ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನಾನು ನಾಯಕನಾಗಿದ್ದರೆ ಮೊಹಮ್ಮದ್‌ ಸಿರಾಜ್‌ರನ್ನು ಆಡಿಸುತ್ತಿದ್ದೆʼ: ಸೌರವ್‌ ಗಂಗೂಲಿ!

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವ ನಿರ್ಧಾರದ ಬಗ್ಗೆ ಸೌರವ್ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭವಿಷ್ಯದ ವೇಗದ ಬೌಲರ್‌ಗಳನ್ನು ಹುಡುಕುವ ಪ್ರಯತ್ನ ಇರಬಹುದು ಎಂದ ಅವರು, ತಾನು ನಾಯಕನಾಗಿದ್ದರೆ ಸಿರಾಜ್‌ಗೆ ಖಂಡಿತ ಅವಕಾಶ ನೀಡುತ್ತಿದ್ದೆ ಎಂದು ಹೇಳಿದ್ದಾರೆ.

IND vs NZ: ಮೊಹಮ್ಮದ್‌ ಸಿರಾಜ್‌ಗೆ ಸೌರವ್‌ ಗಂಗೂಲಿ ಬೆಂಬಲ!

ಮೊಹಮ್ಮದ್‌ ಸಿರಾಜ್‌ಗೆ ಕೊಕ್‌ ನೀಡಿರುವ ಬಗ್ಗೆ ಸೌರವ್‌ ಗಂಗೂಲಿ ಅಸಮಾಧಾನ. -

Profile
Ramesh Kote Nov 28, 2026 3:44 PM

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ (IND vs NZ) ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ (Mohammed Siraj) ಅವರನ್ನು ಕೈ ಬಿಟ್ಟಿರುವ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ (Sourav Ganguly) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ನಾನೇನಾದರೂ ಭಾರತ ತಂಡದಲ್ಲಿ ನಾಯಕನಾಗಿದ್ದರೆ, ಮೊಹಮ್ಮದ್‌ ಸಿರಾಜ್‌ ಅವರನ್ನು ಪ್ಲೇಯಿಂಗ್‌ XIನಲ್ಲಿ ಆಡಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ನಾಯಕ ಶುಭಮನ್‌ ಗಿಲ್‌ ಅವರು ಈ ಟೆಸ್ಟ್‌ ಸರಣಿಯ ಎರಡು ಪಂದ್ಯಗಳಿಗೆ ಜಸ್‌ಪ್ರೀತ್‌ ಬುಮ್ರಾ, ಅನ್ಶುಲ್‌ ಕಾಂಬೋಜ್‌, ಆಕಾಶ್‌ ದೀಪ್‌ ಹಾಗೂ ಪ್ರಸಿಧ್‌ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದಾರೆ. ರವೀಂದ್ರ ಜಡೇಜಾ ಬದಲು ವಾಷಿಂಗ್ಟನ್‌ ಸುಂದರ್‌ಗೆ ಪ್ಲೇಯಿಂಗ್‌ XIನಲ್ಲಿ ಅವಕಾಶವನ್ನು ನೀಡಲಾಗಿದೆ. ಜಸ್‌ಪ್ರೀತ್‌ ಬುಮ್ರಾಗೆ ವಯಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಗಂಭೀರ್‌, ಭಾರತದ ದೀರ್ಘಾವಧಿ ಯೋಜನೆಗಳಿಗೆ ಬೌಲರ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆಂದು ಸೌರವ್‌ ಗಂಗೂಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs NZ: ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ವಿಕೆಟ್ ಪಡೆಯದೆ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಜಸ್‌ಪ್ರೀತ್ ಬುಮ್ರಾ!

ಇನ್ಫೋಕಾಮ್‌ನ 25ನೇ ಆವೃತ್ತಿಯ ನಿಮಿತ್ತ ಮಾತನಾಡಿದ ಸೌರವ್‌ ಗಂಗೂಲಿ, ಸಿರಾಜ್ ಅವರನ್ನು ತಂಡದಿಂದ ಹೊರಗಿಟ್ಟಿರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಭವಿಷ್ಯದ ವೇಗದ ಬೌಲರ್‌ಗಳನ್ನು ಗುರುತಿಸುವ ಉದ್ದೇಶದಿಂದ ಕೋಚ್ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

"ಬಹುಶಃ ಯುವ ಬೌಲರ್‌ಗೆ ಅವಕಾಶ ನೀಡಲು ಅವರು ಬಯಸಿರಬಹುದು. ಇಂತಹ ಪರಿಸ್ಥಿತಿಗಳಲ್ಲಿ ದೀರ್ಘಕಾಲ ತಂಡದ ಭವಿಷ್ಯವಾಗಬಲ್ಲ ಬೌಲರ್ ಯಾರು ಎಂಬುದನ್ನು ಪರೀಕ್ಷಿಸಲು ಪ್ರಯತ್ನಿಸುತ್ತಿರಬಹುದು. ಏಕೆಂದರೆ ಬುಮ್ರಾ ಅವರಿಗೆ ವಯಸ್ಸಾಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ತಂಡವನ್ನು ಮುನ್ನಡೆಸಬಲ್ಲ ವೇಗದ ಬೌಲರ್ ಯಾರು ಎಂಬುದನ್ನು ಕಂಡುಕೊಳ್ಳಲು ಅವರು ಬಯಸಿರಬಹುದು," ಎಂದು ಗಂಗೂಲಿ ಹೇಳಿದ್ದಾರೆ.

IND vs NZ: ಮೊಹಮ್ಮದ್‌ ಸಿರಾಜ್‌ಗೆ ಕೊಕ್‌ ನೀಡಿದ ಗಂಭೀರ್‌ ವಿರುದ್ಧ ಆರ್‌ ಅಶ್ವಿನ್‌ ಗುಡುಗು!

"ಆದರೆ ಆಸ್ಟ್ರೇಲಿಯಾದಲ್ಲಿ ಸೋಲು ಅನುಭವಿಸಿದ ಬಳಿಕ, ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಈಗ ನ್ಯೂಜಿಲೆಂಡ್‌ಗೆ ಬಂದಿರುವ ಭಾರತ ತಂಡಕ್ಕೆ ಇವು ಸವಾಲಿನ ಪರಿಸ್ಥಿತಿಗಳಾಗಿವೆ. ಇಂತಹ ಸಂದರ್ಭದಲ್ಲಿ ಕೋಚ್ ಆಗಿರುವವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗುತ್ತದೆ. ಎಲ್ಲರಿಗೂ ಅವಕಾಶ ನೀಡುವುದಕ್ಕಿಂತ ಪಂದ್ಯವನ್ನು ಗೆಲ್ಲುವುದಕ್ಕೆ ನಾನು ಹೆಚ್ಚಿನ ಆದ್ಯತೆ ನೀಡುತ್ತೇನೆ. ನಾನು ನಾಯಕನಾಗಿದ್ದರೆ ಮೊಹಮ್ಮದ್ ಸಿರಾಜ್ ಅವರನ್ನು ಖಂಡಿತವಾಗಿಯೂ ಆಡಿಸುತ್ತಿದ್ದೆ," ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಮೊಹಮ್ಮದ್‌ ಸಿರಾಜ್‌ಗೆ ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ, ಅವರಿಗೆ ಕೊನೆಯ ಪಂದ್ಯದಲ್ಲಿ ಅವಕಾಶವನ್ನು ನೀಡಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ಆಯ್ಕೆ ಸಮಿತಿಯ ಆದ್ಯತೆಯ ಪಟ್ಟಿಯಲ್ಲಿ ಅವರ ಸ್ಥಾನ ಕುಸಿದಿರುವುದನ್ನು ಸೂಚಿಸುತ್ತದೆ. ಈ ಸರಣಿಗೂ ಮುನ್ನ ಜಸ್‌ಪ್ರೀತ್ ಬುಮ್ರಾ ನಂತರ ಸಿರಾಜ್ ಎರಡನೇ ಪ್ರಮುಖ ವೇಗದ ಬೌಲರ್ ಎಂಬ ಸ್ಥಾನದಲ್ಲಿದ್ದರು ಎಂದು ಹೇಳಲಾಗಿತ್ತು. ಆದರೆ ಇದೀಗ ಆಯ್ಕೆಯ ವಿಚಾರದಲ್ಲಿ ಅವರು ಮತ್ತಷ್ಟು ಹಿಂದುಳಿದಂತೆ ಕಾಣುತ್ತಿದ್ದಾರೆ.