ʼಆರಂಭದಲ್ಲಿ ಹಿಂಜರಿದಿದ್ದೆʼ; ಮುಂಬೈಗೆ ಮತ್ತೆ ನಾಯಕನಾದ ಬಳಿಕ ರೋಹಿತ್ ಶರ್ಮಾ ಹೇಳಿಕೆ
Rohit Sharma: ಮುಂಬೈ ಇಂಡಿಯನ್ಸ್ ಶುಕ್ರವಾರ ರೋಹಿತ್ ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸಿತು. ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರೊಂದಿಗಿನ ವಿನಿಮಯ ಒಪ್ಪಂದದ ಭಾಗವಾಗಿ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್‌ಗೆ ತೆರಳಿದ್ದು, ಅವರ ಸ್ಥಾನವನ್ನು ರೋಹಿತ್ ತುಂಬಲಿದ್ದಾರೆ.
Rohit Sharma -
ಮುಂಬಯಿ, ನ.28: ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಮರಳಲು ತಮಗೆ ಆರಂಭದಲ್ಲಿ ಹಿಂಜರಿಕೆ ಇತ್ತು ಎಂದು ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ. ಮತ್ತೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಒಪ್ಪಿಕೊಳ್ಳುವ ಮೊದಲು, ಈ ಬಗ್ಗೆ ಆಲೋಚಿಸಲು ತಮಗೆ ಸಮಯ ಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಶುಕ್ರವಾರ ರೋಹಿತ್ ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸಿತು. ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರೊಂದಿಗಿನ ವಿನಿಮಯ ಒಪ್ಪಂದದ ಭಾಗವಾಗಿ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್‌ಗೆ ತೆರಳಿದ್ದು, ಅವರ ಸ್ಥಾನವನ್ನು ರೋಹಿತ್ ತುಂಬಲಿದ್ದಾರೆ.
ಫ್ರಾಂಚೈಸಿ ಮಾಲೀಕ ಆಕಾಶ್ ಅಂಬಾನಿ ಅವರು ರೋಹಿತ್ ಅವರನ್ನು ಸಂಪರ್ಕಿಸಿ, ಮುಂಬೈ ಇಂಡಿಯನ್ಸ್ ತಂಡವನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಚರ್ಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಫ್ರಾಂಚೈಸಿಯ ನಾಯಕತ್ವವನ್ನು ಮತ್ತೆ ವಹಿಸಿಕೊಳ್ಳುವ ಆಲೋಚನೆಯು ಅಂತಿಮವಾಗಿ ಆಕರ್ಷಕವೆನಿಸಿದರೂ, ಈ ಜವಾಬ್ದಾರಿಯನ್ನು ಹೊರಲು ತಾನು ಸಿದ್ಧನಿದ್ದೇನೆಯೇ ಎಂಬ ಬಗ್ಗೆ ಆರಂಭದಲ್ಲಿ ತಮಗೆ ಖಚಿತವಿರಲಿಲ್ಲ ಎಂದು ರೋಹಿತ್ ಒಪ್ಪಿಕೊಂಡರು.
🚨 Akash ambani requested Rohit Sharma to take back captaincy: Rohit Sharma said 🗣️ - After the 2026 season, when we were eliminated, it was a very disappointing season, and every player was frustrated. After going home, I was thinking and talking with my wife about it. Then suddenly, Akash Ambani called me. We met and discussed everything. He then asked me whether I wanted to take this team forward. At that time, I wasn't prepared for it...1/2 https://t.co/VGx3K7o8zU
— Indian Cricket Ministry (@Tejashyyyyyy) November 28, 2026
"ನಾನು ಈ ಬಗ್ಗೆ ನನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದೆ. ಆಕಾಶ್ ನನಗೆ ಕರೆ ಮಾಡಿದರು, ನಾವು ಭೇಟಿಯಾದೆವು ಮತ್ತು ಈ ತಂಡವನ್ನು ಮುನ್ನಡೆಸಲು ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸಿದೆವು. ಸಾಕಷ್ಟು ಆಲೋಚನೆಗಳನ್ನು ಹಂಚಿಕೊಳ್ಳಲಾಯಿತು," ಎಂದು ಮುಂಬೈ ಇಂಡಿಯನ್ಸ್‌ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿನ ಸಂದರ್ಶನವೊಂದರಲ್ಲಿ ರೋಹಿತ್ ಹೇಳಿದರು.
"ಆರಂಭದಲ್ಲಿ ನನ್ನ ಪ್ರಾಮಾಣಿಕ ಅನಿಸಿಕೆ ಏನೆಂದರೆ, 'ಇದಕ್ಕೆ ನಾನು ಸದ್ಯಕ್ಕೆ ಸಿದ್ಧನಿಲ್ಲ. ನಾನು ಈ ಬಗ್ಗೆ ಯೋಚಿಸಬೇಕಾಯಿತು. ಸಾಕಷ್ಟು ಸಂಗತಿಗಳು ನಡೆದುಹೋಗಿದ್ದವು. ಇದನ್ನು ಮಾಡಲು ಬೇಕಾದ ಮಾನಸಿಕ ಸ್ಥಿತಿಯಲ್ಲಿ ನಾನಿದ್ದೆನೋ ಇಲ್ಲವೋ, ನನಗೆ ಗೊತ್ತಿಲ್ಲ," ಎಂದು ಆಕಾಶ್‌ಗೆ ಹೇಳಿದ್ದಾಗಿ ರೋಹಿತ್ ತಿಳಿಸಿದರು.
"ನನ್ನ ಮನಸ್ಸಿನಿಂದಲೇ ನನಗೊಂದು ಅನಿಸಿಕೆ ಬಂತು. ಈ ತಂಡಕ್ಕೆ ನಾಯಕನಾಗಿ ನನ್ನ ಅಗತ್ಯವಿದೆ ಎಂದು ನಾನು ಹೇಳುತ್ತಿಲ್ಲ, ಬದಲಾಗಿ ಈ ತಂಡಕ್ಕೆ ಸರಿಯಾದ ದಿಕ್ಸೂಚಿಯ (ಮಾರ್ಗದರ್ಶನದ) ಅಗತ್ಯವಿದೆ" ಎಂದು ಅವರು ಹೇಳಿದರು.
ಶೂನ್ಯ ಸುತ್ತಿ ಅನಪೇಕ್ಷಿತ ಟೆಸ್ಟ್ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಈ ಬಗ್ಗೆ ಆಲೋಚಿಸಲು ಸಮಯ ತೆಗೆದುಕೊಂಡ ನಂತರ, ರೋಹಿತ್ ಈ ಸವಾಲನ್ನು ಸ್ವೀಕರಿಸಲು ನಿರ್ಧರಿಸಿದರು. ಹೀಗಾಗಿ, ಅವರು ಒಂದು ದಶಕದ ಕಾಲ ನಿರ್ವಹಿಸಿದ್ದ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದನ್ನಾಗಿ ರೂಪಿಸಲು ನೆರವಾಗಿದ್ದ ಪಾತ್ರಕ್ಕೆ ಮರಳಿದರು.
"ಇದು ನೀವು ಕಟ್ಟಿದ ತಂಡ ಎಂಬುದನ್ನು ನಾನು ಅರಿತುಕೊಂಡೆ. 10 ವರ್ಷಗಳ ಕಾಲ ನಾನು ಈ ತಂಡದ ನಾಯಕನಾಗಿದ್ದೆ. ಈಗ ಮತ್ತೆ ಆ ಸವಾಲನ್ನು ಸ್ವೀಕರಿಸಲು ಪ್ರಯತ್ನಿಸುವ ಸಮಯ ಬಂದಿದೆ ಎಂದು ನನಗೆ ಅನ್ನಿಸಿತು," ಎಂದು ಅವರು ಹೇಳಿದರು.