IND vs ENG: ಎರಡನೇ ಏಕದಿನ ಪಂದ್ಯದಿಂದ ಕೆಎಲ್ ರಾಹುಲ್ ಹೊರಗುಳಿಯಲು ಕಾರಣವೇನು?
Why KL Rahul not Playing XI: ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ಇದೀಗ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ಕೆಎಲ್ ರಾಹುಲ್ ಬದಲು ಇಶಾನ್ ಕಿಶನ್ ಆಡಿದರು.
ಎರಡನೇ ಪಂದ್ಯದಿಂದ ಕೆಎಲ್ ರಾಹುಲ್ ಔಟ್. -
ಕಾರ್ಡಿಫ್: ಇಲ್ಲಿನ ಸೋಫಿಯಾ ಕಾರ್ಡನ್ಸ್‌ನಲ್ಲಿ ಇದೀಗ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ(IND vs ENG) ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆರಿಸಿಕೊಂಡಿದೆ. ಆ ಮೂಲಕ ಎದುರಾಳಿ ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಅಂದ ಹಾಗೆ ಭಾರತ ತಂಡದಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ಭಾರತ ಏಕದಿನ ತಂಡಕ್ಕೆ ಪ್ರಮುಖ ವಿಕೆಟ್ ಕೀಪರ್ ಆಗಿರುವ ಕೆಎಲ್ ರಾಹುಲ್ (KL Rahul) ಅವರ ಬದಲು ಇಶಾನ್ ಕಿಶನ್ ಅವರು ಈ ಪಂದ್ಯದಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ.
ಮೊದಲನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡಿದ್ದರು. ಆ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ವಿಕೆಟ್ ಕೀಪಿಂಗ್‌ನಲ್ಲಿ ಸ್ಬಲ್ಪ ಎಡವಿದ್ದರೂ ಹಾಗೂ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಅವರು ತಮ್ಮ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದರು, ಆದರೆ ಅವರು ಕಾರ್ಡಿಫ್‌ನಲ್ಲಿ ಆಡುತ್ತಿಲ್ಲ. ಆ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಉಂಟಾಗಿದೆ.
IND vs ENG: ʻಔಟಾದರೂ ಪರವಾಗಿಲ್ಲ, ಮುಕ್ತವಾಗಿ ಬ್ಯಾಟ್ ಮಾಡಿʼ-ರೋಹಿತ್ ಶರ್ಮಾಗೆ ಗಂಭೀರ್ ಸಲಹೆ!
ಕೆಎಲ್ ರಾಹುಲ್ ಏಕೆ ಆಡುತ್ತಿಲ್ಲ?
ಕೆಎಲ್ ರಾಹುಲ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರು ಬದಲು ಇಶಾನ್ ಕಿಶನ್ ಆಡುತ್ತಿದ್ದಾರೆ. ಈ ಪಂದ್ಯದ ಟಾಸ್ ಬಳಿಕ ಬಿಸಿಸಿಐ ತಮ್ಮ ಎಕ್ಸ್ ಖಾತೆಯಲ್ಲಿ ಕೆಎಲ್ ರಾಹುಲ್ ಬಗ್ಗೆ ಮಾಹಿತಿ ನೀಡಿದೆ. "ಕೆಎಲ್ ರಾಹುಲ್ ಅವರು ಅನಾರೋಗ್ಯದ ಕಾರಣ ಅವರು ಆಯ್ಕೆಗೆ ಲಭ್ಯರಾಗಿಲ್ಲ," ಎಂದು ಬಿಸಿಸಿಐ ಪೋಸ್ಟ್ ಹಾಕಿದೆ.
IND vs ENG: ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲ ಬ್ಯಾಟಿಂಗ್!
ಟಾಸ್ ವೇಳೆ ಶುಭಮನ್ ಗಿಲ್ ಹೇಳಿದ್ದೇನು?
ಟಾಸ್ ವೇಳೆ ಮಾತನಾಡಿದ ಶುಭಮನ್ ಗಿಲ್, "ಮೊದಲು ನಾವು ಕೂಡ ಬೌಲ್ ಮಾಡಲು ಬಯಸ್ಸಿದ್ದೆವು, ನಮ್ಮ ಫಿಟ್ನೆಸ್ ಉತ್ತಮವಾಗಿದೆ. ಕಳೆದ ಪಂದ್ಯದಲ್ಲಿ ನಾವು ಬಹುತೇಕ ಪರಿಪೂರ್ಣ ಪ್ರದರ್ಶನ ನೀಡಿದ್ದೇವೆ. ಅದರಿಂದ ತುಂಬಾ ಸಂತೋಷವಾಗಿದೆ. ಇದೇ ಪ್ರದರ್ಶನವನ್ನು ಈ ಪಂದ್ಯದಲ್ಲೂ ಮುಂದುವರಿಸುವ ವಿಶ್ವಾಸವಿದೆ. ಪವರ್‌ಪ್ಲೇನಲ್ಲಿ ಮೊದಲ 6-7 ಓವರ್‌ಗಳವರೆಗೆ ನಾವು ಉತ್ತಮವಾಗಿ ಆಡಿದ್ದೆವು. ನಂತರ ಎದುರಾಳಿ ನಮ್ಮ ಮೇಲೆ ಒತ್ತಡ ಹೇರಿತು. ಆದರೆ ಮಧ್ಯದ ಓವರ್‌ಗಳಲ್ಲಿ ನಮ್ಮ ವೇಗದ ಬೌಲರ್‌ಗಳು ವಿಕೆಟ್‌ಗಳನ್ನು ಕಬಳಿಸಿ ತಂಡವನ್ನು ಮತ್ತೆ ಪಂದ್ಯಕ್ಕೆ ಮರಳಿಸಿದ ರೀತಿ ಅದ್ಭುತವಾಗಿತ್ತು. ಹೌದು, ನಾನು ಈ ಹಿಂದೆ ಗ್ಲಾಮೊರ್ಗನ್ ಪರ ಒಂದು ಋತುವಿನಲ್ಲಿ ಆಡಿದ್ದೇನೆ. ಅಲ್ಲಿನ ನೆನಪುಗಳು ನನಗೆ ತುಂಬಾ ವಿಶೇಷವಾಗಿವೆ," ಎಂದು ಹೇಳಿದರು.
Here's a look at #TeamIndia's Playing XI for the 2️⃣nd ODI in Cardiff 🙌
— BCCI (@BCCI) July 16, 2026
𝗡𝗼𝘁𝗲: KL Rahul was unavailable for selection due to illness.
Updates ▶️ https://t.co/2Z0BQOPWjC #ENGvIND pic.twitter.com/xHpfa2RqWW
"ನಾವು ನಮ್ಮ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ಕೆಎಲ್ ರಾಹುಲ್ ಅವರು ಈ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದು, ಇಶಾನ್ ಕಿಶನ್ ಪ್ಲೇಯಿಂಗ್ XIಗೆ ಮರಳಿದ್ದಾರೆ," ಎಂದು ಟೀಮ್ ಇಂಡಿಯಾ ನಾಯಕ ತಿಳಿಸಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಷರ್ ಪಟೇಲ್, ಗುರ್ನೂರ್ ಬ್ರಾರ್, ಜಸ್‌ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ
ಇಂಗ್ಲೆಂಡ್: ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್