ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಇಂಗ್ಲೆಂಡ್‌ಗ ವಾರ್ನಿಂಗ್‌ ಕೊಟ್ಟ ಮಾರ್ನೆ ಮಾರ್ಕೆಲ್!

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಮಾರ್ನೆ ಮಾರ್ಕೆಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಮೊದಲನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಜಸ್‌ಪ್ರೀತ್‌ ಬುಮ್ರಾ ಅತ್ಯುತ್ತಮ ಲಯದಲ್ಲಿ ಕಾಣುತ್ತಿದ್ದಾರೆಂದು ಅವರು ಹೇಳಿದ್ದಾರೆ.

‌ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಇಂಗ್ಲೆಂಡ್‌ಗೆ ಮಾರ್ಕೆಲ್‌ ಎಚ್ಚರಿಕೆ!

ಜಸ್‌ಪ್ರೀತ್‌ ಬುಮ್ರಾರನ್ನು ಶ್ಲಾಘಿಸಿದ ಮಾರ್ಕೆಲ್.

Profile Ramesh Kote Jun 12, 2025 9:02 AM

ಲೀಡ್ಸ್‌: ಇಂಗ್ಲೆಂಡ್‌ ಪ್ರವಾಸದ (IND vs ENG) ನಿಮಿತ್ತ ಅಭ್ಯಾಸ ನಡೆಸುತ್ತಿರುವ ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಅವರನ್ನು ಟೀಮ್‌ ಇಂಡಿಯಾ ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ (Morne Morkel) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಬುಮ್ರಾ ಮೂರು ದಿನಗಳ ತರಬೇತಿಯಲ್ಲಿ ಅತ್ಯುತ್ತಮ ಶಕ್ತಿಯೊಂದಿಗೆ ಬೌಲ್‌ ಮಾಡುತ್ತಿದ್ದಾರೆ ಹಾಗೂ ಅದ್ಭುತ ಲಯದಲ್ಲಿದ್ದಾರೆಂದು ಅವರು ಶ್ಲಾಘಿಸಿದ್ದಾರೆ. 2025ರ ಐಪಿಎಲ್‌ ಟೂರ್ನಿಯಲ್ಲಿ (IPL 2025) ಕೆಲವೇ ಪಂದ್ಯಗಳನ್ನು ಆಡಿದ್ದ ಜಸ್‌ಪ್ರೀತ್‌ ಬುಮ್ರಾ ಫಾರ್ಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆಂದು ಹೇಳಿದ್ದವರಿಗೆ ಮಾರ್ಕೆಲ್‌ ತಿಡುಗೇಟು ನೀಡಿದ್ದಾರೆ.

"ಜಸ್‌ಪ್ರೀತ್‌ ಬುಮ್ರಾಗೆ ತನ್ನನ್ನು ತಾನು ಹೇಗೆ ಸಿದ್ಧಪಡಿಸಿಕೊಳ್ಳಬೇಕೆಂದು ತಿಳಿದಿದೆ; ಅವರಿಗೆ ಹೇಗೆ ತಯಾರಿ ನಡೆಸಬೇಕೆಂದು ತಿಳಿದಿದೆ. ಕಳೆದ ಮೂರು ದಿನಗಳಲ್ಲಿ ಚೆಂಡಿನ ಮೇಲಿನ ಶಕ್ತಿಯನ್ನು ನೋಡಿ ನಾನು ಬೆರಗಾಗಿದ್ದೆ. ಅದನ್ನು ನೋಡಲು ತುಂಬಾ ರೋಮಾಂಚನಕಾರಿಯಾಗಿದೆ. ಈ ಸಮಯದಲ್ಲಿ ಅವರ ದೇಹವು ಉತ್ತಮ ಸ್ಥಿತಿಯಲ್ಲಿರುವುದಕ್ಕೆ ನನಗೆ ಸಂತೋಷವಾಗಿದೆ," ಎಂದು ತಂಡದ ಮೊದಲ ಮೂರು ಅವಧಿಗಳಲ್ಲಿ ಬುಮ್ರಾ ಅವರನ್ನು ಗಮನಿಸಿದ ನಂತರ ಮಾರ್ನೆ ಮಾರ್ಕೆಲ್ ಈ ರೀತಿ ಹೇಳಿದ್ದಾರೆ.

IND vs ENG: ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಮಿಂಚಬಲ್ಲ ಭಾರತೀಯ ಆಟಗಾರರನ್ನು ಆರಿಸಿದ ಸೌರವ್‌ ಗಂಗೂಲಿ!

ಬುಮ್ರಾ ಅವರ ಬೆನ್ನಿನ ಗಾಯದ ಇತಿಹಾಸದ ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಅರಿವಿದೆ. ತಂಡ ನಿರ್ಗಮಿಸುವುದಕ್ಕೂ ಮುನ್ನ ಮುಖ್ಯ ಕೋಚ್ ಗೌತಮ್ ಗಂಭೀರ್, ಬುಮ್ರಾ ಅವರ ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ ಐದು ಟೆಸ್ಟ್‌ಗಳಲ್ಲಿ ಕೇವಲ ಮೂರನ್ನು ಮಾತ್ರ ಆಡುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಆದಾಗ್ಯೂ, ಅವರು ಯಾವ ಪಂದ್ಯಗಳನ್ನು ಆಡುತ್ತಾರೆ ಎಂಬುದರ ಕುರಿತು ತಂಡ, ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಸರಣಿಯ ಸ್ಥಿತಿ ಮತ್ತು ಬುಮ್ರಾ ಅವರ ದೈಹಿಕ ಸ್ಥಿತಿಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಬುಮ್ರಾರ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ತುಂಬಾ ಮುಖ್ಯ

ಈ ಬೇಸಿಗೆಯಲ್ಲಿ ಬುಮ್ರಾ ಅವರ ಕೆಲಸದ ಹೊರೆಯನ್ನು ನಿಭಾಯಿಸುವಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ಬುದ್ಧಿವಂತಿಕೆಯನ್ನು ಪ್ರದರ್ಶಿಸಿಲಿದೆ ಎಂದು ಭಾರತೀಯ ಬೌಲಿಂಗ್ ತರಬೇತುದಾರ ಪುನರುಚ್ಚರಿಸಿದ್ದಾರೆ. "ನಾವು ಅವರನ್ನು ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ರೀತಿ ನಿರ್ವಹಿಸುತ್ತೇವೆ. ಅವರು ನಮಗೆ ಪ್ರಮುಖ ಬೌಲರ್‌ ಆಗಿರುವ ಕಾರಣ ನಾವು ಅವರೊಂದಿಗೆ ಬುದ್ಧಿವಂತರಾಗಿರುತ್ತೇವೆ, ಆದರೆ ಮೊದಲ ಮೂರು ನೆಟ್ ಸೆಷನ್‌ಗಳ ವಿಷಯದಲ್ಲಿ, ಅವರು ಡ್ಯೂಕ್‌ ಚೆಂಡಿನೊಂದಿಗೆ ಬೌಲ್ ಮಾಡುವುದನ್ನು ನೋಡಲು ತುಂಬಾ ಉತ್ಸುಕರಾಗಿದ್ದೇವೆ‌," ಎಂದು ಮಾರ್ಕೆಲ್ ತಿಳಿಸಿದ್ದಾರೆ.

IND vs ENG: ʻಕೇವಲ 5 ವಿಕೆಟ್‌ ಅಗತ್ಯʼ-ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಜಸ್‌ಪ್ರೀತ್‌ ಬುಮ್ರಾ!

ಜೂನ್‌ 16 ರಂದು ಅಭ್ಯಾಸ ಪಂದ್ಯ

ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯದ ನಿಮಿತ್ತ ಭಾರತ ತಂಡ ಜೂನ್ 16 ರಂದು ಬೆಕೆನ್‌ಹ್ಯಾಮ್‌ನಲ್ಲಿ ಮೂರು ದಿನಗಳ ಅಂತರ್-ತಂಡದ ಪಂದ್ಯವನ್ನು ಆಡಲದೆ. ಈ ಪಂದ್ಯವು ಮುಚ್ಚಿದ ಕ್ರೀಡಾಂಗಣದೊಳಗೆ ನಡೆಯಲಿದ್ದು, ಮುಖ್ಯ ಟೆಸ್ಟ್ ತಂಡ ಮತ್ತು ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯಗಳನ್ನು ಆಡಿದ ಭಾರತ ಎ ತಂಡದ ಆಟಗಾರರ ಮಿಶ್ರಣವಿರುತ್ತದೆ.

"ನೀವು ಹೇಳಿದಂತೆ, ನಾವು ಎಲ್ಲಾ ಅಂಶಗಳನ್ನು ಒಳಗೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ. ಆದರೆ ಈಗ ನಮಗೆ, ಪ್ರಮುಖ ವಿಷಯವೆಂದರೆ ಟೆಸ್ಟ್ ಪಂದ್ಯವನ್ನು ಫಿಟ್ ಆಗಿ, ಸಿದ್ಧವಾಗಿ, ಆ ತೀಕ್ಷ್ಣತೆಯನ್ನು ಮರಳಿ ಪಡೆಯುವುದು. ನಾವು ಸ್ವಲ್ಪ ಸಮಯದಿಂದ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ," ಎಂದು ಮಾರ್ಕೆಲ್ ಹೇಳಿದ್ದಾರೆ.