ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs NZ: ʻನಾ ಹೇಳಿದ ಹಾಗೆ ಕೇಳಿ ಭಾರತವನ್ನು ಸೋಲಿಸಬಹುದುʼ-ಕಿವೀಸ್‌ಗೆ ಅಖ್ತರ್‌ ಮಹತ್ವದ ಸಲಹೆ!

Shoaib Akhtar on IND vs NZ Final: ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಲು ನ್ಯೂಜಿಲೆಂಡ್‌ ತಂಡಕ್ಕೆ ಸೂಕ್ತ ಸಲಹೆಯನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯೆಬ್‌ ಅಖ್ತರ್‌ ನೀಡಿದ್ದಾರೆ.

ಭಾರತವನ್ನು ಮಣಿಸಲು ಕಿವೀಸ್‌ಗೆ ರಣತಂತ್ರ ಹೇಳಿಕೊಟ್ಟ ಶೋಯೆಬ್‌ ಅಖ್ತರ್!

ನ್ಯೂಜಿಲೆಂಡ್‌ ತಂಡಕ್ಕೆ ಸಲಹೆ ನೀಡಿದ ಶೋಯೆಬ್‌ ಅಖ್ತರ್‌.

Profile Ramesh Kote Mar 8, 2025 8:11 PM

ದುಬೈ: ಭಾನುವಾರ (ಮಾರ್ಚ್‌ 9) ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ 2025ರ ಐಸಿಸಿ ಚಾಂಪಿಯನಸ್‌ ಟ್ರೋಫಿ (ICC Champions Trophy 2025) ಟೂರ್ನಿಯ ಫೈನಲ್‌ನಲ್ಲಿ ಬಲಿಷ್ಠ ಭಾರತ ತಂಡವನ್ನು ಮಣಿಸಲು ನ್ಯೂಜಿಲೆಂಡ್‌ ತಂಡಕ್ಕೆ (IND vs NZ) ಮಹತ್ವದ ಸಲಹೆಯನ್ನು ಪಾಕಿಸ್ತಾನ ವೇಗದ ಬೌಲಿಂಗ್‌ ದಿಗ್ಗಜ ಶೋಯೆಬ್‌ ಅಖ್ತರ್‌ (Shoaib Akhtar) ನೀಡಿದ್ದಾರೆ. ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ, ಇಲ್ಲಿಯ ತನಕ ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಪಡದಿತ್ತು. ನ್ಯೂಜಿಲೆಂಡ್‌ ವಿರುದ್ದ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ತಂಡ 44 ರನ್‌ಗಳಿಂದ ಗೆದ್ದಿತ್ತು. ಆದರೆ, ನಂತರ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಮತ್ತೊಂದೆಡೆ ನ್ಯೂಜಿಲೆಂಡ್‌ ತಂಡ, ಅಂತಿಮ ನಾಲ್ಕರ ಘಟ್ಟದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಬಂದಿತ್ತು.

ನ್ಯೂಜಿಲೆಂಡ್‌ ತಂಡ ಐಸಿಸಿ ನಾಕ್ಔಟ್‌ ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿದೆ. 2000ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. 2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ನ್ಯೂಜಿಲೆಂಡ್‌ ತಂಡ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. 2021ರ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿಯೂ ಭಾರತ ತಂಡವನ್ನು ಸೋಲಿಸಿದ್ದ ಕಿವೀಸ್‌ ಚೊಚ್ಚಲ ಚಾಂಪಿಯನ್‌ ಆಗಿತ್ತು. ಇದೀಗ ಅದೇ ಲಯವನ್ನು ಮುಂದುವರಿಸಲ ನ್ಯೂಜಿಲೆಂಡ್‌ ತಂಡ ಎದುರು ನೋಡುತ್ತಿದೆ.

IND vs NZ Final: ಫೈನಲ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ, ಮಳೆ ನಿಯಮ ಹೇಗಿದೆ?

ಭಾನುವಾರದ ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಲು ನ್ಯೂಜಿಲೆಂಡ್‌ ತಂಡದ ರಣತಂತ್ರದ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ಗಳು ಶೋಯೆಬ್‌ ಅಖ್ತರ್‌ ಹಾಗೂ ಶೋಯೆಬ್‌ ಮಲಿಕ್‌ ಚರ್ಚೆ ನಡೆಸಿದರು. ಈ ವೇಳೆ ಶೋಯೆಬ್‌ ಅಖ್ತರ್‌ ಕಿವೀಸ್‌ಗೆ ಸೂಕ್ತ ಸಲಹೆಯನ್ನು ನೀಡಿದ್ದಾರೆ. ದುರ್ಬಲ ತಂಡವಾಗಿ ಈ ಟೂರ್ನಿಗೆ ಪ್ರವೇಶ ಮಾಡಿರುವುದನ್ನು ಮರೆಯಬೇಕು ಹಾಗೂ ಭಾರತ ತಂಡವನ್ನು ಸೋಲಿಸುತ್ತೇವೆಂಬ ವಿಶ್ವಾಸವನ್ನು ಹೊಂದಬೇಕೆಂದು ಮಿಚೆಲ್‌ ಸ್ಯಾಂಟ್ನರ್‌ ಬಳಗಕೆ ತಿಳಿಸಿದ್ದಾರೆ.

IND vs NZ Final: ಫೈನಲ್​ಗೆ ಮಳೆ ಕಾಡಿದರೆ?, ಪಂದ್ಯ ಟೈ ಆದರೆ ಫಲಿತಾಂಶ ನಿರ್ಧಾರ ಹೇಗೆ?

ನಿಮ್ಮ ಸಾಮರ್ಥ್ಯದ ಮೇಲೆ ನೀವು ನಂಬಿಕೆ ಇಡಿ

"ಭಾರತ ತಂಡಕ್ಕಿಂತ ನೀವು ಮೇಲಿದ್ದೀರಿ ಎಂಬುದನ್ನು ನೀವು ಮರೆಯಬೇಕು, ನೀವು ದುರ್ಬಲ ತಂಡವಾಗಿ ಈ ಟೂರ್ನಿಗೆ ಪ್ರವೇಶ ಮಾಡಿದ್ದೀರಿ ಎಂಬುದನ್ನು ಕೂಡ ನೀವು ಮರೆಯಬೇಕಾಗುತ್ತದೆ. ನಮ್ಮದು ಉತ್ತಮ ತಂಡವಲ್ಲವೆಂದು ನೀವು ಮರೆಯಬೇಕು. ಮಿಚೆಲ್‌ ಸ್ಯಾಂಟ್ನರ್‌ ತಮ್ಮ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಅವರಲ್ಲಿನ ಸಾಮರ್ಥ್ಯವನ್ನು ನಾನು ನೋಡಿದ್ದೇನೆ. ನಾಯಕನಾಗಿ ಅವರು ಟ್ರೋಫಿ ಗೆಲ್ಲಬೇಕೆಂದು ಬಯಸಿದ್ದಾರೆ," ಎಂದು ಶೋಯೆಬ್‌ ಅಖ್ತರ್‌ ಬಯಸಿದ್ದಾರೆ.

IND vs NZ: ʻನ್ಯೂಜಿಲೆಂಡ್‌ ಚೋಕರ್ಸ್‌ ಅಲ್ಲ, ಹುಷಾರ್‌..!ʼ-ಭಾರತಕ್ಕೆ ನಾಸರ್‌ ಹುಸೇನ್‌ ವಾರ್ನಿಂಗ್‌!

ಭಾರತವನ್ನು ಸೋಲಿಸಲು ಕಿವೀಸ್‌ಗೆ ಸಲಹೆ ನೀಡಿದ ಅಖ್ತರ್‌

"ಸರಿಯಾದ ಸಮಯದಲ್ಲಿ ಸರಿಯಾದುದನ್ನು ನೀವು ಮಾಡಬೇಕಾಗುತ್ತದೆ. ನೀವೇ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಅನ್ನು ತಂದುಕೊಡಬೇಕಾಗುತ್ತದೆ. ರೋಹಿತ್‌ ಶರ್ಮಾ ಅವರು ದಾಳಿಯನ್ನು ನಡೆಸುತ್ತಾರೆ. ನಿಮ್ಮ ಸ್ಪಿನ್ನರ್‌ಗಳ ಎದುರು ಅವರು ಆಕ್ರಮಣಕಾರಿ ಆಟವನ್ನು ಆಡುತ್ತಾರೆ. ಸ್ಯಾಂಟ್ನರ್‌ ಮೇಲೆಯೂ ಅವರು ದಾಳಿ ನಡೆಸುತ್ತಾರೆ. ಅಂದ ಹಾಗೆ ತಂಡದ ನಾಯಕನಾಗಿ ಮಿಚೆಲ್‌ ಸ್ಯಾಂಟ್ನರ್‌, ತಮ್ಮವರನ್ನು ಸರಿಯಾಗಿ ನಿರ್ವಹಿಸಬೇಕಾಗುತ್ತದೆ. ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ನೀವು ಕೇಳುವುದಾದರೆ, ಭಾರತಕ್ಕೆ 70-30 ರಷ್ಟಿದೆ. ನ್ಯೂಜಿಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳು ಹಾಗೂ ಸ್ಪಿನ್ನರ್‌ಗಳು ಪ್ರಬುದ್ದತೆಯನ್ನು ಹೊಂದಿದ್ದಾರೆ. ಭಾರತ ತಂಡವನ್ನು ಸೋಲಿಸಬೇಕೆಂದರೆ, ಅಂದಿನ ದಿನ ಕಿವೀಸ್‌ ತನ್ನ ಎ ಆಟವನ್ನು ಹೊರಬೇಕಾಗುತ್ತದೆ," ಎಂದು ಶೋಯೆಬ್‌ ಅಖ್ತರ್‌ ಸಲಹೆ ನೀಡಿದ್ದಾರೆ.