕೆಟ್‌ಗಳು

ಅನಿಲ್ ಕುಂಬ್ಳೆ: 10 ಪಂದ್ಯಗಳಲ್ಲಿ 36 ವಿಕೆಟ್‌ಗಳು

IND vs ENG: ರಿಷಭ್‌ ಪಂತ್‌ ರನ್‌ಔಟ್‌ ಆದ ಬಗ್ಗೆ ಕೆಎಲ್‌ ರಾಹುಲ್‌ ಪ್ರತಿಕ್ರಿಯೆ!

ಗೆಲುವಿನ ಸನಿಹದಲ್ಲಿ ಭಾರತ ತಂಡ

ವಾಷಿಂಗ್ಟನ್‌ ಸುಂದರ್‌ ಸ್ಪಿನ್‌ ಮೋಡಿ ಹಾಗೂ ಜಸ್‌ಪ್ರೀತ್‌ ಬುಮ್ರಾ ಮತ್ತು ಮೊಹಮ್ಮದ್‌ ಸಿರಾಜ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಇಂಗ್ಲೆಂಡ್‌ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 192 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಭಾರತಕ್ಕೆ ಕೇವಲ 193 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 17.4 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 58 ರನ್‌ ಗಳಿಸಿದೆ. ಕೆಎಲ್‌ ರಾಹುಲ್‌ ಅಜೇಯ 33 ರನ್‌ ಗಳಿಸಿದ್ದು ಐದನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಭಾರತಕ್ಕೆ ಐದನೇ ದಿನ ಪಂದ್ಯವನ್ನು ಗೆಲ್ಲಲು ಇನ್ನೂ 135 ರನ್‌ ಅಗತ್ಯವಿದೆ. ಭಾರತದ ಕೈಯಲ್ಲಿ 6 ವಿಕೆಟ್‌ಗಳು ಬಾಕಿ ಇವೆ.